Breaking News

ಬೆಳಗಾವಿ

Belagavi: ಕಾರು ಹಾಯ್ದು ಮಗು ಸಾವು

ಖಾನಾಪುರ: ತಾಲೂಕಿನ ವಾಟರೆ ಗ್ರಾಮದ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಕಾರು ಹಾಯ್ದು ಶ್ರೀಷಾ ಸಂತೋಷ ನಾಯ್ಕ (1.6 ವರ್ಷ) ಮೃತಪಟ್ಟ ಘಟನೆ ನಡೆದಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಾಲ್ವರು ಕಳ್ಳರ ಬಂಧನ, 18 ಬೈಕ್ ಜಪ್ತಿ

ಬೆಳಗಾವಿ: ನಗರದ ಮಾರ್ಕೆಟ್, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳವುನ ಪ್ರಕರಣದಲ್ಲಿ ಗುರುವಾರ ಪೊಲೀಸರು 6.50 ಲಕ್ಷ ರೂ. ಮೌಲ್ಯದ 18 ಬೈಕ್ ಜಪ್ತಿ ಮಾಡಿ, ನಾಲ್ವರನ್ನು ಬಂಧಿಸಿದ್ದಾರೆ. ತಾಲೂಕಿನ ಕಂಗ್ರಾಳಿ ಕೆ.ಎಚ್.ಗ್ರಾಮದ ರಜತ ಶಿವಣಗೇಕರ (29), ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಗ್ರಾಮದ ವಿಠ್ಠಲ ಆರೇರ (38), ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಲಕರ್ಣಿ (48) ಬಂಧಿತರು. ಎರಡು ವರ್ಷಗಳಿಂದ ನಗರದ …

Read More »

ಖಡೇಬಜಾರ್ ಪೊಲೀಸ್ ಠಾಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ: ಅಧಿಕಾರಿಗಳಿಗೆ ಮಹತ್ವದ ಸೂಚನೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್. ಕೋಸಂಬೆ ಅವರು ಶುಕ್ರವಾರ ಬೆಳಗಾವಿಯ ಖಡೆಬಜಾರ್ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅವರು, ಮಕ್ಕಳ ನ್ಯಾಯ ಕಾಯ್ದೆ-2015ರ ಅನ್ವಯ ಪದಾಧಿಕಾರಿಗಳ ಮಾಹಿತಿ ಹಾಗೂ ಮಕ್ಕಳ ಸಹಾಯವಾಣಿ 1098ರ ಫಲಕಗಳನ್ನು ತಕ್ಷಣವೇ ಶಾಶ್ವತವಾಗಿ ಅಳವಡಿಸುವಂತೆ ಖಡಕ್ ಸೂಚನೆ ನೀಡಿದರು. ಅಲ್ಲದೆ, ಮಕ್ಕಳ ಪ್ರಕರಣಗಳ ರಿಜಿಸ್ಟ್ರಾರ್ …

Read More »

ಜನ್ಮದಿನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ, ಮೃಣಾಲ್

ಬೆಳಗಾವಿ : ಶನಿವಾರ ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಮುಂಬಾಗದಲ್ಲಿ ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಸ್ಥಳಕ್ಕೆ ತೆರಳಿ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು. ಹಿರಿಯ ನಾಗರಿಕರಿಗಾಗಿ ವಿವಿಧ ಮೋಜಿನ ಆಟಗಳು, ಸಂವಾದ, ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಸುಮಾರು 15 ಸಾವಿರ ಹಿರಿಯ ನಾಗರಿಕರು ಸೇರಿದಂತೆ 20 …

Read More »

ಬೆಳಗಾವಿಗೆ ಐಪಿಎಲ್​ ಮ್ಯಾಚ್​ ತರಲು ಪ್ರಯತ್ನ

ಬೆಳಗಾವಿ: ಐಪಿಎಲ್​ನಂತಹ ಮ್ಯಾಚ್​ಗಳು ಬೆಳಗಾವಿಯಲ್ಲೂ ನಡೆಯುವ ರೀತಿಯಲ್ಲಿ ಇಲ್ಲಿನ ಸ್ಟೇಡಿಯಂ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿಯೇ ಏಷಿಯನ್​ ಕ್ರಿಕೆಟ್​ ಕೌನ್ಸಿಲ್​ ಸದಸ್ಯ ಆಶೀಷ ಶೇಲಾ ಅವರಿಗೆ ಮನವಿ ಮಾಡಿದ್ದು, ಐಪಿಎಲ್​ ಮ್ಯಾಚ್​ ಬರುವವರೆಗೂ ಪ್ರಯತ್ನ ಮುಂದುವರಿಯುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಸರ್ದಾರ ಮೈದಾನದಲ್ಲಿ ಎಂಪಿ ಫೌಂಡೇಷನ್​ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಪಟುಗಳನ್ನು ಒಳಗೊಂಡಿರುವ “ಆಲ್​ ಇಂಡಿಯಾ ಓಪನ್​ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿ&26′ ಶ್ರೀ ಮುರುಘೇಂದ್ರಗೌಡ …

Read More »

ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮೇಕೆದಾಟು, ಯುಕೆಪಿ ಯೋಜನೆಗಳ ಜಾರಿ: ಡಿಕೆಶಿ

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ  ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಜೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು. …

Read More »

ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

ಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ವರ್ಷದಲ್ಲಿ 800 ಜನ ಮೃತಪಟ್ಟಿದ್ದಾರೆ ಎಂದು ಎಸ್ಪಿ ಕೆ.ರಾಮರಾಜನ್​ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತ ತಡೆಗಟ್ಟಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕೇಸ್​ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶಬ್ದಮಾಲಿನ್ಯ …

Read More »

ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ಸವದತ್ತಿ: ಅಂಗವಿಕಲರು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ನಗರಸಭೆ ವ್ಯಾಪ್ತಿಯ ರಾಜ್ಯ ಹಣಕಾಸು ಯೋಜನೆ ಹಾಗೂ ಪುರಸಭೆ ನಿಧಿ ಯೋಜನೆಯಡಿ ಅಂಗವಿಕಲ ಪಲಾನುಭವಿಗಳಿಗೆ ಬುಧವಾರ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿ, ತ್ರಿಚಕ್ರ ವಾಹನ ಲಾನುಭವಿಗಳ ದೈನಂದಿನ ಬದುಕಿಗೆ ನೆರವಾಗುವ ಮೂಲಕ ಆಸರೆಯಾಗಲಿ ಎಂದು ಆಶಿಸಿದರು. ನಗರಸಭೆ ಆಯುಕ್ತ ಸಂಗನಬಸಯ್ಯ ಗದ್ದಗಿಮಠ, ತಾಪಂ ಇಒ ಆನಂದ ಬಡಕುಂದ್ರಿ, ಸಿಡಿಪಿಒ ಅಮೃತ …

Read More »

ವಿದ್ಯುತ್ ದುರ್ಬಳಕೆ ತಡೆಗೆ ಕ್ರಮವಹಿಸಿ

ಹುಕ್ಕೇರಿ: ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಕಾರಣ ಅನಧಿಕೃತ ಪಂಪಸೆಟ್‌ಗಳಿಂದ ವಿದ್ಯುತ್ ದುರ್ಬಳಕೆ ಆಗದಂತೆ ರೈತರು ಗಮನಿಸಬೇಕು ಎಂದು ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು. ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಮಂಗಳವಾರ ಮಾನೆ ತೋಟದ ಬಳಿ ಅಳವಡಿಸಿದ್ದ ನೂತನ ಹೆಚ್ಚುವರಿ ವಿದ್ಯುತ್ ಪರಿವರ್ತಕ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳಿಗೆ ಹೆಚ್ಚು ವಿದ್ಯುತ್ ಬೇಕಾಗುತ್ತದೆ. ಆದ್ದರಿಂದ ಅಧಿಕೃತ ಜೋಡಣೆ ಅನುಸಾರ ಟಿಸಿ ಅಳವಡಿಸಲಾಗುತ್ತದೆ. ಅನಧಿಕೃತ ಸಂಪರ್ಕದಿಂದ …

Read More »

ಯಲ್ಲಮ್ಮನಗುಡ್ಡದಲ್ಲಿ ಸಂಚಾರ ಕಿರಿಕಿರಿ

ಸವದತ್ತಿ: ಸಮೀಪದ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ಮಂಗಳವಾರ ಎಲ್ಲೆಡೆ ಸಂಚಾರ ಸಿಕ್ಕು ಉಂಟಾಯಿತು. ಭಕ್ತರ ನಿಯಂತ್ರಣಕ್ಕಾಗಿ ಸವದತ್ತಿ ಯಿಂದ ಸಂಗಪ್ಪನಕೊಳ್ಳ ಮಾರ್ಗವಾಗಿ ಪ್ರವೇಶ ಹಾಗೂ ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗವಾಗಿ ನಿರ್ಗಮನಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಯಿತು. ಆದರೆ, ನಿರೀೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಸಂಚಾರ ಸಿಕ್ಕು ಹೆಚ್ಚಿತು. ಯಲ್ಲಮ್ಮನಗುಡ್ಡದಿಂದ ಸವದತ್ತಿ ಎಪಿಎಂಸಿ ವರೆಗೆ, ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗದ ಎಪಿಎಂಸಿ, ಮುನವಳ್ಳಿ, ಧಾರವಾಡ, …

Read More »