ಬೆಳಗಾವಿ,: ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆಗೆ (Last Rites) ದುಡ್ಡಿಲ್ಲದೇ ಪರದಾಡುತ್ತಿದ್ದ ತಾಯಿಗೆ ಬೆಳಗಾವಿಯ (Belagavi) ವಿಜಯ ಮೋರೆ ಅವರ ಯಂಗ್ ಬೆಲಗಾಮ್ ಫೌಂಡೇಶನ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಹಣವಿಲ್ಲದೇ ಪರದಾಡುತ್ತಿದ್ದ ಹೆತ್ತತಾಯಿಯ ನೆರವಿಗೆ ಬಂದ ಯಂಗ್ ಬೆಲಗಾಮ್ ಫೌಂಡೇಶನ್ ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಮುಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಎಂಬುವವರು ಅನಾರೋಗ್ಯದಿಂದಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತ ವಿಶ್ವನಾಥನ …
Read More »ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಿಂದ ಬ್ಲಾಕ್‌ಮೇಲ್ : ಕಾಂಗ್ರೆಸ್ ದೂರು
ಬೆಂಗಳೂರು: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ತನಗೆ ಅಡ್ಡಮತ ಚಲಾಯಿಸುವಂತೆ ಬಿಜೆಪಿ (BJP) ಹಾಗೂ ಜಾತ್ಯಾತೀತ ಜನತಾದಳ (JDS) ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕರು ದೂರು ದಾಖಲು ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar), ಪೊನ್ನಣ್ಣ (Ponnanna) ಹಾಗೂ ಕೋನರೆಡ್ಡಿ (Konareddy) ನೇತೃತ್ವದ ನಿಯೋಗದಿಂದ ಬೆಂಗಳೂರು (Benagaluru) ಪೊಲೀಸ್ ಆಯುಕ್ತ ಬಿ. ದಯಾನಂದ್ (B. Dayanand) ಅವರಿಗೆ …
Read More »ರೈತರ ಖಾತೆಗೆ 10,000ರೂ. – 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ
ರಾಜ್ಯದ ರೈತರ ಏಳಿಗೆಗಾಗಿ ಸಿದ್ದು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ರೈತ ಸಿರಿ ಯೋಜನೆ ಪ್ರಮುಖವಾದುದು. ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ಪ್ರೋತ್ಸಾಹ ಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಮೊದಲ ಕಂತಿನಲ್ಲಿ 6,000, 2ನೇ ಕಂತಿನಲ್ಲಿ 4,000 ಹಣ …
Read More »ಮಾ.9ರ ಬಳಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ.!
ಮಾರ್ಚ್ 9ರ ಬಳಿಕ ಭಾರತೀಯ ಚುನಾವಣೆ ಆಯೋಗ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಭಾರತೀಯ ಚುನಾವಾಣಾ ಆಯೋಗ ಉನ್ನತ ಅಧಿಕಾರಿಗಳು ಅಂತಿಮ ಪರಿಶೀಲನೆಗಾಗಿ ರಾಜ್ಯಗಳಿಗೆ ತೆರಳುತ್ತಿದೆ. ಚುನಾವಣಾ ಸಮಿತಿ ಮಾ.9ರ ಬಳಿಕ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದ” ಎಂದು ವರದಿಯಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಭಾರತದಲ್ಲಿ 18ನೇ ಲೋಕಸಭೆಯ ಸದಸ್ಯರ ಆಯ್ಕೆಗೆ ಸಾರ್ವತ್ರಿಕ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
Read More »ಬರ ಪೀಡಿತ ಪ್ರತಿ ತಾಲೂಕುಗಳಲ್ಲಿ ಮೇವು ಬ್ಯಾಂಕ್
ಧಾರವಾಡ, ಫೆಬ್ರವರಿ 19; ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜನರು ಮಾತ್ರವಲ್ಲ ಜಾನುವಾರುಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ಧಾರವಾಡ ಜಿಲ್ಲೆಯಲ್ಲಿ ಬರಪೀಡಿತ ತಾಲೂಕಿಗೊಂದು ಮೇವು ಬ್ಯಾಂಕ್ ಆರಂಭ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸೋಮವಾರ ಮಾದನಭಾವಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ 1,38,492 ಟನ್ ಮೇವು ದಾಸ್ತಾನು ಲಭ್ಯವಿದೆ. ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರ ಬೇಡಿಕೆಗೆ ಅನುಗುಣವಾಗಿ …
Read More »ಪ್ರಯಾಣಿಕರಿಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ‘ಸೆಲ್ಫಿ ಪಾಯಿಂಟ್
ಬೆಂಗಳೂರು, ಫೆಬ್ರವರಿ 19: ಬೆಂಗಳೂರು ನಗರಾದ್ಯಂತ 73.75 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಖುಷಿ ಹೆಚ್ಚಿಸುವ ಕೆಲಸ ಮಾಡಿದೆ. ಅದೇನೆಂದರೆ ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧೆಡೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯಾಣಿಕರಿಗೆಂದೇ ‘ಸೆಲ್ಫಿ ಪಾಯಿಂಟ್’ (Metro Selfie Points) ಅನ್ನು ನಿರ್ಮಿಸಿದೆ. ಬೆಂಗಳೂರು …
Read More »ಗೃಹಲಕ್ಷ್ಮಿ ಹಣ ಬರುತ್ತೆ ಎಂದು ಜೀವ ಬಿಟ್ಟ ಮಗ: ತಾಯಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬೆಳಗಾವಿ ಜಿಲ್ಲೆಯ ಸವದತ್ತಿಯ ಮರಕುಂಬಿ ಗ್ರಾಮದಲ್ಲಿ ಅನಾರೋಗ್ಯದಿಂದ ವಿಶ್ವನಾಥ ಗುರಕ್ಕನವರ (34) ಸಾವನ್ನಪ್ಪಿದ್ದು, ಸಾಯುವ ಮುನ್ನ ತಾಯಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಚಿಂತೆ ಮಾಡಬೇಡ ಎಂದು ಹೇಳಿದ್ದ. ಮಗನ ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ಮಗ ಹೇಳಿದ್ದ ಮಾತುಗಳನ್ನು ತಾಯಿ ನೀಲವ್ವ ನೆನಪು ಮಾಡಿಕೊಂಡಿದ್ದರು.ಮಗನ ಸಾವಿನ ನೋವಿನ ನಡುವೆಯೂ ತಾಯಿ ನೀಲವ್ವ ಆಡಿದ್ದ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ …
Read More »ದಿ.ಜಯಲಲಿತ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ: ಒಡವೆ ಹಿಂದುರುಗಿಸಲು ಕೋರ್ಟ್ ದಿನಾಂಕ ಫಿಕ್ಸ್
ಬೆಂಗಳೂರು: ದಿವಂಗತ ಜಯಲಲಿತಾ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕರ್ನಾಟಕಕ ಜಪ್ತಿ ಮಾಡಿದ್ದಂತ ಒಡವೆಗಳನ್ನು ತಮಿಳುನಾಡಿಗೆ ಹಿಂದಿರುಗಿಸಲು ಕೋರ್ಟ್ ದಿನಾಂಕ ಫಿಕ್ಸ್ ಮಾಡಿದೆ. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದಂತ ಮೋಹನ್ ಅವರು, ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಶಪಡಿಸಿಕೊಂಡಿರುವಂತ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸಲು ದಿನಾಂಕ ನಿಗದಿ ಪಡಿಸಲಾಗಿದೆ. ಮಾರ್ಚ್.6 ಮತ್ತು …
Read More »ಚಿತಾಗಾರ 10 ದಿನಗಳ ಕಾಲ ಬಂದ್
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ 10 ದಿನಗಳ ಕಾಲ ಬಂದ್ ಇರಲಿದೆ.ಬೆಂಗಳೂರು, ಫೆಬ್ರವರಿ 19: ತುರ್ತು ನಿರ್ವಹಣೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ( Rajrajeshwari Nagar ) ವಲಯ ವ್ಯಾಪ್ತಿಯಲ್ಲಿರುವ ಸುಮನಹಳ್ಳಿ ವಿದ್ಯುತ್ ಚಿತಾಗಾರ (Sumanahalli Electric Chitagar) ಮಂಗಳವಾರ “ಫೆಬ್ರವರಿ 20 ರಿಂದ ಫೆಬ್ರವರಿ 29ರ ವರೆಗೆ” 10 ದಿನಗಳ ಕಾಲ ಬಂದ್ ಇರಲಿದೆ. ಸುಮನಹಳ್ಳಿ ಚಿತಾಗಾರ …
Read More »ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ
ಬೆಂಗಳೂರು, ಫೆ.19:ರಾಜ್ಯಸಭೆ ಚುನಾವಣೆಗೆ(Rajya Sabha Election) ಬಿಜೆಪಿ, ಜೆಡಿಎಸ್ ಮೈತ್ರಿ 5ನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ (Congress) ಪಾಳೆಯಕ್ಕೆ ತಲೆಬಿಸಿ ಉಂಟುಮಾಡಿದೆ. ಅಡ್ಡ ಮತದಾನದ ಭೀತಿಯೂ ಎದುರಾಗಿದೆ. ಆ ಮೂಲಕ ಕಳೆದ ಎರಡೂ ರಾಜ್ಯಸಭಾ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮುಂದಾಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ (DK Shivakumar), ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. …
Read More »
Laxmi News 24×7