Breaking News

ರಾಷ್ಟ್ರೀಯ

ಮಧ್ಯರಾತ್ರಿ ಮತ್ತೆ 1.50 ಕೋಟಿ ರೂ ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ: ಮಹಾರಾಷ್ಟ್ರ ಗಡಿಯ ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಬಸ್ ಪ್ರಯಾಣಿಕನೋರ್ವನಿಂದ ಒಂದೂವರೆ ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಕರ್ತವ್ಯ ನಿರತ ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ಖಾಸಗಿ ಬಸ್ ಒಂದರಲ್ಲಿ ಮುಂಬೈನಿಂದ ಬರುತ್ತಿದ್ದ ಪ್ರಯಾಣಿಕನಲ್ಲಿದ್ದ ಹಣವನ್ನು ವಶಕ್ಕೆ ಪಡೆದರು. ಈ ಹಣಕ್ಕೆ ಆತನ ಬಳಿ ಯಾವುದೇ ದಾಖಲೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಬುಧವಾರ ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 3.61 ಕೇಟಿ ರೂ. ನಗದು ಹಾಗೂ 60.47 ಲಕ್ಷ …

Read More »

ನನ್ನ ಕಾರ್ಯಕರ್ತರೇ ನನಗೆ ಸ್ಟಾರ್ ಕ್ಯಾಂಪೇನರ್; ಎಚ್​ಡಿಕೆ

ಬೆಂಗಳೂರು: ನಟರನ್ನು ನೋಡಲು ಅಭಿಮಾನಿಗಳು, ಜನರು ಬರುತ್ತಾರೆ, ಜೈಕಾರ ಹಾಕುತ್ತಾರೆ. ಅವರು ಎಲ್ಲಾ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತಾರೆ. ಅವರಿಗೆ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯದ ಹಿನ್ನೆಲೆ ಹೋಗಬಹುದು. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ನಟ ಸುದೀಪ್ ಬೊಮ್ಮಾಯಿ ಪರ ಪ್ರಚಾರಕ್ಕೆ ಬರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.   ನಟ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲಿನ ವಿಶ್ವಾಸದಿಂದ …

Read More »

ತಮ್ಮ ಮುಖ ತೋರಿಸಿದರೆ ಮತ ಬರುವುದಿಲ್ಲವೆಂದು ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ: ಕಾಂಗ್ರೆಸ್​​ ವ್ಯಂಗ್ಯ

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪರ ನಟ ಸುದೀಪ್‌ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತಾಗಿ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಿದೆ. ಸುದೀಪ್‌ ಘೋಷಣೆಗೆ ರಾಜ್ಯ ಕಾಂಗ್ರೆಸ್ ‌ವ್ಯಂಗ್ಯವಾಡಿದೆ. ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ. ತಮ್ಮ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ. ಮಾಜಿ …

Read More »

ಏಪ್ರಿಲ್ ನಿಂದ ಕೇಬಲ್ ದರ ಹೆಚ್ಚಳ

ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಕೇಬಲ್ ದರ ಏಪ್ರಿಲ್ ನಿಂದ ಹೆಚ್ಚಳ ಮಾಡಲಾಗಿದೆ ಗ್ರಾಹಕರು ಸಹಕರಿಸಬೇಕು ಎಂದು ಮೆಟ್ರೋ ಕಾಸ್ಟ್ ನೆಟ್ವಕ್೯ ಇಂಡಿಯಾ ಪ್ರೈ.ಲಿನ ಎಂ.ಡಿ. ನಾಗೇಶ ಛಾಬ್ರಿಯಾ ಹೇಳಿದರು. ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಕಳೆದ 30 ವರ್ಷಗಳಿಂದ ಮೆಟ್ರೋ ಕಾಸ್ಟ್ ಇಂಡಿಯಾ ಕೇಬಲ್ ಸಂಸ್ಥೆ ಕೆಲಸ ಮಾಡುತ್ತಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮೊದಲು ರಿದ್ದಿ ಸಿದ್ಧಿ ಸಂಸ್ಥೆಯಿಂದ …

Read More »

ಪ್ರೆಸ್ಟೀಟ್ ಕಿಚನ್ ಗೋಡೌನ್ ಗೆ ಬೆಂಕಿ; ಕೋಟ್ಯಾಂತರ ರೂ. ನಷ್ಟ

ಗಂಗಾವತಿ: ಹಣ್ಣಿನ ಕೋಲ್ಡ್ ಸ್ಟೋರೆಜ್ ಹಾಗೂ ಪ್ರೆಸ್ಟೀಟ್ ಕಿಚನ್ ಸ್ಟೋರ್ ಗೋಡೌನ್ ಗೆ ಬೆಂಕಿ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ರೂ. ನಷ್ಟವಾಗಿರುವ ಘಟನೆ ನಗರದ ಬನ್ನಿಗಿಡದ ಕ್ಯಾಂಪ್ ನಲ್ಲಿ ಏ.5ರ ಬುಧವಾರ ಮುಂಜಾನೆ ಸಂಭವಿಸಿದೆ. ಅಕ್ಬರ್ ಸಾಬ ಹಾಗೂ ರಮೇಶ ಮಾರ್ವಾಡಿ ಎಂಬವವರಿಗೆ ಸೇರಿದ ಹಣ್ಣಿನ ಕೋಲ್ಡ್ ಸ್ಟೋರೆಜ್, ಪ್ರೇಸ್ಟೀಜ್ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳು ಎಂದು ತಿಳಿದು ಬಂದಿದೆ. ಗೋಡೌನ್ ನಲ್ಲಿ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ …

Read More »

ಅನಾಮಧೇಯ ವ್ಯಕ್ತಿಯಿಂದ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ: FIR

ಬೆಂಗಳೂರು: ನಟ ಸುದೀಪ್‌ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಚರ್ಚೆಯಲ್ಲಿರುವಾಗಲೇ, ಕಿಚ್ಚ ಸುದೀಪ್‌ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರಿಂದ ಬೆದರಿಕೆ ಪತ್ರ ಬಂದಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ ಎಂದು ವರದಿಯಾಗಿದೆ.   ಕಿಚ್ಚ ಸುದೀಪ್‌ ಬುಧವಾರ ಬಿಜೆಪಿ ಸೇರಿ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆಯೇ ಕಿಚ್ಚ ಸುದೀಪ್‌ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರವೊಂದು ಬಂದಿದೆ. …

Read More »

ಚುನಾವಣಾ ಆಯೋಗದ‌ ಮಾರ್ಗಸೂಚಿ ಪ್ರಕಾರ ಜಿಲ್ಲೆಯ 18ಮತಕ್ಷೇತ್ರಗಳಿಗೆ ಬಿಗಿಭದ್ರತೆಯೊಂದಿಗೆ EVM ರವಾನೆ :ನಿತೇಶ್ ಪಾಟೀಲ

ಬೆಳಗಾವಿ : ಪ್ರಥಮ ರ್ಯಾಂಡಮೈಜೇಷನ್ ಬಳಿಕ ಕ್ಷೇತ್ರವಾರು ಹಂಚಿಕೆಯಾಗಿರುವ ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಚುನಾವಣಾ ಆಯೋಗದ‌ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಿಗೆ ಬಿಗಿಭದ್ರತೆಯೊಂದಿಗೆ ರವಾನೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಇಲ್ಲಿನ ಹಿಂಡಲಗಾ ಗ್ರಾಮದಲ್ಲಿ ಇರುವ ಭಾರತ ಚುನಾವಣಾ ಆಯೋಗದ ಇವಿಎಂ ಉಗ್ರಾಣದಲ್ಲಿ ಇರುವ ಇವಿಎಂ ಗಳನ್ನು ರ್ಯಾಂಡಮೈಜೇಷನ್ ಪ್ರಕಾರ ಆಯಾ ಕ್ಷೇತ್ರಗಳಿಗೆ ರವಾನಿಸುವ ಪ್ರಕ್ರಿಯೆಯನ್ನು ಬುಧವಾರ (ಏ.5) ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. …

Read More »

ಬಣ ರಾಜಕೀಯ ಮಾಡಿದರೆ ಶಾಸ್ತಿ; ಬೆಳಗಾವಿ ಮುಖಂಡರಿಗೆ ಜೋಶಿ ಎಚ್ಚರಿಕೆ

ಬೆಳಗಾವಿ: ಯಾವುದೇ ಕಾರಣಕ್ಕೂ ಗುಂಪುಗಾರಿಕೆ ರಾಜ ಕಾರಣ, ಬಣ ರಾಜಕೀಯಕ್ಕೆ ಅವಕಾಶ ಇಲ್ಲ. ಇನ್ನೊಬ್ಬರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಜಿಲ್ಲೆಯಿಂದ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಬೇಕು. ಏನೇ ಅಸಮಾಧಾನ ಇದ್ದರೂ ನಮ್ಮ ಜತೆ ನೇರವಾಗಿ ಮಾತನಾಡಬೇಕು. – ಇದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಬೆಳಗಾವಿ ಜಿಲ್ಲೆಯ ಬಿಜೆಪಿ ಮುಖಂಡ ರಿಗೆ ನೀಡಿದ ಖಡಕ್‌ ಸೂಚನೆ.ಚುನಾವಣೆ ಸಂದರ್ಭದಲ್ಲಿ ಬಣ ರಾಜಕೀಯಕ್ಕೆ ಅಂತ್ಯ ಹಾಡ …

Read More »

ಬಿಜೆಪಿ ಮುಖಂಡ ರವೀಂದ್ರ ಹಂಜಿ ಅವರ ವಿರುದ್ಧ ಸರ್ಕಾರ ಕ್ರಿಮಿನಲ್‌ ಕೇಸ್‌ ದಾಖಲಿಸಿ,: ಕಿರಣ ರಜಪೂತ್‌

ಯಮಕನಮರಡಿ(ಬೆಳಗಾವಿ) : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಸರ್ವೇ ನಂ. 445 ರಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿದ ಯಮಕನಮರಡಿ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ, ಬಿಜೆಪಿ ಮುಖಂಡ ರವೀಂದ್ರ ಹಂಜಿ ಅವರ ವಿರುದ್ಧ ಸರ್ಕಾರ ಕ್ರಿಮಿನಲ್‌ ಕೇಸ್‌ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಮುಖಂಡ ಕಿರಣ ರಜಪೂತ್‌ ಆಗ್ರಹಿಸಿದರು. ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಮಕನಮರಡಿ ಅರ್ಬನ್‌ ಬ್ಯಾಂಕ್‌, ರಾಜೀವ್‌ ಗಾಂಧಿ ಆಸ್ಪತ್ರೆ, ವಿದ್ಯಾ ವರ್ಧಕ್‌ …

Read More »

ಖಾಸಗಿ ಬಸ್’ನಲ್ಲಿ ಸಾಗಿಸುತ್ತಿದ್ದ 2 ಕೋ.ರೂ. ನಗದು ವಶ.!

ಬೆಳಗಾವಿ : ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಖಾಸಗಿ ಬಸ್ (KA 70 1459) ಮುಂಬೈಯಿಂದ ಬೆಂಗಳೂರಿಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಇಂದು ನಸುಕಿನಜಾವ 3.30 ರ ವೇಳೆಗೆ ಚುನಾವಣಾ ಕಾರ್ಯನಿರತ ಎಫ್‌ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲನೆ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿದೆ.ಈ ಕುರಿತು …

Read More »