ಬೀಜಿಂಗ್: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್‌ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. ಚೀನಾದ ದೈತ್ಯ ಇಂಟರ್‌ನೆಟ್ ಕಂಪನಿ ಟೆನ್ಸೆಂಟ್ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್ ಕರಗಿ ಹೋಗಿದೆ. ಪಬ್‌ಜಿ ಆಟಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ …
Read More »118 ಆ್ಯಪ್ ನಿರ್ಬಂಧ : ಚೀನಾ ಗರಂ
ಬೀಜಿಂಗ್,ಸೆ.3-ಚೀನಾ ಮೂಲದ 118 ಆ್ಯಪ್‍ಗಳನ್ನು ಭಾರತ ನಿರ್ಬಂಧಿಸಿದ ಕ್ರಮವನ್ನು ನಾವು ಕಟುವಾಗಿ ವಿರೋಧಿಸುತ್ತೇವೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರ ಗೋವಾಫಿಂಗ್ ಹೇಳಿದ್ದಾರೆ. ಭಾರತದ ಕ್ರಮಗಳು ಚೀನಾದ ಹೂಡಿಕೆದಾರರು ಮತ್ತು ಸೇವಾ ವಿತರಕರ ಕುರಿತ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಭಾರತದ ಹಲವು ರಾಜ್ಯದಲ್ಲಿ ಆ್ಯಂಪ್‍ಗಳನ್ನು ಬಳಸಿ ಡೇಟಾಗಳನ್ನು ಶೇಖರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಉದ್ಯಮಿಗಳು ಹೂಡಿದ್ದ ಬಂಡವಾಳವನ್ನು ಹಿಂತೆಗೆದುಕೊಳ್ಳುವಂತೆ ಮತ್ತು ದೇಶದಿಂದ ಓಡಿಸುವಂತಹ ಕ್ರಮವನ್ನು ಮಾಡಲಾಗುತ್ತಿದೆ. …
Read More »ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ವಿರುದ್ಧ ದೂರು
ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮೇ 20ರಂದು ಮದುವೆ ಮಾತುಕತೆಗಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ. ಜೂನ್ 12 ರಂದು ಮಂಗಳೂರಿನ ವಸತಿಗೃಹಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿದ್ದಾರೆ. …
Read More »‘ಸೌರಶಕ್ತಿ’ ಬಳಸಿ 3 ಕೋಟಿ ಉಳಿಸಿದ ಭಾರತೀಯ ರೈಲ್ವೆ
ನವದೆಹಲಿ : ವೆಸ್ಟರ್ನ್ ರೈಲ್ವೆ (Western Railway) ತನ್ನ ನೆಟ್‌ವರ್ಕ್‌ನ 75 ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಅಳವಡಿಸುವ ಮೂಲಕ ಸುಮಾರು 3 ಕೋಟಿ ರೂ.ಗಳ ವಿದ್ಯುತ್ ಬಿಲ್ ಉಳಿತಾಯ ಮಾಡಿದೆ ಎಂದು ಹೇಳಿದೆ. ರೈಲ್ವೆ ಈಗ ಹೆಚ್ಚಿನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸುವ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ಸುಮಿತ್ ಠಾಕೂರ್ ಮಾತನಾಡಿ, ಮೇಲ್ಛಾವಣಿಯ ಸೌರ ಸ್ಥಾವರಗಳು 8.67 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ, ಇದರಿಂದಾಗಿ ಈ ವರ್ಷ ಗಮನಾರ್ಹ …
Read More »ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್: ಬೆಂಗಳೂರು ಬಿಟ್ಟು ಹೊರ ಹೋದ 10-15 ನಟ ನಟಿಯರು!
ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಜೋರಾಗಿರುವ ಬೆನ್ನಲ್ಲೇ 10-15 ನಟ ನಟಿಯರು ಬೆಂಗಳೂರು ಬಿಟ್ಟು ಹೊರ ಹೋಗಿದ್ದಾರೆ! ಅದರಲ್ಲೂ ರಾಗಿಣಿ ದ್ವಿವೇದಿಗೆ ನಿನ್ನೆ ಸಿಸಿಬಿ ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ನಟ ನಟಿಯರು ಆತಂಕಕ್ಕೀಡಾಗಿದ್ದಾರೆ. ರಾಗಿಣಿಗೆ ಸಿಸಿಬಿ ನೋಟಿಸ್ ವಿಚಾರ ಹಲವು ನಟ ನಟಿಯರಿಗೆ ನಡುಕ ರಾಗಿಣಿ ಬಳಿಕ ತಮ್ಮ ಹೆಸರೂ ಹೊರಬರುವ ಆತಂಕ ಇವರನ್ನು ಕಾಡತೊಡಗಿದೆ. ತಮಗೂ ನೋಟಿಸ್ ಬರಬಹುದೆಂಬ ಆತಂಕದಲ್ಲಿರುವ 10ಕ್ಕೂ ಹೆಚ್ಚು ಕಲಾವಿದರು ಈಗಾಗಲೇ …
Read More »ಕಾನೂನು ಶಾಲೆಯಲ್ಲಿ ಸ್ಥಳೀಯ ಪ್ರಾತಿನಿಧ್ಯ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಪ್ರಾತಿನಿಧ್ಯ ವಿಷಯದ ಕುರಿತು ಹೈಕೋರ್ಟ್ ತನ್ನ ಆದೇಶ ಕಾಯ್ದಿರಿಸಿದೆ. ಶೇ 25ರಷ್ಟು ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ‘ಈ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಇತರ ರಾಜ್ಯದ ವಿದ್ಯಾರ್ಥಿಗಳಲ್ಲಿ ಬಹುತೇಕರು ಕರ್ನಾಟಕದಲ್ಲಿ ವೃತ್ತಿ ಮುಂದುವರಿಸುವುದಿಲ್ಲ. ಕಾನೂನು ವಿಶ್ವವಿದ್ಯಾಲಯ ಕಾಯ್ದೆಯನ್ನು ರಾಜ್ಯದ ಶಾಸಕಾಂಗ ಅಂಗೀಕರಿಸಿದೆ. ಭೂಮಿ ಒದಗಿಸುವ ಜತೆಗೆ ಆರ್ಥಿಕವಾಗಿಯೂ ಸಂಸ್ಥೆಗೆ ಸಹಾಯ ಮಾಡಲಾಗುತ್ತಿದೆ’ ಎಂದು …
Read More »ಕೋವಿಡ್ ಗಿಂತ ಸೆಂಟರ್ ಅವ್ಯವಸ್ಥೆ ಭಯವೇ ಹೆಚ್ಚು : ಒಂದೇ ಕೊಠಡಿಯಲ್ಲಿ ಪುರುಷ, ಮಹಿಳೆಯರು
ಚಿಕ್ಕನಾಯಕನಹಳ್ಳಿ: ಕೋವಿಡ್ ವೈರಸ್ ಭಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕೋವಿಡ್ 19 ಕೇರ್‌ನಲ್ಲಿನ ಅವ್ಯವಸ್ಥೆಯ ಭಯ ಕೋವಿಡ್ ರೋಗಿಗಳಿಗೆ ನರಕಯಾ ತನೆ ನೀಡುತ್ತಿದೆ. ಕಣ್ಣು ಮುಚ್ಚದೆ ರಾತ್ರಿ ಕಳೆಯುವಂತಾಗಿದ್ದು, ಕೋವಿಡ್ ವೈರಸ್ ಜೊತೆ ಇತರ ಕಾಯಿಲೆ ಬಳುವಳಿಯಾಗಿ ಬರುವ ಲಕ್ಷಣವಿದೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿನ ಕೋವಿಡ್ 19 ಕೇರ್‌ನಲ್ಲಿ ಸೌಕರ್ಯವೇ ಸರಿಯಿಲ್ಲ, ವೈದ್ಯಾಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕ್ವಾರಂಟೈನ್‌ನಲ್ಲಿರುವ ಕೋವಿಡ್ ಪಾಸಿಟಿವ್ ರೋಗಿಗಳು ವಿಡಿಯೋ ಮಾಡಿ …
Read More »ಐಪಿಎಲ್ 2020: ಮುಂಬೈ ಇಂಡಿಯನ್ಸ್ ಟೀಂ ನಲ್ಲಿ ಲಸಿತ್ ಮಲಿಂಗ ಆಡುವುದಿಲ್ಲ, ಇವರ ರೀಪ್ಲೇಸ್ಮೆಂಟ್ ಯಾರು?
ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಲಸಿತ್ ಮಾಲಿಂಗ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2020 ರ ಸೀಸನ್ ನಿಂದ ಹೊರಬಂದಿದ್ದಾರೆ. ಐಪಿಎಲ್ ಪಂದ್ಯವನ್ನು ಇನ್ನೂ ಆಡದಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರ ಸ್ಥಾನಕ್ಕೆ ರೀಪ್ಲೇಸ್ಮೆಂಟ್ ಆಗಿದ್ದಾರೆ. ಮಲಿಂಗ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ತಿಳಿದುಬಂದಿದೆ. ಮಲಿಂಗ ತನ್ನ ತಂದೆಯೊಂದಿಗೆ ಶ್ರೀಲಂಕಾದ ಮನೆಯಲ್ಲಿ ಇರಬೇಕೆಂದು …
Read More »ಗದಗ ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ಗದಗ : ಮದ್ಯ ಪ್ರಿಯರೇ ಎಚ್ಚರ.. ಎಚ್ಚರ.. ಇನ್ಮುಂದೆ ಮದ್ಯ ಸೇವನೆ ಮಾಡಬೇಕಾದ್ರೆ, ಹತ್ತು ಸಾರಿ ವಿಚಾರ ಮಾಡಿ. ಇಲ್ಲವಾದ್ರೆ, ನೀವು ನಕಲಿ ಮದ್ಯ ಸೇವನೆ ಮಾಡಿ ಯಮರಾಯನ ಪಾದ ಸೇರೋದು ಗ್ಯಾರಂಟಿ. ಗದಗ ಜಿಲ್ಲೆಯಲ್ಲಿ ನಕಲಿ ಮದ್ಯವನ್ನು ರಾಜರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಸ್ವಲ್ಪವೂ ಅನುಮಾನ ಬಾರದ ಹಾಗೆ ಒರಿಜನಲ್ ಬಾಟಲ್ ಹಾಗೇ ಪ್ಯಾಕ್ ಮಾಡಿ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದು ನಕಲಿ ಮದ್ಯದ ಅಸಲಿ ಕಥೆ. ನಕಲಿ …
Read More »ಕೋಲಾರ: ಜಿಲ್ಲೆಯಲ್ಲಿ 79 ಮಂದಿಗೆ ಸೋಂಕು
ಕೋಲಾರ: ಜಿಲ್ಲೆಯಲ್ಲಿ ಹೊಸದಾಗಿ 79 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಬುಧವಾರ ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 763ಕ್ಕೆ ಏರಿಕೆಯಾಗಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರವಿರುವ 72 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 28 ಮಂದಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರಪೀಡಿತ 27 ಮಂದಿಗೆ ಹಾಗೂ ಆರೋಗ್ಯ …
Read More »
Laxmi News 24×7