ಹುಬ್ಬಳ್ಳಿ : ಇಲ್ಲಿನ ಪಾಲಿಕೆ ಕಚೇರಿಯ ಪಕ್ಕದ ಚಿಟಗುಪ್ಪಿ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹದಾಕಾರದ ಛತ್ರಪತಿ ಶಿವಾಜಿ ಮೂರ್ತಿ ತುಂಡಾಗಿ ಕಳಚಿ ಬಿದ್ದಿದೆ. ಕಳೆದ ಮೂರು ವರ್ಷಗಳ ಹಿಂದೆ ಛತ್ತೀಸಘಡದಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆ ವತಿಯಿಂದ ತಯಾರಿಸಿ ಇಲ್ಲಿಗೆ ತಂದು ಪ್ರತಿಷ್ಠಾಪಿಸಲಾಗಿತ್ತು. ಇದಕ್ಕಾಗಿ 17.5 ಲಕ್ಷ ರೂ ಖರ್ಚಾಗಿತ್ತು. ಕುದುರೆಯ ಮೂರು ಕಾಲುಗಳು ತುಂಡಾಗಿವೆ. ಶಿವಾಜಿ ಮೂರ್ತಿ ತಲೆ, ಖಡ್ಗ ಸೇರಿದಂತೆ ಸಂಪೂರ್ಣ ಜಖಂಗೊಂಡಿದೆ. ತುಂಡಾಗಿ ಬಿದ್ದಿರುವ ಮೂರ್ತಿಗೆ ಪಾಲಿಕೆ …
Read More »ತಾನೂ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ತಾವು ಟಿಕೆಟ್ ಆಕಾಂಕ್ಷಿ ಆಗಿದ್ದು, ತಮಗೆ ಟಿಕೆಟ್ ದೊರೆಯುವ ವಿಶ್ವಾಸವಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಷಯವಾಗಿ ಹಲವು ನಾಯಕರೊಂದಿಗೆ ಚರ್ಚಿಸಿದ್ದೇನೆ. ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ನನಗೀಗ 66 ವರ್ಷ, ಇದು ಕೊನೆಯ ಯತ್ನ. ದೊರೆತರೆ ಸರಿ ಇಲ್ಲವಾದರೆ ಇಲ್ಲ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ ಎಂದರು. …
Read More »ಶಾಸಕರ ಪುತ್ರನಿಗೆ ಯುವತಿ ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಸಿಡಿ ಪ್ರಕರಣ ಬಹಿರಂಗವಾಗಿದೆ. ಅಶ್ಲೀಲ ವಿಡಿಯೋ ಇಟ್ಟುಕೊಂಡು ಮಾಜಿ ಶಾಸಕರ ಪುತ್ರನಿಗೆ ಯುವತಿಯೊಬ್ಬಳು ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಧಾರವಾಡದ ಮಾಜಿ ಶಾಸಕರ ಪುತ್ರನಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ಬಳಿಕ ವಿಡಿಯೋ ಕಾಲ್ ಮಾಡಿ ಸಲುಗೆ ಬೆಳೆಸಿಕೊಂಡಿದ್ದಳು. ಹೀಗೆ ಮಾಡಿದ್ದ ವಿಡಿಯೋ ಕಾಲ್ ಗಳನ್ನೇ ಎಡಿಟ್ ಮಾಡಿ …
Read More »ಕಳೆದುಕೊಂಡ ಮೊಬೈಲ್ಗಳನ್ನ ಹಿಂದಿರುಗಿಸಿದ ಪೊಲೀಸರು
ಹುಬ್ಬಳ್ಳಿ:ಇತ್ತೀಚೆಗೆ ಮೊಬೈಲ್ ಕಳೆದು ಹೋಯಿತು ಎಂದರೆ ಅದನ್ನು ಮರೆತು ಬಿಡುವುದೇ ವಾಸಿ ಎನ್ನುವಂತಾಗಿದೆ. ಆದರೆ ಅವಳಿ ನಗರದ ಖಾಕಿ ಪಡೆ ಅದಕ್ಕೆ ಅಪವಾದ ಎಂಬಂತೆ ಕೆಲಸ ಮಾಡಿದೆ. ಸಾರ್ವಜನಿಕರಿಗೆ ಉತ್ತಮ ರಕ್ಷಣೆ ನೀಡಿ ಪೊಲೀಸ್ ಸೇವೆ ನೀಡುವ ಮೂಲಕ ಸಾಕಷ್ಟು ಜನಮನ್ನಣೆಗಳಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಈಗ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಾರ್ವಜನಿಕರು ಕಳೆದುಕೂಂಡ ಮೊಬೈಲ್ಗಳನ್ನು ಪತ್ತೆ ಮಾಡಲು ಕಾನೂನು ಮತ್ತು ಸುವ್ಯವಸ್ಥೆ …
Read More »ಮಧ್ಯರಾತ್ರಿ ಬಂದು, ಬೆಳಗ್ಗೆ ಎದ್ದು ಹೋಗಿದ್ದು ಗ್ರಾಮ ವಾಸ್ತವ್ಯವೇ? : ಗೃಹ ಸಚಿವ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ : ಇಲಾಖೆಯ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಂದಿರುವ ಕಂದಾಯ ಸಚಿವ ಅಶೋಕ್ ಮಾಡುತ್ತಿರುವ ಕೆಲಸವೇ ನಿಜವಾದ ಗ್ರಾಮ ವಾಸ್ತವ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ ಈ ಹಿಂದೆ ಕೆಲವು ಜನಪ್ರತಿನಿಧಿಗಳು ಮಧ್ಯರಾತ್ರಿ ಬಂದು ಬೆಳಗ್ಗೆ ಎದ್ದು ಹೋಗಿದ್ದು ಗ್ರಾಮ ವಾಸ್ತವ್ಯವೇ ? ಎಂದು ಪ್ರಶ್ನಿಸಿದ್ದಾರೆ. ಮೊದಲು ಜನರು ತಮಗೆ …
Read More »ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್
(ಹುಬ್ಬಳ್ಳಿ): ರಾಜ್ಯದಲ್ಲಿ ನಾವು ಕೋವಿಡ್ ನಡುವೆಯೂ ಬದುಕಬೇಕಿದೆ. ಹೀಗಾಗಿ ಸುರಕ್ಷತಾ ಅಂತರ ಕಾಪಾಡಿಕೊಂಡು ಹೋಗಬೇಕಿದೆ. ಲಾಕ್ ಡೌನ್ ಹಾಗೂ ಸೆಮಿ ಲಾಕ್ ಡೌನ್‌ನ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ಬೆಳಿಗ್ಗೆ ಹಿರೇಕೆರೆಯಲ್ಲಿ ವಾಯುವಿಹಾರ ಮಾಡುತ್ತಾ, ಉತ್ತರ ಕರ್ನಾಟಕದ ಜನರ ಸಂಭ್ರಮವೇ ನನ್ನ ಉತ್ಸಾಹ ಹೆಚ್ಚಿಸಿದೆ ಎಂದರು. ಗ್ರಾಮದಲ್ಲಿ ಮೋಡಕವಿದ ವಾತಾವರಣವಿದ್ದು, …
Read More »ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಅದ್ದೂರಿ ಸ್ವಾಗತ
ಹುಬ್ಬಳ್ಳಿ: ಗ್ರಾಮ ವಾಸ್ತವ್ಯಕ್ಕಾಗಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ಸಚಿವರು ಸಿದ್ದಾರೂಢಸ್ವಾಮಿ ಮಠಕ್ಕೆ ಆಗಮಿಸಿ ದರ್ಶನ ಪಡೆದರು. ನಂತರ ಗ್ರಾಮದ ಸೊಸೈಟಿಗೆ ಆಗಮಿಸಿದ ಸಚಿವರಿಗೆ ನೂರಾರು ಮಹಿಳೆಯರು ಪೂರ್ಣಕುಂಭ, ಆರತಿಗಳೊಂದಿಗೆ ಸ್ವಾಗತ ಕೋರಿದರು. ಅಲಂಕೃತ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲೆವರೆಗೂ ಸಾಗಿದರು. ಜಗ್ಗಲಿಗೆ, ಹಲಿಗೆ, ಬ್ಯಾಂಡ್, ಮರಕುದುರೆ …
Read More »ಯುವಕನೋರ್ವ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ತಲ್ವಾರನಿಂದ ಹಲ್ಲೆ
ಹುಬ್ಬಳ್ಳಿ: ಯುವಕನೋರ್ವ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ತಲ್ವಾರನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಯುವಕನನ್ನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ. image credits to speednews kannada.com ಇಸ್ಮಾಯಿಲ್ ಎಂಬ ಯುವಕನಿಗೆ ತಲ್ವಾರನಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಯುವಕನ ತಲೆ ಹಾಗೂ ಕೈಗೆ ತಲ್ವಾರಿನೇಟು ಬಿದ್ದಿದ್ದು, ತೀವ್ರ ಥರದ ರಕ್ತಸ್ರಾವವಾಗಿದೆ.ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನ ಕಿಮ್ಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ತರಲಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು, …
Read More »ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಒಲವು ತಮ್ಮದಾಗಿದೆ : ಬಸವರಾಜ ಹೊರಟ್ಟಿ
ಹುಬ್ಬಳ್ಳಿ : ಎರಡು ಕಡೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವ ನಿಟ್ಟಿನಲ್ಲಿ ಈ ಕುರಿತು ಸ್ಪೀಕರ್ ಅವರೊಂದಿಗೆ ಚರ್ಚಿಸುವುದಾಗಿ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹಾಗೂ ಸ್ಪೀಕರ್ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆಯುವ ಚಿಂತನೆ ತಮ್ಮದಾಗಿದೆ. ಈ ಕುರಿತು ಸ್ಪೀಕರ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಒಲವು ತಮ್ಮದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ನುಡಿದರು. ಬೆಳಗಾವಿಗೆ ಕಚೇರಿಗಳ …
Read More »ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಸಮಾಜದಿಂದಲೇ ಬಹಿಷ್ಕಾರ
ಹುಬ್ಬಳ್ಳಿ: ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಮುಖಂಡರೊಬ್ಬರನ್ನು ಜಮಾತ್‍ನಿಂದ ಹೊರ ಹಾಕಿದ್ದು, ನನಗೆ ನ್ಯಾಯ ಕೊಡಿಸಬೇಕು. ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮಾಜದ ಮುಖಂಡ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಗರದ ಮುಲ್ಲಾ ಓಣಿಯ ಅಬ್ದುಲ್ ಮುನಾಫ್ ಐನಾಪುರಿ ಅವರು ಮಾರ್ಚ್ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ತಮ್ಮನ್ನು ಜಮಾತ್‍ನವರು ಹೊರ ಹಾಕಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸಿದ್ದು, …
Read More »