Breaking News

ಹುಬ್ಬಳ್ಳಿ

‘ಟೆಂಡರ್ ಹಂತದ ಕೋಟ್ಯಂತರ ಕಾಮಗಾರಿ ಪ್ರಭಾವ ಬಳಸಿ ಸ್ಥಗಿತ’: ಶೆಟ್ಟರ್ ವಿರುದ್ದ ಟೆಂಗಿನಕಾಯಿ ಆರೋಪ

ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ವಿಧಾನಸಭಾ ಮತ ಕ್ಷೇತ್ರದಲ್ಲಿ ಟೆಂಡರ್ ಹಂತದಲ್ಲಿರುವ ಕೋಟ್ಯಂತರ ರೂಪಾಯಿ ರಸ್ತೆ, ಸೇತುವೆ ಕಾಮಗಾರಿಯನ್ನು ಹಿಂದಿನ ಶಾಸಕರು ತಮ್ಮ ಪ್ರಭಾವ ಬಳಸಿ, ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದು, ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿ.ಪ ಸದಸ್ಯ ಜಗದೀಶ್ ಶೆಟ್ಟರ್ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದರು. 30 ಕೋಟಿ ರೂ ವೆಚ್ಚದ ಕಾಮಗಾರಿ ಸ್ಥಗಿತ: ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ …

Read More »

ಧಾರವಾಡದಲ್ಲಿ ಕೊರೊನಾ ವರದಿಯಾಗಿಲ್ಲ, ಸಾರ್ವಜನಿಕರು ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸ್ವರೂಪದ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಸಾರ್ವಜನಿಕರು ಕೊರೊನಾ ಬಗ್ಗೆ ಗಾಬರಿಪಡದೇ ಆರೋಗ್ಯ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ 19 ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಕೋವಿಡ್ 19 ರ ಅಂಕಿಅಂಶಗಳು, ಕೇರಳದಲ್ಲಿನ ಕೋವಿಡ್-19 ಪ್ರಕರಣಗಳ ಹೆಚ್ಚಳ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಕೋವಿಡ್-19 ರ ಉಪತಳಿ ಜೆಎನ್.1 (JN.1) …

Read More »

ರಾಜ್ಯದಲ್ಲಿ ಕೋವಿಡ್‌ ಹೈ ಅಲರ್ಟ್‌: ಕಿಮ್ಸ್​ ಕೈ ಸೇರದ ಸರ್ಕಾರದ ಮಾರ್ಗಸೂಚಿ

ಹುಬ್ಬಳ್ಳಿ: ಕೇರಳದಲ್ಲಿ ಕೋವಿಡ್​ ಉಪ ತಳಿ ಜೆಎನ್‌-1 ಪತ್ತೆಯಾಗಿದ್ದು, ರಾಜ್ಯದಲ್ಲಿಯೂ ಆತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಹೈಲರ್ಟ್ ಘೋಷಣೆ ಮಾಡಿದೆ. ಜತೆಗೆ, 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಲಕ್ಷಣ ಇರುವವರಿಗೂ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ. ಎಸ್.ಎಸ್.ಕಮ್ಮಾರ ಹೇಳಿದ್ದಾರೆ‌.‌ ಈಗಾಗಲೇ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ರಾಜ್ಯದಲ್ಲಿ ಕೊರೊನಾ …

Read More »

ರೈತರ ಪಂಪ್​ಸೆಟ್​ಗಳಿಗೆ ವಿದ್ಯುತ್ ಕಡಿತ: ಕಾರಣ ಬಿಚ್ಚಿಟ್ಟ ಹೆಸ್ಕಾಂ ಎಂಡಿ

ಹುಬ್ಬಳ್ಳಿ : ಸಮರ್ಪಕವಾಗಿ ಮಳೆಯಾಗದೇ ಅನ್ನದಾತ ಕಂಗಾಲಾಗಿದ್ದಾನೆ. ಇದರ ಜೊತೆಗೆ ವಿದ್ಯುತ್ ನಂಬಿ ಕೃಷಿ ಮಾಡುವ ರೈತನ ಜೊತೆಗೆ ಹೆಸ್ಕಾಂ ಇಲಾಖೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ನೀರಾವರಿಗೆ ಬೇಕಾದ ವಿದ್ಯುತ್ ಪೂರೈಸಲು ಮೀನಮೇಷ ಎಣಿಸುತ್ತಿದ್ದು, ರೈತ ಸಮುದಾಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಧಾರವಾಡ ಜಿಲ್ಲೆಯ ರೈತರ ಪಂಪ್‌ಸೆಟ್‌ಗಳಿಗೆ ಕಳೆದ ಕೆಲ ದಿನಗಳಿಂದ ನಿಗದಿತ ಸಮಯಕ್ಕೆ ವಿದ್ಯುತ್ ನೀಡದಿರುವುದು ರೈತರಿಗೆ ಅನಾನುಕೂಲವಾಗುತ್ತಿದೆ. ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಒಣಗುತ್ತಿದೆ. ಆದರೆ, ಬೋರ್‌ವೆಲ್ …

Read More »

ನಮ್ಮ ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು ಎಂದ ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ : ನಮ್ಮ ಸಮಾಜದ ನಾಯಕರು ಮತ್ತು ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪುರಾಣವೊಂದನ್ನು ಉಲ್ಲೇಖಿಸಿ ಹೇಳಿರುವುದು ಎಂದು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಪುರಾಣದ ಮಾತು ಉಲ್ಲೇಖಿಸಿ ಆಯುಧ ಕೊಡಬೇಕು ಎಂದು ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ” ಪುರಾಣದಲ್ಲಿ ದೇವಿ …

Read More »

ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದ: ಜೋಶಿ

ಹುಬ್ಬಳ್ಳಿ: ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ. ಸಂಸತ್‌ನಲ್ಲಿ ಭದ್ರತಾ ಲೋಪ ವಿಚಾರದಲ್ಲಿ ನಿರುದ್ಯೋಗವೂ (Unemployment) ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ? …

Read More »

ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು ಶಾಸಕ ಕೋನರೆಡ್ಡಿ

ಹುಬ್ಬಳ್ಳಿ, ಡಿ.17: ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕಎನ್​ಎಚ್​ ಕೋನರೆಡ್ಡಿ(NH Konareddy) ಅವರು ಮತ್ತೊಮ್ಮೆ ಸಚಿವ ಸ್ಥಾನದ ಆಕಾಂಕ್ಷೆಯನ್ನು ಹೊರಹಾಕಿದ್ದಾರೆ. ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು. ಒಬ್ಬ ಶಾಸಕನಾಗಿ ನಾನು ನನ್ನ ಹಕ್ಕು ಕೇಳಿದ್ದೇನೆ. ಒಂದು ಸಾರಿ ಕೃಷಿ ಮಂತ್ರಿ ಮಾಡಿ ಎಂದು ಕೇಳಿದ್ದೇನೆ ಎಂದರು. ನಮಗೆ ಹೈಕಮಾಂಡ್ ಇದೆ, ಪಕ್ಷದ ಅಧ್ಯಕ್ಷರಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೋಡೆತ್ತು. ಕಾರ್ಪೋರೆಟ್​ಗಳು ಮೇಯರ್ ಆಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು ಅಂತಾರೆ. ಆದರೆ …

Read More »

ಕೆರೆ ಖಾಲಿ ಖಾಲಿ; ಬರದ ಮಧ್ಯೆ ಕುಡಿಯುವ ‌ನೀರಿಗಾಗಿ ಪರಿತಪಿಸುತ್ತಿರುವ ಉಮಚಗಿ ಗ್ರಾಮಸ್ಥರು

ಹುಬ್ಬಳ್ಳಿ : ಅದೊಂದು ಪುಟ್ಟ ಗ್ರಾಮ, ಇಲ್ಲಿ ಈ ಹಿಂದೆ ಯಾವತ್ತೂ ಕುಡಿಯುವ ನೀರಿಗೆ ಬರ ಬಂದಿರಲಿಲ್ಲ. ಆದರೆ ಗ್ರಾಮದಲ್ಲಿ ನಡೆದ ಒಂದು ಘಟನೆ ಮತ್ತು ಅದರ ನಂತರ ಗ್ರಾಮಸ್ಥರು ತೆಗೆದುಕೊಂಡ ನಿರ್ಧಾರದಿಂದ ಇಂದು ಇಡೀ ಊರಿನ ಜನರು ನೀರಿಗಾಗಿ ಪರದಾಡುವಂತಾಗಿದೆ. ಹೌದು, ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರ ಒಂದು ತಪ್ಪು ನಿರ್ಧಾರ ಈಗ ವರ್ಷಪೂರ್ತಿ ಕೊರಗುವಂತೆ ಮಾಡಿದೆ. ಎರಡು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೆರೆ ಖಾಲಿ ಮಾಡಿಸಿದ್ದ …

Read More »

ಸಂವಹನ ಕೊರತೆಯಿಂದ ಸದನದಲ್ಲಿ ಗೊಂದಲ ಉಂಟಾಗಿತ್ತು, ಇದನ್ನು ಬಗೆಹರಿಸುತ್ತೇವೆ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: “ಮೊನ್ನೆ ಸದನದಲ್ಲಿ ಸಂವಹನ ಕೊರತೆಯಿಂದ ಧರಣಿ ಮಾಡಬೇಕೋ ಅಥವಾ ಸಭಾತ್ಯಾಗ ಮಾಡಬೇಕೋ ಎಂಬ ಬಗ್ಗೆ ಗೊಂದಲ ಉಂಟಾಗಿತ್ತು. ಈ ಬಗ್ಗೆ ವಿಪಕ್ಷ ನಾಯಕ ಆರ್​ ಅಶೋಕ್​ ಸ್ಪಷ್ಟನೆ ನೀಡಿದ್ದಾರೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯಿಸಿ, “ನಾವು ಈ ಕುರಿತು ಸಭೆ ಕರೆದು ಯಾರಿಗಾದರೂ ಗೊಂದಲ ಇದ್ದರೆ ಅದನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ” ಎಂದರು. …

Read More »

ನಾನು ಸಿಎಂ ಸಿದ್ದರಾಮಯ್ಯ ವಕ್ತಾರನಲ್ಲ’: ಬಿ.ಕೆ. ಹರಿಪ್ರಸಾದ್​

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ ‘ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡುವ ವಿಚಾರ’ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿಗಳು, ಈ ಬಗ್ಗೆ ಅವರನ್ನೇ ಕೇಳಿ. ನಾನು ಅವರ ವಕ್ತಾರ ಅಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಿಎಂ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಚಿವ ದಿನೇಶ್​ ಗುಂಡೂರಾವ್​ ಮರು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮುಸ್ಲಿಮರಿಗೆ ಅನುದಾನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ …

Read More »