Breaking News

ಧಾರವಾಡ

ಧಾರವಾಡ:ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ.

ಧಾರವಾಡ: ಲಾಕ್‍ಡೌನ್‍ನಿಂದ ಈಗಾಗಲೇ ಅನೇಕ ಮದುವೆ ಸಮಾರಂಭಗಳು ಕ್ಯಾನ್ಸಲ್ ಆಗಿವೆ. ಕೆಲವರು ಸರಳವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸದೆ ಮದುವೆಯಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ. ಜಿಲ್ಲೆಯ ಆದರ್ಶ ನಗರದ ವರ ಇಮ್ರಾನ್ ಜೊತೆ ಕೊಪ್ಪಳ ಜಿಲ್ಲೆಯ ವಧು ತಾಜಮಾ ಬೇಗಂ ಮದುವೆ ಆನ್‍ಲೈನ್‍ನಲ್ಲಿ ವಿಡಿಯೋ ಕಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆಯನ್ನು ಏಪ್ರಿಲ್‍ನಲ್ಲಿ ಮಾಡಬೇಕೆಂದು ನಿಶ್ಚಯ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ …

Read More »

ಹುಬ್ಬಳ್ಳಿ:ಕೊರೊನಾ ಭೀತಿ-ಪೊಲೀಸ್ ಠಾಣೆಯೇ ಶಿಫ್ಟ್

ಹುಬ್ಬಳ್ಳಿ: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ. ನಗರದ ಮುಲ್ಲಾ ಮತ್ತು ಕರಾಡಿ ಓಣಿಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಮುಂಜಾಗ್ರತ ಕ್ರಮವಾಗಿ ಈ ಭಾಗದ ಕಮರಿಪೇಟೆಯ ಪೊಲೀಸ್ ಠಾಣೆಯನ್ನು ಚರ್ಚ್ ವೊಂದರ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯು ಕಂಟೈನ್‍ಮೆಂಟ್ ಪ್ರದೇಶವಾಗಿದ್ದು, ಸಿಬ್ಬಂದಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಠಾಣೆಯನ್ನ ಶಿಫ್ಟ್ ಮಾಡಲಾಗಿದೆ. ಮುಲ್ಲಾ …

Read More »

ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. …

Read More »

ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ …

Read More »

ಹುಬ್ಬಳ್ಳಿ:ಸಂಚಾರಿ ಫೀವರ್ ಕ್ಲೀನಿಕ್ ಕಾರ್ಯಾರಂಭ- ಕ್ವಾರಂಟೈನ್ ಪ್ರದೇಶಗಳಲ್ಲಿ ತಪಾಸಣೆ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸಲಾಗಿದೆ. ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರೂ ಆಗಿರುವ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು. ನಗರದ ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ …

Read More »

ಧಾರವಾಡ:ಮನೆ ಮೇಲಿಂದ ಬಿದ್ದು ವೃದ್ಧೆ ಸಾವು..

ಧಾರವಾಡ: ಶುಕ್ರವಾರ ರಾತ್ರಿ ಸುರಿದ ಮಳೆ-ಗಾಳೆಯಿಂದ ಮನೆ ಮೇಲೆ ಬಿದ್ದಿದ್ದ ತೆಂಗಿನ ಮರದ ಗರಿ ತೆಗೆಯಲು ಹೋದ ವೃದ್ಧೆಯೊಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.   ಸಪ್ತಾಪುರ 8ನೇ ಕ್ರಾಸ್‍ನಲ್ಲೇ ಈ ಘಟನೆ ನಡೆದಿದ್ದು, 65 ವರ್ಷದ ಸರೊಜಾ ಸಾಟೆ ಎಂಬವರೇ ಮೃತಪಟ್ಟವರು. ನಿನ್ನೆ ರಾತ್ರಿ ನಗರಾದ್ಯಂತ ಭಾರೀ ಗಾಳಿ ಬೀಸಿತ್ತು. ಇದರಿಂದ ಮನೆ ಇವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಾಗ ಪಕ್ಕದ ಮನೆಯ ಕಾಂಪೌಂಡ್ …

Read More »

ಧಾರವಾಡ:ಕೆನರಾ ಬ್ಯಾಂಕ್‍ನ ಎಲ್ಲ ಸಿಬ್ಬಂದಿ ಹೋಮ್ ಕ್ವಾರಂಟೈನ್

ಧಾರವಾಡ: ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕಿ(ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಎಲ್ಲ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ. ಕೊರೊನಾ ಪಾಸಿಟಿವ್ ಬಂದಿರುವ ಧಾರವಾಡ ಜಿಲ್ಲೆಯ ರೋಗಿ ನಂ.194 ಮಾ.19ರಂದು ಪ್ರಯಾಣಿಸಿದ ಮುಂಬೈ- ಹುಬ್ಬಳ್ಳಿ ವಿಆರ್‍ಎಲ್ ಬಸ್ ಮೂಲಕವೇ ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ (ಹಿಂದಿನ ಸಿಂಡಿಕೇಟ್ ಬ್ಯಾಂಕ್)ನ ಸಿಬ್ಬಂದಿಯೊಬ್ಬರ ಪುತ್ರನೂ ಆಗಮಿಸಿದ್ದರು. ಇವರು ರೋಗಿ ನಂ.194 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ಪರಿಗಣಿಸಿ ಸರ್ಕಾರಿ ಕ್ವಾರಂಟೈನ್ …

Read More »

ಬಾರ್ ಒಪನ್- ಓಡೋಡಿ ಬಂದ ಗ್ರಾಹಕರಿಗೆ ನಿರಾಶೆ

ಧಾರವಾಡ: ಬಾರ್ ಬಾಗಿಲು ಒಪನ್ ಆಗಿದ್ದನ್ನು ನೋಡಿ ಜನರು ಓಡೋಡಿ ಬಂದಿದ್ದು, ಕೊನೆಗೆ ನಿರಾಶೆಯಿಂದ ಸಪ್ಪೆ ಮೋರೆ ಹೊತ್ತು ವಾಪಸ್ ನಡೆದಿದ್ದಾರೆ. ನಗರದ ಟೋಲ್‍ಗೇಟ್ ಬಳಿಯ ದುರ್ಗಾ ವೈನ್ಸ್‍ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಬಾರ್ ಬಾಗಿಲು ಓಪನ್ ಆಗುತ್ತಿದ್ದಂತೆ ಒಡೋಡಿ ಬಂದ ಜನರು, ಬಾರ್ ಶುರುವಾಯ್ತಾ ಎಂದು ಕೇಳಿದ್ದಾರೆ. ಆದರೆ ಅಧಿಕಾರಿಗಳು ಆಗಮಿಸಿದ್ದಕ್ಕೆ ಕಾರಣವೇ ಬೇರೆ ಇತ್ತು. ಬಂದ ಜನರಿಗೆಲ್ಲ ಬಾರ್ ಒಪನ್ ಆಗಿಲ್ಲ ಎಂದು ಹೇಳುವಷ್ಟರಲ್ಲಿ ಅಬಕಾರಿ …

Read More »

ಹುಬ್ಬಳ್ಳಿ:ನೈರುತ್ಯ ರೈಲ್ವೆಯಲ್ಲಿ 80,000 ಬೆಡ್‍ಗಳ 312 ಐಸೋಲೇಷನ್ ಬೋಗಿಗಳ ನಿರ್ಮಾಣ

ಹುಬ್ಬಳ್ಳಿ , ಏ.11- ರೈಲ್ವೆ ಇಲಾಖೆಯ 10 ದಿನದಲ್ಲಿ 80,000 ಬೆಡ್‍ಗಳ ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವತಿಯಿಂದ 312 ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಹುಬ್ಬಳ್ಳಿಯ ರೈಲ್ವೆ ವರ್ಕಶಾಪ್‍ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ 20,000 …

Read More »

ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

ಧಾರವಾಡ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಯೋಜನೆ ಅಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏಪ್ರಿಲ್ 30ರವರೆಗೆ ರೈತರಿಂದ ನೋಂದಾಯಿಸಿ ಕೊಂಡು, ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕಡಲೆ ಖರೀದಿ ಕುರಿತು ರೈತ ಮುಖಂಡರು ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಈ ವೇಳೆ …

Read More »