Breaking News

ಹುಬ್ಬಳ್ಳಿ

ಹುಬ್ಬಳ್ಳಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ಹುಬ್ಬಳ್ಳಿ, ಸೆಪ್ಟೆಂಬರ್‌, 19: ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿದ್ದಾರೆ. ವಿಶ್ವ ವಿಖ್ಯಾತ …

Read More »

ಬಸವರಾಜ ಹೊರಟ್ಟಿ ಅತಂತ್ರಕ್ಕೆ ಬಿಜೆಪಿ ಯತ್ನ? ಡಿಸೆಂಬರ್‌ವರೆಗೆ ಸಭಾಪತಿ ಆಯ್ಕೆ ಇಲ್ಲ

ಹುಬ್ಬಳ್ಳಿ: ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಲ್ಲದೆ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಗೆ ದಿಢೀರ್‌ ತಡೆಯೊಡ್ಡುವ ಮೂಲಕ ಬಿಜೆಪಿ ನಾಯಕರು ಹೊರಟ್ಟಿ ಅವರನ್ನು ಅತಂತ್ರ ಮಾಡುವ ಯತ್ನಕ್ಕೆ ಮುಂದಾಗಿ ದ್ದಾರೆಯೇ ಎಂಬ ಶಂಕೆ ಮೂಡಿದೆ.   ಹೊರಟ್ಟಿ ಸುಮಾರು ಮೂರು ದಶಕಗಳ ಕಾಲದ ಜನತಾ ಪರಿವಾರದ ನಂಟು ತೊರೆದು ಬಿಜೆಪಿ ಸೇರಿ ಪಶ್ಚಿಮ …

Read More »

BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

ಹುಬ್ಬಳ್ಳಿ (ಸೆ.18): ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಏಕಾಂಗಿ ಆದ್ರಾ? ಅನ್ನೋ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಯಡಿಯೂರಪ್ಪ ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಯಾವೊಬ್ಬ ಸ್ಥಳೀಯ ನಾಯಕರು ಅತ್ತ ಸುಳಿಯದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಸಂದರ್ಭದಲ್ಲಿ ಒಬ್ಬ ಸ್ಥಳೀಯ ಬಿಜೆಪಿ ನಾಯಕರೂ (BJP Leaders) ಸಹ ಸ್ವಾಗತಕ್ಕೆ ಬಂದಿರಲಿಲ್ಲ. ಬಿಎಸ್​ವೈ ಸ್ವಾಗತಕ್ಕೆ ಬರಲಿಲ್ಲ ನಾಯಕರು ಬಿಜೆಪಿ …

Read More »

17 ರಿಂದ ನಾಲ್ಕು ದಿನಗಳ ಕೃಷಿ ಹಬ್ಬ; 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕೈ ಬಿಟ್ಟಿದ್ದ ಪ್ರತಿಷ್ಠಿತ ಧಾರವಾಡ ಕೃಷಿ ವಿವಿ ನಡೆಸುವ ಧಾರವಾಡ ಕೃಷಿ ಮೇಳವನ್ನು ಸೆ.17ರಿಂದ ಸೆ.20ರವರೆಗೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತೀರ್ಮಾನಿಸಿದೆ. ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್‌-19 ಹೊಡೆತದಿಂದ …

Read More »

ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

ಹುಬ್ಬಳ್ಳಿ: ”ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ” ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ.   ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯದಲ್ಲಿ ಪ್ರವಾಹದಿಂದ 7 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಜನಸ್ಪಂದನ ಹೆಸರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದು ಸರಕಾರದ ವಿರುದ್ಧ ಹರಿಹಾಯ್ದರು. ”ರಾಜ್ಯದಲ್ಲಿ …

Read More »

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ 24×7 ಕುಡಿಯು ನೀರು ಪೂರೈಕೆಗೆ ಯೋಜನೆ ಅನುಷ್ಠಾನ – ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳಿಗೆ 24/7 ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಚುರುಕುಗೊಳ್ಳಬೇಕು.ಗುತ್ತಿಗೆ ಪಡೆದಿರುವ ಸಂಸ್ಥೆಯು ಸ್ಥಳೀಯ ಜನಪ್ರತಿನಿಧಿಗಳ ಸಲಹೆ,ಸಹಕಾರ ಪಡೆದು ಜಲ ಸಂಗ್ರಹಾಗಾರ ಹಾಗೂ ಕೊಳವೆ ಮಾರ್ಗ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಡೆನಿಸನ್ಸ್ ಹೋಟೆಲಿನಲ್ಲಿ ಭಾನುವಾರ ಸಂಜೆ ಅವಳಿನಗರದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿ ಪರಿಶೀಲನೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, …

Read More »

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಶೀಘ್ರವೇ ‘900 ಪಿಎಸ್‌ಐ ನೇಮಕಾತಿ’ಗೆ ಅರ್ಜಿ

ಹುಬ್ಬಳ್ಳಿ: ಈಗಾಗಲೇ 545 ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ( PSI Recruitment Scam ) ನೇಮಕಾತಿ ರದ್ದಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಖಾಲಿ ಇರುವಂತ 900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ( PSI Recruitment 2022 ) ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಘೋಷಣೆ ಮಾಡಿದ್ದಾರೆ.   ಇಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, …

Read More »

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದ ಪರ ವಾದ ಮಂಡಿಸಲು ನುರಿತ ವಕೀಲರ ನಿಯೋಜನೆ: ಸಿಎಂ

ಹುಬ್ಬಳ್ಳಿ: ಸುಪ್ರೀಂಕೋರ್ಟ್ ನಲ್ಲಿ ನ. 23ರಂದು ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ವಿಷಯ ವಿಚಾರಣೆಗೆ ಬರಲಿದ್ದು, ರಾಜ್ಯದ ಪರವಾಗಿ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರ ತಂಡ ನೇಮಕ ಮಾಡಲು ಅಡ್ವೋಕೇಟ್ ಜನರಲ್ ರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿವಿವಾದದ ವಿಷಯ ಕುರಿತು ಈಗಾಗಲೇ ಅಡ್ವೋಕೇಟ್ ಜನರಲ್ ಅವರನ್ನು ಸಂಪರ್ಕಿಸಿ, ಅಗತ್ಯ ಸಲಹೆ-ಸೂಚನೆ ನೀಡಲಾಗಿದೆ. ಆ ಕುರಿತು ಸಾಕಷ್ಟು ಅಧ್ಯಯನ ಸಹ …

Read More »

ಹಬ್ಬ ಆಚರಿಸಲು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ: ಮುತಾಲಿಕ್

ಹುಬ್ಬಳ್ಳಿ: ‘ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ನಾವಿದ್ದರೂ, ನಮ್ಮದೇ ನೆಲದಲ್ಲಿ ಹಬ್ಬ ಆಚರಿಸಲು ಕೋರ್ಟ್ ಕಟ್ಟೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.   ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಇದೀಗ ಹಿಂದೂಗಳೆಲ್ಲರೂ ಒಂದಾಗಿದ್ದಾರೆ. ರಾಣಿ ಚನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವವೇ ಇದಕ್ಕೆ ಸಾಕ್ಷಿ. ಪ್ರಥಮ ಬಾರಿಗೆ ಇಲ್ಲಿ …

Read More »

ಎಡಿಜಿಪಿ ಅವರೇ ಯಾವ ದೇಶದಲ್ಲಿ ಇದ್ದೀವಿ ನಾವು; ಅಲೋಕ್‌ ಕುಮಾರ್‌ ಹೇಳಿಕೆಗೆ ಮುತಾಲಿಕ್‌ ಖಂಡನೆ

ಹುಬ್ಬಳ್ಳಿ: ಗಣೇಶೋತ್ಸವ ಮಂಟಪದಲ್ಲಿ ಸಾವರ್ಕರ್‌ ಫೋಟೋ ವಿಚಾರವಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿಕೆ ನೀಡಿದ್ದು, ಸ್ಥಳೀಯ ಸಂಸ್ಥೆಗಳ ಅನುಮತಿ ಬೇಕು ಎಂದಿದ್ದರು. ಇದಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಡಿಜಿಪಿ ಅವರೇ ಯಾವ ದೇಶದಲ್ಲಿ ಇದ್ದೀವಿ ನಾವು? ೭೫ ವರ್ಷಗಳಾಗಿವೆ ನಮಗೆ ಸ್ವಾತಂತ್ರ್ಯ ಬಂದು. ಸ್ವಾತಂತ್ರ್ಯ ಸಿಗಬೇಕಾದ್ರೆ ತಿಲಕ್‌, ಸಾವರ್ಕರ್‌ ಕಾರಣ ಎಂದು ಗೊತ್ತಿಲ್ವಾ? ಎಲ್ಲದಕ್ಕೂ ಪರ್ಮಿಷನ್‌ ತೆಗೆದುಕೊಳ್ಳಬೇಕಾ? ಎಂದು ಅಲೋಕ್‌ ಕುಮಾರ್‌ ಪ್ರಶ್ನೆ …

Read More »