ಚಿಕ್ಕೋಡಿ : ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ತಾಲೂಕಿನ ಬಂಬಲವಾಡ ಗ್ರಾಮದ ಭೂಮಿಕಾ ಕರೆಪ್ಪ ಮಾಳಂಗಿ(೧೭) ಹೃದಯಾಘಾತದಿಂದ ನಿಧನ ಹೋಂದಿರುವ ಘಟನೆ ಶನಿವಾರ ನಡೆದಿದೆ. ಮೃತ ಭೂಮಿಕಾ ಮಾಳಂಗಿ ಬೆಳಗ್ಗೆ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಳು, ಸ್ನಾನದ ನಂತರ ವಿದ್ಯಾರ್ಥಿನಿ ಹೃದಯಾಘಾತವಾಗಿದೆ. ಕೂಡಲೇ ಕುಟುಂಬಸ್ಥರು ಸ್ಥಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿಯೇ ಭೂಮಿಕಾ ಮೃತಳಾಗಿದ್ದಾಳೆ. ವಿದ್ಯಾರ್ಥಿನಿಯ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಪರೀಕ್ಷೆಯ ಭಯದಿಂದ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕೋಡಿ …
Read More »ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರುದ್ಧ ಜನ ಚಳುವಳಿ
ಬೆಳಗಾವಿ : ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಜನ ಚಳುವಳಿ ತೀವ್ರಗೊಳಿಸಬೇಕಾಗುತ್ತದೆ ಎಂದು ಡಾ.ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಎಚ್ಚರಿಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರೋಧಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಪೋಷಕರ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಣದ ಉಳಿವಿದೆ. ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯವರ ಪರಿಶ್ರಮದಿಂದ ಬಂದಿರುವ …
Read More »ವೈಮಾನಿಕ ನಿರ್ಬಂಧ ಬೆಳಗಾವಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ
ಬೆಳಗಾವಿ: ವೈಮಾನಿಕ ನಿರ್ಬಂಧ ಮತ್ತು ಪ್ರಚಲಿತ ಸ್ಥಿತಿ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ ಸೇರಿದಂತೆ ಒಟ್ಟು 11 ದೇಶಗಳ ವೈಮಾನಿಕ ಮಾರ್ಗಗಳನ್ನು ಮಾರ್ಚ್ 2ರವರೆಗೆ ಮುಚ್ಚಲಾಗಿದೆ. ಅನಿರೀಕ್ಷಿತ ಅಡಚಣೆಯಿಂದಾಗಿ ಹಾಗೂ ಕರ್ನಾಟಕದ ಅನೇಕ ಪ್ರಯಾಣಿಕರು ಯುಎಇ (ದುಬೈ) ಸೇರಿದಂತೆ ವಿವಿಧ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಬೆಳಗಾವಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ 0831-2407290,ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 080-22340676, …
Read More »ಜನ ಸೇವೆಯೇ ದೇವರ ಸೇವೆ ಎಂದು ಕೆಲಸ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ : ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟು, ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಮುತಗಾ ಗ್ರಾಮದಲ್ಲಿ ನಡೆದ ಶ್ರೀ ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ 25 ವರ್ಷದಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ನಿಮ್ಮ ಸೇವೆಯೇ …
Read More »ಬೆಳಗಾವಿಯಲ್ಲಿ ಮಕ್ಕಳ ಕಳ್ಳಿ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಿದ ಸಾರ್ವಜನಿಕರು
ಬೆಳಗಾವಿ : ವಾಟ್ಸಾಪ್‌ದಲ್ಲಿ ವೈರಲ್ ಆಗಿದ್ದ ಮಕ್ಕಳ ಅಪಹರಣದ ವದಂತಿಯ ಆಡಿಯೋ ನಂಬಿ ಇಲ್ಲಿನ ನ್ಯೂ ಗಾಂಧಿ ನಗರದ ಜನ, ಸಂಶಯಾಸ್ಪವಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬಳನ್ನು ಹಿಡಿದು, ಹಲ್ಲೆ ಮಾಡಿ ಕೂಡಿ ಹಾಕಿದ ಘಟನೆ ಶನಿವಾರ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ನ್ಯೂ ಗಾಂಧಿ ನಗರದ ಬೀದಿಗಳಲ್ಲಿ ಇವತ್ತು ಕಾಣಿಸಿಕೊಂಡ ಮಹಿಳೆ ಭಿಕ್ಷೆ ಬೇಡುತ್ತ ಓಡಾಡುತ್ತಿದ್ದಳು. ಕೈಯಲ್ಲಿ ಪ್ಲಾೃಸ್ಟಿಕ್ ಚೀಲವೊಂದನ್ನು ಹಿಡಿದುಕೊಂಡಿದ್ದನ್ನು ನೋಡಿದ ಜನ, ಮಕ್ಕಳನ್ನು …
Read More »ಬೆಳಗಾವಿ| ದ್ವಿತೀಯ ಪಿಯು ಪರೀಕ್ಷೆ: ಮೊದಲ ದಿನ ಸುಗಮ
ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರದಿಂದ ಆರಂಭಗೊಂಡ ಪಿಯು ದ್ವಿತೀಯ ವರ್ಷದ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು. 33,174 ವಿದ್ಯಾರ್ಥಿಗಳು ಪರೀಕ್ಷೆ ಬರೆದರು, 1,026 ವಿದ್ಯಾರ್ಥಿಗಳು ಗೈರು ಹಾಜರಾದರು. ಕನ್ನಡ ವಿಷಯದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 12,420 ವಿದ್ಯಾರ್ಥಿಗಳ ಪೈಕಿ 12,129 ವಿದ್ಯಾರ್ಥಿಗಳು ಹಾಜರಾದರೆ, 291 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 51 ಕೇಂದ್ರ ತೆರೆಯಲಾಗಿತ್ತು. ಕನ್ನಡ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 21,780 ವಿದ್ಯಾರ್ಥಿಗಳ ಪೈಕಿ 21,045 ವಿದ್ಯಾರ್ಥಿಗಳು …
Read More »ಶಕ್ತಿ-ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ, ಸಬಲೀಕರಣದ ಸಂಕೇತ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ ಮತ್ತು ಸಬಲೀಕರಣದ ಸಂಕೇತಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ ಹಾಗೂ ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ಆದೇಶ ಪತ್ರ …
Read More »ಶಾಲೆಗಳಲ್ಲಿ ಡ್ರಗ್ಸ್ ಹಾವಳಿ: ಸಚಿವ ಕಳವಳ
ಬೆಳಗಾವಿ: ‘ಮಾದಕ ವಸ್ತುಗಳ ವ್ಯಸನ ಬಹುದೊಡ್ಡ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. ನಮ್ಮ ಯುವಶಕ್ತಿಯನ್ನು ಕಸಿಯುತ್ತಿರುವ ಈ ವ್ಯಸನ ಶಾಲೆಗಳನ್ನೂ ಆಕ್ರಮಿಸಿಕೊಂಡಿರುವುದು ಕಳವಳಕಾರಿ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂಘ, ದಿಶಾಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ …
Read More »ಜಾತಿ ಮುಕ್ತ ಭಾರತ ಕಟ್ಟಬೇಕಿದೆ: ಸತೀಶ
ಬೆಳಗಾವಿ: ‘ಇಂದು ನಾವೆಲ್ಲರೂ ಸೇರಿ ಜಾತಿ ಮುಕ್ತ ಭಾರತ ಕಟ್ಟಬೇಕಿದೆ. ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರಂಥ ಮಹನೀಯರ ವಿಚಾರಧಾರೆಗಳು, ನೈತಿಕ ತತ್ವಗಳು ಪ್ರತಿ ಮನೆ ತಲುಪಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಇಲ್ಲಿನ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜಕಾರ್ಯ ವಿಭಾಗ, ಸಮಾಜಕಲ್ಯಾಣ ಇಲಾಖೆಯ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ವಿವೇಚನೆ, ವೈಚಾರಿಕತೆ …
Read More »ಇತಿಹಾಸ ನೆನಪಿಸಿದ ಜಾನಪದ ಕಲಾಮೇಳ
ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ 2026ರ ಜಾನಪದ ಕಲಾವಾಹಿನಿಗೆ ಶನಿವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಶಾಸಕ ಮಹಾಂತೇಶ ಕೌಜಲಗಿ ಬೆಳವಡಿ ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ …
Read More »
Laxmi News 24×7