ವಾಷ್ಟಿಂಗ್ಟನ್/ರೋಮ್/ಪ್ಯಾರಿಸ್, ಮೇ 11-ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನು ವ್ಯಾಪಿಸಿದ್ದು, ವಿಷವರ್ತುಲ ಆವರಿಸಿ ಭಯ-ಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಈವರೆಗೆ 2,82,894 ಸಾವು ಮತ್ತು 41.52 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ ಸುಮಾರು 14 ಲಕ್ಷ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ …
Read More »ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ….
ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಪಡೆದುಕೊಂಡಿತ್ತು. ಐಸಿಸಿಯ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನ ಪಡೆದಿತ್ತು. ಪರಿಣಾಮ 2016 ಅಕ್ಟೋಬರ್ ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ‍್ಯಾಂಕಿಂಗ್ ಕಳೆದುಕೊಂಡಿತ್ತು. ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು. ಈ ಕುರಿತಂತೆ ಟೀಂ …
Read More »ವುಹಾನ್ ನಗರದಲ್ಲಿ ಮತ್ತೆ ಸೋಂಕು, ಕ್ಲಸ್ಟರ್ ರಚನೆ – ಶಾಂಘೈ ಡಿಸ್ನಿ ಲ್ಯಾಂಡ್ ಓಪನ್
ಬೀಜಿಂಗ್: ಕೋವಿಡ್ 19 ಮೂಲ ನೆಲೆ ವುಹಾನ್ ನಗರದಲ್ಲಿ ಮತ್ತೆ ಐದು ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಒಂದೇ ಕಾಂಪೌಂಡಿನ 5 ಮಂದಿಯಲ್ಲಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಆ ಜಾಗವನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಲಾಕೌಡೌನ್ ತೆರೆಯಲಾಗಿತ್ತು. ಈಗ ಮತ್ತೆ 5 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಸ್ಟರ್ ರಚಿಸಲಾಗಿದೆ. ಈ ಹಿಂದೆ ಏಪ್ರಿಲ್ 3 ರಂದು ವುಹಾನ್ ನಗರದಲ್ಲಿ ಕೊನೆಯದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದಾದ ಬಳಿಕ …
Read More »1,000 ಕಿ.ಮೀ ಸೈಕಲ್ ಪ್ರಯಾಣ- ತಿಂಡಿ ತಿನ್ನಲು ಕುಳಿತಾಗ ಕಾರು ಡಿಕ್ಕಿಯಾಗಿ ಸಾವು
ಲಕ್ನೋ: ಕೊರೊನಾ ಲಾಕ್‍ಡೌನ್ ಪರಿಣಾಮ ಸಾವಿರಾರು ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದೇ ರೀತಿ ಕಾರ್ಮಿಕನೊಬ್ಬ ಸೈಕಲ್ ಮೂಲಕ ತನ್ನೂರಿಕೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಸಘೀರ್ ಅನ್ಸಾರಿ (26). ದೆಹಲಿಯಿಂದ ಬಿಹಾರದ ತನ್ನ ಚಂಪಾರನ್ ಗ್ರಾಮಕ್ಕೆ ಅನ್ಸಾರಿ ಹೋಗುತ್ತಿದ್ದರು. ಆದರೆ ಲಕ್ನೋದಲ್ಲಿ ತಿಂಡಿ ಮಾಡುತ್ತಿದ್ದಾಗ ಕಾರು ಬಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅನ್ಸಾರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಏನಿದು ಪ್ರಕರಣ? ಕೊರೊನಾ …
Read More »ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಇಂದು ತಾಯ್ನಾಡಿಗೆ 326 ಕನ್ನಡಿಗರು ಬಂದಿಳಿದಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಭಾರತ ನಲುಗಿ ಹೋಗಿದೆ. ಹೀಗಾಗಿ ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ವಾಪಸ್ಸಾಗುತ್ತಿದ್ದಾರೆ. ಇಂದು ತಾಯ್ನಾಡಿಗೆ 326 ಕನ್ನಡಿಗರು ಬಂದಿಳಿದಿದ್ದಾರೆ. ಬೆಂಗಳೂರಿಗೆ 323 ಜನ ಕನ್ನಡಿಗರು ಬಂದಿಳಿದಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಸುಕಿನ ಜಾವ 4.47ಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ಮೊದಲಿಗೆ ವಿಮಾನ ಲಂಡನ್‍ನಿಂದ ದೆಹಲಿಗೆ ಬಂದಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ …
Read More »ಬೆಚ್ಚಿಬೀಳುವಂತಿದೆ ಕೊರೋನಾ ಕುರಿತ ವಿಶ್ವ ಸಂಸ್ಥೆ ನೀಡಿದ ಈ ವರದಿ..!
ವಿಶ್ವಸಂಸ್ಥೆ, ಮೇ 7-ಡೆಡ್ಲಿ ಕೊರೊನಾ ವೈರಸ್ ಹಾವಳಿ ಕುರಿತು ವಿಶ್ವ ಸಂಸ್ಥೆ ನೀಡಿರುವ ಹೊಸ ಅಂಕಿಅಂಶವೊಂದು ಬೆಚ್ಚಿಬೀಳಿಸುವಂತಿದೆ. ಏಪ್ರಿಲ್ ತಿಂಗಳಲ್ಲಿ ಪ್ರತಿದಿನ ವಿಶ್ವದಲ್ಲಿ ಸರಾಸರಿ 80,000 ಮಂದಿಗೆ ಕೋವಿಡ್-19 ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಚ್‍ಒ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸೂಸ್, ಭಾರತ, ಇಂಡೋನೆಷ್ಯಾ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ದೇಶಗಳಲ್ಲಿ ಸೋಂಕು ಪ್ರಮಾಣದಲ್ಲಿ ಹೆಚ್ಚಳ …
Read More »72 ಸಾವಿರ ಜನ ಸತ್ತರೂ ಮಾಸ್ಕ್ ಧರಿಸಲೊಪ್ಪದ ಜಗಮೊಂಡ ಟ್ರಂಪ್..!
ಫಿನಿಕ್ಸ್ (ಆರಿಜೋನಾ), ಮೇ 6- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಮಾರಿ ಸ್ವಭಾವದವರು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅಮೆರಿಕವನ್ನು ಕೊರೊನಾ ವೈರಸ್ ಅಲ್ಲೋಲ-ಕಲ್ಲೋಲ ಮಾಡಿ 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ, ಅಧ್ಯಕ್ಷರಿಗೆ ಸೋಂಕಿನ ಲವಲೇಶ ಭಯವೂ ಇಲ್ಲ. ಇದೇ ಕಾರಣಕ್ಕಾಗಿ ಅವರು ಕಳೆದ ಐದು ತಿಂಗಳಿನಿಂದ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಅಮೆರಿಕ ಅಧ್ಯಕ್ಷರು ಖುದ್ದು ಎರಡು ಬಾರಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ. ಫಲಿತಾಂಶ ನೆಗಿಟಿವ್. ಆದರೂ ಇವರು …
Read More »ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್
ಟೆಲ್ ಅವೀವ್: ಕೋವಿಡ್-19 ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ. ಹೌದು. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೇಗೆ ಕೆಲಸ ಮಾಡುತ್ತೆ? ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ …
Read More »ಕಿಲ್ಲರ್ ಕೊರೊನಾಗೆ ವರ್ಷಾಂತ್ಯದಲ್ಲಿ ಲಸಿಕೆ ಸಿದ್ದವಾಗಲಿದೆ : ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್, ಮೇ 4-ಡೆಡ್ಲಿ ಕೊರೊನಾ ವೈರಸ್ ಹೆಮ್ಮಾರಿ ನಿಗ್ರಹಕ್ಕಾಗಿ ಈ ವರ್ಷಾಂತ್ಯದಲ್ಲಿ ನಮ್ಮಲ್ಲೇ ಅತ್ಯಂತ ಪರಿಣಾಮಕಾರಿ ಲಸಿಕೆ ಸಿದ್ದವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೋವಿಡ್-19 ವಿರುದ್ಧ ಔಷಧಿ ತಯಾರಿಸಲು ನಮ್ಮ ವೈದ್ಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಈ ವರ್ಷಾಂತ್ಯದೊಳಗೆ ಆ ಲಸಿಕೆ ನಮ್ಮ ಕೈ ಸೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಫಾಕ್ಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಔಷಧಿ …
Read More »ಕೊರೋನಾ ಜೊತೆ ಹೋರಾಡಿ ಸಾವು ಗೆದ್ದ ಬಂದ ಕ್ಷಣ ನೆನೆದು ಕಣ್ಣೀರಿಟ್ಟ ಬ್ರಿಟನ್ ಪ್ರಧಾನಿ..!
ಲಂಡನ್,ಮೇ4- ಕಾಯಿಲೆಯನ್ನು ಎದುರಿಸಿದ ಸನ್ನಿವೇಶ ಕಠಿಣ ಕ್ಷಣಗಳಾಗಿದ್ದವು.. ತಮಗೆ ಬರಬಹುದಾದ ಸಾವಿನ ಸಂಗತಿಯನ್ನು ಘೋಷಿಸಲು ವೈದ್ಯರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಎಂದು ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೊಂಡಿದ್ದಾರೆ. ಅಲ್ಲಿನ ಸ್ಥಳೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಅದು ಕಠಿಣ ಕ್ಷಣಗಳಾಗಿದ್ದವು. ಪರಿಸ್ಥಿತಿ ಕೈ ಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಾನು ಉತ್ತಮ ಸ್ಥಿತಿಯಲ್ಲಿರಲಿಲ್ಲ. …
Read More »
Laxmi News 24×7