Breaking News

ಸಿನೆಮಾ

ಪ್ರಾಥಮಿಕ ತರಗತಿ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!

ಬೆಂಗಳೂರು: ಜಾತಿ, ಜನಾಂಗ, ಧರ್ಮ, ಭಾಷೆ ಹೀಗೆ ಎಲ್ಲವನ್ನೂ ಮೀರಿ ಎಲ್ಲರಿಂದಲೂ ಹುಟ್ಟುಹಬ್ಬದ ಶುಭಾಶಯಗಳನ್ನ ಪಡೆದುಕೊಂಡ ಅಪೂರಪದ ವ್ಯಕ್ತಿ ಅಂದರೆ ಅದು ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್. ಯುವರತ್ನ ಅಪ್ಪುವಿನ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವ ಸಾಧ್ಯತೆಯಿದೆ.   ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾಗಿ ರಾರಾಜಿಸಿ ಇತ್ತೀಚೆಗಷ್ಟೆ ನಿಧನ ಹೊಂದಿರುವ ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ …

Read More »

ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ ನಟ ಪ್ರಭಾಸ್

ನಟ ಪ್ರಭಾಸ್ ಅಭಿನಯದ ‘ರಾಧೆಶ್ಯಾಮ್’ ಸಿನಿಮಾ ಬಳಿಕ ಈಗ ಪ್ರಭಾಸ್ ನಾಪತ್ತೆ ಆಗಿದ್ದಾರೆ. ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಕಂಡು ನಟ ಪ್ರಭಾಸ್ ಬೇಸರವಾಗಿದ್ದಾರೆ. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿತ್ತು. ಆದರೆ ಕಾರಣ ಬೇರೆನೇ ಇದೆ.   ನಟ ಪ್ರಭಾಸ್ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹಾರಿದ್ದಾರೆ. ಚಿಕಿತ್ಸೆಗಾಗಿ ಪ್ರಭಾಸ್ ಸ್ಪೇನ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೆಲವು …

Read More »

ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾ.ಪುನೀತ್ ರಾಜ್‍ಕುಮಾರ್ ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ದರ್ಶನ ಪಡೆದರು.ಇಂದು ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬದ ಹಿನ್ನೆಲೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು.  ಅಪ್ಪು ಜನುಮ ದಿನದ ಪ್ರಯುಕ್ತ ಇಂದು …

Read More »

ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್

ಟಗರು ಸಿನಿಮಾದ ನಂತರ ಮತ್ತೆ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಎದುರಾಗಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬೈರಾಗಿ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಸೆಣಸಲಿದ್ದಾರೆ. ಇಂದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವುದನ್ನು ಟ್ರೇಲರ್ ಖಚಿತ ಪಡಿಸುತ್ತದೆ. ಶಿವರಾಜ್ ಕುಮಾರ್ ಇಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಹುಲಿಬಣ್ಣದ ಮುಖಹೊತ್ತು ರೌಡಿಗಳನ್ನು ಸೆರೆ ಬಡಿಯುವಂತಹ ದೃಶ್ಯಗಳು ಟ್ರೇಲರ್ ನಲ್ಲಿ ಹೇರಳವಾಗಿವೆ. ಡಾಲಿ …

Read More »

ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ: ರಾಘವೇಂದ್ರ ರಾಜ್‍ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ‘ಜೇಮ್ಸ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈವೆಂಟ್‍ನಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜ್‍ಕುಮಾರ್ ಅಪ್ಪುನನ್ನು ನೆನೆದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ವೇದಿಕೆ ಮೇಲೆ ಅಪ್ಪುನನ್ನು ನೆನೆದು ಮಾತನಾಡಿದ ಅವರು, ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನ ದೇವರು ನಿಲ್ಲಿಸಿ ಬಿಟ್ಟ. ಆದರೆ ನಾನು ಕುಂಟ್ಕೊಂಡು ಓಡಾಡಿಕೊಂಡು ಇರುತ್ತೇನೆ. ನನ್ನನ್ನು ದೇವರು …

Read More »

ಪಿಕ್‍ಪಾಕೆಟ್ ಪ್ರಕರಣದಲ್ಲಿ ನಟಿ ಅರೆಸ್ಟ್

ಕೋಲ್ಕತ್ತಾ: ಬೆಂಗಾಳಿ, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾ ದತ್ತಾ, ಪಿಕ್‍ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ನಡೆದಿದ್ದೇನು?: ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ರೂಪಾ ದತ್ತಾ, ಪರ್ಸ್‍ವೊಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ್ದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್‍ನಿಂದ …

Read More »

ನಟ ಚೇತನ್ ಗೆ ಸಂಕಷ್ಟ, ಗಡೀಪಾರು ಸಾಧ್ಯತೆ

ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ. ಅಮೇರಿಕ ಪ್ರಜೆಯಾಗಿದ್ದರೂ ಚೇತನ್ ಅವರು ಭಾರತದಲ್ಲಿ ಹೋರಾಟ ನಡೆಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸರು ವರದಿ ಸಲ್ಲಿಸಿದ್ದಾರೆ.   ಸಾಗರೋತ್ತರ ಭಾರತೀಯ ನಾಗರಿಕ ಪತ್ರ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಚೇತನ್ ಅವರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ ಎಂದು …

Read More »

ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆ

ಪವರ್​ ಸ್ಟಾರ್​ ಪುನೀತ್​​ ರಾಜ್​ ಅಭಿನಯದ ಬಹುನಿರೀಕ್ಷಿತ ಜೇಮ್ಸ್​​ ಸಿನಿಮಾ ಮಾರ್ಚ್​​ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್​ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​​​ಗಳು​ ತಲೆ ಎತ್ತಿವೆ. ಕಮಾಲನಗರದ ವೀರಭದ್ರೇಶ್ವರ ಥಿಯೇಟರ್ ಮುಂದೆ ಪುನೀತ್ ಕಟೌಟ್ ಜೊತೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್​ಗಳು ರಾರಾಜಿಸುತ್ತಿವೆ. …

Read More »

ಚಂದನವನದಲ್ಲಿ ಇದುವರೆಗೂ ಯಾರು ಮಾಡಿರದ ದಾಖಲೆ ಮಾಡಲು ಮುಂದಾದ ಕಬ್ಜ ಸಿನಿಮಾ ತಂಡ..!

ಬೆಂಗಳೂರು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರವು ತನ್ನ ಮೇಕಿಂಗ್​ನಿಂದಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ ಒಂದು ವರ್ಷದಿಂದಲೂ ಚಿತ್ರದ ಶೂಟಿಂಗ್​ ನಡೆಯುತ್ತಲೇ ಇದ್ದು, ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಎಂಬ ಸುಳಿವು ಕೂಡ ಇಲ್ಲ. ಈ ಹಿಂದೆಯೇ ಸಲಗ ಚಿತ್ರದ ಸಕ್ಸಸ್​ ಈವೆಂಟ್​ನಲ್ಲಿ ನಟ ಶಿವರಾಜ್​ಕುಮಾರ್ ಕೂಡ​ ಸಿನಿಮಾವನ್ನು ಬೇಗ ಮುಗಿಸುವಂತೆ ಕೇಳಿಕೊಂಡಿದ್ದರು. ಇನ್ನು ಕಬ್ಜ ಚಿತ್ರತಂಡದ ಒಂದು ವಿಶೇಷತೆಯ ಬಗ್ಗೆ ನಾವಿಲ್ಲಿ …

Read More »

ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

ಕೋವಿಡ್ ಆತಂಕದ ನಡುವೆಯೂ ಬಿಡುಗಡೆ ಆಗಿದ್ದ ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯ’ ಸಿನಿಮಾ ಶತದಿನೋತ್ಸವ ಆಚರಿಸಿದೆ. ಪ್ರೇಮ್ ಸಿನಿಮಾ ರಂಗಕ್ಕೆ ಬಂದು 20 ವರ್ಷಗಳು ಪೂರೈಸಿದ ಸಂಭ್ರಮದಲ್ಲಿರುವಾಗ ‘ಪ್ರೇಮಂ ಪೂಜ್ಯಂ’ ನೂರು ದಿನಗಳ ಪ್ರದರ್ಶನ ಕಂಡಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಹಾಗಾಗಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಹಾಗೂ ಚಿತ್ರೋದ್ಯಮದ ಸರ್ವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಪ್ರೇಮ್, ಪ್ರಾಣ ಚಿತ್ರದ ಮೂಲಕ 2004ರಲ್ಲಿ …

Read More »