ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ …
Read More »ಶರದ್‌ಪವಾರ್ ಭಾಷಣಕ್ಕೆ ಅಡ್ಡಿಪಡಿಸಿದ ಎಂಇಎಸ್ ಪುಂಡರು
ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎದುರೇ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮರಾಠಾ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿದ್ದಾರೆ. ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶರದ್ ಪವಾರ್, ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದರು. …
Read More »850 ರೂಪಾಯಿ ಬೆಲೆಯ ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ.
ಒಂದು ನೀರಿನ ಬಾಟಲ್ ಬೆಲೆ ಎಷ್ಟಿರಬಹುದು ಹೇಳಿ ಅಬ್ಬಬ್ಬಾ ಅಂದ್ರೆ 50-100 ರೂಪಾಯಿ. ಯಾರಾದ್ರೂ 850 ರೂಪಾಯಿ ಒಂದು ನೀರಿನ ಬಾಟಲ್ ಬೆಲೆ ಅಂದ್ರೆ ಸಾಕು. ಅದು ನೀರಲ್ಲ ಅಮೃತ ಅಂತ ಹೇಳೋರೆ ಹೆಚ್ಚು. ಅಷ್ಟು ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ. ಹೀಗಂತ ಹೇಳಿದ್ದು ಗೋವಾ ಕೃಷಿ ಸಚಿವ ರವಿ ನಾಯ್ಕ್. ಇತ್ತೀಚೆಗೆ ಅಮಿತ್ ಶಾ ಗೋವಾಗೆ ಭೇಟಿ ಕೊಟ್ಟ ವೇಳೆ ಅವರಿಗೆ ಇದೇ …
Read More »ಕನ್ನಡ ಫಲಕಕ್ಕಾಗಿ ಮಾತುಕತೆ ನಡೆಸಿ: ಅಶೋಕ ಚಂದರಗಿ
ಬೆಳಗಾವಿ: ‘ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಎಂಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ ಬಳಸುವ ಸಂಬಂಧ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯುಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘ಹೊರ ರಾಜ್ಯಗಳಿಗೆ ತೆರಳುವ (ಕೆಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೂ …
Read More »ಮಂಗಳವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 2,323 ವಿದ್ಯಾರ್ಥಿಗಳು ಗೈರುಹಾಜರ
ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 2,323 ವಿದ್ಯಾರ್ಥಿಗಳು ಗೈರುಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ವಿಷಯ ಪರೀಕ್ಷೆಗೆ 5,764 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 5,612 ವಿದ್ಯಾರ್ಥಿಗಳು ಹಾಜರಾದರು. 152 ವಿದ್ಯಾರ್ಥಿಗಳು ಬರಲಿಲ್ಲ. ಇತಿಹಾಸ ವಿಷಯಕ್ಕೆ ನೋಂದಾಯಿಸಿದ್ದ 12,210 ವಿದ್ಯಾರ್ಥಿಗಳ ಪೈಕಿ 11,308 ವಿದ್ಯಾರ್ಥಿಗಳು ಹಾಜರಾದರು. 902 ವಿದ್ಯಾರ್ಥಿಗಳು ಗೈರುಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಭೌತವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ 6,642 ವಿದ್ಯಾರ್ಥಿಗಳ ಪೈಕಿ 6,462 …
Read More »ಖಾಸಬಾಗ್, ವಡಗಾವಿ ಭಾಗದಲ್ಲಿ ಬಾಂಡ್ ಮೇಲೆ ಖರೀದಿಸಿದ ನಿವೇಶನ ಅಥವಾ ಮನೆಗಳಿಗೆ ಹಿಂದಿನಂತೆ ಉತಾರ ನೀಡುವಂತೆ ಆಗ್ರಹಿಸಿ ನೇಕಾರ ಕಾರ್ಮಿಕರ ಒತ್ತಾಯ
ಬೆಳಗಾವಿ: ಇಲ್ಲಿನ ಖಾಸಬಾಗ್, ವಡಗಾವಿ ಭಾಗದಲ್ಲಿ ಬಾಂಡ್ ಮೇಲೆ ಖರೀದಿಸಿದ ನಿವೇಶನ ಅಥವಾ ಮನೆಗಳಿಗೆ ಹಿಂದಿನಂತೆ ಉತಾರ ನೀಡುವಂತೆ ಆಗ್ರಹಿಸಿ ನೇಕಾರ ಕಾರ್ಮಿಕರ ಬಳಗದವರು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ‘ನಗರದ ಬಹುತೇಕ ಪ್ರದೇಶಗಳಲ್ಲಿ ಬಾಂಡ್ ಮೇಲೆ ಖರೀದಿಸಿದ ನಿವೇಶನಗಳಲ್ಲಿ ಮನೆ ನಿರ್ಮಿಸಲಾಗಿದೆ. ಅವುಗಳಿಗೆ 30-40 ವರ್ಷಗಳಿಂದಲೂ ಪಾಲಿಕೆಯಿಂದ ಕರ ಅಕರಿಸಲಾಗುತ್ತಿದೆ. ಅದಕ್ಕಾಗಿಯೇ ಹಿಂದೆ ಪಾಲಿಕೆಯಿಂದ ಉತಾರ ಕೊಡುವ ವ್ಯವಸ್ಥೆಯೂ ಇತ್ತು. ಈ …
Read More »‘ಸಂಗೀತಕ್ಕೆ ಮರುಳಾಗದವರಿಲ್ಲ’ ಎಂದ ಆರ್ಷ ವಿದ್ಯಾಶ್ರಮದ ಚಿತ್‌ಪ್ರಕಾಶಾನಂದ ಸ್ವಾಮೀಜಿ
ಬೆಳಗಾವಿ: ‘ಸಂಗೀತಕ್ಕೆ ಮರುಳಾಗದವರಿಲ್ಲ’ ಎಂದು ಆರ್ಷ ವಿದ್ಯಾಶ್ರಮದ ಚಿತ್‌ಪ್ರಕಾಶಾನಂದ ಸ್ವಾಮೀಜಿ ಹೇಳಿದರು. ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಕವಿ ಜಿನದತ್ತ ದೇಸಾಯಿ-90ರ ಸಂಭ್ರಮದ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾವ್ಯಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸಂಗೀತದಲ್ಲಿ ದೊಡ್ಡ ಶಕ್ತಿ ಇದ್ದು, ತನ್ನ ಮೋಡಿಯಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ’ ಎಂದರು. ಕವಿ …
Read More »G.P.L. ಕ್ರಿಕೆಟ್ ಪಂದ್ಯಾವಳಿ ಇಂದು ಸೆಮಿಫೈನಲ್ ನಾಳೆ ಫೈನಲ್,ಗೆಲ್ಲೋರು ಯಾರು..?
ರಾಹುಲ ಜಾರಕಿಹೊಳಿ ಸಧ್ಯಕ್ಕೆ ಎಲ್ಲ ಕಡೆ ಚರ್ಚೆ ಯಲ್ಲಿರುವ ವಿಷಯ ಅವರು ಪ್ರತಿದಿನ ಏನಾದ್ರೂ ಒಂದು ಕೆಲಸ ಮಾಡ್ತಾನೆ ಇರತಾರೆ , ಸಾಮಾಜಿಕ ಕಾರ್ಯ, ಕಬ್ಬಡಿ ಪಂದ್ಯಾವಳಿ, ಈ ತರ ಎಲ್ಲಾದ್ರೂ ಒಂದು ಕಡೆ ಚರ್ಚೆಯಲ್ಲಿ ಇರ್ತಾರೆ. ಇನ್ನು ಗೋಕಾಕ ನಲ್ಲಿ ನಡೆದ ಜಿ ಪೀ ಎಲ್ ಲೆದರ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿತ್ತು. ಇಂದೂ ಅದರ ಸೆಮಿ ಫೈನಲ್ ನಡೆಯಿತು. ಹಾಗೂ ನಾಳೆ ಫೈನಲ್ …
Read More »ಮೀಸಲಾತಿಗಾಗಿ ತೀವ್ರ ಹೋರಾಟ: ಪಂಚಮಸಾಲಿ ಶ್ರೀ
ಅಥಣಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಹೋರರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. ಮೀಸಲಾತಿಗೆ ಆಗ್ರಹಿಸಿ ಇಲ್ಲಿ ಶನಿವಾರ ನಡೆದ ಧರಣಿ ಸತ್ಯಾಗ್ರಹ ಹಾಗೂ ಬೈಕ್ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ‘ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ನಮ್ಮ ಬೇಡಿಕೆ …
Read More »ಸರ್ಕಾರ ಹಿಂಸೆ, ಅಸಹಿಷ್ಣುತೆಗೆ ಅವಕಾಶ ಕೊಡಬಾರದು: ಸಿದ್ದರಾಮಯ್ಯ
ಬೆಳಗಾವಿ: ‘ಯಾವುದೇ ಪಕ್ಷದ ಸರ್ಕಾರವಿರಲಿ ಅದು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಹಿಂಸೆಗೆ, ದ್ವೇಷಕ್ಕೆ ಅಥವಾ ಅಸಹಿಷ್ಣುತೆಗೆ ಅವಕಾಶ ಮಾಡಿಕೊಡಬಾರದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಅರಳೀಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ ನಿರಂಜನ ಪಟ್ಟಾಧಿಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಬಸವಾದಿ ಶರಣರ ವಿಚಾರಧಾರೆಗಳು ಸದಾಕಾಲ ಪ್ರಸ್ತುತವಾಗಿವೆ’ ಎಂದರು. ‘ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆಯ ಕಾರಣದಿಂದಾಗಿ …
Read More »