Breaking News

ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲಘು ಭೂಕಂಪನದ ಅನುಭವ

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲಘು ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ 6.45 ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.    

Read More »

ತಿಂಗಳ ಹಿಂದೆ ಕಾಣೆಯಾಗಿದ್ದ ಕಮಾಂಡೋ ವಿಂಗ್ ಸೇನಾಧಿಕಾರಿ ಬೆಳಗಾವಿ ರೈಲು ನಿಲ್ದಾಣದಲ್ಲಿ ಪತ್ತೆ

ಬೆಳಗಾವಿ: ನಾಪತ್ತೆ ಆಗಿದ್ದ ಮರಾಠಾ ಲಘು ಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್ ನ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರನ್ನು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಒಂದು ತಿಂಗಳ ಬಳಿಕ‌ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ನಾಪತ್ತೆಯಾಗಿದ್ದರಿಂದ ಸೇನಾ ವಲಯದಲ್ಲಿ ಆತಂಕಕ್ಕೆ‌ ಕಾರಣವಾಗಿತ್ತು.‌ ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ ಶುಕ್ರವಾರ ಸಿಕ್ಕಿದ್ದಾರೆ. …

Read More »

ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ

ಚಿಕ್ಕೋಡಿ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಚಿಕ್ಕೋಡಿ ನಗರದಲ್ಲಿ ರಾಜ್ಯ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದೆ. ಕಳೆದ ಎರಡು ದಿನಗಳ ಹಿಂದೆ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಮರಾಠಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ವಿದ್ಯುತ್ ಅವಘಡದಿಂದ ಮೂರನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನುಷ್ಕಾ ಬೆಂಡೆ ಮೃತಪಟ್ಟಿದ್ದು. ಬಾಲಕಿ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡಬೇಕೆಂದು …

Read More »

ಹಿಗ್ಗಿದ ಕೃಷ್ಣೆಯ ಒಡಲು: ಮತ್ತೆ ನೆರೆ ಭೀತಿ

ಬೆಳಗಾವಿ: ಜಿಲ್ಲೆಯ ಗಡಿ ಭಾಗ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಘಟಪ್ರಭಾ ನದಿಗೆ 10 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್‌ ಜಲಾಶಯಮಟ್ಟದಲ್ಲಿ ಒಂದೇ ದಿನ ಮೂರು ಅಡಿಗಳಷ್ಟು ಏರಿಕೆಯಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2093 ಅಡಿಗಳಷ್ಟು ನೀರು ಸಂಗ್ರಹವಾಗಿದೆ. …

Read More »

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಯುವಕರಿಬ್ಬರ ಕುತ್ತಿಗೆ ಭಾಗದ ಮೇಲೆ ಬ್ಲೇಡ್‌ನಿಂದ ಹಲ್ಲೆ

ಸಂಕೇಶ್ವರ : ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ, ವ್ಯಕ್ತಿಯೊಬ್ಬ ಯುವಕರಿಬ್ಬರ ಕುತ್ತಿಗೆ ಭಾಗದ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.   ಇಲ್ಲಿನ ವಡ್ಡರ ಓಣಿಯ ನಿವಾಸಿಗಳಾದ ಸಂತೋಷ ವಡ್ಡರ ಹಾಗೂ ಇವರ ಸಹೋದರ ಲಕ್ಷ್ಮಣ ವಡ್ಡರ ಗಾಯಗೊಂಡವರು. ಆರೋಪಿ ದಿಲೀಪ್‌ ಎಂಬಾತ ಚಪ್ಪಲಿಯ ಚರ್ಮ ಕತ್ತರಿಸುವ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ. ಜೂಜಾಟವೇ ಗಲಾಟೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದಿಲೀಪ್‌ಗೆ …

Read More »

ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ: ಶಾಸಕ ಅನಿಲ ಬೆನಕೆ

ಬೆಳಗಾವಿ: ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನದಲ್ಲಿದ್ದು, ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲ ತರಹದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವು ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ‌ ಶುಕ್ರವಾರ ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ …

Read More »

ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ: ಶಾಸಕ ಅನಿಲ ಬೆನಕೆ

ಬೆಳಗಾವಿ: ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನದಲ್ಲಿದ್ದು, ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲ ತರಹದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವು ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ‌ ಶುಕ್ರವಾರ ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ …

Read More »

ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದಿದ್ದ ತಂದೆ-ಮಗ ಅರೆಸ್ಟ್​

ಬೆಳಗಾವಿ: ಕಬ್ಬಿನ ಕದ್ದೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ತಂದೆ-ಮಗ ಇಬ್ಬರನ್ನೂ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದು, 204 ಕೆಜಿ ತೂಕದ ಹಸಿ ಗಾಂಜಾ ಬೆಳೆ ಜಪ್ತಿ ಮಾಡಿದ್ದಾರೆ. ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಬಸಪ್ಪ ರಂಗಪ್ಪ ಲಗಳಿ(77) ಮತ್ತು ಇವರ ಪುತ್ರ ಸಿದ್ದಪ್ಪ ಬಸಪ್ಪ ಲಗಳಿ(40) ಬಂಧಿತರು. ಹೊನಕುಪ್ಪಿ ಗ್ರಾಮದ ಹದ್ದಿನಲ್ಲಿನ ಸರ್ವೇ ನ.316/4ರ ತಮ್ಮ ಜಮೀನಿನಲ್ಲಿ ಯಾರಿಗೂ ಅನುಮಾನ ಬಾರದಂತೆ ಕಬ್ಬಿನಗದ್ದೆಯಲ್ಲಿ ಗಾಂಜಾ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ …

Read More »

ಬೆಳಗಾವಿಯ ಬಾಳೇಕುಂದ್ರಿ ಹೊನ್ನಿಹಾಳ ರಸ್ತೆ ಮಧ್ಯೆ ಭೀಕರ ಅಪಘಾತ

ಬೆಳಗಾವಿ -ಬಾಗಲಕೋಟೆ ಮುಖ್ಯ ರಸ್ತೆಯ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ -ಹೊನ್ನಿಹಾಳ ಗ್ರಾಮಗಳ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮಾವಿನಕಟ್ಟಿ ಗ್ರಾಮದ ಮಹಾಂತೇಶ ಸನದಿ ವಯಸ್ಸು 35ರ ಆಸುಪಾಸು ಎಂದು ಗೊತ್ತಾಗಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಎರಡು ಕಾಲುಗಳು ನುಜ್ಜಾಗಿದ್ದು, ಮಾರೀಹಾಳ ಠಾಣೆ ಪೋಲೀಸರು ಅಂಬುಲೆನ್ಸ್ ನಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಿಸಿದ್ದಾರೆ.

Read More »

ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ’

ಬೆಳಗಾವಿ : ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ. ಅವರ ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲಾ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನ ಎಳೆ ತಂದು ಅವರ ಮುಂದೆ ಪೈರ ಮಾಡಕ್ಕಾಗುತ್ತಾ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಹರ್ಷ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಿದೆಯೋ ಅಷ್ಟೇ …

Read More »