ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ ಸಂಬಂಧ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಸಂಬಂಧ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆಯು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಮ್ಮ ಸಮುದಾಯದ ಜನರ ಜೊತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಲ್ಲೆಗೊಳಗಾದ ಮಹಿಳೆಯು, ರಾಜಿ ಮಾಡಿಕೊಂಡಿದ್ದೇವೆ. ಈ ಪ್ರಕರಣ ಹಿಂಪಡೆಯಿರಿ ಎಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮೀನು ಕದ್ದ ಸಂಬಂಧ ಅದೇ ದಿನ …
Read More »ರಾಜ್ಯೋತ್ಸವ ಪ್ರಶಸ್ತಿ: ಅರ್ಜಿ ಬೇಡ, ಸರ್ಕಾರದಿಂದಲೇ ಅರ್ಹರ ಆಯ್ಕೆಗೆ ಚಿಂತನೆ – ಸಚಿವ ತಂಗಡಗಿ
ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಜಿಗಳಿಂದ ಮುಕ್ತಗೊಳಿಸಿ ಸರ್ಕಾರದಿಂದಲೇ ನೇರವಾಗಿ ಅರ್ಹ ಸಾಧಕರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಜಾರಿಗೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. “ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ …
Read More »ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ.
ಅಥಣಿ :ಯುವ ಪೀಳಿಗೆಗೆ ಅಧ್ಯಾತ್ಮದ ಅರಿವು ಮೂಡಿಸುವುದು ಅಗತ್ಯವಾಗಿದೆ. ಆಧುನಿಕ ಜಂಜಾಟಗಳಲ್ಲಿ ಯುವ ಜನತೆಗೆ ಆಧ್ಯಾತ್ಮಿಕ ಅರಿವು ಮೂಡಿಸಲು ಆಶ್ರಮಗಳ ಅಗತ್ಯವಿದೆ. ಜ್ಯಾತ್ಯತೀತ ತತ್ವದ ಮೂಲಕ ಮಾನವ ಕಲ್ಯಾಣ ಮಾಡುತ್ತ ಬಂದಿರುವ ಇಂಚಗೇರಿ ಸಂಪ್ರದಾಯದ ತತ್ವಗಳು ನಾಡಿನಲ್ಲಿ ಅತ್ಯಂತ ಶ್ರೇಷ್ಠವಾಗಿವೆ.ಮಾನವ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿರುವ ಮಾಧವಾನಂದರ ಉಪದೇಶ, ಸಂದೇಶ ಅಥಣಿ ಜನತೆಗೆ ದೊರೆಯಲಿ ಎಂಬ ಉದ್ದೇಶದಿಂದ ಮಾಧವಾನಂದ ಪ್ರಭುಗಳ ಆಶ್ರಮ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.ಈ ಭಾಗದ ಇಂಚಗೇರಿ ಸಂಪ್ರದಾಯದ ಭಕ್ತಾದಿಗಳ …
Read More »ಜಿಮ್ಸ್ ಆಸ್ಪತ್ರೆ ಆಕ್ಸಿಜನ್ ಸಮಸ್ಯೆ ಪ್ರಕರಣಕ್ಕೆ ಟ್ವಿಸ್ಟ್
ಕಲಬುರಗಿ, ಮಾರ್ಚ್ 24: ವಿದ್ಯುತ್ ಸಮಸ್ಯೆಯಿಂದ ಆಕ್ಸಿಜನ್ (Oxygen) ಸಿಗದೇ ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ರೋಗಿಗಳು ಪರದಾಡುವಂತಾದ ಘಟನೆ ಬಗ್ಗೆ ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ (Sharanprakash Patil) ಪ್ರತಿಕ್ರಿಯಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರೆಗಳ ಕೈವಾಡ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯ ದಕ್ಷತೆಯನ್ನು ಅವರಿಗೆ (ಖಾಸಗಿ ಆಸ್ಪತ್ರೆಗಳು) ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿಡಿಯೋ ವೈರಲ್ …
Read More »ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನ ಹಿಡಿದ ಪೊಲೀಸರು..
ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನ ಹಿಡಿದ ಪೊಲೀಸರು.. ಚಾಲಕನಿಗೆ ಚಾಕು ಇರಿದು ಲಾರಿ ಕಳ್ಳತನ ಮಾಡಿದ್ದ ಕಳ್ಳರು ಪರಾರಿ…ಲಾರಿ ವಶಕ್ಕೆ!! ಜೀವದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ್ದ ವಾಹನವನ್ನು ಹಿಡಿಯುವುದರಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಬಾಡಗಂಡಿ ಕ್ರಾಸ್ ಬಳಿ ಮದ್ಯ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಜೀವದ ಹಂಗು ತೊರೆದು ಚೆಸ್ ಮಾಡಿ …
Read More »ಹನಿಟ್ರ್ಯಾಪ್ ಸದ್ದು ಮಧ್ಯೆ ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ
ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಮಲ್ಲಿಕಾರ್ಜುನ ಖರ್ಗೆ, ಅವರ ಆರೋಗ್ಯ ವಿಚಾರಿಸಿದರು. ಮೊಣಕಾಲು ನೋವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು. ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು. ಹನಿಟ್ರ್ಯಾಪ್ ಕುರಿತು ಈಗಾಗಲೇ ಸದನದಲ್ಲೇ ಸಚಿವ ರಾಜಣ್ಣ ಹೇಳಿಕೆ …
Read More »ಬೆಳಗಾವಿಯಲ್ಲಿ ನಾಳೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ
ಬೆಳಗಾವಿ: “ಬೆಳಗಾವಿಯಲ್ಲಿ ನಾಳೆ ರಾಜ್ಯದಲ್ಲೇ ಪ್ರಥಮ ಬಾರಿಗೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತವರು ಮನೆಯಲ್ಲಿ ಸಿಗುವ ಆತಿಥ್ಯದಂತೆ ಗರ್ಭಿಣಿಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕುತ್ತಿದ್ದೇವೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಇಂದು ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಗರದ ಸಿಪಿಇಡ್ ಮೈದಾನದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಸುಮಾರು 100 ಜನರಿಗೆ …
Read More »ಸ್ಯಾಂಕಿ ಟ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮೂಲಕ ಗಂಗೆಗೆ ನಮನ
ಬೆಂಗಳೂರು : ತೇಲುವ ವೇದಿಕೆ ಮೇಲೆ ತಾಯಿ ಗಂಗಮ್ಮ ದೇವಿಗೆ ನಮನ, ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಹಾಕಿ ಕಾವೇರಿ ಆರತಿ, ವರ್ಣರಂಜಿತ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಮಂತ್ರ ಘೋಷಗಳ ಭಕ್ತಿ ಭಾವದ ಜತೆಗೆ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಪ್ರತಿಜ್ಞಾ ಸ್ವೀಕಾರ.. ಇದು ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ನಡೆದ ಕಾವೇರಿ ಆರತಿ ಕಾರ್ಯಕ್ರಮದ ಚಿತ್ರಣ. ಮಾ.22ರಂದು ವಿಶ್ವ ಜಲ ದಿನದ ಅಂಗವಾಗಿ 21ರಂದು …
Read More »ಕರವೇ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಬೆಳಗಾವಿಯಲ್ಲಿ ಫಾಲೋವರ್ ಎಂಬ ಮರಾಠಿ ಸಿನಿಮಾ ರದ್ದು
ಬೆಳಗಾವಿ : ಟ್ರೇಲರ್ನಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು “ಫಾಲೋವರ್” ಮರಾಠಿ ಚಿತ್ರ ವಿರುದ್ಧ ಸಿಡಿದೆದ್ದಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಸಿನಿಮಾ ಪ್ರದರ್ಶನ ರದ್ದು ಪಡಿಸಲಾಗಿದೆ. ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ ಎಂದು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೇ ಕಾರ್ಯಕರ್ತರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಫಾಲೋವರ್ ಚಿತ್ರಪ್ರದರ್ಶನವನ್ನು ಟಾಕೀಸ್ …
Read More »ಬದುಕೆಂಬುದು ಒಂದು ಪರೀಕ್ಷೆ” ಎಂದು ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಾಗರಾಜ್ ಬೆಳವಡಿ ಕವಿತೆ
ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರಾರಂಭ ಅದರ ಒಂದು ಭಾಗದಂತೆ “ಬದುಕೆಂಬುದು ಒಂದು ಪರೀಕ್ಷೆ” ಎಂದು ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಾಗರಾಜ್ ಬೆಳವಡಿ ಅವರು ತಮ್ಮ ಕವಿತೆಯಿಂದ ಮುಂದಿನ ನುಡಿಗಳನ್ನು ಸಾದರ ಪಡಿಸಿದ್ದಾರೆ ಸದಾ ಒಂದಲ್ಲ ಒಂದು ಕವಿತೆಯನ್ನು ರಚಿಸಿ ಖಾನಾಪೂರ ತಾಲೂಕಿನ ಪರಂಪರೆ ಮತ್ತು ತಾಲೂಕಿನ ಸ್ಥಿತಿ ಗತಿಗೆ ತಕ್ಕಂತೆ ಕವಿತೆ ಸದರ ಪಡಿಸಿರುವ ನಂದಗಡ ಪೋಲಿಸ್ ಠಾಣೆಯ ಹವಾಲ್ದಾರ್ ನಾಗರಾಜ್ ಬೆಳವಡಿ ಅವರು …
Read More »