Breaking News

ಧಾರವಾಡ

ಕೊರೊನಾ ಭೀತಿ – ಎರಡೇ ದಿನದಲ್ಲಿ 15 ಸಾವಿರ ವಿದ್ಯಾರ್ಥಿಗಳು ಮನೆಗೆ ವಾಪಸ್

ಧಾರವಾಡ: ಇಡೀ ವಿಶ್ವದ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ಭಯಕ್ಕೆ ಧಾರವಾಡದ ಹಾಸ್ಟೆಲ್ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ್ದಾರೆ. ಧಾರವಾಡ ನಗರದ ಸಪ್ತಾಪೂರದಲ್ಲಿ ಬಹುತೇಕ ಕೋಚಿಂಗ್ ಕ್ಲಾಸ್‍ಗಳಿವೆ. ಆದರೆ ಆ ಕ್ಲಾಸ್‍ಗಳೆಲ್ಲವೂ ಈಗ ಬಂದ್ ಮಾಡಲಾಗಿದ್ದು, ಸದ್ಯ ಕೋಚಿಂಗ್‍ಗೆ ಬಂದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ. ಕೊರೊನಾ ಸೋಂಕು ಬರಬಹುದು ಎಂಬ ಭಯದಿಂದ ಎಲ್ಲಾ ಕೋಚಿಂಗ್ ಕ್ಲಾಸಿನ ಮಾಲಿಕರು ವಿದ್ಯಾರ್ಥಿಗಳಿಗೆ ತಮ್ಮ ಊರಿಗೆ ವಾಪಸ್ …

Read More »

*ಕಲಘಟಗಿಯಲ್ಲಿ ಕೋಳಿಗಳ ಮಾರಣಹೋಮ*.

*ಕಲಘಟಗಿಯಲ್ಲಿ ಕೋಳಿಗಳ ಮಾರಣಹೋಮ*. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನು ಮಾರಣ ಹೋಮ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ‌ ಬಿ.ಗುಡಿಹಾಳ ಗ್ರಾಮದಲ್ಲಿ ನಡೆದಿದೆ. ಕೊರೊನಾ ವೈರಸ್ ಕೋಳಿಗಳಿಂದ ಬಂದಿದೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕೋಳಿಗಳನ್ನ ಮಣ್ಣಲ್ಲಿ ಗುಂಡಿ ತಗೆದು ಮುಚ್ಚಲಾಗಿದೆ. ಪ್ರಕಾಶ ಎಂಬುವವರು ತಮ್ಮ ಕೋಳಿ ಫಾರಂನಲ್ಲಿನ ಕೋಳಿಗಳನ್ನು ಜೆಸಿಬಿಯಿಂದ ತೆಗ್ಗು ತೋಡಿ ಕೋಳಿಗಳನ್ನ ಮುಚ್ಚಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ …

Read More »

ಸದ್ದಿಲ್ಲದೇ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ..?

ಸದ್ದಿಲ್ಲದೇ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ..? ಹುಬ್ಬಳ್ಳಿ, ಮಾ,12-ಕೆಲವು ದಿನಗಳ ಹಿಂದೆ ರಾಜಕೀಯ ಸ್ವರೂಪ ಪಡೆದಿದ್ದ ಹುಬ್ಬಳ್ಳಿ ಪ್ರತಿಷ್ಠಿತ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ಸದ್ದಿಲ್ಲದೇ ಮಠದ ಉತ್ತರಾಧಿಕಾರಿ ನೇಮಕ ವಿಚಾರವನ್ನ ತಿಳಿಗೊಳಿಸಲು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ. ಘಟಪ್ರಭದ ಮಲ್ಲಿಕಾರ್ಜುನ ಸ್ವಾಮೀಜಿಯನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆಯೇ ಅನ್ನೋ ಅನುಮಾನ ಮೂಡುತ್ತಿದೆ. ಯಾಕೆಂದರೆ ಇತ್ತೀಚೆಗೆ …

Read More »

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ.

ದಿನಾಂಕ 29 ಮಾರ್ಚ 2020 ರಿಂದ ಹುಬ್ಬಳ್ಳಿ – ಮಂಗಳೂರು, ಮಂಗಳೂರು – ಹುಬ್ಬಳ್ಳಿ ಇಂಡಿಗೋ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ. ಸಮಯ : ಸಾಯಂಕಾಲ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25 ಕ್ಕೆ ಮಂಗಳೂರು ತಲುಪುವುದು ಮತ್ತು ಮರಳಿ ಮಂಗಳೂರಿನಿಂದ ಸಾಯಂಕಾಲ 6.45ಕ್ಕೆ ಹೊರಟು 7.55ಕ್ಕೆ ಹುಬ್ಬಳ್ಳಿ ತಲುಪುವುದು. ಬಹುದಿನಗಳಿಂದ ನಾವು ಬಂದರು ನಗರಿ ಮಂಗಳೂರಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ನಡೆಸಿದ ಪ್ರಯತ್ನ ಈಗ ಫಲಪ್ರದವಾಗಿದೆ. ಇದೇ ಮಾರ್ಚ್ …

Read More »

ಉತ್ತರಾಧಿಕಾರ ವಿವಾದ – ಸಿಎಂ ಮಧ್ಯಸ್ಥಿಕೆಗೆ ದಿಂಗಾಲೇಶ್ವರ ಬೆಂಬಲಿಗರ ಒತ್ತಾಯ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಮ್ಮೆಯ ಮಠದಲ್ಲಿ ಒಂದಾಗಿರುವ ಮೂರು ಸಾವಿರ ಮಠದ ಉತ್ತರಾಧಿಕಾರ ವಿವಾದ ಮುಗಿಯದ ಅಧ್ಯಾಯದಂತಾಗಿದ್ದು, ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಲೆ ಇದೆ. ಒಂದು ಕಡೆ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನಾನೇ ಉತ್ತರಾಧಿಕಾರ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ನಾನು ಶ್ರೀ ಮಠದ ಉತ್ತರಾಧಿಕಾರ ಎಂದು ಹೇಳುತ್ತಿದ್ದಾರೆ. ಅಲ್ಲದೇ ಮೂಜಗು ಅವರು ಉತ್ತರಾಧಿಕಾರದ ಕುರಿತು ಯಾವುದೇ ಸ್ಪಷ್ಟನೆ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದ್ದು, ದಿಂಗಾಲೇಶ್ವರ …

Read More »

ತರಬೇತಿ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು ಯೋಧ ಸಾವು

ಧಾರವಾಡ, ಫೆ.24-ಭಾರತೀಯ ಸೇನೆಯ ತರಬೇತಿಯ ಸಮಯದಲ್ಲಿ ತಲೆಗೆ ಬಲವಾದ ಏಟು ಬಿದ್ದು, ಯೋಧನೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗಪುರ ಸೇನಾ ಕ್ಯಾಂಪ್‍ನಲ್ಲಿ ನಡೆದಿದೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಮಹೇಶ್ ಸಿಂಗನಹಳ್ಳಿ (20) ಮೃತಪಟ್ಟ ಯೋಧ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಸೇನೆಗೆ ಸೇರಿದ್ದ ಇವರು ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಇಂದು ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು, ಯೋಧನ ಅಗಲಿಕೆಯಿಂದ ಗ್ರಾಮದಲ್ಲಿ ನೀರವ ಮೌನ …

Read More »

ಕಾರ್ ಶೋರೂಂಗೆ ತಗುಲಿದ ಬೆಂಕಿ – 10ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿ

ಧಾರವಾಡ: ಟೊಯೋಟಾ ಕಾರ್ ಶೋರೂಂವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹತ್ತುಕ್ಕೂ ಹೆಚ್ಚು ಕಾರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ರಾಯಾಪೂರದಲ್ಲಿ ನಡೆದಿದೆ. ನಗರದ ರಾಯಪುರ ಬಳಿಯಿರುವ ಶೋಧಾ ಟೊಯೋಟಾ ಕಾರ್ ಸ್ಕ್ರ್ಯಾಪ್ ಶೋರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ಕಾರುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಕಾರುಗಳಿಗೆ ಹಾಗೂ ಶೋರೊಂ ಅಕ್ಕ ಪಕ್ಕದ ಬೆಂಕಿಯನ್ನ ಅಗ್ನಿ …

Read More »

ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

ಧಾರವಾಡ: ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗುಂಡಾ, ಅಯೋಗ್ಯ ಆಗಿದ್ದರೆ ಅದನ್ನ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ. ಆರೋಪವನ್ನ ಸಾಬೀತು ಮಾಡಿದರೇ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲ್ ಹಾಕಿದ್ದಾರೆ. ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಭಕ್ತರ ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. …

Read More »

ಪಾಕ್ ಪರ ಕಾಶ್ಮೀರಿ ವಿದ್ಯಾರ್ಥಿಗಳ ಘೋಷಣೆ : ಪೊಲೀಸರಿಂದ ವರದಿ ಕೇಳಿದ ಗೃಹಸಚಿವ ಬೊಮ್ಮಾಯಿ

ಬೆಂಗಳೂರು, ಫೆ.17- ಹುಬ್ಬಳ್ಳಿಯ ಕೆಎಲ್‍ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಬಿಡುಗಡೆಯಾಗಿರುವ ಪ್ರಕರಣ ಸಂಬಂಧ ಡಿಜಿ, ಐಜಿಪಿ ಯಿಂದ ವರದಿ ಕೇಳಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಹೇಳಿಕೆ ಆಧಾರದ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ನಾನು ರಾಜ್ಯ …

Read More »

 ಜಿಲ್ಲಯಲ್ಲಿ ಖಾಲಿ ಉಳಿದಿದ್ದ ಡಿಸಿಪಿ ಸ್ಥಾನಕ್ಕೆ ನೂತನ ಅಧಿಕಾರಿಗಳಾಗಿ ಐಪಿಎಸ್ ಪಿ. ಕೃಷ್ಣಕಾಂತ್ ನೇಮಕಗೊಂಡಿದ್ದಾರೆ.:ಹುಬ್ಬಳ್ಳಿ ಧಾರವಾಡ

ಹುಬ್ಬಳ್ಳಿ: ಜಿಲ್ಲಯಲ್ಲಿ ಖಾಲಿ ಉಳಿದಿದ್ದ ಡಿಸಿಪಿ ಸ್ಥಾನಕ್ಕೆ ನೂತನ ಅಧಿಕಾರಿಗಳಾಗಿ ಐಪಿಎಸ್ ಪಿ. ಕೃಷ್ಣಕಾಂತ್ ನೇಮಕಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿಗಳ ಮಧ್ಯೆ ನಡೆದ ಜಟಾಪಟಿ ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸ್ ಆಯುಕ್ತರು ಹಾಗೂ ಕೆಳ ಸಿಬ್ಬಂದಿ ಮಧ್ಯೆ ನಡೆದ ಜಗಳದ ನಂತರ ಡಿಸಿಪಿ ನಾಗೇಶ್ ವರ್ಗಾವಣೆ ಸಹ ಆಗಿದ್ದರು. ನಾಗೇಶ್ ವರ್ಗಾವಣೆ ನಂತರ ಐಪಿಎಸ್ ಪಿ. ಕೃಷ್ಣಕಾಂತ್ ಅವರು ಖಾಲಿಯಾಗಿದ್ದ ಡಿಸಿಪಿ ಸ್ಥಾನದ ಅಧಿಕಾರ …

Read More »