ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಭಾನುವಾರ ಗೋಕಾಕದ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ನಕಲಿಗಾಗಿ ಸ್ಮಾರ್ಟ್ ವಾಚ್ ಉಪಯೋಗಿಸಲೆತ್ನಿಸಿದ ಆರೋಪದಲ್ಲಿಅಭ್ಯರ್ಥಿಯೋರ್ವನನ್ನುಗೋಕಾಕ ಶಹರ ಠಾಣೆ ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಸಿದ್ದಪ್ಪ ಮದಿಹಳ್ಳಿ(20) ಬಂಧಿತ ಆರೋಪಿ. ಕಳೆದ ಭಾನುವಾರ ಗೋಕಾಕ ನಗರದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಬಂಧಿತ ಆರೋಪಿ ಸ್ಮಾರ್ಟ್ ವಾಚ್ ನಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ …
Read More »ವರುಣನ ಆರ್ಭಟ ಜೋರಾಗಿದ್ದು ಜೂನ್ 1ರಿಂದ 990 ಮನೆಗಳು, 1 ಸಾವಿರ ಕಿ.ಮೀ ರಸ್ತೆಗೆ ಹಾನಿ
ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷವೂ ವರುಣನ ಆರ್ಭಟ ಜೋರಾಗಿದ್ದು. ಕಳೆದ ಜೂನ್ ಒಂದರಿಂದ ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ 990 ಮನೆಗಳು, ಒಂದು ಸಾವಿರ ಕಿ.ಮೀ ರಸ್ತೆ ಹಾಗೂ 18 ಸೇತುವೆಗಳಿಗೂ ಹಾನಿಯಾಗಿರುವ ವರದಿಯಾಗಿದೆ. ಹೌದು ಮಹಾರಾಷ್ಟ್ರ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಹಳೆ ಮನೆಗಳು ಕುಸಿಯುತ್ತಿವೆ. ಬೆಳಗಾವಿಯ ಕಾಮತ್ ಗಲ್ಲಿಯ ಅನಿಲ್ ಬಡಮಂಜಿ ಹಾಗೂ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ನಬಿಸಾಬ್ …
Read More »ಅಭಿನವ ಕಾಡಸಿದ್ದೇಶ್ವರ ಸ್ವಾಮಿಜಿ ಕಾರು ಅಪಘಾತ
ಬಾಗಲಕೋಟೆ: ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಸ್ವಾಮೀಜಿ ಸೇರಿದಂತೆ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೋಗುಣಸಿ ತಾಂಡಾ ಬಳಿ ಸ್ವಾಮೀಜಿ ಅವರ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಕಾರು ಚಾಲಕ ಸೇರಿದಂತೆ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗದಗ ಜಿಲ್ಲೆ ಹಾಲಕೇರಿಯಿಂದ ಗುಳೇದಗುಡ್ಡ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣತಪ್ಪಿ ನೀಲಗಿರಿ ಮರಕ್ಕೆ ಡಿಕ್ಕಿ …
Read More »ಬೆಳಗಾವಿ: ಈ 22 ಶಾಲೆಗಳಿಗೆ ಬುಧವಾರವೂ ರಜೆ: B.E.O.ರವಿ ಭಜಂತ್ರಿ
ಬೆಳಗಾವಿ – ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಸಿಕ್ಕದ ಕಾರಣ ಸುತ್ತಲಿನ 22 ಶಾಲೆಗಳಿಗೆ ರಜೆ ನೀಡಲಾಗಿದೆ. ಕಳೆದ ರಾತ್ರಿ ಗಾಲ್ಫ್ ಮೈದ0ಾನದಲ್ಲಿ ಕ್ಯಾಮರಾದಲ್ಲಿ ಸೆೆರೆಸಿಕ್ಕ ಚಿರತೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ಮತ್ತು ನಗರ ಬಿಇಒ ರವಿ ಭಜಂತ್ರಿ ತಿಳಿಸಿದ್ದಾರೆ. …
Read More »ಬಳ್ಳಾರಿ ನಾಲಾಗೆ ಡಿಸಿ ನಿತೇಶ್ ಪಾಟೀಲ್ ಬೆಳೆ ಹಾನಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡುತ್ತೇವೆ ಎಂದ ಜಿಲ್ಲಾಧಿಕಾರಿಗಳು
ಬೆಳಗಾವಿಯಲ್ಲಿ ಭಾರಿ ಮಳೆ ಹಿನ್ನೆಲೆ ಬಳ್ಳಾರಿ ನಾಲಾದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಮಳೆ ನಿಂತ ಮೇಲೆ ಬೆಳೆ ಹಾನಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಹೌದು ಭಾರಿ ಮಳೆಯಿಂದ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅವಾಂತರ ಸೃಷ್ಟಿಯಾಗಿದೆ. ಯಡಿಯೂರಪ್ಪ ಮಾರ್ಗದಲ್ಲಿರುವ ಬಳ್ಳಾರಿ ನಾಲಾಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ …
Read More »ಪಾಟೀಲ್ ಗಲ್ಲಿಯಲ್ಲಿ ಮಳೆ ನೀರು ಮನೆಯೊಳಕ್ಕೆ ನುಗ್ಗಿ ಅವಾಂತರ
ಬೆಳಗಾವಿಯ ಪಾಟೀಲ್‍ಗಲ್ಲಿಯಲ್ಲಿ ಒಳಚರಂಡಿ ಬ್ಲಾಕ್ ಆಗಿರುವ ಕಾರಣ ಮಳೆಯ ನೀರು ಹರಿದು ಹೋಗದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕೆಂದು ಪಾಟೀಲ್ ಗಲ್ಲಿಯ ನಿವಾಸಿ ಮನವಿ ಮಾಡಿದ್ದಾರೆ. ಹೌದು ಬೆಳಗಾವಿ ನಗರದ ಪಾಟೀಲ್‍ಗಲ್ಲಿಯ ಮನೆ ನಂ 561/62 ರಲ್ಲಿ ಚಿರಾಗ್ ಪೊರ್‍ವಾಲ್ ರವರಿಗೆ ಸೇರಿದ ಮನೆಯಿದೆ. ಇಲ್ಲಿ ಒಳಚರಂಡಿಯಿಲ್ಲದ ಕಾರಣ ನಗರದಲ್ಲಿ ವಿಪರೀತವಾಗಿ ಮಳೆ ಸುರಿದರೆ ನೀರು ಸರಾಗವಾಗಿ ಹರಿದು …
Read More »ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.
ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …
Read More »ಬೆಳಗಾವಿಯಲ್ಲಿ ಮಳೆ ಅಬ್ಬರಕ್ಕೆ ಮನೆ ಕುಸಿತ; ಮಹಿಳೆಗೆ ಗಂಭೀರ ಗಾಯ, ನಾಲ್ಕು ವಾಹನಗಳು ಜಖಂ
ಬೆಳಗಾವಿ: ಜಿಲ್ಲೆಯಾದ್ಯಂತ ಸುರಿಯುತ್ತಿವ ಭಾರಿ ಮಳೆಯಿಂದಾಗಿ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿರುವ ಘಟನೆ ತಾಲೂಕಿನ ವಡಗಾಂವಿ ಪ್ರದೇಶದಲ್ಲಿ ನಡೆದಿದೆ. ವಡಗಾವಿಯ ಭಾರತ ನಗರದ ಎಡರನೇ ಕ್ರಾಸ್ನಲ್ಲಿ ಆನಂದ ಕಲ್ಲಪ್ಪ ಬಿರ್ಜೆ ಎಂಬುವವರಿಗೆ ಸೇರಿದ ಮನೆ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ನೆಲಸಮವಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಭಾನುವಾರ ಸಂಜೆಯಷ್ಟೇ ಮನೆಯಲ್ಲಿದ್ದ ಏಳು ಜನ ಕುಟುಂಬ ಸದಸ್ಯರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ …
Read More »ಬೆಳಗಾವಿ ಸ್ಮಾರ್ಟಸಿಟಿ ಪಟ್ಟಿಗೆ ಸೇರಿದ ನಂತರ ಇದರ ಚಿತ್ರಣವೇ ಬದಲ: ಆಕ್ರೋಶಗೊಂಡ ಜನ
ಬೆಳಗಾವಿ ಸ್ಮಾರ್ಟಸಿಟಿ ಪಟ್ಟಿಗೆ ಸೇರಿದ ನಂತರ ಇದರ ಚಿತ್ರಣವೇ ಬದಲಾಗುತ್ತದೆ ಎಂದು ಜನ ಬಯಸಿದ್ದರು. ಆದರೆ ಜನರ ಬಯಕೆ ಹುಸಿಯಾಗಿದೆ. ಕುಂದಾನಗರಿಯ ಹಳೆ ಗಾಂಧಿ ನಗರ ಲಕ್ಷ್ಮೀ ಗಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ನಿಂತಿರುವ ದೊಡ್ಡ ಪ್ರಮಾಣದ ನೀರು..ಕಟ್ ಆಗಿ ಜೋತಾಡುತ್ತಿರುವ ವಿದ್ಯುತ್ ತಂತಿ…ರಸ್ತೆ ಪಕ್ಕ ಪಾರ್ಕಿಂಗ್ ಮಾಡಿರುವ ಲಾರಿ..ನೀರಿನಲ್ಲಿಯೇ ನಿಂತು ಪ್ರತಿಭಟನೆ ಮಾಡುತ್ತಿರುವ ನಿವಾಸಿಗಳು..ಹೌದು ನೀವು …
Read More »ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಶಾಲೆಗಳಿಗೆ ರಜೆ: ಜಿಲ್ಲಾಧಿಕಾರಿ
ಬೆಳಗಾವಿ – ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ತಾಲೂಕಿನ ಶಾಲೆ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಡಿಡಿಪಿಐ ಬಸವರಾಜ ನಾಲತವಾಡ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ತಾಲೂಕಿನ 22 ಶಾಲೆಗಳಿಗೆ ಈಗಾಗಲೆ ರಜೆ ಘೋಷಿಸಲಾಗಿತ್ತು. ಈಗ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಕಳೆದ ರಾತ್ರಿಯಿಂದ …
Read More »