Breaking News

ಗೋಕಾಕ

ಗೋಕಾಕ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿರುವ ರಂಗಕರ್ಮಿ

ಗೋಕಾಕ: ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಶನಿವಾರದಂದು ನಡೆಯಲಿರುವ     ಗೋಕಾಕ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿರುವ ರಂಗಕರ್ಮಿ ಬಸವಣ್ಣೆಪ್ಪ ಹೊಸಮನಿ ವೇದಿಕೆ.

Read More »

ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ ಉತ್ಸವ

ಗೋಕಾಕ: ನಗರದ ಶೂನ್ಯ ಸಂಪಾದನ ಮಠದಿಂದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭವು ಮಾ-1 ರಿಂದ 4ರವರೆಗೆ ಅತೀ ವಿಜೃಂಭನೆಯಿಂದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿವೇಕ ಜತ್ತಿ ಹೇಳಿದರು. ಅವರು ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ …

Read More »

1.20 ಕೋಟಿ ರೂ. ಮೊತ್ತದ ಜೆಜೆಎಂ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಗುದ್ದಲಿ ಪೂಜೆ

ಗೋಕಾಕ : ಪೈಪಲೈನ್ ಮೂಲಕ 1242 ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯ ತಲುಪಲಿದ್ದು, ಈ ಯೋಜನೆಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕೌಜಲಗಿಯಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಈಗಾಗಲೇ ಜಲಜೀವನ …

Read More »

ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರೊಂದಿಗೆ ಚರ್ಚಿಸುತ್ತಿರುವ ರೈತ ಸಂಘದ ಮುಖಂಡರು.

ಗೋಕಾಕ: ಕಳೆದ ಎರಡು ವರ್ಷಗಳಿಂದ ನೆರೆ, ಅತಿವೃಷ್ಟಿ ಹಾಗೂ ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ತತ್ತರಿಸಿರುವ ರೈತರಿಗೆ ಈಗ ಸಾಲ ತುಂಬುವಂತೆ ನೋಟಿಸು ನೀಡುತ್ತಿರುವ ಬ್ಯಾಂಕ್‍ನವರು ತಮ್ಮ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಒತ್ತಾಯಿಸಿದ್ದಾರೆ. ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಸಾಲ ತುಂಬಲು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನವರು ರೈತರಿಗೆ ನೀಡುತ್ತಿರುವ ನೋಟಿಸ್‍ನ್ನು ತಹಶೀಲ್ದಾರರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, …

Read More »

ಇಂಧನ ದರ ಇಳಿಸುವಂತೆ ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹ

ಗೋಕಾಕ: “ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು” ಎಂದು ಯುವ ಮುಖಂಡ ರಾಹುಲ್ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕೋವಿಡ್ ನಿಂದಾಗಿ ಜನರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ, …

Read More »

ಸುಮಾರು 15ಕ್ಕೂ ಹೆಚ್ಚು ಬುಕ್ಕಿಗಳನ್ನು ಕರೆದು ಗೋಕಾಕ್ DYSP ಖಡಕ್ ವಾರ್ನಿಂಗ್

ಗೋಕಾಕ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಹೆಡಮುರಿ ಕಟ್ಟಲು ಪೊಲೀಸರು ರೆಡಿಯಾಗಿದ್ದಾರೆ, ಮತ್ತೊಂದೆಡೆ ಬೀಸೋ ದೊಣ್ಣೆಯಿಂದ ಪಾರಾಗಲು ಹರಸಾಹಸ ನಡೆಸಿದ್ದಾರೆ.   ಪ್ರಕಟವಾಗುತ್ತಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೋಕಾಕ ಪೊಲೀಸರು ಈಗ ದಂಧೆಕೋರರ ಉದ್ದನೆಯ ಪಟ್ಟಿ ಹಿಡಿದುಕೊಂಡು ನಗರದಲ್ಲಿ ಸಂಚರಿಸತೊಡಗಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಬುಕ್ಕಿಗಳ ಪೈಕಿ 15 ಬುಕ್ಕಿಗಳನ್ನು ಗೋಕಾಕ ಡಿಎಸ್ಪಿಯವರು ಎಲ್ಲರನ್ನು ಕರೆಯಿಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.   ಪೊಲೀಸರ ಕ್ರಮದಿಂದ ಬೆಚ್ಚಿಬಿದ್ದ ಇನ್ನೂ …

Read More »

ಜಿ ಎನ್ ಎಸ್ ಶಾಲೆಯ 1998-99 ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುಸ್ಮoತಿ ಕಾರ್ಯಕ್ರಮ

ಗೋಕಾಕ: ದೇಶದ ಸಮಸ್ಯೆಯನ್ನು ನಿವಾರಿಸಲು ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಆರೋಗ್ಯಯುತ ಭಾರತವಾಗಬೇಕು. ಭಾರತೀಯ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಅವರು ರವಿವಾರದಂದು ಇಲ್ಲಿಯ ಶುಭಂ ಗಾರ್ಡನ್‍ನಲ್ಲಿ ಜರುಗಿದ ನಗರದ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ …

Read More »

ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರಿಸಲು ವಿರೋಧ

ಗೋಕಾಕ: ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರ್ಪಡೆ ಮಾಡುವುದಕ್ಕೆ ರಾಜ್ಯ ಆರ್ಯ ಈಡಿಗ ಸಂಘದ ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಳಿಗೇರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಡಿಗ, ಬಿಲ್ಲವ ಸೇರಿ ಅನೇಕ ಜಾತಿಗಳು ಈಗಾಗಲೇ 2ಎ ನಲ್ಲಿವೆ. ಇದರಲ್ಲಿ ಈಡಿಗ ಸಮುದಾಯ 60 ಲಕ್ಷದಿಂದ 70 ಲಕ್ಷ ಜನಸಂಖ್ಯೆ ಹೊಂದಿದೆ. 2ಎ ನಲ್ಲಿ ಈಗಾಗಲೇ ಇರುವ ಸಮುದಾಯಗಳಿಗೆ ಸರಿಯಾಗಿ ಮೀಸಲಾತಿ …

Read More »

87.40 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ ಸಾರಿಗೆಗಳನ್ನು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೇವೆಯನ್ನು ಆರಂಭಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ಕೌಜಲಗಿಯಲ್ಲಿ ಸಾರಿಗೆ ಇಲಾಖೆಯ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ 85 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಾರಿಗೆಗಳನ್ನು ಆರಂಭಿಸಿ ಪ್ರಯಾಣಿಕರಿಗೆ …

Read More »

ಕೌಜಲಗಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಮಾಳಿ ಸಮಾಜದವರ ಬೇಡಿಕೆಯಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಳಿ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಿಕೊಳ್ಳುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕೌಜಲಗಿ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು ಮಹಾತ್ಮಾ ಜ್ಯೋತಿಬಾ ಫುಲೆ ಮಾಳಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, …

Read More »