*ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ನಾಗನೂರ*- ನಾಗನೂರ ಪ್ರಿಮಿಯರ್ ಲೀಗ್ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ರಿಕೆಟ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನವನ್ನು ಜೊತೆಗೆ ಕ್ರಿಕೆಟ್ ಆಟಗಾರರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಅಭಿಮಾನಿಗಳ ಒತ್ತಾಯದ ಮೇರೆಗೆ ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಸಭಿಕರನ್ನು ರಂಜಿಸಿದರು. ಹಿರಿಯ ಸಹಕಾರಿ ಬಿ.ಆರ್. ಪಾಟೀಲ ಹಾಗೂ ಮಾಜಿ ಸಚಿವ ಆರ್. …
Read More »10 ದಿನಗಳಲ್ಲಿ ಸಿದ್ಧಗೊಂಡ ಕರ್ನಾಟಕದ ಸ್ತಬ್ಧಚಿತ್ರ ‘ನಾರಿ ಶಕ್ತಿ’
ನವದೆಹಲಿ: ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕದ ಪರವಾಗಿ ಪಾಲ್ಗೊಳ್ಳಲಿರುವ ‘ನಾರಿ ಶಕ್ತಿ ಸ್ತಬ್ಧಚಿತ್ರವು 10 ದಿನಗಳಲ್ಲಿ ಸಂಪೂರ್ಣವಾಗಿ ಸಿದ್ಧಗೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಪಿ.ಎಸ್. ಹರ್ಷ ತಿಳಿಸಿದರು. ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರವು ಜನವರಿ 26ರಂದು ರಾಜಧಾನಿಯ ಕರ್ತವ್ಯ ಪಥದಲ್ಲಿ ಸಾಗುವುದರೊಂದಿಗೆ ಕರ್ನಾಟಕದ ಹಿರಿಮೆಯ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಇದರೊಂದಿಗೆ ಸತತವಾಗಿ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ …
Read More »ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
*ವಡೇರಹಟ್ಟಿ (ಮೂಡಲಗಿ)-* ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಹಮ್ಮಿಕೊಂಡಿದ್ದ ಮತಗಟ್ಟೆ ಶಕ್ತಿಕೇಂದ್ರ, ಪೇಜ್ …
Read More »ಮಹದಾಯಿ ನದಿ ನೀರು ತಿರುಗಿಸುವುದರಿಂದ ಜನಜೀವನದ ಮೇಲೆ ಪರಿಣಾಮ: ಮಧು ಗಾಂವಕರ್
ಪಣಜಿ: ಕರ್ನಾಟಕದ ಕಳಸಾ ಉಪನದಿಯಾದ ಮಹದಾಯಿಯನ್ನು ತಿರುಗಿಸುತ್ತಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಪರಿಸರವಾದಿ ಮಧು ಗಾಂವಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು- ಮಹದಾಯಿಯ ಉಪನದಿಯಾದ ಹಲ್ತಾರಾದಲ್ಲಿ ಕರ್ನಾಟಕ ಅಣೆಕಟ್ಟು ಅಥವಾ ಬ್ಯಾರೇಜ್ ನಿರ್ಮಿಸಿದರೆ, ಈ ಭಾಗದಿಂದ ಬರುವ ನೀರಿಗೆ ತೊಂದರೆಯಾಗುತ್ತದೆ. ನೀರು ಕಡಿಮೆಯಾದರೆ ಭವಿಷ್ಯದಲ್ಲಿ ಗೋವಾದ ವಜರಾ-ಸಕಾಲ ಜಲಪಾತ ಕಣ್ಮರೆಯಾಗುತ್ತದೆ. ಏಕೆಂದರೆ ಹಲ್ತಾರ್ ನಿಂದ ಬರುವ ನೀರು ವಿರ್ಡಿ ಪ್ರದೇಶಕ್ಕೆ ಬರುತ್ತದೆ. ಇದು ಕಟ್ಟಿಕಾ …
Read More »74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧ
74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧಗೊಳ್ಳುತ್ತಿದೆ. ಈ ಬಾರಿ ಹಲವು ಪ್ರಥಮಗಳು ಇರಲಿವೆ. ಗನ್ ಸೆಲ್ಯೂಟ್‌ಗೆ ಬ್ರಿಟಿಷರ ಕಾಲದ ಗನ್ ಬದಲಾಗಿ ದೇಶೀಯವಾಗಿ ನಿರ್ಮಾಣಗೊಂಡ ಇಂಡಿಯನ್ ಫೀಲ್ಡ್ ಗನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇದೆಲ್ಲಾ ಮೊದಲು * ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅಗ್ನಿವೀರರ ಮೊದಲ ತಂಡ * ಒಂಟೆಗಳ ತುಕಡಿಯ ಭಾಗವಾಗಿ ಮಹಿಳಾ ಯೋಧರು * ನೌಕಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್ ನೇತೃತ್ವ ಮೊದಲ ಮತ್ತು ಕೊನೆಯ ಹಾರಾಟ ! …
Read More »ಬೆಳಗಾವಿ: 26, 27ರಂದು ಸಿರಿಧಾನ್ಯ-ಸಾವಯವ ಮೇಳ
ಬೆಳಗಾವಿ: 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಜ. 26 ಹಾಗೂ 27ರಂದು ಸಿರಿಧಾನ್ಯ ಮತ್ತು ಸಾವಯುವ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ನಿತೇಶ ಪಾಟೀಲ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಜ.26 ಹಾಗೂ 27 ರಂದು ಸಿರಿಧಾನ್ಯ ಮೇಳ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜ.26ರಂದು …
Read More »ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತದೇಹ ಪತ್ತೆ
ಪಣಜಿ: ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಣಜಿ ವೈಲ್ಡ್ ಅನಿಮಲ್ ಟೆಂಪರರಿ ಶೆಲ್ಟರ್ ಸೆಂಟರ್ ಸಿಬ್ಬಂದಿ ಹಾಗೂ ದ್ರಷ್ಟಿ ಲೈಫ್ ಸೇವರ್ ಸಂಸ್ಥೆಯ ಸಿಬ್ಬಂದಿ ಮೀನಿನ ಅಂತ್ಯಸಂಸ್ಕಾರ ನೆರವೇರಿಸಿದರು. 12 ಅಡಿ ಉದ್ದದ ಡಾಲ್ಫಿನ್ ಮೃತಪಡಲು ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ವನ್ಯಜೀವಿ ತಾತ್ಕಾಲಿಕ ಆಶ್ರಯ ಕೇಂದ್ರದ ಸಿಬ್ಬಂದಿ ದ್ಯಾನೇಶ್ವರ್ ಟಕ್ಕರ್ ಮತ್ತು ಮೆಲ್ವಿನ್ ಡಿಸಿಲ್ವಾ ಅವರು ಡಾಲ್ಫಿನ್ ಕನಿಷ್ಠ ನಾಲ್ಕು ದಿನಗಳ ಹಿಂದೆ …
Read More »2 ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ಮತ್ತೆ ಕಳೆ
ಕೊರಟಗೆರೆ : ಇತಿಹಾಸ ಪ್ರಸಿದ್ಧ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕಳೆದ 2 ವರ್ಷಗಳಿಂದ ಕೊರೋನಾ ನಂತರ ಚರ್ಮ ಗಂಟು ರೋಗದಿಂದ ಕಲೆಗೊಂಡಿದ್ದ ದನಗಳ ಜಾತ್ರೆ ಈಗ ಸಾವಿರಾರು ರಾಸುಗಳು ಸೇರುವ ಮುಖಾಂತರ ಪ್ರತಿ ವರ್ಷದಂತೆ ಸಾಂಪ್ರದಾಯಿಕ ಮುಂದುವರೆಯುವ ಮೂಲಕ ಕ್ಯಾಮೇನಹಳ್ಳಿ ದನದ ಜಾತ್ರೆಗೆ ಕಳೆ ಬಂದಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲೂಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಧನಗಳ ಜಾತ್ರೆ …
Read More »ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ
ಕೊಪ್ಪಳ: ದೇಶಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿರುವ ಹೊತ್ತಲ್ಲಿ ಕಳೆದ 75 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದವರು ಕಾಣಸಿಗೋದು ಬಹಳ ಅಪರೂಪ. ಆದರೆ ಕೊಪ್ಪಳ ಜಿಲ್ಲೆಯ ಶತಾಯುಷಿಯೊಬ್ಬರು 1952ರಿಂದ ನಡೆದ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರಮಠ ಮೊದಲ ಚುನಾವಣೆ ಯಿಂದ ಹಿಡಿದು ಈವರೆಗಿನ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ಚಲಾಯಿಸಿ ದಾಖಲೆ …
Read More »ಇಂದು ಸಾರಿಗೆ ನೌಕರರ ಧರಣಿ; ಬಸ್ ಸೇವೆ ಅಬಾಧಿತ
ಬೆಂಗಳೂರು: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಜ. 24(ಮಂಗಳವಾರ)ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇದರಿಂದ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗುವುದಿಲ್ಲ. ಆದರೆ ಇದರಿಂದ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗುವುದಿಲ್ಲ. ಜಿಲ್ಲಾ ಬಸ್ ಘಟಕಗಳ (ಡಿಪೋ) ಮುಂಭಾಗ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ವಿಭಾಗೀಯ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ …
Read More »
Laxmi News 24×7