ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಕುಟುಂಬದ ಗೌರವಕ್ಕೆ ಧಕ್ಕೆ ತರಲು ಒಳಸಂಚು ನಡೆಸುತ್ತಿರುವ ದುಷ್ಟ ವ್ಯಕ್ತಿಗಳ ವಿರುದ್ದ ಭಕ್ತಾಭಿಮಾನಿಗಳಲ್ಲಿ ಆಕ್ರೋಶ ಉಕ್ಕಿದೆ. ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಇಂದು ಭಕ್ತರು ಪ್ರತಿಭಟನೆ ನಡೆಸಿದರು. ಧರ್ಮಸ್ಥಳದ ಭಕ್ತಾಭಿಮಾನಿಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ, ಧರ್ಮಾಧಿಕಾರಿಗಳಾದ ವೀರೆಂದ್ರ ಹೆಗಡೆ ಅವರ ಹೆಸರಿಗೆ ಮಸಿ ಬಳಿಯುವ …
Read More »ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ
ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ, ಬ್ಯಾಂಕಿನ ನವೀಕೃತ ಕಟ್ಟಡ, ನೂತನ ಶಾಖಾ ಕಟ್ಟಡ ಹಾಗೂ ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ಹಿರಿಯ ನಾಯಕ ಶ್ರೀ ಎಸ್.ಆರ್. ಪಾಟೀಲ ಅವರು ಬಾಗಲಕೋಟೆ ಜಿಲ್ಲೆಗೆ …
Read More »ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!!
ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!! ಖದೀಮ ಕಳ್ಳರು ಹಿಂದಿಯಲ್ಲಿ ಮಾತನಾಡುತ್ತಾ ಬಳಿಕ ಗಮನ ಬೇರೆಡೆ ಸೆಳೆದು ಸರಗಳ್ಳತನಕ್ಕೆ ಯತ್ನಿಸಿದ ಸಮಯದಲ್ಲಿ ಮಹಿಳೆಯೊಬ್ಬಳು ತನ್ನ ಸಮಯ ಪ್ರಜ್ಞೆಯಿಂದ ಎಚ್ಚೆತ್ತು ಕಳ್ಳರಿಗೆ ಜಿರಲೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಜರುಗಿದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಗೌತಮ ಬುದ್ಧ ಕಾಲೋನಿಯಲ್ಲಿರೋ ಪೃಥ್ವಿ ಎಂಬ ಮಹಿಳೆ ಒಂಟಿಯಾಗಿ ಇರೋದನ್ನು ಗಮನಿಸಿ …
Read More »ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಸಂಘಟನೆಯ ಕಾರ್ಯಕ್ಕೆ ಒಲಿದು ಬಂತು ರಾಷ್ಟ್ರಮಟ್ಟದ ಪ್ರಶಸ್ತಿ
ಬಾಗಲಕೋಟೆ: ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಹಿಳಾ ಸಂಘಟನೆಯೊಂದು ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಸಂಘಟನೆ ಮಹಿಳಾ ವರ್ಗಕ್ಕೆ ಮಾದರಿಯಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಕ್ಕೂಟ ಸ್ಥಾಪನೆ ಮಾಡಿ, ಮಹಿಳೆಯರಿಗೆ ಸ್ವಾವಲಂಬನೆ ಬದುಕು ನಿರ್ಮಿಸುವ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಕೊಂಡ ರಾಜ್ಯದ ಏಕೈಕ ಮಹಿಳಾ ಸಂಘಟನೆ ಎಂಬ ಗರಿ ಪಡೆದಿದೆ. ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ …
Read More »ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ!
ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೋಮವಾರಪೇಟೆಯ ನಾಮದೇವ ಗಲ್ಲಿಯಲ್ಲಿ ಇರುವ ಹನುಮ ದೇವಾಲಯದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುಷ್ಟಿಪಡಿಸುವ ರೀತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಮುಂಭಾಗದಲ್ಲಿದ್ದ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಿಸಲು ಆಡಳಿತ ಸಮಿತಿ ಮುಂದಾಗಿತ್ತು. ಮರ ಕಡಿತದ ವೇಳೆ ಮರದ ಕಾಂಡ ಕಡಿದು, ಮುಂದಿನ ಭಾಗವನ್ನು ಕತ್ತರಿಸಲು ಪ್ರಯತ್ನಿಸಿದಾಗ ಗರಗಸ ಸೇರಿದಂತೆ ಬಳಸಿದ …
Read More »ವೇತನಕ್ಕಾಗಿ ಆಗ್ರಹಿಸಿ ಬಾಗಲಕೋಟೆಯಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ
ವೇತನಕ್ಕಾಗಿ ಆಗ್ರಹಿಸಿ ಬಾಗಲಕೋಟೆಯಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ ಕಳೆದ 7 ತಿಂಗಳುಗಳಿಂದ ವೇತನ ಬಂದಿಲ್ಲ ವೇತನ ಸಕಾಲಕ್ಕೆ ನೀಡಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ನೌಕರರು ಅಸಹಕಾರ ಹೋರಾಟ ನಡೆಸುತ್ತಿದ್ದಾರೆ ಬಾಗಲಕೋಟೆಯ ಡಿಸಿ ಕಚೇರಿ ಎದುರು ಎಮ್ ಎನ್ ಆರ್ ಇ ಜಿ ಹೊರಗುತ್ತಿಗೆ ನೌಕರರ ವೇತನ ಸರ್ಕಾರ ಕಳೆದ ಏಳು ತಿಂಗಳಿಂದ ನೀಡದ ಹಿನ್ನೆಲೆಯಲ್ಲಿ ವೇತನಕ್ಕಾಗಿ ಆಗ್ರಹಿಸಿ ಎಮ್ ಎನ್ ಆರ್ ಇ ಜಿ ಕೆಲಸ ನಿರ್ವಹಣೆ ಮಾಡುವ ಹೊರಗುತ್ತಿಗೆಯ ೨೧೨ …
Read More »ಬಿಜೆಪಿಯವರು ಕಾಂಗ್ರೆಸ್ನ 55 ಶಾಸಕರನ್ನು ಟಾರ್ಗೆಟ್ ಲಿಸ್ಟ್ ಮಾಡಿದ್ದಾರೆ: ಶಾಸಕ ವಿಜಯಾನಂದ ಕಾಶಪ್ಪನವರ್
ಬಾಗಲಕೋಟೆ : ಬಿಜೆಪಿಯವರು ಕಾಂಗ್ರೆಸ್ನ 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ. ಹುನಗುಂದ ಪಟ್ಟಣದಲ್ಲಿ ಶನಿವಾರ (ಜು.12) ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮ ಪತ್ರಿನಿಧಿಗಳೊಂದಿಗೆ ಅವರು ಮಾತನಾಡಿದರು. ಬಿಜೆಪಿಗೆ ಬರದೇ ಹೋದ್ರೆ ಸಿಬಿಐ, ಇಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆಳಸ್ತೀವಿ ಅಂತಾರೆ, ಇದಕ್ಕೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಆ ಲಿಸ್ಟ್ನಲ್ಲಿ …
Read More »ಬಾಗಲಕೋಟೆಯಲ್ಲಿ ನಿಲ್ಲದ ಪಡಿತರ ಅಕ್ಕಿ ಅಕ್ರಮ ದಂಧೆ
ಬಾಗಲಕೋಟೆಯಲ್ಲಿ ನಿಲ್ಲದ ಪಡಿತರ ಅಕ್ಕಿ ಅಕ್ರಮ ದಂಧೆ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಸೀಜ್ ಆಗಿದ್ದ ವಾಹನದಲ್ಲೇ ಮತ್ತೆ ಸಾಗಾಟ ಮಾಡುತ್ತಿರುವುದರ ಬಗ್ಗೆ ಹೇಳಿಕೆ ಪಡೆಯಲು ಹೊದ ವರಿದಿಗಾರರ ಮೇಲೆ ಆಹಾರ ಇಲಾಖೆಯ ಅಧಿಕಾರಿ ದರ್ಪತೋರಿದ ಘಟನೆ ಜರುಗಿದೆ. ಬಾಗಲಕೋಟೆ ಜಿಲ್ಲಾ ಆಡಳಿತ ಭವನದಲ್ಲಿ ಡಿಸಿ, ಸಿಇಒ ಸ್ಥಾನ ಪಲ್ಲಟವಾದ್ರೂ ಆಹಾರ ಇಲಾಖೆಯ ಡಿಡಿ ಹುದ್ದೆ ಮಾತ್ರ ಅಭಾದಿತವಾಗಿದೆ. ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಕಳೆದ ಹತ್ತು …
Read More »12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಬಾಗಲಕೋಟೆಯ ಯುವಕ ಸೈಕಲ್ ಏರಿ ಹೊರಟ
ಬಾಗಲಕೋಟೆ ಯುವಕ ಪೃಥ್ವಿ ಅಂಬಿಗೇರ್ ಸಾಹಸ ಪ್ರವಾಸ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ಬಾಗಲಕೋಟೆಯ ಯುವಕ ಸೈಕಲ್ ಏರಿ ಹೊರಟಿದ್ದು, ಎಂ.ಲ್.ಸಿ ಪಿ.ಎಚ್. ಪುಜಾರ್ ಯುವಕನ ಸೈಕಲ್ ಯಾತ್ರೆಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ. ಬಾಗಲಕೋಟೆ ನಗರದ ಯುವಕ ಪೃಥ್ವಿ ಅಂಬಿಗೇರ್ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಮಹತ್ವಾಕಾಂಕ್ಷಿಯ ಸೈಕಲ್ ಯಾತ್ರೆಗೆ ಹೊರಡಿದ್ದಾರೆ. ಸಾವಿರಾರು ಕಿಲೋಮೀಟರ್ ದೂರವಿರುವ ಜ್ಯೋತಿರ್ಲಿಂಗ ಸ್ಥಳಗಳಿಗೆ ಸೈಕಲ್ ಮೂಲಕ ಪ್ರವಾಸ ಮಾಡುವ ಸಾಹಸಿಕ ನಿರ್ಧಾರ ಕೈಗೊಂಡಿದ್ದಾನೆ. ಪೃಥ್ವಿಗೆ …
Read More »ಒಂದೇ ರಾತ್ರಿ ಮೂರು ಮನೆಗಳ ಕಳ್ಳತನಕ್ಕೆ ಯತ್ನ
ಬಾಗಲಕೋಟೆ : ಒಂದೇ ರಾತ್ರಿ ಮೂರು ಮನೆಗಳ ಕಳ್ಳತನಕ್ಕೆ ಯತ್ನ ಜಮಖಂಡಿ ತಾಲೂಕು ನಾಗನೂರು ಗ್ರಾಮದಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮನೆಗಳ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ದರೋಡೆಗೆ ಬಂದ ಕಳ್ಳರು ಎಲ್ಲಾ ಮನೆಗಳ ಹತ್ತಿರ ಸುಳಿದಾಡಿದ್ದಾರೆ. ನಂತರ ಒಂದು ಮನೆಯಲ್ಲಿ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದಾರೆ. ಮತ್ತೆರಡು ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ .ಉಮೇಶ ಕನಮುಚನಾಳ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ 30 ಗ್ರಾಂ ಚಿನ್ನದ ತಾಳಿ, …
Read More »