ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಕಳ್ಳನೋರ್ವ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಹಲ್ಲೆಯಿಂದ ಅವರು ಗಂಭೀರ ಗಾಯಗೊಂಡಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೇ ಹೊತ್ತಿನಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ದುಷ್ಕರ್ಮಿಯೊಬ್ಬ ಕಳ್ಳತನಕ್ಕೆಂದು ಬಂದಿದ್ದ. ಈ ವೇಳೆ ನಟನಿಗೆ ಆತ ಚಾಕುವಿನಿಂದು ಇರಿದು ಪರಾರಿಯಾಗಿದ್ದಾನೆ. ಘಟನೆ ವೇಳೆ ನಟನ ಕುಟುಂಬಸ್ಥರು ಕೂಡ ಮನೆಯಲ್ಲಿದ್ದರು.
Read More »ಲಕ್ಕಮ್ಮ ದೇವಿ ಜಾತ್ರೆಗೆ ಊರಿಗೆ ಊರೇ ಖಾಲಿ: ದನಕರುಗಳನ್ನು ಕರೆದೊಯ್ಯುವ ಗ್ರಾಮಸ್ಥರು!
ಬಳ್ಳಾರಿ : ಇದೊಂದು ವಿಶೇಷ ಜಾತ್ರೆ. ಜಾತ್ರೆಯ ದಿನ ಆ ಊರಿನಲ್ಲಿ ಯಾವೊಬ್ಬ ವ್ಯಕ್ತಿಯೂ ಇರಲ್ಲ. ಮನುಷ್ಯರು ಮಾತ್ರವಲ್ಲ, ಗ್ರಾಮದಲ್ಲಿರುವ ದನಕರುಗಳಿಂದಿಡಿದು ಸಾಕು ಪ್ರಾಣಿಗಳು ಆ ಊರಿನಲ್ಲಿ ಇರುವುದಿಲ್ಲ. ಮನೆಗಳಿಗೆಲ್ಲ ಜನರು ಬೀಗ ಹಾಕಿರುತ್ತಾರೆ. ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿರುತ್ತೆ! ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯ ಜಾತ್ರೆ ನಡೆಯೋದು ಗ್ರಾಮದ ಒಳಗಲ್ಲ, ಬದಲಾಗಿ ಗ್ರಾಮದ ಹೊರವಲಯದಲ್ಲಿ. ಇದಕ್ಕಾಗಿ ಇಲ್ಲಿಯ ಜನತೆ ತಮ್ಮ …
Read More »ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ
ಮೈಸೂರು, (ಜನವರಿ 15): ಪರಪುರಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ. ತೇಜು (26) ಪತಿಯಿಂದಲೇ ಕೊಲೆಯಾದ ಪತ್ನಿ. ಕಳೆದ ಏಳು ವರ್ಷಗಳ ಹಿಂದೆ ದೇವರಾಜ್ ಎನ್ನುವಾತ ಸಂಬಂಧಿಯಾಗಿದ್ದ ತೇಜಳನ್ನು ಮದುವೆಯಾಗಿದ್ದ. ಇಬ್ಬರಿಗೆ ಎರಡು ಮಕ್ಕಳು ಸಹ ಇವೆ. ಆದರೂ ತೇಜ ಪರಪುರಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಸಾಲದಕ್ಕೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ …
Read More »ಮುಡಾ ಹಗರಣ ‘CBI’ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಜ.27ಕ್ಕೆ ಮುಂದೂಡಿಕೆ
ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜ.27ಕ್ಕೆ ಮುಂದೂಡಿದೆ. ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತಕುಮಾರ ಮಾತನಾಡಿ, “ಮುಡಾ ಹಗರಣ ಸಂಬಂಧ ಎರಡ್ಮೂರು ಬಾರಿ ವಿಚಾರಣೆ ಬೆಂಗಳೂರನಲ್ಲಿ ನಡೆದಿತ್ತು. ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. ಆ ತನಿಖೆ ಪ್ರಮಾಣಿಕವಾಗಿ ಆಗಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಲೋಕಾಯುಕ್ತ ರಾಜ್ಯ ಸರ್ಕಾರದ ಕೈ …
Read More »ಕಾಗೇರಿ ಮನೆಗೆ ನುಗ್ಗಿದ ಚಿರತೆ,
ಕಾರವಾರ (ಜನವರಿ.14): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆ ಅಂಗಳಕ್ಕೆ ಚಿರತೆ ನುಗ್ಗಿರುವ ಘಟನೆ ನಡೆದಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿರುವಾಗಲೇ ಈ ಘಟನೆ ನಡೆದಿದೆ. ನಿನ್ನೆ (ಜನವರಿ 13) ತಡರಾತ್ರಿ ವೇಳೆ ಆಹಾರ ಅರಸಿ ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿರುವ ಸಂಸದರ ಮನೆ ಅಂಗಳಕ್ಕೆ ಚಿರತೆ ನುಗ್ಗಿದ್ದು, ಮನೆಯಯಲ್ಲಿದ್ದ ಸಾಕು ನಾಯಿಯನ್ನು ಬೇಟೆಯಾಡಲು ಅಟ್ಟಾಡಿಸಿಕೊಂಡು ಹೋಗಿದೆ. ತೋಟದ ಭಾಗದಿಂದ ಮನೆಯ …
Read More »ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಪ್ರಯಾಗರಾಜ್: ಪೌಷ ಪೂರ್ಣಿಮೆಯಂದು ಭಜನೆಗಳು ಮತ್ತು ಘೋಷಣೆಗಳೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾದ ಮಹಾಕುಂಭ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಂಕ್ರಾಂತಿಯಾದ ಇಂದು ಮಹಾಕುಂಭ ರಾಜ ಸ್ನಾನಕ್ಕೆ ಸಾಕ್ಷಿಯಾಗಿದೆ. ಈ ಮಹಾ ಕುಂಭಮೇಳವು 144 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಬಾರಿಯ ಮಹಾ ಕುಂಭ ಮೇಳವು ಇನ್ನಷ್ಟು ಶುಭಕರವಾಗಿದೆ ಎಂದು ಋಷಿಗಳು ಹೇಳಿಕೊಳ್ಳುತ್ತಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭಮೇಳವು ಕೋಟ್ಯಂತರ ಯಾತ್ರಿಕರನ್ನು ಆಕರ್ಷಿಸುತ್ತಲೇ ಇದೆ.
Read More »6 ವರ್ಷದ ಬಾಲಕಿಯ ಅತ್ಯಾಚಾರಗೈದು ಹತ್ಯೆಗೈದ ಬಿಹಾರದ ಯುವಕ ಸೆರೆ
ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಬಿಹಾರದ ಯುವಕನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಹೊಯ್ಸಳ ನಗರದಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ದುಷ್ಕೃತ್ಯವೆಸಗಿದ ಅಭಿಷೇಕ್ ಕುಮಾರ್ (25) ಎಂಬಾತನನ್ನು ಸ್ಥಳೀಯರೇ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದರು. ಕೊಲೆಯಾದ ಬಾಲಕಿಯ ಪೋಷಕರು ನೇಪಾಳ ಮೂಲದವರಾಗಿದ್ದು, ಬೆಂಗಳೂರಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದರು. ಆರೋಪಿಯೂ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಸಂಜೆ 7:30ರ ಸುಮಾರಿಗೆ ಪೋಷಕರು …
Read More »ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.22; ನಾಲ್ಕು ತಿಂಗಳಲ್ಲೇ ಕನಿಷ್ಠ ಬೆಲೆ ಹೆಚ್ಚಳ
ನವದೆಹಲಿ, ಜನವರಿ 14: ಭಾರತದ ರೀಟೇಲ್ ಹಣದುಬ್ಬರ ದರ ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಹಣದುಬ್ಬರ ಇಳಿಕೆ ಆಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿತ್ತು. 2024ರ ನವೆಂಬರ್ ತಿಂಗಳಲ್ಲಿ ಶೇ. 5.48ರಷ್ಟಿತ್ತು. ಸರ್ಕಾರ ನಿನ್ನೆ ಸೋಮವಾರ ಡಿಸೆಂಬರ್ ತಿಂಗಳ ಹಣದುಬ್ಬರ ದರದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತು ವಿಭಾಗದಲ್ಲಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಇದ್ದರಿಂದ …
Read More »ದಕ್ಷಿಣ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ; ಇದರ ಐತಿಹಾಸಿಕ ಹಿನ್ನೆಲೆ ಹೀಗಿದೆ!
ಮೈಸೂರು: ದಕ್ಷಿಣಿ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಪಟ್ಟಣದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇಲ್ಲಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಮಾಡಲಾಯಿತು. ಅಂಧಕಾಸುರ ಭಾವಚಿತ್ರದ ರಂಗೋಲಿಯನ್ನು ಅಳಿಸಿ ಹಾಕುವ ಆಚರಣೆ ಇದಾಗಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಧರ್ನುಮಾಸದ, ಆರಿದ್ರ ನಕ್ಷತ್ರದ ಹುಣ್ಣಿಮೆಯ ಹಿಂದಿನ ದಿನ ದೇವಾಲಯದ ವತಿಯಿಂದ ರಾಕ್ಷಸ ಮಂಟಪದ ಬಳಿ …
Read More »ಅಪಘಾತ ಪ್ರಕರಣದಲ್ಲಿ ಮೆಡಿಕ್ಲೈಮ್ ಹೊರತುಪಡಿಸಿ ಉಳಿದ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ
ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪಾವತಿಸುವ ಪರಿಹಾರ ಮೊತ್ತದಲ್ಲಿ ಮೆಡಿಕ್ಲೈಮ್‌ನ ಅಡಿಯಲ್ಲಿ ಪಾವತಿಸಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ. ಬೆಂಗಳೂರಿನ ಮಾರತ್‌ಹಳ್ಳಿಯ ವಾಸಿ ಹನುಮಂತಪ್ಪ ಪರವಾಗಿ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ(ಎಂಎಸಿಟಿ)ದ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕ ಸದಸ್ಯಪೀಠ ಸೋಮವಾರ ಈ ಆದೇಶ ನೀಡಿತು. ಅರ್ಜಿದಾರರ ಕುಟುಂಬಕ್ಕೆ …
Read More »