ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ (Prisoners) ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಕೈದಿಗಳಿಗೆ ವಾರ್ಡರ್‌ಗಳೇ ನಿಷೇಧಿತ ತಂಬಾಕು ಉತ್ಪನ್ನಗಳನ್ನ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಜೈಲಿನಲ್ಲಿ ನಿಷೇಧಿತ ಉತ್ಪನ್ನಗಳ ಪೂರೈಕೆ ಹಿಂದೆ ಬೇರೆ ಯಾರೂ ಇಲ್ಲ, ಇದೇ ಕಾರಾಗೃಹದ ವಾರ್ಡರ್‌ಗಳೇ ಇದ್ದಾರೆ ಎಂಬುದು ಕುತೂಹಲಕಾರಿ …
Read More »ಯಲ್ಲಾಪುರ ಭೀಕರ ರಸ್ತೆ ಅಪಘಾತ: ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಸಿದ್ದಿ ಪ್ರತಿಭೆ ಬಾವತೀಸ್ ದುರ್ಮರಣ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ-63ರ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಮಂಗಳವಾರ (ಮಾ. 24) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಖಾಸಗಿ ವಾಹಿನಿಯ ‘ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್-3’ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿ ಬಾವತೀಸ್ ರೇಮೆತ್ ಘಾಡಿ ದುರ್ಮರಣವನ್ನಪ್ಪಿದ್ದಾರೆ. ರಿಯಾಲಿಟಿ ಶೋ ಖ್ಯಾತಿ ಹಾಗೂ ಬೆಂಬಿಡದ ದುರಂತ: ಮೂಲತಃ ಸಿದ್ದಿ ಜನಾಂಗದ ಪ್ರತಿಭೆಯಾಗಿದ್ದ ಬಾವತೀಸ್, ತಮ್ಮ ಮುಗ್ಧತೆ ಹಾಗೂ ವಿಭಿನ್ನ …
Read More »ಹುಬ್ಬಳ್ಳಿಯಲ್ಲಿ 3 ಯುದ್ಧ ವಿಮಾನಗಳ ಹಾರಾಟ – ಆತಂಕಕ್ಕೊಳಗಾದ ಜನ
ಹುಬ್ಬಳ್ಳಿ: ನಗರದಲ್ಲಿ ಮೂರು ಯುದ್ಧ ವಿಮಾನಗಳು ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವ ಹೊತ್ತಲ್ಲೇ ವಿಮಾನಗಳು ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು ಜನರ ಭಯಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಕೇಶ್ವಾಪುರ, ಬೆಂಡಿಗೇರಿ, ದೇಶಪಾಂಡೆ ನಗರ, ರಾಮನಗರ, ವಿಜಯನಗರದಲ್ಲಿ ಏಕಾಏಕಿ ಫೈಟರ್ ಜೆಟ್‍ಗಳು ಕಾಣಿಸಿಕೊಂಡಿವೆ. ಅತಿ ಕೆಳಮಟ್ಟದ ಅಂತರದಲ್ಲಿ ಕರ್ಕಶ ಸದ್ದು ಮಾಡಿ ಹಾರಾಟ ನಡೆಸಿವೆ. ಇದರಿಂದ ಜನ ಗಾಬರಿಗೊಂಡಿದ್ದರು. ಈ ಬಗ್ಗೆ `ಪಬ್ಲಿಕ್ ಟಿವಿ’ಗೆ ಹುಬ್ಬಳ್ಳಿ ವಿಮಾನ …
Read More »ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ – ಮಾಜಿ ಶಾಸಕರ ಪುತ್ರ ರಾಜು ಬೋಳಶಟ್ಟಿಯ ಕೊಲೆ ಶಂಕೆ
ಧಾರವಾಡ: ಇಲ್ಲಿನ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರನ್ನ ಕೊಲೆ ಮಾಡಿ ಮೃತದೇಹ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಕಾರು ರಾಮಾಪುರದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣ …
Read More »ಆಲಿಕಲ್ಲು ಮಳೆ: ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಸೂಚನೆ
ಧಾರವಾಡ: ‘ಆಲಿಕಲ್ಲು ಮಳೆಯಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲ್ಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ವರದಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಎಲ್ಲ ತಾಲ್ಲೂಕುಮಟ್ಟದ ಅಧಿಕಾರಿಗಳ ಜೊತೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು. …
Read More »ಹುಬ್ಬಳ್ಳಿ-ಧಾರವಾಡ ಪಾಲಿಕೆ ಬಜೆಟ್ ಮಂಡನೆ: ₹16,03,26 ಕೋಟಿ ಘೋಷಣೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಅನ್ನು ಇಂದು ಮೇಯರ್ ಜ್ಯೋತಿ ಪಾಟೀಲ್ ಮಂಡಿಸಿದ್ದು, ಒಟ್ಟು ₹16,03,26 ಕೋಟಿ ಮೊತ್ತದ ಬಜೆಟ್ ಘೋಷಿಸಲಾಗಿದೆ. ಈ ಬಜೆಟ್ ಅವಳಿ ನಗರದ ಜನತೆಗೆ ಯಾವುದೇ ಹೆಚ್ಚುವರಿ ಹೊರೆಯಾಗದಂತೆ ರೂಪಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಯೋತಿ ಪಾಟೀಲ್, ಈ ಬಾರಿ ದೊಡ್ಡ ಗಾತ್ರದ ಹಾಗೂ ಅಭಿವೃದ್ಧಿ ಕೇಂದ್ರೀಕೃತ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದರು. ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ …
Read More »ಧಾರವಾಡದಲ್ಲಿ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್‌ಗೆ ಲೋಕಾ ಶಾಕ್…ಲಂಚ ಪಡೆಯುತ್ತಿದ್ದಾಗಲೇ ಲೋಕಾ ಬಲೆಗೆ ಬಿದ್ದ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್.
ರೊಟ್ಟಿ ಮಷಿನ್ ಪರವಾನಿಗೆ ಕೇಳಲು ಬಂದ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಲಯ ಕಚೇರಿ 1ರ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದ ಹೆಲ್ತ ಇನ್ಸ್ಪೆಕ್ಟರ್ ಹೀನಾ ಕೌಸರ್ ಅಧಿಕಾರಿಯಾಗಿದ್ದಾರೆ. ಧಾರವಾಡದ ಮಳೆಪ್ಪ ಎಂಬುವವರು ರೊಟ್ಟಿ ಮಷಿನ್‌ಗೆ ಪರವಾನಿಗಿ ನೀಡಲು ಅರ್ಜಿ ಸಲ್ಲಿಸಿದ್ದರು. ಪರವಾನಿಗಿ ನೀಡಲು ಕೌಸರ್ 4ವರೇ ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೌಸರ್ ಹೇಳಿದ …
Read More »ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ – ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು
ನವದೆಹಲಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಶಾಸಕರಿಗೆ ಸುಪ್ರೀಂ ಕೋರ್ಟ್‌ನ ನ್ಯಾ. ಸಂಜಯ್ ಕರೋಲ್ ನೇತೃತ್ವದ ದ್ವಿಸದಸ್ಯ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದಾರ್ಥ್ ಲೂಥ್ರಾ, ಸಾಕ್ಷ್ಯಗಳ ವಿಚಾರಣೆ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಸಾಕ್ಷ್ಯ ನಾಶವಾಗಲಿ …
Read More »ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ
ಧಾರವಾಡ: ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಇಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದರು. ಉದ್ಯೋಗ ಬೇಕು ಎಂದು ಭಿತ್ತಿಪತ್ರ ಹಿಡಿದು ಸಾವಿರಾರು ಯವಕರು ಆಗಮಿಸಿದರು. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ತಳ್ಳಾಟ-ನೂಕಾಟ ನಡೆಯಿತು. ಪ್ರತಿಭಟನೆಗೆ ಅನುಮತಿ ನಿಡಲು ಪೊಲೀಸ್ (Police) ಇಲಾಖೆಯಿಂದ …
Read More »ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್-ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ವಾಗ್ವಾದ
ಧಾರವಾಡ : ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಇಂದು(ಸೋಮವಾರ) ನಡೆದಿದ್ದು, ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ವೇಳೆ ಸಚಿವ ಸಂತೋಷ್ ಲಾಡ್ ಹಾಗೂ ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ತುಸು ಹೊತ್ತು ಏರು ದ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ನಡೆಯಿತು. ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎಸ್‌ಸಿ, …
Read More »
Laxmi News 24×7