ಆರೋಪಿ ತಿರುಪತಿ ಪತ್ನಿ ಜೊತೆ ಮೃತ ತಿರುಪತಿ ಅನೈತಿಕ ಸಂಬಂಧ ಹೊಂದಿದ್ದ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಬಿಡುವಂತೆ ಆರೋಪಿ ತಿರುಪತಿ ಬೇಡಿಕೊಂಡಿದ್ದ. ಇಡೀ ಊರಿಗೆ ವಿಷಯ ಗೊತ್ತಾಗುತ್ತಿದೆ ತನ್ನ ಪತ್ನಿ ಸಹವಾಸ ಬಿಡುವಂತೆ ಮನವಿ ಮಾಡಿದ್ದ.ರಾಯಚೂರು: ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಅನಾಥ ಹೆಣವಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬಣಕಲ್ನಲ್ಲಿ ನಡೆದಿದೆ. ಗೆಳೆಯ ಕೈಕಾಲು ಬಿದ್ದರೂ ಅನೈತಿಕ ಸಂಬಂಧ ಬಿಡದ ಹಿನ್ನೆಲೆ ಕೊನೆಗೆ …
Read More »ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ
ಬೆಳಗಾವಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೇ. 1 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೇ 1 ರವರರೆಗೂ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇಂದು ಬೆಳಗಾವಿ,ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಚಿತ್ರದುರ್ಗ ಮತ್ತು ಉಡುಪಿ, ಕೊಡಗಿನಲ್ಲಿ ಮಳೆಯಾಗಲಿದೆ.
Read More »ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆ; 10 ಶ್ವಾನಗಳಿಗೆ ವಿಷವುಣಿಸಿ ಕೊಂದ ದುರುಳರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮಾಯಕ ಘಟನೆ ನಡೆದಿದ್ದು, 10 ಶ್ವಾನಗಳಿಗೆ ವಿಷ ಕೊಟ್ಟು ಸಾಯಿಸಿದ ಘಟನೆ ಪರಪ್ಪನ ಅಗ್ರಹಾರ ಬಳಿಯ ರಾಯಸಂದ್ರದಲ್ಲಿ ನಡೆದಿದೆ. ರಾತ್ರಿ ವೇಳೆ ನಾಯಿಗಳು ಬೊಗಳುತ್ತಿವೆ ಎಂಬ ಕಾರಣಕ್ಕೆ ಅಪಾರ್ಟ್ ಮೆಂಟ್ ಬಳಿ ಬೀಡು ಬಿಟ್ಟಿದ್ದ 10 ಶ್ವಾನಗಳಿಗೆ ದುರುಳರು ವಿಷ ನೀಡಿ ಕೊಂದಿದ್ದಾರೆ. ಇನ್ನು ಕೆಲ ಶ್ವಾನಗಳು ಅಸ್ವಸ್ಥಗೊಂಡಿದ್ದು, ಶ್ವಾನಗಳನ್ನು ಅನಿಮಲ್ ಅಸೋಸಿಯೇಷನ್ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ವಾನಗಳನ್ನು ಕೊಂದ ಕಟುಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು …
Read More »PSI ನೇಮಕಾತಿ ಅಕ್ರಮ; ಬ್ಲೂಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ಉತ್ತರ; ಅಕ್ರಮದ ಮತ್ತೊಂದು ವಿಡಿಯೋ ಸಾಕ್ಷ್ಯ ಬಟಾಬಯಲು
ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿರುವ 545 ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸಾಕ್ಷ್ಯ ಬಟಾಬಯಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ಖತರ್ ನಾಕ್ ಗ್ಯಾಂಗ್ ಲಾಡ್ಜ್ ನ ರೂಮ್ ನಲ್ಲಿ ಕುಳಿತು ಬ್ಲೂಟೂತ್ ಮೂಲಕ ಉತ್ತರ ಹೇಳಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆರೋಪಿಗಳು ಬೆಂಗಳೂರಿನ ಲಾಡ್ಜ್ ನಲ್ಲಿ ಕುಳಿತು ಪಿಎಸ್‌ಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಜತೆಯಲ್ಲಿಟ್ಟುಕೊಂಡು ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರ ಹೇಳುತ್ತಿರುವ …
Read More »ಪ್ರಿಯಕರನ ಜತೆ ಸೇರಿ ಪತಿಯ ಕೊಂದ ಪತ್ನಿ
ಚಿಂಚೋಳಿ: ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶ ವ್ಯಾಪ್ತಿಯ ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಶವದ ರಹಸ್ಯ ಬಯಲಾಗಿದ್ದು, ಪ್ರಿಯಕರನ ಜತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತೆಲಂಗಾಣ ರಾಜ್ಯದ ಘನಪುರ ಹತ್ತಿರದ ಮಲ್ಕಿಮೇನ ತಾಂಡಾದ ರವಿ ಪಿರ್ಯಾ ಪತ್ಲಾವತ್ (29) ಕೊಲೆಯಾದ ವ್ಯಕ್ತಿ. ಮೃತನ ಪತ್ನಿ ಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಸುಮನ್ ಮಾನಯ್ಯ ತಲ್ಹಾರಿ ಮೊಗದಂಪುರ ಸೇರಿಕೊಂಡು ರವಿಯನ್ನು ದ್ವಿಚಕ್ರ ವಾಹನದಲ್ಲಿ ಕಾಡಿಗೆ ಕರೆದುಕೊಂಡು ಬಂದು …
Read More »ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಸರ್ಕಾರದಿಂದ ಎಚ್ಚರಿಕೆ: ಮಾಹಿತಿ ಸಂಗ್ರಹಿಸಲು ಆದೇಶ
ರಾಜ್ಯದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರೋ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದ ಹಲವಾರು ಕಡೆ ಅನರ್ಹರು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರೋ ಬಗ್ಗೆ ದಿನಾಂಕ 20-04-2022ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಪಂಗಡಗಳ ಕಲ್ಯಾಮ ಸಮಿತಿ ಸಭೆಯಲ್ಲಿ ಚರ್ಚೆಯಾಗಿರುತ್ತದೆ. ಅಲ್ಲದೇ ಬೇಡ …
Read More »ಗೋಕಾಕ ಸಿಪಿಐ, ಪಿಎಸ್ಐ ಕಿರುಕುಳಕ್ಕೆ ಬೇಸತ್ತ ಬಬಲಿ ಕುಟುಂಬ…!
ಬೆಳಗಾವಿ :ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಮತ್ತು ಪಿಎಸ್ ಐ ಪೊಲೀಸ್ ಅಧಿಕಾರಿಗಳಿಂದ ಆಗಿರುವ ಅನ್ಯಾಯಕ್ಕೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಬಬಲಿ ಕುಟುಂಬಸ್ಥರು ಶನಿವಾರ ಜಿಲ್ಲಾಧಿಕಾರಿ ಆವರಣದಲ್ಲಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು. ಕಳೆದ ಜೂನ್ 2021 ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ವ್ಯಕ್ತಿಯ ಅನುಮಾನಸ್ಪಾದವಾಗಿ ಕೊಲೆಯಾಗಿದ್ದಾನೆ. ಈತನಿಗೂ ನಮ್ಮ ಮಕ್ಕಳಿಗೆ ಯಾವುದೇ …
Read More »ಸಿಐಡಿ ತನಿಖೆ ಪೂರ್ಣವಾದ್ಮೇಲೆ 402 ಪಿಎಸ್‍ಐ ಹುದ್ದೆಗಳ ಪರೀಕ್ಷೆ
ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಪೂರ್ಣಗೊಂಡ ನಂತರ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಪರೀಕ್ಷೆ ಮಾಡಲಾಗುವುದು ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿಐಡಿಯಿಂದ ಪ್ರಸ್ತುತ ತನಿಖೆ ಪೂರ್ಣಗೊಂಡ ತಕ್ಷಣ 402 ಪಿಎಸ್‌ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಪ್ರಸ್ತುತ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ. ಖಾಲಿಯಿರುವ 402 ಪೊಲೀಸ್ ಸಬ್ …
Read More »“ಸಿದ್ದರಾಮಯ್ಯನವರು ಈ ರಾಜ್ಯದ ಮಾಸ್ ಲೀಡರ್, ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲವನ್ನು ಕಾಣುತ್ತಾರೆ.
ಚುನಾವಣಾ ವರ್ಷಕ್ಕೂ ಮುನ್ನವೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ/ಚರ್ಚೆ ನಡೆಯುತ್ತಲೇ ಇತ್ತು. ಕನಿಷ್ಠ ನಾಲ್ಕರಿಂದ ಐದು ಕ್ಷೇತ್ರದ ಹೆಸರು ಮುನ್ನಲೆಗೆ ಬಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ಎಲ್ಲೂ ಈ ಸುದ್ದಿಗಳಿಗೆ ಖಡಾಖಂಡಿತ ಬ್ರೇಕ್ ಹಾಕುವ ಕೆಲಸವನ್ನು ಸಿದ್ದರಾಮಯ್ಯನವರೂ ಮಾಡಿರಲಿಲ್ಲ. ಚಾಮರಾಜಪೇಟೆಯಿಂದ ಸಿದ್ದರಾಮಯ್ಯನವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿತು. ಇದರ ನಡುವೆ, ಹಾಲೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡನವರು ಸಿದ್ದರಾಮಯ್ಯನವರಿಗೆ …
Read More »ಹಿಜಾಬ್‌ಗಾಗಿ ಹೋರಾಟ: ಶನಿವಾರವೂ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು
ಉಡುಪಿ: ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ. ಆಲ್ಮಾಸ್, ಹಾಜ್ರಾ ಶಿಫಾ ಹಾಗೂ ಆಯಿಶಾ ಪರೀಕ್ಷೆಗೆ ಗೈರಾದವರು. ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶನಿವಾರ ವಿದ್ಯೋದಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದಲ್ಲಿ ಪರೀಕ್ಷೆ ಬರೆಯಬೇಕಿತ್ತು. ಮೂವರ ಪೈಕಿ ಆಲ್ಮಾಸ್ ಶುಕ್ರವಾರ ಕಾಲೇಜಿಗೆ ಬಂದು ಪ್ರವೇಶ ಪತ್ರ ಪಡೆದುಕೊಂಡಿದ್ದರು. ಉಳಿದ ಇಬ್ಬರು ಪಡೆದುಕೊಂಡಿರಲಿಲ್ಲ ಎಂದು …
Read More »
Laxmi News 24×7