Breaking News

ಅಪರಾಧ

ಗೋಗಳ್ಳರ ಭಾರಿ ಹೈಡ್ರಾಮಾ; ಸಾರ್ವಜನಿಕರು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರಣಿ ಎಸ್ಕೇಪ್

ಭಟ್ಕಳ: ತಾಲೂಕಿನ ತಲಗೇರಿಯ ವಿವೇಕಾನಂದ ನಗರದಲ್ಲಿ ಶನಿವಾರ ತಡರಾತ್ರಿ ಗೋಗಳ್ಳರ ಭಾರಿ ಹೈಡ್ರಾಮಾವೇ ನಡೆದಿದೆ. ಹಸು ಕದಿಯಲು ಬಂದಿದ್ದ ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಸುಮಾರು 3:45 ರ ಹೊತ್ತಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ವಿವೇಕಾನಂದ ನಗರದ ಗ್ರಾಮಸ್ಥರು ಅವರನ್ನು ಸುತ್ತುವರೆದಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳು …

Read More »

RCB vs CSK ಐಪಿಎಲ್ ಟಿಕೆಟ್ ನೀಡುವುದಾಗಿ ವಂಚನೆ – 1.46 ಲಕ್ಷ ಕಳೆದುಕೊಂಡ ಟೆಕ್ಕಿ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಸಿಎಸ್‌ಕೆ  ಪಂದ್ಯದ ಐಪಿಎಲ್ ಟಿಕೆಟ್  ಪಡೆಯಲು ಹೋಗಿ ವಂಚನೆಗೊಳಗಾಗಿ ಟೆಕ್ಕಿಯೊಬ್ಬರು  1.46 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ. ಟೆಕ್ಕಿ ಐಪಿಎಲ್ ಟಿಕೆಟ್‌ಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿದ್ದ ಒಂದು ಪೋಸ್ಟ್ ಅನ್ನು ನೋಡಿದ್ದಾರೆ. ಆ ಪೋಸ್ಟ್ ನೋಡಿ ಆಮಿಷಕ್ಕೆ ಒಳಗಾದ ಅವರು, ಪೋಸ್ಟ್ ಹಾಕಿದ ವಂಚಕನನ್ನು ಸಂಪರ್ಕಿಸಿದ್ದಾರೆ. ವಂಚಕ ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್‌ಗಳು ಮತ್ತು ವಿಐಪಿ ಸೌಲಭ್ಯಗಳನ್ನು ಹೊಂದಿರುವ …

Read More »

ಕಾಂಕ್ರೀಟ್ ಪಂಪ್‌ನೊಳಗೆ ಮದ್ಯ ಸಾಗಿಸುತ್ತಿದ್ದ ಗುಜರಾತ್ ಮೂಲದ ಚಾಲಕನ ಬಂಧನ

ಜೋಯಿಡಾ: ಗೋವಾ-ಕರ್ನಾಟಕ ಗಡಿಭಾಗದ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಮದ್ಯ ಸಾಗಾಟದ ಬೃಹತ್ ಜಾಲವೊಂದನ್ನು ಭೇದಿಸಿದ್ದಾರೆ. ಗುಜರಾತ್‌ನ ರಾಜ್‌ಕೋಟ್ ಮೂಲದ ಯೋಗೇಶಭಾಯ್ ಕಾಗ್ದಾದ್ ಎಂಬಾತನನ್ನು ಬಂಧಿಸಲಾಗಿದ್ದು, 167 ಲೀಟರ್ ಮದ್ಯ ಸೇರಿದಂತೆ ಒಟ್ಟು ₹45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಸಿಬ್ಬಂದಿ ವಾಡಿಕೆಯ ತಪಾಸಣೆ ನಡೆಸುತ್ತಿದ್ದ ವೇಳೆ, ಗುಜರಾತ್ ನೋಂದಣಿಯ ಅಶೋಕ್ ಲೇಲ್ಯಾಂಡ್ ಲಾರಿಯೊಂದು ಅನುಮಾನಾಸ್ಪದವಾಗಿ ಬಂದಿದೆ. ವಾಹನವನ್ನು ತಡೆದು ಸಮಗ್ರವಾಗಿ …

Read More »

ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ 16 ಜನರು

ಬೆಳಗಾವಿ: ಹಳೆ ದ್ವೇಶದ ಹಿನ್ನೆಲೆಯಲ್ಲಿ ಕಳೆದ ರಾತ್ರಿ 16 ಜನರು ಕುಡಿಕೊಂಡು ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿಮ ಹಣ್ಣಿಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..ಸಂಗನಗೌಡ ಬಸನಗೌಡ ಪಾಟೀಲ್ (50) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಗಳ ನಡುವೆ ಕಳೆದ ಕೆಲ ವರ್ಷಗಳಿಂದ ಕಲಹ ನಡೆಯುತ್ತಿತ್ತು. ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ವ್ಯಕ್ತಿಯೋರ್ವ ಮದ್ಯಪಾನ ಮಾಡಿ ಡ್ಯಾನ್ಸ್ ಮಾಡುವ ವೇಳೆ …

Read More »

22 ಕೇಸ್‌ನ 36 ಜನ ಅರೆಸ್ಟ್ – 1.27 ಕೋಟಿ ಮೌಲ್ಯದ ಚಿನ್ನಾಭರಣ, 2 ಕಾರು, 17 ಬೈಕ್ ಜಪ್ತಿ

ವಿಜಯಪುರ: ಚಿನ್ನಾಭರಣ, ಬೆಳ್ಳಿ, 2 ಕಾರು, 17 ಬೈಕ್ ಜಪ್ತಿ ಸೇರಿದಂತೆ 1.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, 22 ಕೇಸ್‌ನ 36 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ, ದರೋಡೆ ಪ್ರಕರಣಗಳನ್ನ ಬೇಧಿಸಿದ್ದಾರೆ. ಅಂತರ್ ಜಿಲ್ಲಾ, ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದು, ಮನೆ ದರೋಡೆ, ಬೈಕ್ ಕಳ್ಳತನ ಮಾಡ್ತಿದ್ದ …

Read More »

ಹನಿಟ್ರ್ಯಾಪ್  ನಡೆಸುತ್ತಿದ್ದ ಫ್ಯಾಶನ್ ಡಿಸೈನರ್ ಬೆಳಗಾವಿ ಪೊಲೀಸರ ಬಲೆಗೆ

ಬೆಳಗಾವಿ : ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್  ನಡೆಸುತ್ತಿದ್ದ ಫ್ಯಾಶನ್ ಡಿಸೈನರ್ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಶಿವಾನಂದನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾಗಿದ್ದು ಶ್ರೀಮಂತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ದೀಪಾಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಬೆಳೆಸಿ …

Read More »

ಅನ್ಯಧರ್ಮದವನೊಂದಿಗೆ ಮೊಮ್ಮಗಳು ವಿವಾಹ: ಇದೇ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ

ಚಿಕ್ಕಬಳ್ಳಾಪುರ: ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ ಅಜ್ಜಿಯನ್ನು  ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕತ್ತು ಹಿಸುಕಿ ಮರಿ ಮೊಮ್ಮಗನನ್ನೇ ಮೆಹಬೂಬಿ ಹತ್ಯೆಗೈದಿದ್ದರು. ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್​ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ. ಎಫ್​​ಎಸ್​ಎಲ್​ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇವಲ 40 ದಿನದ ಗಂಡು ಮಗು, ಮರಿ ಮೊಮ್ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ …

Read More »

ಪರಿಚಯದವರಂತೆ ನಂಬಿಸಿ 2.29 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಅಯೋಧ್ಯೆಗೆ ಹೋಗಿದ್ದ ವೇಳೆ ನಗ-ನಗದು, ಕಾರು ಕಳವಾಗಿದೆ. ನಾನು ನಿಮಗೆ ದೂರದ ಸಂಬಂಧಿಯಾಗಬೇಕೆಂದು ಧಾರವಾಡದ ಗುತ್ತಿಗೆದಾರರನ್ನು ನಂಬಿಸಿದ ವಂಚಕ ರಮೇಶಕುಮಾರ, ವಾಪಸ್ ಕೊಡುವುದಾಗಿ 80 ಸಾವಿರ ರೂ. ಕೇಳಿದ್ದಾರೆ. ಈ ಮಾತು ನಂಬಿದ ಗುತ್ತಿಗೆದಾರ ನಿಂಗರಡ್ಡಿ ಟಿ., ರಮೇಶಕುಮಾರ ಖಾತೆಗೆ 2.29 ಲಕ್ಷ ರೂ. ವರ್ಗಾಯಿಸಿ ವಂಚನೆಗೆ  ಒಳಗಾಗಿದ್ದಾರೆ. ಕೆಇಬಿ ಇಂಜಿನಿಯರ್ ಎಂದು ಪರಿಚಯಿಸಿಕೊಂಡ ರಮೇಶಕುಮಾರ, ಅಯೋಧ್ಯೆಗೆ ಹೋಗಿದ್ದ ವೇಳೆ ಹಣ, ಕಾರು, ಬಂಗಾರ ಕಳವಾಗಿದೆ. ಕುಟುಂಬ ಸಮೇತ ಬೆಂಗಳೂರಿಗೆ …

Read More »

ಬಳ್ಳಾರಿ | ವಿದ್ಯಾರ್ಥಿ ಹತ್ಯೆ ಕೇಸ್‌ – 30 ಗಂಟೆ ಕಳೆದ್ರೂ ಪತ್ತೆಯಾಗದ ಆರೋಪಿ ಬಾಲಕ

ಬಳ್ಳಾರಿ: ವಿದ್ಯಾರ್ಥಿಯೊಬ್ಬನನ್ನು ಕೊಲೆಗೈದು, 7 ಮಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಬಳ್ಳಾರಿಯ  ಖಾಸಗಿ ಶಾಲೆಯ  ಹಾಸ್ಟೆಲ್‌ ಬಾಲಕ, ಪ್ರಕರಣ ನಡೆದು 30 ಗಂಟೆ ಕಳೆದ್ರೂ ಪತ್ತೆಯಾಗಿಲ್ಲ. ಕೃತ್ಯ ನಡೆಸಿ ಅರ್ಧ ಗಂಟೆಯಲ್ಲೇ ಶಾಲಾ ಹಾಸ್ಟೆಲ್‌ನಿಂದ ಬಾಲಕ ನಾಪತ್ತೆಯಾಗಿದ್ದಾನೆ. ಶಾಲಾ ಕಾಂಪೌಂಡ್ ದಾಟಿದ ಬಳಿಕ ಬಾಲಕ ಎಲ್ಲಿಗೆ ಹೋದ ಎಂಬ ಸುಳಿವೇ ಸಿಗುತ್ತಿಲ್ಲ. ಆತನಿಗಾಗಿ ಬಳ್ಳಾರಿ ಎಸ್‌ಪಿ ಡಾ.ಸುಮನ್ ಫನ್ನೇಕರ್ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ ಆರೋಪಿ ಬಾಲಕನ ಸುಳಿವು …

Read More »

ಪ್ರೇಮ ಪ್ರಕರಣ ರಾಜಿ ಪಂಚಾಯ್ತಿ ವೇಳೆ ಮಲ್ಪೆ ಮೀನುಗಾರರ ಮುಖಂಡನಿಗೆ ಚಾಕು ಇರಿತ

ಉಡುಪಿ: ಪ್ರೇಮ  ಪ್ರಕರಣ ರಾಜಿ ಪಂಚಾಯ್ತಿ ವೇಳೆ ಸ್ಥಳೀಯ ಮೀನುಗಾರರ ಮುಖಂಡನಿಗೆ  ಚಾಕು ಇರಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆ  ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರಿಂದ ಮೀನುಗಾರ ಮುಖಂಡನಿಗೆ ಚಾಕು ಇರಿಯಲಾಗಿದೆ. ಸದ್ಯ ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, …

Read More »