Breaking News

ಖಾನಾಪುರ

ಖಾನಾಪುರ ಪಟ್ಟಣದಲ್ಲಿ ಮಂಗಳವಾರದಿಂದ ಸಂಪೂರ್ಣ ಲಾಕ್ ಡೌನ್: ಕಿರಾಣಿ, ದಿನಸಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರಗಳಿಗೂ ನಿರ್ಬಂಧ

ಖಾನಾಪುರ:  ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕೋವಿಡ್ ಸೊಂಕನ್ನು ಹತ್ತಿಕ್ಕಲು ಪಟ್ಟಣದಲ್ಲಿ ಮಂಗಳವಾರ ಮೇ.೧೧ರಿಂದ ಶನಿವಾರದವರೆಗೆ ಐದು ದಿನಗಳ ಕಾಲ ಎಲ್ಲ ರೀತಿಯ ವ್ಯಾಪಾರ -ವಹಿವಾಟನ್ನು ನಿಷೇಧಿಸಿ ಖಡಕ್ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯ ಆಡಳಿತ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಣದ ವಿವಿಧ ಜಾತಿ, …

Read More »

ಮನಸಾಪೂರ ಗ್ರಾಮದಲ್ಲಿ ದಾಳಿ: ಗಾಂಜಾ ವಶ

ಖಾನಾಪೂರ ತಾಲೂಕಿನ ಮನಸಾಪೂರ ಗ್ರಾಮದಲ್ಲಿ ಗಾಂಜಾ ಗಿಡ ಬೆಳೆಸಿದ್ದ ಓರ್ವ ವ್ಯಕ್ತಿಯನ್ನು ಬಂಧಿಸುವುದರಲ್ಲಿ ಖಾನಾಪೂರ ಪೆÇಲೀಸರು ಯಶಸ್ವಿಯಾಗಿದ್ದಾರೆ. ಫ್ರಾನ್ಸಿಸ್ ಸೂಜ್ ಎಂಬ 29 ವರ್ಷದ ಯುವಕ ಬಂಧಿತ ಆರೋಪಿಯಾಗಿದ್ದು, ಆತನಿಂದ ಒಟ್ಟು 476 ಗ್ರಾಂ ತೂಕದ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಸುರೇಶ್ ಶಿಂಗಿ, ಪಿಎಸ್‍ಐ ಬಸನಗೌಡ ಪಾಟೀಲ್, ಕಂದಾಯ ನಿರೀಕ್ಷಕ ಶಶಿಕಾಂತ ಠಕ್ಕೇಕರ ಸೇರಿದಂತೆ ಇನ್ನಿತರರು ಹಾಜರಿದ್ದರು. ಪಂಚನಾಮೆ ಮಾಡಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು …

Read More »

ಗ್ರಾಪಂ.ಚುನಾವಣೆಗೆ ಸ್ಪರ್ಧಿಸಿದ್ದ ಅಂಬೋಜಿ ನಿಧನ

ಖಾನಾಪುರ : ತಾಲ್ಲೂಕಿನ ನ್ಯಾಯವಾದಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ.ಅಂಬೋಜಿ (64) ಭಾನುವಾರ ಬೆಳಿಗಿನ ಜಾವ ನಿಧನರಾದರು. ಬಿಷ್ಟಾದೇವಿ ಜೀರ್ಣೊದ್ದಾರ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಕ್ಕೇರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಂಗಳವಾರ ನಡೆದ ಗ್ರಾಪಂ ಚುಣಾವಣೆಗೆ ಕಕ್ಕೇರಿ ಗ್ರಾಮದ ವಾರ್ಡ್ ನಂ.2ಕ್ಕೆ ಸ್ಪರ್ಧೆ ಮಾಡಿದ್ದರು.

Read More »

ಖಾನಾಪುರ : ಮಗಳ ಗಂಡನನ್ನ ಕೊಚ್ಚಿ ಕೊಲೆಗೈದ ಪಾಪಿ ಮಾವ

ಕಕ್ಕೇರಿ : ಕೌಟುಂಬಿಕ ಕಲಹದಿಂದ ಅಳಿಯನನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಬಿಷ್ಟಪ್ಪ ಕೊನಸಕುಂಪಿ(43) ಕೊಲೆಯಾದ ದುರ್ದೈವಿ. ಸೋಮವಾರ ರಾತ್ರಿ ಬಿಷ್ಟಪ್ಪ ತನ್ನ ಹೆಂಡತಿಯ ತಂದೆಯೊಂದಿಗೆ ಜಗಳವಾಡಿದ್ದಾನೆ. ಬಳಿಕ ರಾತ್ರಿ ಭತ್ತದ ರಾಶಿ ಕಾಯಲು ಕಣದಲ್ಲಿ ಹೋಗಿದ್ದಾನೆ. ಈ ವೇಳೆ ಮಾವ ಮಲಗಿದ್ದ ಬಿಷ್ಟಪ್ಪ ನ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಂದು ಹಾಕಿ, ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಹೆಸರು ತಿಳಿದು …

Read More »

ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ೧೨.೧೨ ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶಕ್ಕೆ…

ಖಾನಾಪುರ: ಪಟ್ಟಣದ ತಹಸೀಲ್ದಾರ್ ಕಚೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆಯ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ೧೨.೧೨ ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಐವರನ್ನು ಬಂಧಿಸಿದ ಘಟನೆ ಬುಧವಾರ ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಬುಧವಾರ ತಾಲೂಕಿನ ಗೋಲಿಹಳ್ಳಿ ಗ್ರಾಮದ ಬಳಿ ಬೆಳಗಾವಿ ತಾಳಗುಪ್ಪ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ಅಕ್ಕಿಯ ಮೂಟೆಗಳನ್ನು ಹೊತ್ತುಕೊಂಡು ಮಹಾರಾಷ್ಟ್ರದತ್ತ ಹೊರಟಿದ್ದ ಎರಡು ಸರಕು ಸಾಗಾಣಿಕೆ ಲಾರಿಗಳನ್ನು ಪತ್ತೆ ಹಚ್ಚಿದ ಆಹಾರ ಇಲಾಖೆಯ …

Read More »

ಬೆಳಗಾವಿ: ಸಮಸ್ಯೆ ಆಲಿಸಲು ಕಾರಿನಿಂದಿಳಿಯದ ಅಧಿಕಾರಿಗಳು; ಸ್ಥಳೀಯರಿಂದ ಘೇರಾವ್

ಬೆಳಗಾವಿ: ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆಗೆ ಬಂದಿದ್ದ ಕೇಂದ್ರ ಅಧ್ಯಯನ ತಂಡಕ್ಕೆ ಸ್ಥಳೀಯರು ಘೇರಾವ್ ಹಾಕಿದ ಘಟನೆ ಗೋಕಾಕ ತಾಲ್ಲೂಕಿನ ಲೋಳಸೂರ ಸೇತುವೆ ಬಳಿ ಮಂಗಳವಾರ ನಡೆಯಿತು. ಅಧ್ಯಯನ ತಂಡದ ಅಧಿಕಾರಿಗಳ ಎದುರು ಸಮಸ್ಯೆ ಹೇಳಿಕೊಳ್ಳಲು ಮುಂದಾದ ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದ ಕೊಪ್ಪದ ಹಾಗೂ ಮುಖಂಡರಿಗೆ ಅವಕಾಶ ದೊರೆಯಲಿಲ್ಲ. ಅವರೊಂದಿಗೆ ಮಾತ‌ನಾಡಲು ತಂಡದ ಅಧಿಕಾರಿಗಳು ನಿರಾಕರಿಸಿದರು. ಕಾರಿನಲ್ಲಿ ಹೋಗಿ ಕುಳಿತರು. ಇದರಿಂದಾಗಿ ಸಿಟ್ಟಾದ ಮುಖಂಡರು ಕಾರಿಗೆ ಘೇರಾವ್ ಹಾಕಿ …

Read More »

ಅನಂತಕುಮಾರ್ ಹೆಗಡೆ ನಡೆಸಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳಕರ ಅವರ ಬೆಂಬಲಿಗರ ಅಡ್ಡಿ

ಖಾನಾಪುರ: ತಾಲ್ಲೂಕಿನಲ್ಲಿ  ಸಂಸದ ಅನಂತಕುಮಾರ್ ಹೆಗಡೆ ನಡೆಸಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳಕರ ಅವರ ಬೆಂಬಲಿಗರು ಅಡ್ಡಿ ಪಡೆಸಿದ್ದು,  ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಶಾಸಕಿ ಅಂಜಲಿ ನಿಂಬಾಳಕರ ಕೊರೊನಾದಿಂದ ಕ್ವಾರಂಟೈನ್ ನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ವಿವಿಧ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಭೂಮಿ ಪೂಜೆಯನ್ನು ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಭೂಮಿ ಪೂಜೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಆಹ್ವಾನ ನೀಡಿಲ್ಲ …

Read More »

ಖಾನಾಪುರದ ಈ ಹೋಟೆಲ್ ನಲ್ಲಿ ಯಾರಾದ್ರೂ ತಿಂಡಿ ತಿಂದ್ರೆ ಪರೀಕ್ಷೆ ಮಾಡಿಸಿಕೊಳ್ಳಿ

ಖಾನಾಪುರ –  : ಖಾನಾಪುರ ತಾಲೂಕು ಇಲ್ಲಿಯವರೆಗೆ ಕೊರೋನಾ ರಹಿತವಾಗಿ ಗುರುತಿಸಿಕೊಂಡಿತ್ತು. ತಾಲೂಕಿನಲ್ಲಿ ಕೋವಿಡ್-೧೯ ಗೆ ಮೊದಲ ಬಲಿಯಾಗಿದೆ. ಪಟ್ಟಣದ ರೇಣುಕಾ ಹೊಟೇಲ್ ಉದ್ಯಮಿ ೩ ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ಹೊಟೆಲನ್ನು ಸೀಲಡೌನ್ ಮಾಡಲಾಗಿದೆ. ಶಾಸಕಿ ಡಾ.ಅಂಜಲಿ ನಿಂಬಾಳಕರ, ತಹಶೀಲದಾರ ರೇಷ್ಮಾ ತಾಳಿಕೋಟೆ, ಪಂ.ಪ.ಮುಖ್ಯಾಧಿಕಾರಿ ವಿವೇಕ ಬನ್ನೆ, ಪೋಲಿಸ್ ಅಧಿಕಾರಿಗಳು, ಡಾ.ನಾಂದ್ರೆ , ಸರ್ವ ಪಕ್ಷಗಳ ಮುಖಂಡರು ಸೇರಿ ಹೊಟೇಲ್ …

Read More »

ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್

ಖಾನಾಪುರ: ವಾರದ ಹಿಂದೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್ ದೊರೆತಿದ್ದು, ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಅಮಟೆ ಗ್ರಾಮದ ದೇವಿದಾಸ ಗಾವಕರ್, ಸಂತೋಷ ಸೋಮಾ ಗಾವಕರ, ವಿಠ್ಠಲ ನಾಯಕ, ವಿಠ್ಠಲ ಗಣಪತಿ ನಾಯಕ, ರಾಮಾ ಗಣಪತಿ ನಾಯಕ, ಪ್ರಶಾಂತ ಗಣಪತಿ ಸುತಾರ ಬಂಧಿತರು. ಮಾ. 11 ರಂದು ಅಮಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ …

Read More »

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಭಿನಂದನೆ ಸಲ್ಲಿಸಿದರು.

ಬೆಳಗಾವಿ: ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ನೇಮಕರಾದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಭಿನಂದನೆ ಸಲ್ಲಿಸಿದರು. ಇಲ್ಲಿನ ಶಾಸಕರ ಕಚೇರಿಗೆ ಕಾರ್ಯಕರ್ತರೊಂದಿಗೆ ಶನಿವಾರ ಆಗಮಿಸಿ ಶುಭ ಕೋರಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಲು ಸದಾ ನಿಮ್ಮೊಂದಿಗೆ ಇರಲಿದ್ದೆವೆ. ನಿಮ್ಮ ಸಲಹೆಯಲ್ಲಿ ಮುನ್ನಡೆಯುವುದಾಗಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು. ಕಾಂಗ್ರೆಸ್ ಮುಖಂಡರು ಇದ್ದರು

Read More »