ಬೆಂಗಳೂರು,- ಅಕ್ಟೋಬರ್ 1ರಿಂದ ಚಲನಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ. ದಕ್ಷಿಣ ಮತ್ತು ಉತ್ತರ ಭಾರತದ ವಾಣಿಜ್ಯ ಮಂಡಳಿಗಳು ಕೇಂದ್ರ ಸರ್ಕಾರಕ್ಕೆ ಚಿತ್ರಮಂದಿರಗಳನ್ನು ತೆರೆಯುವ ಸಂಬಂಧ ಮನವಿ ಸಲ್ಲಿಸಿದ್ದು, ಇದಕ್ಕೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ನಡೆಯದೇ ಸಂಪೂರ್ಣ ಸ್ಥಗಿತವಾಗಿದೆ. …
Read More »ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ವರ್ಷ ಪ್ರಸಾರವಾಗುವುದಿಲ್ಲ
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಅನೇಕ ಧಾರಾವಾಹಿ, ಸಿನಿಮಾಗಳಿಗೆ ಬ್ರೇಕ್ ಇದ್ದಿದೆ. ಇತ್ತೀಚೆಗೆ ಒಂದೊಂದೆ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ. ಈ ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ವರ್ಷ ಪ್ರಸಾರವಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್‍ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‍ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆದರೆ ಕನ್ನಡದಲ್ಲಿ ಈ ವರ್ಷ ಅಂದರೆ 2020ರಲ್ಲಿ …
Read More »ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕರ್ಮ ನಿಮ್ಮ ವಿಧಿಯನ್ನ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋವನ್ನ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಮೂರು ದಿನದ …
Read More »ನಟಿ ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್
ಮಂಡ್ಯ: ನಟಿ ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್ಲ. ನಮ್ಮ ಯಾವುದೇ ಒಬ್ಬ ಮುಖಂಡ ಡ್ರಗ್ಸ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಈ ವಿಚಾರದಲ್ಲಿ ಸರ್ಕಾರ ಹಿಟ್ ರನ್ ಮಾಡಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ ಅವರಿಗೆ ನಮ್ಮ ಸಹಕಾರ ಇಲ್ಲ. ಡ್ರಗ್ಸ್ ದಂಧೆಯನ್ನ ಬುಡಸಮೇತ ಕೀಳುವವರೆಗೆ …
Read More »ಸುಶಾಂತ್ ಪ್ರಕರಣಕ್ಕೆ ಟ್ವಿಸ್ಟ್; ಸಾವಿಗೆ ಕಾರಣ ನಟನ ಸಹೋದರಿ ಪ್ರಿಯಾಂಕ, ನಟಿ ರಿಯಾ ದೂರಿನ ಅನ್ವಯ ಕೇಸ್ ದಾಖಲು
ಮುಂಬೈ ; ದಿವಂಗತ ನಟ ಸುಶಾಂತ್ ಸಿಂಗ್ ಅವರಿಗೆ ದೆಹಲಿ ಮೂಲದ ವೈದ್ಯ ತರುಣ್ ಕುಮಾರ್ ಹಾಗೂ ಆತನ ಅಹೋದರಿ ಪ್ರಿಯಾಂಕಾ ಸಿಂಗ್ ಪ್ರಿಸ್ಕ್ರಿಪ್ಶನ್ ಇಲ್ಲದೆ ನಕಲಿ ಔಷಧಿ ನೀಡಿದ್ದಾರೆ ಎಂದು ನಟಿ ರಿಯಾ ಸಿಂಗ್ ನೀಡಿದ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ಇಬ್ಬರ ಮೇಲೂ ಇದೀಗ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಮೋಸ, ವಂಚನೆ, ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಪಿತೂರಿ, ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸೇರಿದಂತೆ ವಿವಿಧ ಸೆಕ್ಷನ್ …
Read More »ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇಂದು ಬೆಳ್ಳಬೆಳಗ್ಗೆ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ …
Read More »ನಟಿ ಸಂಜನಾ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರ ದಾಳಿ
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಮನೆ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ದಾಳಿ ಮಾಡಿದ್ದಾರೆ. ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ …
Read More »ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ನಟಿ ರಾಗಿಣಿಯನ್ನು 1 ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಿದ್ದರು. ರಾಗಿಣಿ 3 ದಿನ ಕಸ್ಟಡಿಯಲ್ಲಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಮತ್ತೆ ಮತ್ತೆ 5 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ …
Read More »ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು
ಬೆಂಗಳೂರು: ನಮ್ಮ ಅಮ್ಮನ ಹಾರ್ಟ್ ವೀಕ್, ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ನಟಿ ಸಂಜನಾ ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಸಂಜನಾ, ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳಿಂದ 200 ಜನ …
Read More »ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟು ಆಯ್ತು ಈಗ ಎಣ್ಣೆ ಕಿರಿಕ್
ಬೆಂಗಳೂರು: ತಡರಾತ್ರಿ ಸ್ಯಾಂಡಲ್‌ವುಡ್ ನಟರೊಬ್ಬರು ಕುಡಿದ ಮತ್ತಿನಲ್ಲಿ ನಗರದ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.ಹರ್ಷ ಕಿರಿಕ್ ಮಾಡಿಕೊಂಡ ನಟ. ರಾತ್ರಿ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ಮುಂಭಾಗ ಗೆಳೆಯರೊಂದಿಗೆ ನಟ ಹರ್ಷ ಕುಡಿಯುತ್ತಿದ್ದರು. ಅಪಾರ್ಟ್‌ಮೆಂಟ್ ಮುಂದೆ ಕುಡಿಯುತ್ತಿರುವ ವಿಚಾರ ತಿಳಿದು ರಾತ್ರಿ ಬೀಟ್‌ನಲ್ಲಿದ್ದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಕುಡಿದು ಇಲ್ಲಿ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಹರ್ಷ ಮತ್ತು ಗೆಳೆಯರು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. …
Read More »