ಚಿಕ್ಕೋಡಿ (ಬೆಳಗಾವಿ) : ಒಣದ್ರಾಕ್ಷಿ ಬೆಲೆ ಕುಸಿತದಿಂದ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದು, ರಾಜ್ಯ ಸರ್ಕಾರ ತುರ್ತಾಗಿ ಬೆಳೆ ಖರೀದಿ ಮಾಡಿ ತಮ್ಮ ನೆರವಿಗೆ ಬರುವಂತೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆಯನ್ನು ಬಿಟ್ಟರೆ ಬೆಳಗಾವಿ ಜಿಲ್ಲೆಯ ರಾಯಬಾಗ, ಕಾಗವಾಡ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ಅತಿ ಹೆಚ್ಚು ದ್ರಾಕ್ಷಿ ಬೆಳೆಗಾರರನ್ನು ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ, ಈ ಬಾರಿ ಬೆಲೆ ಕುಸಿತದಿಂದ ಸಾವಿರಾರು ಟನ್ …
Read More »ಟೊಮೆಟೊ ಕಳ್ಳನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ ರೈತ
ಚಿಕ್ಕೋಡಿ (ಬೆಳಗಾವಿ) : ಕಳೆದ ಎರಡು ತಿಂಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ಮುಟ್ಟಿದೆ. ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿರುವ ಟೊಮೆಟೊ, ರೈತರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತಿದೆ. ಆದರೆ ಇತ್ತೀಚೆಗೆ ತೋಟಕ್ಕೆ ನುಗ್ಗಿ ಟೊಮೆಟೊ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ರೈತರೋರ್ವರು ಟೊಮೆಟೊ ಕಳ್ಳನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಬುಜಪ್ಪಾ ಗಾಣಗೇರ ಎಂಬುವರು ಟೊಮೆಟೊ ಕಳ್ಳತನ …
Read More »ಚಿಕ್ಕೋಡಿಯಲ್ಲಿ ಹಲವು ದೇವಸ್ಥಾನಗಳು ಜಲಾವೃತ
ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಪ್ರಮುಖ ದೇವಾಲಯಗಳು ಜಲಾವೃತವಾಗಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಗಣೇಶ್ ಮಂದಿರ ಜಲದಿಗ್ಬಂದನ ಗೊಂಡಿದ್ದು, ಮಹಾರಾಷ್ಟ್ರ – ಕರ್ನಾಟಕ ಗಡಿಯಲ್ಲಿರುವ ನರಸಿಂಹ ಹಾಡಿ ದೇವಸ್ಥಾನ ಭಾಗಶಃ ಜಲಾವೃತವಾಗಿದೆ. ಇನ್ನು ಭಕ್ತರು ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ, ದತ್ತ ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷ್ಣಾ ನದಿ ಮತ್ತು ಪಂಚಗಂಗಾ ನದಿಗಳ …
Read More »ಜೈನ ಮುನಿ ಮಹಾರಾಜರ ಕನಸುಗಳನ್ನು ಪೂರ್ಣ ಮಾಡುತ್ತೇವೆ: ಸಂಸದ ಅಣ್ಣಾಸಾಹೇಬ್ ಜೊಲ್ಲೆ
ಚಿಕ್ಕೋಡಿ (ಬೆಳಗಾವಿ) : ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆಘಾತ ಉಂಟು ಮಾಡಿದೆ. ಹಿರೇಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಉತ್ತಮ ಆಶ್ರಮ ಕಟ್ಟಿ, ಶಿಕ್ಷಣ ಸಂಸ್ಥೆ ಮಾಡಿದರು. ಮುಂದೆ ಅವರು ಬಿಟ್ಟು ಹೋದ ಕನಸುಗಳನ್ನು ಪೂರ್ಣ ಮಾಡುತ್ತೇವೆ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು. ಇಂದು ಜೈನಮುನಿ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಕುಮಾರ ನಂದಿ ಮಹಾರಾಜರು ಬಿಇ ಪದವೀಧರ ಆಗಿದ್ದು, 14 ಭಾಷೆಗಳಲ್ಲಿ ಪರಿಣಿತರಾಗಿದ್ದರು. …
Read More »ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜಯಮೃತ್ಯುಂಜಯ ಶ್ರೀ
ಚಿಕ್ಕೋಡಿ: ಹಿರೇಕೊಡಿ ನಂದಿ ಪರ್ವತ ಮಹಾರಾಜರ ಹತ್ಯೆಯಿಂದ ಭಾರತದ ಅಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ. ಒಕ್ಕೊರಲಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕು. ನೊಂದ ಮನಸ್ಸುಗಳಿಗೆ ಧೈರ್ಯ ಹೇಳಿ ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮಗಳ …
Read More »ಜೈನ ಮುನಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ.
ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದ ಇಬ್ಬರೂ ಆರೋಪಿಗಳನ್ನು ಪೊಲೀಸರು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಜೈನಮುನಿಯ ಡೈರಿ ಸುಟ್ಟು ಹಾಕಿದ್ದರು. ಸದ್ಯ ಚಿಕ್ಕೋಡಿ ಪೊಲೀಸರು ಡೈರಿಯಲ್ಲಿದ್ದ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೈನಮುನಿ ಹತ್ಯೆ ಕೇಸ್‌ನಲ್ಲಿ ಬಂಧಿಸಿದ್ದ ಇಬ್ಬರು ಆರೋಪಿಗಳ ವಿಚಾರಣೆಯೂ ಚುರುಕು ಪಡೆದುಕೊಂಡಿದೆ. ಜೈನ ಮುನಿಯ ಹತ್ಯೆ ಬಳಿಕ ಆಶ್ರಮದಲ್ಲಿ ಕಾಮಕುಮಾರ ನಂದಿ ಮಹಾರಾಜರ ಡೈರಿಯನ್ನು ಸಹ ಅಲ್ಲಿಂದ ಆರೋಪಿಗಳು ಹೊತ್ಯೊಯ್ದಿದ್ದರು. ಅದಾದ …
Read More »ಕುಡಿಯಲು ಹಣ ನೀಡುವಂತೆ ಮನೆಯವರಿಗೆ ಪೀಡಿಸುತ್ತಿದ್ದ ಯುವಕನ ಹೊಡೆದು ಕೊಂದ ತಂದೆ, ಸಹೋದರ!
ಚಿಕ್ಕೋಡಿ: ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ. ಆರೋಪಿಗಳಾದ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ : ಜುಲೈ 10ರಂದು ಸೋಮಯ್ಯ ಮದ್ಯಪಾನ ಮಾಡಲು ಹಣ …
Read More »ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ ಎಂದ ಗೃಹ ಸಚಿವ ಜಿ.ಪರಮೇಶ್ವರ
ಚಿಕ್ಕೋಡಿಯ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ರಾಜ ಮಹಾರಾಜರ ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಇಲ್ಲಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಜೈನ್ ಮುನಿಗಳಿಗೆ, ಜೈನ್ ಬಸದಿಗಳಿಗೆ ಸರ್ಕಾರ ರಕ್ಷಣೆ ನೀಡುವಂತೆ ಆಗ್ರಹಿಸಿ ಸಲ್ಲೇಖನ ವ್ರತ ಕೈಗೊಂಡಿದ್ದರು ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಜಿ.ಪರಮೇಶ್ವರ ಅವರು ನವಗ್ರಹ ಕ್ಷೇತ್ರಕ್ಕೆ ಭೇಟಿ ಕೊಟ್ಟು ಜೈನ್ ಮುನಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದರು. …
Read More »ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತಿದ್ದೇವೆ- ಬೆಳಗಾವಿ ಎಸ್ಪಿ
ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿಯ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಭೀಕರ ಕೊಲೆ ಪ್ರಕರಣವನ್ನು ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಹೇಳಿದ್ದಾರೆ. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದಲ್ಲಿ ಶ್ರೀಗಳ ಮೃತದೇಹಗಳ ಅಂತಿಮ ಕಾರ್ಯಗಳ ಸಕಲ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ ಮುನಿಗಳ ಪಾರ್ಥಿವ ಶರೀರವನ್ನು ಬೆಳಗಾವಿಯಲ್ಲಿ ಪರೀಕ್ಷೆ ನಡೆಸಿ …
Read More »ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಸರ್ಕಾರವನ್ನು ಒತ್ತಾಯ
ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಆಗ್ರಹಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುನಿಗಳು ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೈನ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ತನಿಖೆ ಅನುಮಾನ ಮೂಡಿಸುವಂತಿದೆ. ಹಾಗಾಗಿ ಸಿಬಿಐಗೆ …
Read More »