Breaking News

ಬೆಳಗಾವಿ

ಧರ್ಮನಾಥ ಭವನದಲ್ಲಿ ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆ ಅಂಗವಾಗಿ ನಡೆದ ಘಟನಾಯಕರ ಸಭೆ

ಇಂದು ಬೆಳಗಾವಿ ಧರ್ಮನಾಥ ಭವನದಲ್ಲಿ ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಚುನಾವಣೆ ಅಂಗವಾಗಿ ನಡೆದ ಘಟನಾಯಕರ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣಕುಮಾರಜಿ , ಶ್ರೀ ಅಶ್ವಥ್ ಕುಮಾರ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂಜಯ ಪಾಟೀಲ, ಶಾಸಕರಾದ ಶ್ರೀ ಅಭಯ ಪಾಟೀಲ,‌ ಸಂಸದೆ ಶ್ರೀಮತಿ ಮಂಗಲಾ ಅಂಗಡಿ, ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಕೇಶವ ಪ್ರಸಾದ್ ಹಾಗೂ ಎಲ್ಲ ಜಿಲ್ಲೆಯ …

Read More »

ಬಡ ಕುಟುಂಬದ ಹೆಣ್ಣು ಹೆತ್ತವರ ಕಷ್ಟಕ್ಕೆ ನೆರವಾಗುವ ಪ್ರಯತ್ನ.: ಸತೀಶ್ ಜಾರಕಿಹೊಳಿ ಆಪ್ತ ಪಂಚನ ಗೌಡ ದ್ಯಾಮಣ್ಣವರ

ಬಡ ಕುಟುಂಬದ ಹೆಣ್ಣು ಹೆತ್ತವರ ಕಷ್ಟಕ್ಕೆ ನೆರವಾಗುವ ಪ್ರಯತ್ನ. ನನ್ನ ಕ್ಷೇತ್ರದಲ್ಲಿ ಬಡ ಕುಟುಂಬದ ತಂದೆ ತಾಯಂದಿರಿಗೆ ಅವರ ಹೆಣ್ಣು ಮಕ್ಕಳ ಮದುವೆ ಹೊರೆ ತಪ್ಪಿಸಲು ನಾವು ಮಾಡುತ್ತಿರುವ ಸಹಾಯ ಕಾರ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಂತೆಯೇ ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ರೇಬಣ್ಣವರ ಕುಟುಂಬದ ಸುಪುತ್ರಿಯ ಮದುವೆಗೆ ಅನುಕೂಲವಾಗುವಂತೆ ಟ್ರೆಜರಿ, ಖಾಟ್, ಅಡುಗೆ ಪಾತ್ರೆಗಳು ಹಾಗೂ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡಿದೆ. ಈ ಸಂದರ್ಭದಲ್ಲಿ ರೇಬಣ್ಣವರ …

Read More »

ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಮತಯಾಚನೆ

ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಚುನಾವಣೆ ಅಂಗವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಶ್ರೀಮತಿ ಸ್ಪೂರ್ತಿ ಪಾಟೀಲ ( ಅಂಗಡಿ ) , ಶ್ರೀಮತಿ ಶೃದ್ಧಾ ಶೆಟ್ಟರ್ ಅಂಗಡಿ ಅವರ ಜತೆಗೆ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆ, ರೈಲ್ ನಗರ, ಪಿ ಡಬ್ಲ್ಯೂ ಡಿ ಕ್ವಾರ್ಟರ್ಸ್ ನಲ್ಲಿ ಮನೆಮನೆಗೆ ತೆರಳಿ ಶಿಕ್ಷಕರ ಹಾಗೂ ಪದವೀಧರರ ಭೇಟಿಯಾಗಿ …

Read More »

ಬಿತ್ತನೆ ಮುಂದೂಡುವಂತೆ ರೈತರಿಗೆ ಕೃಷಿ ಇಲಾಖೆ ಸಲಹೆ

ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ವಿಜಯಪುರ ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಅಕಾಲಿಕವಾಗಿರುವ ಮಳೆ ನೈಸರ್ಗಿಕ ಮಾನ್ಸೂನುಗಳಿಂದಾದುದಲ್ಲ ಬದಲಾಗಿ ಸೈಕ್ಲೋನ್‌ ಪರಿಣಾಮದಿಂದಾದ ಮಳೆಯಾಗಿರುತ್ತದೆ. ಆದ್ದರಿಂದ ರೈತರಿಗೆ ಸದ್ಯ ಬಿತ್ತುಣಿಕೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ಮತ್ತು ಮಾಗಿ ಉಳುಮೆ ಮಾಡಲು ಅವಕಾಶ ಇದೆ.   ಪ್ರಸ್ತುತ ಭೂಮಿಯ ತೇವಾಂಶ ಸಂಪೂರ್ಣ ಹೊಂದಿದ್ದರೂ ಕೂಡ ಮುಂಗಾರು ಬಿತ್ತನೆಗೆ ಇದು ಸೂಕ್ತ ಸಮಯವಲ್ಲ. ಈಗ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ಮುಂಗಾರು …

Read More »

ಗಂಡ ಹೊಡೆದ ಏಟಿಗೆ ಪ್ರಜ್ಞೆ ತಪ್ಪಿದ ಹೆಂಡತಿ ; ಸತ್ತಳೆಂದು ಆತ್ಮಹತ್ಯೆ ಮಾಡಿಕೊಂಡ ಗಂಡ.!

ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ (Naganur) ಪಟ್ಟಣದಲ್ಲಿ ತಾನು ಹೊಡೆದ ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಪತಿಯೂ (husband)   ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.   ಆತ್ಮಹತ್ಯೆ (suicide) ಮಾಡಿಕೊಂಡ ಯುವಕನನ್ನು ನಾಗನೂರು ಪಟ್ಟಣದ ಅರಣ್ಯಸಿದ್ದೇಶ್ವರ ತೋಟದ ನಿವಾಸಿ ಮಹಾಂತೇಶ ಸಿದ್ದಪ್ಪ ಗೂಡೆನ್ನವರ ಎಂದು ಗುರುತಿಸಲಾಗಿದೆ.   ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಾಂತೇಶ, ಬುಧವಾರ ಹೆಂಡತಿಯೊಡನೆ   ಜಗಳವಾಡಿದ್ದಾನೆ. …

Read More »

ನಾನೇ ಲೇಬರ್, ನಾನೇ ಓನರ್! ಅಂತಾರೆ ಆಳಾಗಿ ದುಡಿದು ಅರಸನಾಗಿ ಉಣ್ಣುವ ಬೆಳಗಾವಿಯ ಉದ್ಯಮಿ

ಬೆಳಗಾವಿ: ಕೋವಿಡ್​ ಲಾಕ್‌ಡೌನ್ ಎಫೆಕ್ಟ್​​‌ನಿಂದ (Covid 19 Lockdown) ಸಣ್ಣ, ಮಧ್ಯಮ, ಮತ್ತು ಅತಿ ಸಣ್ಣ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ (Economic Crisis) ಸಿಲುಕಿದ್ದವು. ಆದರೆ ಬೆಳಗಾವಿ ನಗರದ (Belagavi) ನೇಕಾರಿಕೆ ಕುಟುಂಬವೊಂದು ಲಾಕ್‌ಡೌನ್ ಅನ್ನೇ ಸದ್ಭಳಕೆ ಮಾಡಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದೆ. ಜರಿ ಉದ್ಯಮದಲ್ಲಿ (Jari Business) ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಳಗಾವಿ ನಗರದ ನಿವಾಸಿ ಲೋಹಿತ್ ಮೋರಕರ್ ಎಂಬುವರು ಜರಿ ಉದ್ಯಮದಿಂದ (ಸೀರೆಗೆ ಬೇಕಾಗುವ ಕಚ್ಚಾ ವಸ್ತು …

Read More »

ರಸ್ತೆ ಬದಿ ನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಹತ್ಯೆ ಗೈದಿರುವ ಘಟನೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

ಗೋಕಾಕ್: ರಸ್ತೆ ಬದಿ ನಡೆದು ಹೋಗುತ್ತಿದ್ದವನನ್ನು ಕಲ್ಲಿನಿಂದ ಹೊಡೆದು ಹತ್ಯೆ ಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.   ಹುಕ್ಕೇರಿಯ ದುಂಡಯ್ಯಾ ನಂದಿಕೊಳ್ಳಮಠ (50) ಕೊಲೆಯಾದ ವ್ಯಕ್ತಿ. ಇಂದು ಬೆಳ್ಳಂ ಬೆಳಿಗ್ಗೆ ಈ ಕೊಲೆ ನಡೆದಿದ್ದು, ನಡೆದು ಹೋಗುತ್ತಿದ್ದವನನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ.   ಕೊಣ್ಣೂರ ಉಪ ಪೊಲೀಸ್ ಹಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ …

Read More »

ಸುವರ್ಣ ವಿಧಾನಸೌಧ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು: ನಿತೇಶ್ ಪಾಟೀಲ

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ಭದ್ರತೆ, ಸ್ವಚ್ಛತೆ ಸೇರಿ ಸೌಧದ ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.   ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಮಿಕರ ಜೊತೆ ಚರ್ಚಿಸಿದ ನಂತರ ಅವರು ಮಾತನಾಡಿದರು. ‘ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಒಣಗಿಸಲು ಹಾಕಿದ್ದ ಮಹಿಳಾ ಕಾರ್ಮಿಕರೊಬ್ಬರ ವಿರುದ್ಧ ಈಗಾಗಲೇ …

Read More »

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ಹೋರಾಡುತ್ತೇವೆ.: ಎಂಇಎಸ್‌ ಆಗ್ರಹ

ಬೆಳಗಾವಿ: ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ನೀವೂ ಹೋರಾಟ ಮುಂದುವರಿಸಿ. ನಾವೂ ನಿಮ್ಮ ಜೊತೆಗಿದ್ದೇವೆ’ ಎಂದು ಮಹಾರಾಷ್ಟ್ರದ ಶಿವಸೇನೆ ಮುಖಂಡ ಅರುಣ ದುಧವಾಡ್ಕರ್ ಮರಾಠಿಗರಿಗೆ ತಮ್ಮ ಬೆಂಬಲ ಸೂಚಿಸಿದರು. 1986ರಲ್ಲಿ ನಡೆದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹೋರಾಟದಲ್ಲಿ ಹುತಾತ್ಮರಾದ 9 ಜನರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಶಿವಸೇನೆ ಕಾರ್ಯಕರ್ತರು ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರು. ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಯುವವರೆಗೂ ಬೆಳಗಾವಿಯನ್ನು …

Read More »

ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಚಿಕ್ಕೋಡಿ: ತಾಯಿಯೊಬ್ಬರು ಎಂಟು ವರ್ಷಗಳ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ. ಸವೀತಾ ಮದಗೋಂಡ ಬೆಳಗಲಿ (24) ಪವಿತ್ರಾ ಮದಗೋಂಡ ಬೆಳಗಲಿ (8) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »