Breaking News

ಬೆಂಗಳೂರು

ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಫೇಸ್‍ಬುಕ್ ಪೋಸ್ಟ್ ಹಾಕುವ ಮೂಲಕ ಡ್ರಗ್ಸ್ ಜಾಲಕ್ಕೆ ಸಂಬಂಧಿಸದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ಐಂದ್ರಿತಾ ರೈ ಮತ್ತು ನಟ ಸಂತೋಷ್ ಕುಮಾರ್ ಅವರ ಕಾಲೆಳೆದಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕನ್ನಡದ ಸ್ಟಾರ್ ನಟ-ನಟಿಯರು ಸಿಲುಕಿ ಹಾಕಿಕೊಂಡಿದ್ದಾರೆ. ಇಂದು ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ಅವರನ್ನು ಸಿಸಿಬಿ ವಿಚಾರಣೆ ಮಾಡಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟಿ ರಾಗಿಣಿ …

Read More »

ಬ್ರೇಕಿಂಗ್ : ದೆಹಲಿಯಿಂದ ಬೆಂಗಳೂರಿಗೆ ಸಿಎಂ ಯಡಿಯೂರಪ್ಪ ವಾಪಾಸ್ : ಸದ್ಯದಲ್ಲೇ ಸಂಪುಟ ವಿಸ್ತರಣೆ.?

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ಕೇಂದ್ರದ ಬಿಜೆಪಿ ವರಿಷ್ಠರ ಭೇಟಿಯ ಬಳಿಕ, ದೆಹಲಿಯಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಹೀಗಾಗಿ ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗುತ್ತಾ ಎನ್ನುವ ಕುತೂಲಹ ಮೂಡಿಸಿದೆ. BIG BREAKING : ಮುಂದಿನವಾರ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು …

Read More »

ʼಆಕೆ ಸಂಜನಾ ಗಿಲ್ರಾನಿ ಅಲ್ಲ ಮಾಹಿರಾʼ: ನಟಿಮಣಿಯ ಬುರ್ಕಾವತಾರ ಬಯಲು..!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ನಟಿ ‘ಸಂಜನಾ ಗಲ್ರಾನಿʼ ಬಗ್ಗೆ ಮತ್ತೊಂದು ಹೊಸ ವಿಷ್ಯ ಬಹಿರಂಗವಾಗಿದ್ದು, ಸಮಾಜೀಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಆಕೆ ಸಂಜನಾ ಗಿಲ್ರಾನಿ ಅಲ್ಲ ಮಹಿರಾ ಎಂದು ಹೇಳಿದ್ದಾರೆ. ಹೌದು, ಪ್ರಶಾಂತ್‌ ಸಂಬರಗಿ ಈ ಕುರಿತು ಪೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ‘ ಸಂಜನಾ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್ …

Read More »

ತೆರಿಗೆ ಹೆಚ್ಚಿಸಿ ಬೆಂಗಳೂರಿಗರಿಗೆ B.B.M.P. ಶಾಕ್

ಬೆಂಗಳೂರು: ಕೊರೊನಾ ಮಧ್ಯೆ ಬೆಂಗಳೂರು ಜನರಿಗೆ ತೆರಿಗೆ ಶಾಕ್ ಕಾದಿದೆ. ಬಿಬಿಎಂಪಿ ಆದಾಯ ಹೆಚ್ಚಿಸಲು ಮುಂದಾಗಿರುವ ಪಾಲಿಕೆ ಜನಸಾಮಾನ್ಯರಿಗೆ ಹೊರೆಮಾಡಲಿದೆ. ಆಸ್ತಿ ತೆರಿಗೆ, ಪ್ಲಾನ್ ಅಪ್ರೂವಲ್, ಖಾತಾ ಹಂಚಿಕೆ ದರ ಏರಿಕೆ ಜೊತೆಗೆ ಭೂ ಸಾರಿಗೆ ಸೆಸ್ ಜಾರಿಗೆ ತರಲು ಬಿಬಿಎಂಪಿ ತೀರ್ಮಾನ ಮಾಡಿದೆ. ಆಸ್ತಿ ತೆರಿಗೆ ಶೇ.15 ರಿಂದ 25ರಷ್ಟು ಹೆಚ್ಚಳ, ಖಾತಾ ಚಾರ್ಜ್ ಶೇ.2 ರಿಂದ 5 ರಷ್ಟು ಏರಿಕೆ ಸಾಧ್ಯತೆ ಇದೆ. ಆಸ್ತಿ ನೋಂದಣಿ ಮಾಡುವಾಗ …

Read More »

ಮಳೆ ನೀರಲ್ಲಿ ಕೊಚ್ಚಿ ಹೋದ ಯುವಕ……

ಬೆಂಗಳೂರು: ರಾಜ್ಯದ ಹಲವೆಡೆ ಇಂದು ವರುಣ ಅಬ್ಬರಿಸಿದ್ದು, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಮಳೆ ನೀರಿನ ರಭಸಕ್ಕೆ ಯುವಕ ಕೊಚ್ಚಿಹೋಗಿದ್ದು, ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ್ದಿದ್ದು, ಅಫಜಲಪುರ್, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಅಲ್ಲದೆ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಮೃತ ಯುವಕ ಸಿದ್ದರಾಜು ಅಫಜಲಪುರ ಜೆಸ್ಕಾಂನಲ್ಲಿ ಎಇಇ …

Read More »

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾದಂತೆ ಕಾಣುತ್ತಿದೆ.,,,,,,?

ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳ ಮಧ್ಯೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈಗೊಂಡ ದೆಹಲಿ ಪ್ರವಾಸದಲ್ಲಿ ಬಿಗ್ ಶಾಕ್ ಎದುರಾಗಿದೆ. ಇಂದು ಬೆಳಗ್ಗೆ ಸಂಸತ್ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಜೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾದ ಯಡಿಯೂರಪ್ಪಗೆ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ ಅಂತ ತಿಳಿದುಬಂದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾದಂತೆ ಕಾಣುತ್ತಿದೆ. 77 ವರ್ಷದ ಸಿಎಂ ಯಡಿಯೂರಪ್ಪ ಬದಲಿಗೆ ಉತ್ತರಾಧಿಕಾರಿ ಆಯ್ಕೆಗೆ ಆಲೋಚಿಸಿದೆ. ಮುಂಬರುವ …

Read More »

ಅಧಿವೇಶನ ಆರಂಭಕ್ಕೆ 72 ಗಂಟೆಗಳ ಮುನ್ನ ಶಾಸಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ

ಬೆಂಗಳೂರು,ಸೆ.18- 141ನೇ ವಿಧಾನಮಂಡಲ ಅಧಿವೇಶನವು ಸೆ.21ರಿಂದ 8 ದಿನಗಳ ಕಾಲ ನಡೆಯಲಿದ್ದು, ಸದಸ್ಯರಿಗೆ ಕೋವಿಡ್19 ಪರೀಕ್ಷೆ ಮಾಡಿಸಿಕೊಂಡಿರುವ ದೃಢೀಕರಣ ಒದಗಿಸುವುದು ಕಡ್ಡಾಯವಾಗಿದೆ. ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಸದನ ಆರಂಭವಾಗುವ 72 ಗಂಟೆಗಳ ಮುಂಚಿತವಾಗಿ ಸದಸ್ಯರು ಆರೋಗ್ಯ ತಪಾಸಣೆ ಒಳಗಾಗಿ ಕೋವಿಡ್ 19ರ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ದೃಢೀಕರಣವನ್ನು ತರಬೇಕೆಂದು ಕೋರಿದ್ದಾರೆ. …

Read More »

ನನಗೆ ಸಿಗರೇಟ್ ಕೋಡಿ ಎಂದು ಜೈಲು ಸಿಬ್ಬಂದಿ ಮುಂದೆ ರಂಪಾಟ ಮಾಡಿದ್ದಾರೆಸಂಜನಾ

ಬೆಂಗಳೂರು: ಸಿಸಿಬಿ ನೋಟಿಸ್ ನೀಡಿದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್ ಮಾಡುತ್ತಿರುವ ನಟಿ ಸಂಜನಾಗಲ್ರಾನಿ ಇದೀಗ ಜೈಲಿನಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಸಂಜನಾ ಎರಡು ದಿನಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ್ದು, ಈ ಹಿನ್ನೆಲೆಯಲ್ಲಿ ನಟಿಯ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಇದರಿಂದ ಟೆನ್ಶನ್ ಗೆ ಒಳಗಾಗಿರುವ ನಟಿ, ನನಗೆ ಸಿಗರೇಟ್ ಕೋಡಿ …

Read More »

ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿ ,ಮತ್ತೆ ಮೂವರಿಗೆC.C.B.ನೋಟಿಸ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಮೂವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹೌದು. ನಟ, ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಯುವರಾಜ್ ಆರ್.ವಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕುಮಾರ್‍ಗೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ. ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿಸಿಬಿ ನೊಟೀಸ್ ತಲುಪಿದೆ ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಹೀಗಾಗಿ …

Read More »

ಸಿಎಂ ಬದಲಾವಣೆವಿಚಾರಯಡಿಯೂರಪ್ಪ ಸ್ಥಾನಕ್ಕೆ ಯಾರು ಎಂಬುದನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಲಿದ್ದಾರೆ

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಹಲವಾರು ಸುದ್ದಿಗಳು ಓಡಾಡುತ್ತಿದ್ದು ಈ ನಡುವೆ ಎರಡು ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಯ ಲೆಕ್ಕಾಚಾರ ನಡೆಸುತ್ತಿದೆ ಎಂದು ಹೇಳಲಾಗಿದೆ. 2023ರ ವಿಧಾನಸಭೆ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಬದಲಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಸ್ಥಾನಕ್ಕೆ ಯಾರು ಎಂಬುದನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಲಿದ್ದಾರೆ ಎಂದು ಹೇಳಲಾಗಿದೆ. ಹೊಸ ಸಿಎಂ …

Read More »