ಬಳ್ಳಾರಿ: ಭೀಕರ ರಸ್ತೆ ಅಪಘಾತದಲ್ಲಿ, ಅಜ್ಜ, ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಕರ್ನಾರಹಟ್ಟಿ ಗ್ರಾಮದ ಈಶ್ವರಪ್ಪ (55) ಹಾಗೂ ಅವರ ಮೊಮ್ಮಗಳು ಸೃಷ್ಟಿ (14) ಮೃತ ದುರ್ದೈವಿಗಳು. ಮೃತ ಸೃಷ್ಟಿ ಕೂಡ್ಲಿಗಿ ಪಟ್ಟಣದ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿದಿದ್ದ ಕಾರಣ ತಾತನ ಜೊತೆ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದಳು. ಹೆದ್ದಾರಿಯಲ್ಲಿ ರೈತರು ರಾಗಿ …
Read More »ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಕೊಲೆಗೈದು ಪರಾರಿಯಾಗಿದ್ದ ಬಾಲಕ ಕೊನೆಗೂ ಅರೆಸ್ಟ್
ಬಳ್ಳಾರಿ: ಖಾಸಗಿ ಶಾಲಾ ಹಾಸ್ಟೆಲ್‌ನಲ್ಲಿ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ. ಮೊನ್ನೆ ರಾತ್ರಿ ಆರೋಪಿ ಹಾಸ್ಟೆಲ್‌ನಲ್ಲಿ ಮಲಗಿದ್ದ ಎಂಟು ವಿದ್ಯಾರ್ಥಿಗಳು ಹಾಗೂ ವಾರ್ಡನ್ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದರೆ, 8 ಜನರಿಗೆ ಗಾಯವಾಗಿತ್ತು. ಆರೋಪಿ ಬಾಲಕನ ಪತ್ತೆಗಾಗಿ 7 ಪ್ರತ್ಯೇಕ ತಂಡ ರಚನೆ ಮಾಡಲಾಗಿತ್ತು. ತೀವ್ರ ಹುಡುಕಾಟ ನಡೆಸಿದ ಬಳ್ಳಾರಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. …
Read More »ಬಳ್ಳಾರಿ ಸಿಡಿ ಬಂಡಿ ರಥೋತ್ಸವ – ಬಾಳೆ ಹಣ್ಣು, ಜೀವಂತ ಕೋಳಿ ಎಸೆದ ಭಕ್ತರು
ಬಳ್ಳಾರಿ: ಅಧಿದೇವತೆ ಕನಕ ದುರ್ಗಮ್ಮ ಸಿಡಿ ಬಂಡಿ ರಥೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು. ನಗರ ಶಾಸಕ ನಾರಾ ಭರತ್ ರೆಡ್ಡಿ, ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸಿಡಿ ಬಂಡಿ ರಥೋತ್ಸವದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡರು. ಭಕ್ತರು ಸಿಡಿ ಬಂಡಿಗೆ ಬಾಳೆ ಹಣ್ಣಿನ ಜೊತೆಗೆ ಜೀವಂತ ಕೋಳಿ ಎಸೆದರು. ಕನಕದುರ್ಗಮ್ಮ ಸಿಡಿ ಬಂಡಿ ರಥೋತ್ಸವಕ್ಕೆ ಕೋಳಿ …
Read More »ನಕಲಿ ಪ್ರಮಾಣ ಪತ್ರ ವಿತರಣೆ ತಡೆಗಟ್ಟಿ – ನಾಗೇಂದ್ರ ಮನೆ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ
ಬಳ್ಳಾರಿ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ವಿತರಣೆ ತಡೆಗಟ್ಟಲು ಒತ್ತಾಯಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಮನೆ ಮುಂದೆ ವಾಲ್ಮೀಕಿ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಭಾರೀ ಸಂಖ್ಯೆ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಆಗುತ್ತಿವೆ. ಎಸ್‌ಟಿ ಸಮುದಾಯದ ಶಾಸಕರು ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕಾಂಗ ಸಭೆಯಲ್ಲಿ ನಕಲಿ …
Read More »ಫೈಲ್‌ಗಳನ್ನು ಹೊಸ ಅಧಿಕಾರಿಗಳಿಗೆ ಕೊಡ್ಬೇಡಿ – ವರ್ಗಾವಣೆಯಾದ್ರೂ ಅಧಿಕಾರಿಗಳಿಗೆ ವರ್ತಿಕಾ ಕರೆ
ಬಳ್ಳಾರಿ: ಬ್ಯಾನರ್ ಗಲಭೆ ಬಳಿಕ ವರ್ಗಾವಣೆ ಆಗಿದ್ದ ಡಿಐಜಿ ಆಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಫೈಲ್‌ಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಬೆದರಿಕೆ ಹಾಕಿದ್ದಾರೆ. ವರ್ತಿಕಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐಪಿಎಸ್ ಹರ್ಷ ಅವರನ್ನ ನೇಮಕ ಮಾಡಿತ್ತು. ವರ್ಗಾವಣೆ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿರುವ ಕಟಿಯಾರ್ ಅವರು ಮತ್ತೇ ಬಳ್ಳಾರಿಗೆ ಬರುವ ತವಕದಲ್ಲಿದ್ದಾರೆ ಈಗ ಬಳ್ಳಾರಿಯ …
Read More »ಬಳ್ಳಾರಿಯಲ್ಲಿ ಉತ್ಖನನ ವೇಳೆ 3,000 ವರ್ಷಗಳಷ್ಟು ಹಳೆಯ ಮಾನವನ ಪಳೆಯುಳಿಕೆ ಪತ್ತೆ
ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ವೇಳೆ 3,000 ವರ್ಷದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ ಪತ್ತೆಯಾಗಿದೆ. ಸುಮಾರು 3,000 ವರ್ಷದಿಂದ 5,000 ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಇದಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ಅವರಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ವಾರದ ಹಿಂದೆ ಉತ್ಪನನದ ವೇಳೆ ಮಾನವನ ಮೂಳೆಯೊಂದು ಸಿಕ್ಕಿತ್ತು. ಮಣ್ಣನ್ನು …
Read More »ಖಾಸಗಿ ಆಸ್ಪತ್ರೆ ಮುಂದೆ ಕಸ ಸುರಿದು ಬಿಸಿ ಮುಟ್ಟಿಸಿದ ಬಳ್ಳಾರಿ ಪಾಲಿಕೆ ಸಿಬ್ಬಂದಿ
ಬಳ್ಳಾರಿ: ಖಾಸಗಿ ಅಸ್ಪತ್ರೆಯವರಿಗೆ ಬುದ್ದಿ ಕಲಿಸಲು ಮಹಾನಗರ ಬಳ್ಳಾರಿ ಪಾಲಿಕೆ ಸಿಬ್ಬಂದಿ ಕಸವನ್ನು ತಂದು ಅಸ್ಪತ್ರೆ ಮುಂದೆ ಸುರಿದು ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿಯ ಪಾರ್ವತಿ ನಗರದ ಪದ್ಮಾವತಿ ಕಿಡ್ನಿಕೇರ್ ಸೆಂಟರ್ ಮತ್ತು ಮೋಕಾ ರಸ್ತೆಯ ದ್ವಾರಕಾ ಆಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ವಾಹನದಲ್ಲಿ ಕಸ ತಂದು ಸುರಿದಿದ್ದಾರೆ. ಪದ್ಮಾವತಿ ಕಿಡ್ನಿಕೇರ್ ಆಸ್ಪತ್ರೆ ಮತ್ತು ದ್ವಾರಕ ಅಸ್ಪತ್ರೆ ಸಿಬ್ಬಂದಿ ಮೆಡಿಕಲ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಈ ಎರಡು ಅಸ್ಪತ್ರೆಗೆ ಪಾಲಿಕೆ ನೋಟಿಸ್ …
Read More »ಆರ್‌ಟಿಒ ಕಚೇರಿಯ 16 ಲಕ್ಷ ಹಣದೊಂದಿಗೆ ಎಸ್‌ಡಿಎ ಸಿಬ್ಬಂದಿ ನಾಪತ್ತೆ
ಬಳ್ಳಾರಿ: ಬಳ್ಳಾರಿಯ ಆರ್‌ಟಿಒ ಕಚೇರಿಯಲ್ಲಿ ಟ್ರೇಜರಿ ಸೆಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ರವಿ ತಾವರಖೇಡ 16 ಲಕ್ಷ ರೂ.ಗಳ ಹಣದೊಂದಿಗೆ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ಆರ್‌ಟಿಒ ಕಚೇರಿಯ ಅಧೀಕ್ಷಕ ವೀರೇಶ್ ಅವರು ನೀಡಿದ ದೂರಿನ ಮೇರೆಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 316(2), 318 (4) ಪ್ರಕಾರ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕರ ವಿವಿಧ ಸೇವೆಗಳಿಂದ ಸಂಗ್ರಹಿಸಲಾದ ಹಣವನ್ನು ಆಯಾ ದಿನವೇ …
Read More »ಬಳ್ಳಾರಿಯಲ್ಲಿ ಕೋಳಿಗಳ ಸಾವು 8 ಸಾವಿರ ಕೋಳಿಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ?
ಬಳ್ಳಾರಿ: ತಾಲೂಕಿನ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ಕಳೆದ ವಾರದಿಂದ 8 ಸಾವಿರ ಕೋಳಿಗಳು ಮೃತಪಟ್ಟಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರವಿ ಎಂಬವರಿಗೆ ಸೇರಿದ ಫಾರಂನಲ್ಲಿ ಮೊದಲು 15 ಸಾವಿರ ಕೋಳಿಗಳಿದ್ದವು. ಈವರೆಗೆ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಇದೀಗ 7 ಸಾವಿರ ಕೋಳಿಗಳು ಮಾತ್ರ ಉಳಿದಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆಗಳಿವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. …
Read More »7.20 ಕೋಟಿ ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದ ಚೀಲದಲ್ಲಿ ಹುಳುಗಳು ಪತ್ತೆ
ಬಳ್ಳಾರಿ: 7.20 ಕೋಟಿ ರೂ.ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದ ಚೀಲದಲ್ಲಿ ಹುಳುಗಳು ಪತ್ತೆಯಾದ ಘಟನೆ ಬಳ್ಳಾರಿಯ ಕೆಎಸ್‌ಡಬ್ಲ್ಯೂಸಿ ಗೋಡಾನ್ನಲ್ಲಿ ನಡೆದಿದೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನಿನ್ನೆ (ಶುಕ್ರವಾರ) ಕೆಎಸ್‌ಡಬ್ಲ್ಯೂಸಿಯ ಯುನಿಟ್ -2 ರ ಗೋದಾಮಿಗೆ ಭೇಟಿ ನೀಡಿದಾಗ ಜೋಳದ ಚೀಲದಲ್ಲಿ ಹುಳುಗಳು ಪತ್ತೆಯಾಗಿದೆ. ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳುಗಳು ಕಂಡುಬಂದಿವೆ. ನ್ಯಾಯಮೂರ್ತಿ ವೀರಪ್ಪ, ಉಪ ನೋಂದಣಾಧಿಕಾರಿ ಅರವಿಂದ್ ಎನ್.ವಿ ಪ್ರಶ್ನಿಸಿದಾಗ, ಕೆಎಸ್‌ಡಬ್ಲ್ಯುಸಿಯ …
Read More »
Laxmi News 24×7