ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟದ ಪ್ರಧಾನ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ನಡುವಿನ ರೈಲ್ವೆ ಪ್ರಯಾಣ ಶೀಘ್ರವೇ ಒಂದು ತಾಸು ಕಡಿಮೆಯಾಗಲಿದೆ. ಸೌತ್ ವೆಸ್ಟ್ರನ್ ರೈಲ್ವೆಯು ಹುಬ್ಬಳ್ಳಿ – ಬೆಂಗಳೂರು ನಡುವಿನ ರೈಲ್ವೆ ಮಾರ್ಗವನ್ನು ಡಬಲಿಂಗ್ ಹಾಗೂ ವಿದ್ಯುದೀಕರಣಗೊಳಿಸುತ್ತಿದ್ದು, ಈ ಕೆಲಸ ಕೊನೆ ಹಂತ ತಲುಪಿದೆ. 2023ರ ಮಾರ್ಚ್ ಒಳಗಾಗಿ ಇದು ಪೂರ್ಣಗೊಳ್ಳುತ್ತದೆ. ಬಳಿಕ ರೈಲು ಸಂಚಾರ ವೇಗ ಹೆಚ್ಚಳಗೊಳ್ಳಲಿದೆ. ಬೆಂಗಳೂರು ಹುಬ್ಬಳ್ಳಿ ನಡುವೆ 469 ಕಿಲೋ ಮೀಟರ್ ಇದ್ದು, …
Read More »ಧಾರವಾಡ ಬಳಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಸೇರಿ ಏಳು ಜನರಿಗೆ ಗಾಯ
ಧಾರವಾಡ : ಹಿರಿಯ ಐಎಎಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ತಾಲೂಕಿನ ಯರಿಕೊಪ್ಪ ಬಳಿ ಹು-ಧಾ ಬೈಪಾಸ್‌ನಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಅಧಿಕಾರಿ ಜೊತೆ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನರ ಅವರ ಕಾರು ಪಲ್ಟಿಯಾಗಿದ್ದು, ಅವರ ಜೊತೆ ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್, ಮಾವ ಗಂಗಾಧರ, ಸಂಬಂಧಿ ಪ್ರವೀಣಕುಮಾರ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ …
Read More »ಯುದ್ಧಕ್ಕೆ ಮುನ್ನುಡಿ ಹಾಡಿದ ಪ್ರೇಮ್; ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ
ಒಂದು ಮಾಸ್ ಕಮರ್ಷಿಯಲ್ ಸಿನಿಮಾಗೋಸ್ಕರ ಪ್ರೇಮ್ ಮತ್ತು ಧ್ರುವ ಸರ್ಜಾ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಕೇಳಿ ಬರುತ್ತಲೇ ಇತ್ತು. ಆದರೆ, ಯಾವುದೂ ಅಧಿಕೃತವಾಗಿರಲಿಲ್ಲ. ಈಗ ಪ್ರೇಮ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ನಿರ್ದೇಶಕ ಪ್ರೇಮ್ (Director Prem) ಅವರು ಸ್ಯಾಂಡಲ್ವುಡ್ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರ ನಿರ್ದೇಶನದ ‘ಜೋಗಿ’ ಚಿತ್ರವನ್ನು ಸಿನಿಪ್ರಿಯರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರ ಅಭಿಮಾನಿ ಬಳಗ ದೊಡ್ಡದು. ಇನ್ನು, ಧ್ರುವ ಸರ್ಜಾ (Dhruva …
Read More »ಏನ್ ಇವ್ರು ಮಾತ್ರ ಉಪ್ಪು, ಹುಳಿ ಖಾರ ತಿಂತಾರಾ..? ಸಿ.ಟಿ. ರವಿ
ವಿಜಯನಗರ : ವಾಟ್ಸ್ಯಾಪ್ ಸ್ಟೇಟಸ್ ಹಾಕಿದ್ದ ಎಂಬ ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ ಆದ್ರೆ ಅವರು ಸಣ್ಣ ಘಟನೆ ಇಟ್ಟುಕೊಂಡು ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ದುರದೃಷ್ಟಕರ. ನಮ್ಮ ಐತಿಹಾಸಿಕ ದೇವಾಲಯಗಳನ್ನೇ ನಾಶ ಮಾಡಿದ್ರು ಸಹ ನಾವು …
Read More »ಒಂದೇ ಸಮನೇ ಕಣ್ಣೀರು ಸುರಿಸಿದ ಹನುಮಂತ;
ಹುಬ್ಬಳ್ಳಿ: ಹನುಮ ಜಯಂತಿ ದಿನದಂದು ಹನುಮಂತ ಕಣ್ಣೀರು(Crying)ಹಾಕಿರುವಂತಹ ಅಚ್ಚರಿ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಬಳಿಯಿರುವ ಬುಡರಸಿಂಗಿ ಗ್ರಾಮದ ಹನುಮಂತ ದೇವಸ್ಥಾನದಲ್ಲಿ ನಡೆದಿದೆ. ಜಯಂತಿ ಹಿನ್ನಲೆಯಲ್ಲಿ ಮೂರ್ತಿಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಮಂತ ಕಣ್ಣಿನಲ್ಲಿ ಬಿಟ್ಟು ಬಿಡಲಾರದೆ ಹನಿ ಹನಿ ಕಣ್ಣೀರು ಸುರಿಯುತ್ತಿದೆ. ಕಣ್ಣೀನಲ್ಲಿ ನೀರು ನೋಡಿ ಅಚ್ಚರಿಗೊಂಡ ಗ್ರಾಮಸ್ಥರು ಘಟನೆ ನೋಡಲು ಮುಗಿಬಿದ್ದಾರೆ. ಕಲಬುರಗಿ ನಗರದಲ್ಲಿ ಕೇಸರಿ ನಂದನ ಯುವ ಬ್ರಿಗೇಡ್ ವತಿಯಿಂದ ಅದ್ದೂರಿ ಹನುಮ ಜಯಂತಿ …
Read More »ಹುಬ್ಬಳ್ಳಿ: ದೂರು ನೀಡಲು ಹೋಗಿದ್ದವರ ಮೇಲೆ ಪಿಎಸ್ಐ ಧಮ್ಕಿ; ಮನನೊಂದು ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ ಯತ್ನ
ಹುಬ್ಬಳ್ಳಿ: ದೂರು ನೀಡಲು ಪೊಲೀಸ್ ಠಾಣೆಗೆ (Police Station) ಹೋಗಿದ್ದವರ ಮೇಲೆ ಪಿಎಸ್ಐ (PSI) ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಮನನೊಂದ ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ. ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಕುಟುಂಬಸ್ಥರು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ ದೂರು ನೀಡಲು ಠಾಣೆಗೆ ಹೋದಾಗ ಪಿಎಸ್ಐ …
Read More »ಮಂತ್ರಿ ಗೋಳ ಮನೆ ಮುಂದ ಗುಂಡಿ ಬಿದ್ದು ಹೋದರು ರಿಪೇರಿ ಮಾಡದ ಅಧಿಕಾರಿ ವರ್ಗ
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದು ಅವ್ಯವಸ್ಥೆ ತಲೆದೋರಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಇದರ ದುರಸ್ತಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಅವರ ಮನೆಯ ಹತ್ತಿರದಲ್ಲಿರುವ ರಸ್ತೆಯಲ್ಲಿ ಡ್ರೈನೇಜ್ ಹೋಲ್ ಕಳಪೆ ಕಾಮಗಾರಿಯಿಂದ ಸುಮಾರು 15 ಅಡಿಗಳಷ್ಟು ತಗ್ಗು ಬಿದ್ದಿದೆ. ಇದರಿಂದ ಜನರು ಸಂಚರಿಸಲು ಪರದಾಡುತ್ತಿದ್ದು, ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿಗಳು ಇತ್ತ ಗಮನ …
Read More »ಸೇವಾ ಭಾರತಿ ಟ್ರಸ್ಟ್ನಿಂದ ಕಿಮ್ಸ್ಗೆ ಆಂಬುಲೆನ್ಸ್ ಹಸ್ತಾಂತರ
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಗೆ ಪ್ರತಿದಿನವೂ ನೂರಾರು ಬಡ ರೋಗಿಗಳು ಬರುತ್ತಾರೆ. ತುರ್ತು ಸಮಯದಲ್ಲಿ ವಾಹನ ಸೇವೆ ತುಂಬ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಆಂಬುಲೆನ್ಸ್ ನೀಡಿರುವುದು ಖುಷಿಯ ಸಂಗತಿ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು. ಕಿಮ್ಸ್ ಆಸ್ಪತ್ರೆಗೆ ಸೇವಾ ಭಾರತಿ ಟ್ರಸ್ಟ್ ಉಚಿತವಾಗಿ ಅಂಬುಲೆನ್ಸ್ ನೀಡಿದ್ದು, ಅದನ್ನು ಕೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರ ಮಾಡಲಾಯಿತು. ನಂತರ ರಾಮಲಿಂಗಪ್ಪ ಅಂಟರತಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸೇವಾ ಭಾರತಿ …
Read More »ಚಿನ್ನ ಅಲ್ಲ..ಹಣ ಅಲ್ಲ ಮಣ್ಣನೇ ಕದೊಯ್ದಿರುವ ಚಾಲಾಕಿಗಳು
ಹುಬ್ಬಳ್ಳಿ: ನಾವು ಚಿನ್ನ, ಹಣ ಕಳ್ಳತನ (Gold-Money Theft) ಮಾಡುವವರನ್ನು ನೋಡಿದ್ದೇವೆ. ಆದ್ರೆ ಇಲ್ಲಿ ಕಳ್ಳತನ ಮಾಡಿದ್ದು ಮಾತ್ರ ಯಾರೂ ಊಹಿಸದ ವಸ್ತುವನ್ನು. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ ವಿಚಿತ್ರ ಕಳ್ಳತನ ಪ್ರಕರಣ. ಹಾಗಿದ್ದರೇ ಏನಿದು ಡಿಪರೆಂಟ್ ಕಳ್ಳತನ ಪ್ರಕರಣ ಅಂತೀರಾ ಈ ಸ್ಟೋರಿ . ಹೊಲದಲ್ಲಿ ನಿಂತು ಮಣ್ಣನ್ನು(Soil) ತೋರಿಸುತ್ತಿರುವ ರೈತ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ತೆಗೆದಿರುವ ಗುಂಡಿ. ಇದು ಯಾವುದೋ ನಿಧಿ ಆಸೆಗೆ ತೆಗೆದಿರುವ ಹಳ್ಳವಂತೂ ಅಲ್ಲವೇ ಅಲ್ಲ. …
Read More »ಶತಮಾನದ ಬಳಿಕ ಶ್ರೀ ದ್ಯಾಮವ್ವ-ದುರ್ಗವ್ವ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ
ಧಾರವಾಡ: ಇಲ್ಲಿಯ ಕಸಬಾಗೌಡರ ಓಣಿಯ ಶ್ರೀ ದ್ಯಾಮವ್ವ-ದುರ್ಗವ್ವ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶತಮಾನದ ಬಳಿಕ ಶುಕ್ರವಾರ ಜರುಗಿತು. ಈ ಜಾತ್ರೆಯು ಇದಕ್ಕೂ ಮುನ್ನ 1899ರಲ್ಲಿ ನಡೆದಿತ್ತು. ಬಳಿಕ ಹರಿಜಾತ್ರೆ ನಡೆದಿದ್ದು, ಬಿಟ್ಟರೆ ಇದೀಗ ಬರೋಬ್ಬರಿ 122 ವರ್ಷಗಳ ಬಳಿಕ ನೂತನ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಾಗಿತು. ರಥೋತ್ಸವಕ್ಕೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಠದ ಗದಿಗಯ್ಯ ಸ್ವಾಮೀಜಿ ಹಾಗೂ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.ದೇವಸ್ಥಾನದಿಂದ …
Read More »