Breaking News

ಬಾಗಲಕೋಟೆ

ವೇದಿಕೆ ಮೇಲೆಯೇ ದಂಪತಿಗಳ ಕುರ್ಚಿ ಕಾದಾಟ : ಸಿದ್ದು ಸಲಹೆಯೇನು..?!

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ.ದಂಪತಿಗಳಿಬ್ಬರು ಕುರ್ಚಿಗಾಗಿ ಕಾದಾಟ ನಡೆಸಿದ್ದಾರೆ. ಹೌದು ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಸಮಾವೇ ಶವೊಂದರಲ್ಲಿ ವೀಣಾ ಕಾಶಪ್ಪನವರು ಸಿದ್ದರಾಮಯ್ಯ ಬಳಿ ಬಂದು ಪಕ್ಕದ ಕುರ್ಚಿಯಲ್ಲೇ ಆಸೀನರಾದಂತಹ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪ ನವರು ಸಿದ್ದರಾಮಯ್ಯ ಬಳಿ ಬಂದು ವೀಣಾ ರವರನ್ನು ಬೇರೆಡೆ ಕೂರಿಸುವಂತೆ ಹೇಳುತ್ತಾರೆ. ಈ ಕಾರಣದಿಂದ ಸಿದ್ದರಾಮಯ್ಯ ವೀಣಾ ಕಾಶಪ್ಪರವರನ್ನು ಬೇರೆಡೆ ಆಸೀನರಾಗುವಂತೆ ಸಲಹೆ ನೀಡುತ್ತಾರೆ. ಇದೀಗ ವೇದಿಕೆ ಮೇಲೆಯೇ ನಡೆದ ದಂಪತಿಗಳ ಕುರ್ಚಿ ಕಾದಾಟ ಸದ್ದು …

Read More »

ಬಾಗಲಕೋಟೆ: ಸಚಿವ ಮುರುಗೇಶ ನಿರಾಣಿ ಮನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಮುಧೋಳದಲ್ಲಿ ಸಚಿವ ಮುರುಗೇಶ ನಿರಾಣಿಯವರ ನಿವಾಸಕ್ಕೆ ಭೇಟಿ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಬಂದಿದ್ದ ಅವರು ನಿರಾಣಿ ಅವರ ನಿವಾಸದ ಬಳಿ ಇರುವ ಹೆಲಿಪ್ಯಾಡ್ ನಲ್ಲಿ ಇಳಿದಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಿರಾಣಿ ಮನೆಗೆ ಹೋದರು. ಇದಕ್ಕೂ ಮುನ್ನ ಜಮಖಂಡಿಯಲ್ಲಿ‌ ನಡೆದ ಸಿದ್ದು ನ್ಯಾಮಗೌಡರ …

Read More »

ಲೋಕಾಯುಕ್ತ ಇದ್ದಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು: BJP ರಾಜ್ಯಾಧ್ಯಕ್ಷರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಬಾಗಲಕೋಟೆ: ಲೋಕಾಯುಕ್ತ ಇದ್ದಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಟೀಲ್ ಒಬ್ಬ ವಿದೂಷಕ, ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ.   ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ನಾವು 40% ಕಮಿಷನ್ ಆರೋಪ ಮಾಡಿದ ಮೇಲೆ ಬಿಜೆಪಿಯವರು ಈಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಹೋಗಿ ಎಷ್ಟು …

Read More »

ಕೆಎಸ್​ಆರ್​​ಟಿಸಿ ಬಸ್​, ಬೈಕ್ ಮಧ್ಯೆ ಭೀಕರ ಅಪಘಾತ; ಸವಾರರಿಬ್ಬರೂ ಸಾವು..

ಬಾಗಲಕೋಟೆ: ಕೆಎಸ್‌ಆರ್​ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರರಾದ ಶ್ರೀನಿವಾಸ ಹಂಸನೂರು (32), ಈಶ್ವರ ಮಾಚಕನೂರು (54) ಸಾವಿಗೀಡಾದವರು. ಬಾಗಲಕೋಟೆ ತಾಲೂಕಿನ ಸೀಗಿಕೇರಿ ಕ್ರಾಸ್​​ನಲ್ಲಿ ಈ ಅಪಘಾತ ಸಂಭವಿಸಿದೆ. ಕೆಎಸ್​ಆರ್​​ಟಿಸಿ ಬಸ್​ ಮುದ್ದೇಬಿಹಾಳದಿಂದ‌ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದು, ಬೈಕ್ ಸವಾರರು ಬಾಗಲಕೋಟೆಯಿಂದ ಸೀಗಿಕೇರಿ ಕಡೆಗೆ ಸಾಗುತ್ತಿದ್ದರು. ಅಪಘಾತದಲ್ಲಿ ಶ್ರೀನಿವಾಸ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗೊಂಡ …

Read More »

ಜನರ ಕಷ್ಟಕ್ಕೆ ಸ್ಪಂದಿಸುವುದು ಜನಸ್ಪಂದನ, ಕಾರ್ಯಕ್ರಮ ಮಾಡುವುದಲ್ಲ: ಸಿದ್ದರಾಮಯ್ಯ ಟೀಕೆ

ಬಾಗಲಕೋಟೆ, ಸೆಪ್ಟೆಂಬರ್ 10: ಜನಸ್ಪಂದನ ಅಂದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು, ರಾಜ್ಯ ಸರಕಾರ ಜನರ ಕಷ್ಟ ಸುಖಗಳಿಗೆ ನೆರವಾಗುತ್ತಿದ್ದಾರಾ? ಮಳೆ ಬಂದು ಹಲವು ಕಡೆ ಪ್ರವಾಹ ಉಂಟಾಗಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳು ಹಾಳಾಗಿವೆ, ಮನೆಗಳು ಕುಸಿದಿವೆ, ರೈತರ ಜಮೀನು ಹಾಳಾಗಿವೆ ಅವರಿಗೆ ಪರಿಹಾರ ಕೊಡದೇ ಯಾವ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.   ಜಿಲ್ಲೆಯಲ್ಲಿ ಪ್ರವಾಹದ ಸಮೀಕ್ಷೆಗೆ ಆಗಮಿಸಿದ್ದ ಮಾಜಿ ಸಿಎಂ ಮಾಧ್ಯಮದವರೊಂದಿಗೆ …

Read More »

ಸ್ಮಶಾನ ಇಲ್ಲದ್ದಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಸಂಸ್ಕಾರಕ್ಕೆ ಸಿದ್ಧತೆ; ಕೊನೇಲಿ ಆಗಿದ್ದೇ ಬೇರೆ..

ಬಾಗಲಕೋಟೆ: ಸ್ಮಶಾನ ಇಲ್ಲದೆ ಸರ್ಕಾರಿ ಜಾಗದಲ್ಲಿ ಸಂಸ್ಕಾರಕ್ಕೆ ಮುಂದಾದಂತಹ ಪ್ರಕರಣಗಳು ಬಹಳಷ್ಟಿದ್ದು, ಇಂದು ಅಂಥದ್ದೇ ಮತ್ತೊಂದು ಪ್ರಕರಣ ಕಂಡುಬಂದಿದೆ. ಸ್ಮಶಾನ ಇಲ್ಲದ ಕಾರಣಕ್ಕೆ ಗ್ರಾಮ ಪಂಚಾಯತ್ ಚಾವಡಿ ಮೇಲೇ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡ ಘಟನೆಯೊಂದು ನಡೆದಿದೆ.   ಬಾಗಲಕೋಟೆ ಜಿಲ್ಲೆಯ ಕೆರಕಲಕಟ್ಟಿ ಗ್ರಾಮ ಪಂಚಾಯತ್ ಚಾವಡಿ ಮೇಲೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು ಒಂದಷ್ಟು ಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ನಿನ್ನೆ ರಾತ್ರಿ ಸಾವಿಗೀಡಾಗಿದ್ದ ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ‌ ಕೆರಕಲಮಟ್ಟಿಯ ಕಾಳಪ್ಪ …

Read More »

ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

ಬಾಗಲಕೋಟೆ: ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣೆಗೆ ಸಂದರ್ಭದಲ್ಲಿ ಯೋಧನೊಬ್ಬ ಮಸೀದಿಯೊಂದರ ಆವರಣಕ್ಕೆ ಬಣ್ಣ ಎರಚಿದ್ದು, ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.   ಆನಂದ ಕುದುರಿಕಾರ ಬಂಧಿತ ಯೋಧ. ಈತ ಮರಾಠಾ ಲೈನ್ ಇನ್​ಫ್ಯಾಂಟ್ರಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ಮೇಲೆ ಊರಿಗೆ ಬಂದಿದ್ದಾಗ ಈ ಕೃತ್ಯವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೋಟೆ ಪೊಲೀಸರು ಸೈನಿಕನನ್ನು ಬಂಧಿಸಿದ್ದಾರೆ. ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ …

Read More »

ವಿಡಿಯೋ: 20 ಸಾವಿರ ಪ್ಲಾಸ್ಟಿಕ್​ ಬಾಟಲ್‌​ಗಳಿಂದ ತಯಾರಾದ ಗಣೇಶ

ಬಾಗಲಕೋಟೆಯ ಇಳಕಲ್ಲು ಪಟ್ಟಣದ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿಶೇಷವಾಗಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ಗಣೇಶ ಮೂರ್ತಿ ತಯಾರಿಸಲಾಗಿದೆ. ​20 ಅಡಿ ಎತ್ತರದ ಮೂರ್ತಿಗೆ ಸುಮಾರು 20 ಸಾವಿರ ಬಾಟಲ್‌ಗಳನ್ನು ಬಳಸಲಾಗಿದೆ. ಕಳೆದ 30 ವರ್ಷಗಳಿಂದ ಕಾಲೇಜಿನಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿ ಗಮನ ಸೆಳೆದಿದೆ.

Read More »

ಸಾವಿನಲ್ಲೂ ಒಂದಾದ ದಂಪತಿ: ಮೂರು ಗಂಟೆ ಅಂತರದಲ್ಲಿ ಗಂಡ-ಹೆಂಡತಿ ಸಾವು

ರಬಕವಿ-ಬನಹಟ್ಟಿ : ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವುದೆಂದರೆ ಸುಮ್ಮನೆಯಾ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಅನ್ನೋದು ಇದೇನಾ. ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ …

Read More »

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಕೊಲೆ

ಬಾಗಲಕೋಟೆ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಹೊರವಲಯದಲ್ಲಿ‌ ನಡೆದಿದೆ. ಸಂಗೀತಾ ಹರಿಜನ (36) ಕೊಲೆಯಾದವರು. ಕಳೆದ ರಾತ್ರಿ 9 ಗಂಟೆಗೆ ಬಹಿರ್ದೆಸೆಗೆ ಹೋಗಿದ್ದಾಗ ಘಟನೆ ನಡೆದಿದೆ. ತಲೆ ಮತ್ತು ಕುತ್ತಿಗೆಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಪಿ …

Read More »