Breaking News

ಬಾಗಲಕೋಟೆ

ನಗರಸಭೆ ಮಾಜಿ ಅಧ್ಯಕ್ಷ ಬಸರಾಜ ಕಟಗೇರಿ ಬಿಜೆಪಿ ಸೇರ್ಪಡೆ

​ಬಾಗಲಕೋಟೆ : ವಿಧಾನಸಭಾ ಕ್ಷೇತ್ರದ ಮುಖಂಡರಾದ ಬಸವರಾಜ ಕಟಗೇರಿ ಅವರು ಇಂದು ಅಧಿಕೃತವಾಗಿ ಮರಳಿ ನಮ್ಮ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಪಥ ಹಾಗೂ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಮರಳಿ ಬಂದಿರುವ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷದ ವಿಜಯೋತ್ಸವಕ್ಕಾಗಿ ಶ್ರಮಿಸೋಣ ಬಸವರಾಜ್ ಕಟಗೇರಿಗೆ ತಿಳಿಸಿದರು. ಇದೆ ಸಂದರ್ಭದಲ್ಲಿ ಅರುಣ ಲೋಕಾಪುರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. …

Read More »

ಬಿಜೆಪಿ ಅವಧಿಯ ಅಭಿವೃದ್ಧಿ ಕೆಲಸಗಳೆ ಗೆಲುವಿಗೆ ಶ್ರೀರಕ್ಷೆ : ಪಿ. ರಾಜೀವ

ಬಿಜೆಪಿಯಿಂದ ಉಪ ಚುನಾವಣಾ ಪೂರ್ವ ಭಾವಿ ಸಭೆ ಬಾಗಲಕೋಟೆ : ಕಳೆದ ಮೂರು ವರ್ಷಗಳ ಅಭಿವೃದ್ಧಿ ಶೂನ್ಯ, ಬರಿ ಹಗರಣಗಳ ಕಾಂಗ್ರೆಸ್ಸ ಸರಕಾರದಿಂದ ಜನ ಬೇಸತ್ತು ಹೋಗಿದ್ದು ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಲು ಬಾಗಲಕೋಟೆ ಜನ ತುದಿಗಾಲಿನ ಮೇಲೆ ನಿಂತಿದ್ದಾರೆ, ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದೆ ಎಂದು ರಾಜ್ಯ ಪ್ರದಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು, ಅವರು ನವನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ …

Read More »

ಸಿದ್ದರಾಮಯ್ಯ ಸಂಧಾನ ಯಶಸ್ವಿ: ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈನಲ್

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ  ಘೋಷಣೆಯಾಗು ತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ‘ಕುಟುಂಬ ರಾಜಕಾರಣ’ದ ಬಿಸಿ ತಟ್ಟಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಹೌದು…ಮಾಜಿ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ ಟಿಕೆಟ್‌ಗಾಗಿ ಭಿನ್ನಮತ ಸ್ಪೋಟಗೊಂಡಿತ್ತು. ಇದರ ಬೆನ್ನಲ್ಲೇ ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಇಂದು (ಮಾರ್ಚ್ 18) ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಮೇಟಿ …

Read More »

ಸಿಎಂ ಆಪ್ತನಿಗೆ ಡೀಲ್ ಮಾಸ್ಟರ್ ಪಟ್ಟ

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ವಿರುದ್ಧ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚುತ್ತಿದೆ. ಇದುವರೆಗೂ ದಿ. ಶಾಸಕ ಎಚ್.ವೈ.‌ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸಿದ್ದರಾಮಯ್ಯ ಆಪ್ತನ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ಡೀಲ್ ಮಾಸ್ಟರ್ ಪಟ್ಟಗಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೊರಗಿನವರ ಹಸ್ತಕ್ಷೇಪ ಬೇಡ: …

Read More »

ಬಿಜೆಪಿಯಿಂದ ಬೃಹತ ಭೈಕ್ ರ್ಯಾಲಿ: ಪದಗ್ರಹಣ.: 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಬಾಗಲಕೋಟೆ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸೋಣ : ನಾರಾಯಣಸಾ ಭಾಂಡಗೆ ಬಾಗಲಕೋಟೆ: ಬಿಜೆಪಿ ಅವಧಿಯಲ್ಲಿಯೇ ಬಾಗಲಕೋಟೆ ಅಭಿವೃದ್ಧಿ ಖಂಡಿದ್ದು, ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸೋಣ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು. ನವನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಾಗಲಕೋಟೆ ಡಾ,ವೀರಣ್ಣ ಚರಂತಿಮಠ ಅವರ ಶಾಸಕರಾಗಿದ್ದ ಅವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಅವರ ಅವದಿಯಲ್ಲಿ …

Read More »

ಉಪಚುನಾವಣೆ ಹೊತ್ತಲ್ಲೇ ಬಾಗಲಕೋಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ

ಬಾಗಲಕೋಟೆ: ಉಪಚುನಾವಣೆ  ಹೊತ್ತಲ್ಲೇ ಬಾಗಲಕೋಟೆ  ಬಿಜೆಪಿಯಲ್ಲಿ  ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಪಕ್ಷದ ಸಹ ವಕ್ತಾರ ಸ್ಥಾನಕ್ಕೆ ಪ್ರಸನ್ನ ಔರಸಂಗ ರಾಜೀನಾಮೆ ನೀಡುತ್ತಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ನಾನು ನನ್ನ ಬಿಜೆಪಿ ಸಹ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದನ್ಯವಾದಗಳು ಎಂದು ಪ್ರಸನ್ನ ಔರಸಂಗ ಪೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಬಿಜೆಪಿ ಸಹ ವಕ್ತಾರನಾಗಿ ಆಯ್ಕೆ ಆದಾಗಿನ ಪತ್ರ ಹಾಕಿ ರಾಜೀನಾಮೆ ನೀಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದು …

Read More »

ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಏ.9 ರಂದು ಉಪಚುನಾವಣೆ -ಮೇ 4ಕ್ಕೆ ಫಲಿತಾಂಶ

ನವದೆಹಲಿ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ) ವಿಧಾನಸಭೆಯ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಿಗೆ ಏಪ್ರಿಲ್‌ 9 ರಂದು ಚುನಾವಣೆ ನಡೆದರೆ ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಇಂದು ದೆಹಲಿಯಲ್ಲಿ ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚ್ಚೇರಿ ವಿಧಾನಸಭಾ ಚುನಾವಣಾ ದಿನಾಂಕದ ಜೊತೆ  ಗೋವಾ, ಗುಜರಾತ್‌, ಮಹಾರಾಷ್ಟ್ರ, ನಾಗಾಲ್ಯಾಂಡ್‌, ತ್ರಿಪುರ ಉಪಚುನಾವಣಾ ದಿನಾಂಕವನ್ನು ಪ್ರಕಟಿಸಿದರು. ಕಾಂಗ್ರೆಸ್‌ ಶಾಸಕ …

Read More »

2028ರ ಸಾರ್ವತ್ರಿಕ ಚುನಾವಣೆಗೆ ಈ ಬಾಗಲಕೋಟೆ ಉಪ ಚುನಾವಣೆ ಶ್ರೀಕಾರ : ಶರಣು ತಳ್ಳಿಕೇರಿ

ಬಾಗಲಕೋಟೆ ಉಪಚುನಾವಣೆ : ಬಿಜೆಪಿಯಿಂದ ಚುನಾವಣಾ ಪೂರ್ವ ಕಾರ್ಯಾಗಾರ ಬಾಗಲಕೋಟೆ: ಹಿಂದೂ ವಿರೋಧಿ ಕಾಂಗ್ರೆಸ್ಸ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ತುದಿಗಾಲಿನ ಮೇಲೆ ನಿಂತಿದ್ದಾರೆ, 2028 ಸಾರ್ವತ್ರಿಕ ಚುನಾವಣೆಗೆ ಬಾಗಲಕೋಟ ಉಪ ಚುನಾವಣೆ ಶ್ರೀಕಾರ ಹಾಕಲಿದೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿಗಳಾದ ಶರಣು ತಳ್ಳಿಕೇರಿ ಹೇಳಿದರು. ಅವರು ನಗರದ ಬಿ.ವಿ.ವಿ.ಸಂಘ ನೂತನ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿಯಿಂದ ನಡೆದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ …

Read More »

ಖೋಖೋ ಆಟದಿಂದ ಭವಿಷ್ಯ ನಿರ್ಮಾಣ: ಡಾ. ಜಗದೀಶ ಚಿತ್ತರಗಿ

ಬಾಗಲಕೋಟೆ : ಖೋಖೋ ಕ್ರೀಡೆಯಾಗಿರದೇ ಜೀವನ ಶೈಲಿಯಾಗಿದ್ದು ಇದರಲ್ಲಿ ತೊಡಗಿಸಿಕೊಳ್ಳವುದರಿಂದ ಆರೋಗ್ಯದ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕ ಎಂದು ಕರ್ನಾಟಕ ರಾಜ್ಯದ ಖೋಖೋ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಧಾರಾವಾಡದ ಎಕ್ಸಲೆಂಟ್ ನೀಟ್ ಅಕಾಡೆಮಿ ಅಧಿಕಾರಿಗಳಾದÀ ಡಾ. ಜಗದೀಶ ಚಿತ್ತರಗಿ ಹೇಳಿದರು. ಬಾಗಲಕೋಟ ವಿಶ್ವವಿದ್ಯಾಲಯ ಹಾಗೂ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ಏಕವಲಯ ಮಹಿಳೆಯರ ಖೋ – ಖೋ ಪಂದ್ಯಾವಳಿಗಳು ಹಾಗೂ ವಿಶ್ವವಿದ್ಯಾಲಯ ತಂಡದ …

Read More »

ಅಂಧರಿಗೆ ಆನಂದ ಕೊಟ್ಟವರು ಗವಾಯಿಗಳು : ಮೂಗನೂರಮಠ

ಬಾಗಲಕೋಟೆ: ಬದುಕಿನುದ್ದಕ್ಕೂ ಸ್ವಯಂ ಅಂಧರಾಗಿ, ಅಂಧ, ಅನಾಥ, ಅಂಗವಿಕಲ, ಬಡಮಕ್ಕಳಿಗೆ ಬೆಳಕನ್ನು ಕೊಟ್ಟವರು ಪಂಡಿತ ಪುಟ್ಟರಾಜ ಗವಾಯಿಯವರು ಎಂದು ಪ್ರಾಚಾರ್ಯರಾದ ಎಸ್. ಆರ್. ಮೂಗನೂರಮಠ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ೧೧೨ನೇ ಜಯಂತ್ಯೋತ್ಸವದಲ್ಲಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಗೀತದ ಅನೇಕ ವಾದ್ಯಗಳಲ್ಲಿ ಪಾಂಡಿತ್ಯ ಹೊಂದಿದವರು. ಉಭಯ ಗಾಯನ ವಿಷಾಂದರಾಗಿದ್ದರು. ಕವಿ, ಸಾಹಿತಿಗಳಾಗಿ ಅನೇಕ …

Read More »