ಘಟಪ್ರಭಾ :ಚಿನ್ನದ ವ್ಯಾಪಾರಿಗಳಿಬ್ಬರು ಗೋಕಾಕದಿಂದ ಬೈಕ್ ಮೇಲೆ ಶಿಂಧಿಕುರಬೇಟ ಗ್ರಾಮಕ್ಕೆ ಬರುತ್ತಿರುವಾಗ 8 ಜನರು ಡಕಾಯಿತರ ತಂಡ ವ್ಯಾಪಾರಿಗಳನ್ನು ರಾಜ್ಯ ಹೆದ್ದಾರಿ ಮೇಲೆ ಅಡ್ಡಗಟ್ಟಿ ಹಲ್ಲೆ ಮಾಡಿ ಅರ್ಧ ಕೆ.ಜಿ ಬಂಗಾರ ಹಾಗೂ 2.80ಲಕ್ಷ ನಗದು ಹಣ ದರೋಡೆ ಮಾಡಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯರಾತ್ರಿಯೇ ಪ್ರಕರಣ ದಾಖಲಾಗಿದ್ದು …
Read More »ಗೋಕಾಕ: ವಿದ್ಯಾರ್ಥಿನಿ ತಸ್ಮೀಯಾ ಖಾಜಿ ನೀಟ್ ಪರಿಕ್ಷೆಯಲ್ಲಿ 530ನೇ ರ್ಯಾಂಕ್ ಪಡೆದು ಎಮ್‍ಬಿಬಿಎಸ್ ಕಾಲೇಜಿಗೆ ಪ್ರವೇಶ ಪಡೆದ ಹಿನ್ನಲೆಯಲ್ಲಿ ಮಹಾವಿದ್ಯಾಲಯದಿಂದ ಸತ್ಕರಿಸಲಾಯಿತು.
ಗೋಕಾಕ: ನಗರದ ಕೆಎಲ್‍ಇ ಸಂಸ್ಥೆಯ ಸಿಎಸ್ ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ತಸ್ಮೀಯಾ ಖಾಜಿ ನೀಟ್ ಪರಿಕ್ಷೆಯಲ್ಲಿ 530ನೇ ರ್ಯಾಂಕ್ ಪಡೆದು ಎಮ್‍ಬಿಬಿಎಸ್ ಕಾಲೇಜಿಗೆ ಪ್ರವೇಶ ಪಡೆದ ಹಿನ್ನಲೆಯಲ್ಲಿ ಮಹಾವಿದ್ಯಾಲಯದಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಸ್ಥಳೀಯ ಕೆಎಲ್‍ಇ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಎಮ್ ಡಿ ಚುನಮರಿ, ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ಪ್ರಚಾರ್ಯ ಕೆ ಬಿ ಮೇಯುಂಡಿಮಠ ಇದ್ದರು.
Read More »ಮೆಥೋಡಿಸ್ಟ್ ಸಂಸ್ಥೆಗೆ ಅಕ್ರಮ ಎಸಗಿರುವವರ ವಿರುದ್ದ ಕ್ರಮಕ್ಕೆ ಆಗ್ರಹ
ಬೆಳಗಾವಿ: ಮೆಥೋಡಿಸ್ಟ್ ಚರ್ಚಗೆ ಸಂಬಂಧಿಸಿದ ಸಿಪಿಏಡ್ ಮೈದಾನ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡಿ, ಸಂಸ್ಥೆಗೆ ಒಳಪಟ್ಟ 14 ಶಾಲೆ ಹಾಗೂ ಸಂಸ್ಥೆಯಲ್ಲಿನ ಹಣವನ್ನು ದುರುಪಯೋಗ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕ್ರೈಸ್ತ ಬಾಂಧವರ ವತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಮೆಥೋಡಿಸ್ಟ್ ಚರ್ಚ್ ನಿಂದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿ, ಮೆಥೋಡಿಸ್ಟ್ ಸಂಸ್ಥೆಯಲ್ಲಿ …
Read More »ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ*
ಗೋಕಾಕ : ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಿದರು. ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೂಲಕ ಜಯಂತಿಯನ್ನು ಆಚರಿಸಿ ನಂತರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರು ಮಾತನಾಡಿ ಸೃಷ್ಟಿ ಮತ್ತು ಸೃಷ್ಟಿಯ ಸಂಕೇತ, ಕರಕುಶಲತೆಯಲ್ಲಿ ಅತ್ಯುನ್ನತ, ಶಿಲ್ಪಿ, ವಿಶ್ವಕರ್ಮ ಜೀ ಅವರನ್ನು ನೆನೆಯೋಣ, ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ …
Read More »ಹಿಡಲಕ ಗ್ರಾಮದಲ್ಲಿ ಅಕ್ರಮ ಬೆಳೆದ ಗಾಂಜಾ ಪೊಲೀಸರ ವಶಕ್ಕೆ
ದಿನಾಂಕ: 15/09/2022 ರಂದು 0715 ಗಂಟೆಗೆ ಹಿಡಕಲ್ ಗ್ರಾಮ ಹದ್ದಿಯ ಜಮೀನ ರಿಸನಂ. 149 ನೇದ್ದರಲ್ಲಿ ಮಾಲಕನು ಅನಧೀಕೃತವಾಗಿ ಗಾಂಜಾ ಎಂಬುವ ಮಾದಕ ಪದಾರ್ಥದ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುತ್ತಾನೆ ಅಂತಾ ಖಾತ್ರಿದಾಯಕ ಮಾಹಿತಿ ಬಂದಂತೆ, ಮಾನ್ಯ ಶ್ರೀ ಶ್ರೀಪಾದ ಜಲ್ಲೆ, ಪೊಲೀಸ್ ಉಪಾಧೀಕ್ಷಕರು ಅಥಣಿ ಉಪ-ವಿಭಾಗ, ಮಾನ್ಯ ಶ್ರೀ ಕೆ. ಎಸ್. ಹಟ್ಟಿ, ಸಿಪಿಐ ಹಾರೂಗೇರಿ ವೃತ್ತ ರವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಖೋತ, ಪಿಎಸ್‌ಐ(ಕಾ&ಸು) ಹಾರೂಗೇರಿ ಪೊಲೀಸ್ …
Read More »ಗೋಕಾಕ ನಲ್ಲಿ ರೇಬಿಸ್ ದಿನ ಆಚರಣೆ
ಗೋಕಾಕ : ಗೋಕಾಕ ತಾಲೂಕಿನಲ್ಲಿ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಮಿಷನ್ ರೇಬೀಸ್ ಕಾರ್ಯಕ್ರಮವನ್ನು ದಿನಾಂಕ:-15-09-2022 ರಂದು ಪಶು ಆಸ್ಪತ್ರೆ ಗೋಕಾಕನಲ್ಲಿ ಉಚಿತವಾಗಿ ಶ್ವಾನಗಳಿಗೆ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಗರ ಸಭೆ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಶ್ಯಾಳಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ನಿರ್ದೇಶಕರಾದ ಡಾ:ಮೋಹನ.ವಿ.ಕಮತ ರವರು ಕಾರ್ಯಕ್ರಮದ ಕುರಿತು ಮಾತನಾಡಿ ರೇಬೀಸ್ ರೋಗ ಪ್ರಾಣಿಜನ್ಯ ರೋಗವಾಗಿದ್ದು ಜಾನುವಾರುಗಳಿಂದ ಜಾನುವಾರುಗಳಿಗೆ, ಜಾನುವಾರುಗಳಿಂದ ಮಾನವರಿಗೆ ಹರಡುವ ರೋಗವಾಗಿದ್ದು, …
Read More »ಹೃದಯಾಘಾತದಿಂದ ಯೋಧ ಸಾವು: ಗೋಕಾಕದ ಮೇಲ್ಮಟ್ಟಿಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ
ಗೋಕಾಕ (ಬೆಳಗಾವಿ ಜಿಲ್ಲೆ): ಹೃದಯಾಘಾತದಿಂದ ಮಂಗಳವಾರ ನಿಧನರಾದ ಯೋಧ ಬಾಳಪ್ಪ ಯಲಿಗಾರ (33) ಅವರ ಮೃತದೇಹವನ್ನು ಬುಧವಾರ ಅವರ ಹುಟ್ಟೂರಾದ ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿಗೆ ತರಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಜನ, ಯೋಧನ ಮೃತದೇಹಕ್ಕೆ ಗೌರವಪೂರ್ಣ ಸ್ವಾಗತ ಕೋರಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ. ಕಾಶಪ್ಪನವರ ಅವರು ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮಂಗಳವಾರ ಮಧ್ಯಾಹ್ನ ಕೆಲಸದಲ್ಲಿ ಇದ್ದಾಗಲೇ …
Read More »ಪಶು ವೈದ್ಯಕೀಯ ಸಂಸ್ಥೆಯಿಂದ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ. ಡಾ :ಮೋಹನ ಕಮತ
ಗೋಕಾಕ ತಾಲೂಕಿನಲ್ಲಿ ಮಿಷನ್ ರೇಬೀಸ್ ಕಾರ್ಯಕ್ರಮವನ್ನು 15-09-2022 ರಿಂದ 30-09-2022 ರ ವರೆಗೆ ಗೋಕಾಕ ತಾಲೂಕಿನ ಎಲ್ಲ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಶ್ವಾನಗಳಿಗೆ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಆದ್ದರಿಂದ ಶ್ವಾನ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ:ಮೋಹನ.ವಿ.ಕಮತ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಗೋಕಾಕ ಇವರು ತಿಳಿಸಿರುತ್ತಾರೆ.
Read More »ಕೊಚ್ಚಿ ಹೋಗಿದ್ದ ಯುವಕನ ಶವ 3 ದಿನ ಆದ್ಮೇಲೆ ಪತ್ತೆ
ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಯುವಕನ ಮೃತದೇಹ ಪತ್ತೆಯಾಗಿದೆ. ಹೌದು ಸೆ.9ರಂದು ಹೊಲಕ್ಕೆ ಹೋಗುವಾಗ ನೀರಿನಲ್ಲಿ ಕೊಳವಿ ಗ್ರಾಮದ ದುಂಡಪ್ಪ ಮಾಲದಿನ್ನಿ(25) ಎಂಬ ಯುವಕ ಕೊಚ್ಚಿಕೊಂಡು ಹೋಗಿದ್ದ. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳಿಂದ ಸತತವಾಗಿ ಮೂರು ದಿನಗಳ ಕಾರ್ಯಾಚರಣೆ ಬಳಿಕ ಇಂದು ಬೆನಚಿನಮರಡಿ ಕೊಳವಿ ಮಾರ್ಗದ ಮಧ್ಯೆ ಶವ ಪತ್ತೆಯಾಗಿದೆ. ಗೋಕಾಕ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ
ಗೋಕಾಕ: ” ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಜೀವನ ಯಶಸ್ಸು ಕಾಣಬೇಕು” ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಹೇಳಿದರು. ನಗರದ ಗೃಹ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾಕಿರಹೊಳಿ ಅವರು ಕಟ್ಟಡ ಕಾರ್ಮಿಕ ಬಡಮಕ್ಕಳಿಗೆ ಸಹಾಯಧನ ಚೆಕ್ ವಿತರಿಸಿ, ಮಾತನಾಡಿದ ಅವರು, ಕೂಲಿ ಕಾರ್ಮಿಕರ ಮಕ್ಕಳು ಇನ್ನು ಹೆಚ್ಚಿನ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ …
Read More »