Breaking News

ಬೆಳಗಾವಿ

ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನಹರಿಸಲಿ

ಅಥಣಿ ಗ್ರಾಮೀಣ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಕಲಿಕಾ ಗುಣಮಟ್ಟದಲ್ಲಿ ಯಶಸ್ವಿಯಾಗುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಸಾಹಿತಿಗಳು, ತತ್ತ್ವಜ್ಞಾನಿಗಳು ಕಾಯಕ ನಿಷ್ಠೆ ಹಾಗೂ ನಿರಂತರ ಪ್ರಯತ್ನದಿಂದ ಸಾಧಕರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಅರಿತು ಮೊಬೈಲ್, …

Read More »

ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರ

ಅಥಣಿ: ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರವಾಗುತ್ತವೆ. ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ ಲಭಿಸಲು ನಿತ್ಯ ಲಿಂಗಪೂಜೆ ರೂಢಿಸಿಕೊಳ್ಳಬೇಕೆಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿಭಾವದಿಂದ ಶಿವನನ್ನು ಆರಾಽಸಬೇಕು. ದಿನಕ್ಕೆ ಸೀಮಿತಗೊಳಿಸದೆ ನಿತ್ಯವೂ ಶಿವರಾತ್ರಿಯಾಗಬೇಕು. ಗಚ್ಚಿನಮಠದ ಶಿವರಾತ್ರಿ ಉತ್ಸವ ಮಾದರಿಯಾಗಿದೆ ಎಂದರು. ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ಲಿಂಗಧಾರಿಗಳಾಗಿ ಇಷ್ಟಲಿಂಗ …

Read More »

ಶಿವನ ಆರಾಧನೆಯಲ್ಲಿ ರಾಮದುರ್ಗ ಜನತೆ

ಶಿವನ ಕೈಲಾಸವೇ ಧರೆಗಿಳಿದ ಅನುಭವ ಎಲ್ಲಿ ನೋಡಿದರಲ್ಲಿ ಕೈಲಾಸನಾಥನ ನಾಮ ಸ್ಮರಣೆ ಭಕ್ತಿಯ ಭಾವಪರವಶದಲ್ಲಿ ಮುಳಗಿದ ಶಿವನ ಆರಾಧಕರು ಅಪಾರ ಸಂಖ್ಯೆಯ ಭಕ್ತಾದಿಗಳು ಶಿವನ ದರ್ಶನ ಪಡೆದುಕೊಂಡರು. ಈ ಭಕ್ತಿಯ ಜಾತ್ರೆ ನಡೆದಿದ್ದು ರಾಮದುರ್ಗ ಪಟ್ಟಣದ ಮುಳ್ಳೂರು ಗುಡ್ಡದ ರಾಮೇಶ್ವರಂ ನಲ್ಲಿರುವ ಅಶೋಕವನದ ಶಿವನಮೂರ್ತಿಯಲ್ಲಿ. ಪ್ರತಿ ವರ್ಷದಂತೆ ಮಹಾಶಿವರಾತ್ರಿಯ ಅಂಗವಾಗಿ ಬಹಳ ವಿಜೃಂಭಣೆಯಿಂದ ಶಿವನ ಪೂಜಾ ಕೈಂಕರ್ಯಗಳು ನಡೆಯುವುದರ ಮೂಲಕ ಪರಮೇಶ್ವರನ ಆರಾಧನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಿವ ಪ್ರತಿಷ್ಠಾನದ …

Read More »

ಗೋಕಾಕ  ಕೋರ್ಟ್ ಆವರಣದಲ್ಲಿ” ಕೋರ್ಟ್ ಕ್ಯಾಂಟಿನ್” ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ

ಈ ಸಂದರ್ಭದಲ್ಲಿ ಮಾನ್ಯ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಉಮೇಶ ಆತನೂರೆ, ಮಾನ್ಯ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶರಾದ ಶ್ರೀ ಮಾಹಾದೇವ ಕಾನಟ್ಟಿ, ಮಾನ್ಯ ಪ್ರಧಾನ ದಿವಾನಿ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಶ್ರೀಮತಿ ಚೈತ್ರಾ ಕುಲಕರ್ಣಿ ಹಾಗೂ ಗೋಕಾಕ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷ್ ಪಾಟೀಲ್ , ಉಪಾಧ್ಯಕ್ಷರಾದ ವಿಠ್ಠಲ ಜಾಗನೂರ, ಬಸವರಾಜ ದಂಡಿನ, ಪ್ರಧಾನ ಕಾರ್ಯದರ್ಶಿ ವಿಠ್ಠಲ ಮೆಳವಂಕಿ, ಜಂಟಿ ಕಾರ್ಯದರ್ಶಿ ಸಿದ್ದಲಿಂಗ ವಡೇರಹಟ್ಟಿ, ಅಪ್ಪಣ್ಣಾ …

Read More »

ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಯಮಕಮರಡಿ: ಕ್ಷೇತ್ರದ ಜನರ ಆಶೀರ್ವಾದದಿಂದ 15 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳ ಶ್ರೀಗಳ, ಜನರ ಸಹಕಾರದಿಂದ ಹೆಚ್ವಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕಮರಡಿ ಕ್ಷೇತ್ರದ ಕಡೋಲಿಯಲ್ಲಿ‌ ಶ್ರೀ ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತವಾಗಿ ಆಯೋಜಿಸಲಾದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ …

Read More »

ಕರ್ನಾಟಕದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ತತ್ತರಿಸಿದ ಜನತೆ

ಬೆಳಗಾವಿಕಾಂಗ್ರೆಸ್‌ನ ಸಾವಿರ ದಿನ ವೈಫಲ್ಯ, ಭ್ರಷ್ಟಾಚಾರ ಆಡಳಿತದಿಂದ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಮಸ್ಯೆ ಸೃಷ್ಟಿಯಾಗಿವೆ. ಅಭಿವೃದ್ಧಿ ಸ್ಥಗೀತಗೊಂಡಿದ್ದು, ಜನಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಾವಿರ ದಿನ ಸಂಭ್ರಮ ಆಚರಿಸುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಟೀಕಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊಲೆ, ಸೂಲಿಗೆ, ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಸಚಿವ …

Read More »

ಬೆಳಗಾವಿಯ ಶಹಾಪುರ ಸ್ಮಶಾನದಲ್ಲಿ ಶಿವರಾತ್ರಿ ಜಾಗರಣೆ

ಬೆಳಗಾವಿಯ ಶಹಾಪುರದಲ್ಲಿರುವ ಸ್ಮಶಾನದಲ್ಲೇ ಶಿವರಾತ್ರಿಯ ಜಾಗರಣೆ ನಡೆಯುತ್ತದೆ. ಹಬ್ಬ-ಹರಿದಿನಗಳಲ್ಲೂ ಜನ ಬರುತ್ತಾರೆ. ಅಕ್ಷರಶಃ ಸ್ಮಶಾನಪ್ರಿಯ ಶಿವನ ನಿಜ ಆರಾಧನೆ ಇಲ್ಲಿ ನಡೆಯುತ್ತದೆ. ಶಹಾಪುರ ಮುಕ್ತಿಧಾಮ ವೈರಾಗ್ಯದ ತಾಣವನ್ನು ಭಕ್ತಿ ಕ್ಷೇತ್ರವನ್ನಾಗಿ ಬದಲಾಯಿಸಿದೆ. ಉತ್ತಮ ಉದ್ಯಾನ ಜನಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯ ಸಮಾಜಸೇವಕರು ಸೇರಿ 28 ವರ್ಷಗಳ ಹಿಂದೆ ಮುಕ್ತಿಧಾಮ ಸೇವಾ ಸುಧಾರಣಾ ಮಂಡಳಿ ಸ್ಥಾಪಿಸಿ, ಶಿವನ ಮಂದಿರ ನಿರ್ಮಿಸಿ, ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಮಹಾನಗರ ಪಾಲಿಕೆ  ಅನುದಾನವಿಲ್ಲದೆ ಈ ಮಂಡಳಿಯೇ ಸ್ಮಶಾನವನ್ನು ಮಾದರಿ …

Read More »

ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಹಾಗೂ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ!

ಸವದತ್ತಿ ಪಟ್ಟಣದ ಗುರು ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ಸುಸಂದರ್ಭದಲ್ಲಿ, ನಮ್ಮ ಕ್ಷೇತ್ರದ ಶ್ರೀ ಯಲ್ಲಮ್ಮನ ಗುಡ್ಡ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿದ ಬೆನ್ನಲ್ಲೇ, ಅಲ್ಲಿನ ಸುಮಾರು 320 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ದಶಕಗಳ ಕಾಲದ ಜನರ ಭೂಮಿಯ ಹಕ್ಕಿನ ಕನಸು ಇಂದು ನನಸಾಗಿರುವುದು ನನಗೆ ಅಪಾರ ತೃಪ್ತಿ …

Read More »

ಮತದಾರರ ಪಟ್ಟಿ ಪರಿಷ್ಕರಣಾ ಸಭೆ

ನಿಪ್ಪಾಣಿ: ಮತಕ್ಷೇತ್ರದ ಬಿ.ಎಲ್.ಎ.-2 ಕಾರ್ಯಗಾರ ಸಭೆಯನ್ನು ಉದ್ಘಾಟಿಸಿ & ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ನಡೆಸಿ ಮಾತನಾಡಲಾಯಿತು. ಕಾರ್ಯಗಾರದ ಬಗ್ಗೆ ಸಮಗ್ರ ಮಾಹಿತಿ ನೀಡಿ,ಪ್ರಕ್ರಿಯೆಯು ನಕಲಿ ಮತದಾರರನ್ನು ತೆಗೆದುಹಾಕಲು ಮತ್ತು ಹೊಸ ಮತದಾರರನ್ನು ಸೇರಿಸಲು ಅವಕಾಶವನ್ನು ಕಲ್ಪಿಸಿದ್ದು,ನಿಖರ ಮತದಾರರ ಪಟ್ಟಿ ಇಲ್ಲದೆ,ನ್ಯಾಯಯುತ ಚುನಾವಣೆಗಳು ಅಸಾಧ್ಯ.ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಮೂಲಕ ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಪ್ರಜಾಪ್ರಭುತ್ವದ ತತ್ವವನ್ನು ಬಲಪಡಿಸುತ್ತದೆ ಎಂದು ತಿಳಿಸಿ, …

Read More »

ಯಾವ ಪುರುಷಾರ್ಥಕ್ಕೆ ಸಾವಿರ ದಿನಗಳ ಸಂಭ್ರಮ? ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಈರಣ್ಣ ಕಡಾಡಿ ಕಿಡಿ

ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳಾಗಿವೆ. ಇಂದು ಹಾವೇರಿಯಲ್ಲಿ ಬೃಹತ್‌ ಪ್ರಮಾಣದ ಸಾವಿರ ದಿನಗಳ ಸಂಭ್ರಮಾಚರಣೆ ಸಮಾವೇಶ ನಡೆಸಲಾಗುತ್ತಿದೆ “ಯಾವ ಪುರುಷಾರ್ಥಕ್ಕೆ ? ಈ ಸಮಾವೇಶ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ವಾಗ್ದಾಳಿ ನಡೆಸಿದರು. ಶನಿವಾರ ಫೆ-14 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯದಲ್ಲಿ ಕಾಂಗ್ರೇಸ್‌ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ 3731 ಕ್ಕೂ ಹೆಚ್ಚು ರೈತರು …

Read More »