ಬೆಳಗಾವಿ : ಮಕ್ಕಳು ದೇಶದ ಸಂಪತ್ತು. ಮಕ್ಕಳ ಲಾಲನೆ-ಪಾಲನೆ ಜತೆಗೆ ಅವರ ಆರೋಗ್ಯದ ಬಗ್ಗೆ ಪಾಲಕರು ಗಮನಿಸುವುದು ಅಗತ್ಯ ಎಂದು ಯುಎಸ್‌ಎಂ ಕೆಎಲ್‌ಇಯ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಅಭಿಪ್ರಾಯಪಟ್ಟರು. ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಯಲುಶೌಚ, ಬರಿಗಾಲಿನಿಂದ ನಡೆಯುವುದು, ಶೌಚಕ್ಕೆ ಹೋಗಿಬಂದ ನಂತರ ಕೈತೊಳೆಯದೆಯಿರುವದು ಇನ್ನಿತರ ಕಾರಣಗಳಿಂದ ನೆಲದಲ್ಲಿರುವ ಕಣ್ಣಿಗೆ ಕಾಣದಿರುವ ಕ್ರಿಮಿಗಳು ಶರೀರವನ್ನು ಸೇರುತ್ತವೆ. ಇದರಿಂದ ಅನಾರೋಗ್ಯ …
Read More »ಬೆಳಗಾವಿ:ಕೆಡೆಟ್‌ಗಳಿಗೆ ಸೇನೆಯಲ್ಲಿ ವಿಪುಲ ಅವಕಾಶ
ಬೆಳಗಾವಿ: ಎನ್‌ಸಿಸಿಗೆ ಸೇರುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ವೃದ್ಧಿಸುತ್ತದೆ. ‘ಸಿ’ ಸರ್ಟಿಫಿಕೇಟ್ ಪೂರೈಸುವ ಕೆಡೆಟ್‌ಗಳಿಗೆ ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶಗಳಿವೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಸುನೀಲ ದಾಗರ ತಿಳಿಸಿದರು. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಾಧನೆ ಮಾಡಿದ ಧೀರಜ ಭಾವಿಮನೆ ಹಾಗೂ ಸೈನಿಕ ಶಿಬಿರದಲ್ಲಿ ಸಾಧನೆ ಮಾಡಿದ ಓಂಕಾರ ಲೋಗಾವಿ ಅವರನ್ನು ನಗರದ ಲಿಂಗರಾಜ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕರಿಸಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ …
Read More »Belagavi: ದಲಿತರಿಗೆ ಶೇ.24ರಷ್ಟು ಅನುದಾನ ಮೀಸಲಿಡಿ
ಬೆಳಗಾವಿ: ಪ್ರಸ್ತುತ ರಾಜ್ಯ ಸರ್ಕಾರ ಮಂಡಿಸಲಿರುವ ರಾಜ್ಯ ಬಜೆಟ್‌ದಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ.24.1 ರಷ್ಟು ಅನುದಾನ ಮೀಸಲಿರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಜೆಟ್‌ದಲ್ಲಿ ದಲಿತರಿಗೆ ಮೀಸಲಿರಿಸುವ ಅನುದಾನ ದುರ್ಬಳಕೆ ತಡೆಯಬೇಕು, ಎಸ್‌ಎಸ್‌ಪಿ, ಟಿಎಸ್‌ಪಿ ಅನುದಾನವನ್ನು ನಿಯಮಬಾಹಿರವಾಗಿ ಗ್ಯಾರಂಟಿ ಯೋಜನೆಗೆ ವರ್ಗಾಯಿಸಿದ್ದು, 25 ಸಾವಿರ ಕೋಟಿ ರೂ. ಅನುದಾನ ಹಿಂತಿರುಗಿಸಬೇಕು, ಸ್ವಂತ ನಿವೇಶನ ಇಲ್ಲದ ಬಡವರಿಗೆ …
Read More »ಗೋವಾದ ಮಹಿಳೆ ಸ್ಥಳದಲ್ಲೇ ಸಾವು; ಖಾನಾಪುರ ಅಪಘಾತದಲ್ಲಿ ಪತಿ ಗಂಭೀರ
ಖಾನಾಪುರ–ಅನಮೋಡ್ ಮಾರ್ಗದ ಪಾಲಿ ಗ್ರಾಮದ ಬಳಿ ಇವತ್ತಿನ ಸಂಜೆ ಭೀಕರ ಅಪಘಾತ ಸಂಭವಿಸಿದೆ. ಗೋವಾ ನೋಂದಾಯಿತ ಕಾರೊಂದು ಕಿರಿದಾದ ರಸ್ತೆಯಲ್ಲಿ ಎದುರಿನಿಂದ ಬಂದ ಭಾರೀ ಲಾರಿಯನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಜಾಗೃತಿ ಹರಿದಾಸ್ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ದತ್ತಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾನಾಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಿ ದಂಪತಿ ಓಲ್ಡ್ ಗೋವಾಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
Read More »ಶಿಕ್ಷಣ ಮತ್ತು ಡಿಜಿಟಲ್ ಸಬಲೀಕರಣಕ್ಕೆ ಆದ್ಯತೆ – ಅಂಗನವಾಡಿಗಳಿಗೆ ಟಿವಿ ವಿತರಣೆ
ಸವದತ್ತಿ ಮತ ಕ್ಷೇತ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ, ಇಂದಿನ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ದೃಶ್ಯ ಮಾಧ್ಯಮದ ಮೂಲಕ ಕಲಿಕೆ ನೀಡುವ ಉದ್ದೇಶದಿಂದ ಟಿವಿಗಳನ್ನು ವಿತರಿಸಲಾಯಿತು. ಮಕ್ಕಳ ಬೌದ್ಧಿಕ ವಿಕಸನಕ್ಕೆ ಮತ್ತು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಈ ಕ್ರಮ ಸಹಕಾರಿಯಾಗಲಿದೆ. ನಮ್ಮ ಕ್ಷೇತ್ರದ ಪ್ರತಿಯೊಂದು ಅಂಗನವಾಡಿ ಕೇಂದ್ರವೂ ಮಾದರಿಯಾಗಿ ಹೊರಹೊಮ್ಮಲಿ ಎನ್ನುವುದೇ ನಮ್ಮ ಆಶಯ. ಈ ಸಂದರ್ಭದಲ್ಲಿ …
Read More »ಬೆಳಗಾವಿಯಲ್ಲಿ ಮ್ಯಾಗ್ನೆಟಾ ಹವಾ: ಟಿಳಕವಾಡಿಯಲ್ಲಿ ‘ಮ್ಯಾಗ್ ಕೆಫೆ’ 3ನೇ ಶಾಖೆ ಅದ್ಧೂರಿ ಉದ್ಘಾಟನೆ!
ಬೆಳಗಾವಿ: ನಗರದ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್ ‘ಮ್ಯಾಗ್ನೆಟಾ’ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದ್ದು, ಸೋಮವಾರ ಸಂಜೆ ತಿಲಕವಾಡಿಯಲ್ಲಿ ತನ್ನ ಮೂರನೇ ‘ಮ್ಯಾಗ್ ಕೆಫೆ’ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿತು. ಬೆಳಗಾವಿ ಟಿಳಕವಾಡಿಯ ಮಂಗಳವಾರ ಪೇಟೆಯ ‘ಮಧುಕಮಲ್ ಎಟರ್ನಿಯಾ’ ಕಟ್ಟಡದಲ್ಲಿ ನಡೆದ ಈ ಸಮಾರಂಭದಲ್ಲಿ ಉದ್ಯಮಿಗಳು, ಗಣ್ಯರು ಹಾಗೂ ಸೃಜನಾತ್ಮಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪಾಯುಕ್ತರಾದ ನಾರಾಯಣ್ …
Read More »belagavi: ರೈತ ವಸತಿ ಮನೆಗಳಿಗೂ ಸತತ ವಿದ್ಯುತ್
ಐಗಳಿ: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಆದಾಯ ಮೂಲ ಅವಶ್ಯ. ಯುವಕರ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟು ಸ್ವಯಂ ಉದ್ಯೋಗಕ್ಕೆ ಆಸ್ಪದ ನೀಡಬೇಕು. ಗ್ರಾಮೀಣ ಪ್ರದೇಶದ ರೈತ ವಸತಿ ಮನೆಗಳಿಗೂ ನಿರಂತರ ವಿದ್ಯುತ್ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಾಲ್ಕು ವ್ಯಾಪಾರ ಮಳಿಗೆ ಹಾಗೂ ಭಜಂತ್ರಿ ವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ಸಂಪರ್ಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಿ.ಎಸ್.ನೇಮಗೌಡ, ಬಿ.ಎಸ್.ಬಿರಾದಾರ, ನೂರಅಹ್ಮದ್ ಡೊಂಗರಗಾಂವ, ಎ.ಎಸ್.ಪಾಟೀಲ, ಬಸವರಾಜ …
Read More »Belagavi:ಅಪಪ್ರಚಾರ ಮಾಡಿದವರಿಗೆ ನೋಟಿಸ್
ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ 500 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ ನಿಯಮಗಳನ್ವಯ ರೈತರಿಗೆ, ಕೈಗಾರಿಕೆ, ಕೃಷಿಯೇತರ ಸಾಲ …
Read More »Belagavi: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿಗೆ ಶಿಕ್ಷೆ ಪ್ರಕಟ
ಬೆಳಗಾವಿ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ನಿವಾಸಿ ಅಕ್ಷಯ ಯಲ್ಲಪ ರಾವಳೆ( ೨೩),ಅಪರಾಧಿಗೆ ೫ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. ಬಾಲಕಿಯನ್ನು ಅಪರಾಧಿಯು ೨೦೨೨ ರಲ್ಲಿ ಅಪಹರಣ ಮಾಡಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಬಾಲಕವೆಸಗಿ,ಜೀವ ಬೆದರಿಕೆಯೊಡ್ಡಿದ ಕುರಿತು ಕಿತ್ತೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. …
Read More »ಮುಂಬರುವ ಗ್ರಾ.ಪಂ,ಜಿ.ಪಂ,ತಾ.ಪಂ ಚುನಾವಣೆ ಬಿಜೆಪಿ ತಯಾರಿ – ಮತಕ್ಷೇತ್ರವಾರು ಸಂಘಟನಾತ್ಮಕ ಸಭೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಗೊಳಿಸಲು ಮುಖಂಡರಿಗೆ,ಕಾರ್ಯಕರ್ತರಿಗೆ ಕರೆ ನೀಡಿದರು ನಂತರ ಮಾತನಾಡಿದ ಅವರು ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ವಿಬಿ-ಜಿ ರಾಮ್ ಜಿ ಜಾಗೃತಿ ಸಭೆ,ಎಸ್.ಐ.ಆರ್ ಕುರಿತು ಸಭೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲೆ ರಾಜ್ಯ …
Read More »
Laxmi News 24×7