Breaking News

ರಾಷ್ಟ್ರೀಯ

ರಾಮ ಮಂದಿರ ಉದ್ಘಾಟನೆ ಬಳಿಕ ಕುಟುಂಬ ಸಮೇತ ಭೇಟಿ: ಕೇಜ್ರಿವಾಲ್‌

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ಸಮಾರಂಭದ ಬಳಿಕ ತಾವು ಕುಟುಂಬ ಸಮೇತರಾಗಿ ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ನಾನು ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರೊಂದಿಗೆ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ನಾವು ಹೋಗುತ್ತೇವೆ ಎಂದು ಹೇಳಿದರು. ಆಹ್ವಾನದ ಬಗ್ಗೆ ಕೇಳಿದಾಗ, ನನಗೆ ಸರ್ಕಾರದಿಂದ …

Read More »

ಅಯೋಧ್ಯೆಗೆ ಹೆಲಿಕಾಪ್ಟರ್‌ ಸೇವೆಗಳನ್ನು ಪ್ರಾರಂಭಿಸಲಿದೆ ಯುಪಿ ಸರ್ಕಾರ

ಲಕ್ನೋ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಕೆಲವೇ ದಿನಗಳಲ್ಲಿ ನಡೆಯಲಿದ್ದು ಉತ್ತರ ಪ್ರದೇಶ ಸರ್ಕಾರ ಲಕ್ನೋ, ಗೋರಖ್‌ಪುರ, ಪ್ರಯಾಗರಾಜ್, ವಾರಣಾಸಿ, ಆಗ್ರಾ ಮತ್ತು ಮಥುರಾದಿಂದ ಅಯೋಧ್ಯೆಗೆ ಹೆಲಿಕಾಪ್ಟರ್ ಸೇವೆಗಳನ್ನು ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಜನವರಿ 19 ರಂದು ಲಕ್ನೋದಿಂದ ಹೆಲಿಕಾಪ್ಟರ್ ಸೇವೆಯನ್ನು ಉದ್ಘಾಟಿಸಲಿದ್ದಾರೆ. ಹೆಲಿಕಾಪ್ಟರ್ ಸೇವೆಗಳ ದರವನ್ನೂ ಸರ್ಕಾರ ನಿಗದಿಪಡಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಜಾರಿಯಲ್ಲಿದೆ. ಇದರ ಜೊತೆಗೆ …

Read More »

ಜ. 23ರಂದು ಪಿಎಸ್‌ಐ ಮರುಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಜನವರಿ 23ರಂದು ಪಿಎಸ್‌ಐ ಹುದ್ದೆಗಳ ನೇಮಕಾತಿ ಮರುಪರೀಕ್ಷೆ ನಡೆಯಲಿದೆ. ಒಟ್ಟು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಯುತ್ತಿದ್ದು, ಇದೀಗ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರವೇಶ ಪತ್ರವನ್ನು ಪಡೆಯಲು ಅಭ್ಯರ್ಥಿಗಳು https://kea.kar.nic.inಗೆ ಭೇಟಿ ನೀಡಿ ಸೂಚಿಸಿದ ಮಾಹಿತಿಯನ್ನು ಭರ್ತಿ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಲಾಗಿದ್ದು, ಮಾಂಗಲ್ಯ ಸರ …

Read More »

ಶಿವರಾಮ ಕಾರಂತ ಬಡಾವಣೆ ನಿವೇಶನಗಳಿಗೆ ಅರ್ಜಿ ಆಹ್ವಾನ: ಡಿಕೆಶಿ

ಬೆಂಗಳೂರು: ಇದೇ ತಿಂಗಳು 25 ರಿಂದ ಶಿವರಾಮ ಕಾರಂತ ಬಡಾವಣೆ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಮೊದಲ ಆದ್ಯತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಬಿಡಿಎ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇವೆ. ಶಿವರಾಮ್ ಕಾರಂತ ಬಡಾವಣೆ ನಿವೇಶನಕ್ಕೆ ಆನ್ ಲೈನ್ ಮೂಲಕ …

Read More »

ಭ್ರೂಣಲಿಂಗ ಪತ್ತೆ ಹಾಗೂ ನಕಲಿ ವೈದ್ಯರ ಜಾಲ ಪತ್ತೆಗೆ ಸಂತ್ರಸ್ತರ ರೂಪದಲ್ಲಿ ಡಿಕಾಯ್​​ ಆಪರೇಶನ್ -ಆರೋಗ್ಯ ಇಲಾಖೆ ಪ್ಲಾನ್

ಬೆಂಗಳೂರು, : ಕೊವಿಡ್ (Coronavirus) ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟ ಅಂತಾ ಕೆಲವರು ಅಡ್ಡ ಹಾದಿ ಹಿಡಿದಿದ್ರೆ ಇನ್ನೂ ಹಲವರು ಅನಾರೋಗ್ಯವನ್ನೆ ದಾಳ ಮಾಡಿಕೊಂಡು ಎಂಬಿಬಿಎಸ್ (MBBS) ಪದವಿ ಪಡೆಯದೆ ತರಬೇತಿ ಇಲ್ಲದೆ ಕ್ಲಿನಿಕ್ ಹಾಗೂ ಮೆಡಿಕಲ್ ಕ್ಲಿನಿಕ್ ಓಪನ್ ಮಾಡಿ ಜನರ ಜೀವದ ಜೊತೆ ಚೆಲ್ಲಾಟಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್ ಬಳಿಕ ನಕಲಿ ವೈದ್ಯರ ಹಾಗೂ ಭ್ರೂಣಲಿಂಗ ಪತ್ತೆ ಜಾಲಗಳ ಹಾವಳಿ ಹೆಚ್ಚಾಗಿದ್ದು ಆರೋಗ್ಯ ಇಲಾಖೆ (Health Department) …

Read More »

ಅರಬ್ಬಿ ಸಮುದ್ರದಲ್ಲಿ ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ ರಕ್ಷಣೆ: 7 ಮೀನುಗಾರರು ಸುರಕ್ಷಿತ

ಕಾರವಾರ, ಜನವರಿ 17: ಗೋವಾದ ಕಾಣಕೋಣ ಸಮೀಪದಲ್ಲಿ ಮೀನುಗಾರಿಕಾ ಬೋಟ್ ಅವಘಡ ಸಂಭವಿಸಿದ್ದು, ಮುಳಗುವ ಹಂತದಲ್ಲಿದ್ದ ಯಾಂತ್ರಿಕ ದೋಣಿ(boat)ಯನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. 25 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ. ಮಂಗಳೂರು ಮೂಲದ ರಾಯಲ್ ಬ್ಲೂ ಹೆಸರಿನ ಬೋಟ್ ಮುಳುಗುವ ಹಂತದಲ್ಲಿದ್ದು, ಬೋಟ್​ನಲ್ಲಿದ್ದ ಎಲ್ಲ 7 ಮೀನುಗಾರರು ಸುರಕ್ಷಿತರಾಗಿದ್ದಾರೆ. ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸಹಾಯ ಮೂಲಕ 6 ಬೋಟ್‌ಗಳ ಸಹಾಯದಿಂದ ಸುರಕ್ಷಿತವಾಗಿ ಮೀನುಗಾರರು ಕಾರವಾರ …

Read More »

ಅಯೋಧ್ಯೆ ರಾಮಮಂದಿರಕ್ಕೆ ಧರ್ಮಸ್ಥಳದಿಂದ ಪೂಜಾ ಪರಿಕರಗಳು ರವಾನೆ

ಮಂಗಳೂರು,: ಜನವರಿ 22ರಂದು ಅಯೋಧ್ಯೆ(Ayodhya)ಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರದಲ್ಲಿದ್ದ ಬೆಳ್ಳಿ ಪೂಜಾ ಪರಿಕರಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಅವರು ಪೇಜಾವರ ಶ್ರೀಗಳಿಗೆ ತಲುಪಿಸಲು ನೀಡಿದ್ದಾರೆ. ಜ. 22 ರ ಉದ್ಘಾಟನಾ ಸಮಾರಂಭಕ್ಕೆ ವಿವಿಐಪಿ ಅತಿಥಿಯಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ ನೀಡಲಾಗಿದೆ. ಅಯೋಧ್ಯೆಗೆ ಏನಾದರೂ ಸಮರ್ಪಿಸಬೇಕು ಎನ್ನುವ ಆಸೆಯಿತ್ತು: ಡಾ.ಡಿ.ವೀರೇಂದ್ರ ಹೆಗ್ಗಡೆ ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಧರ್ಮಾಧಿಕಾರಿ …

Read More »

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ: ಅನುಮತಿ ಪಡೆದು ಕಟೌಟ್ ಹಾಕಿದ್ದರೂ FIR ದಾಖಲು

ಬೆಂಗಳೂರು, : ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಅನುಮತಿ ಪಡೆದು ಕಟೌಟ್ ಹಾಕಿದ್ದರೂ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR)ದಾಖಲು ಮಾಡಲಾಗಿದೆ. ಶಿವನಗರ ಯುವಕರ ಸಂಘದಿಂದ ಬೆಸ್ಕಾಂಗೆ ಹಣ ಪಾವತಿಸಿ, ಅನುಮತಿ ಪಡೆದು ಕಾರ್ಡ್‌ ರಸ್ತೆಯ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ. ರಾಜಾಜಿನಗರ ಪೊಲೀಸರ ನಡೆಗೆ ಶಿವನಗರ ಯುವಕರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ರಾಮಜಪ ನಡೆಯುತ್ತಿದೆ. ಇದರ ನಡುವೆ ಕೋಲಾರದಲ್ಲಿ ಕಿಡಿಗೇಡಿಗಳು ಶ್ರೀರಾಮನ ಫ್ಲೆಕ್ಸ್‌ ಹರಿದು …

Read More »

ಎರಡು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ಮಹಿಳೆ!

ಬೆಳಗಾವಿ, (): ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ತಾಯಿ ಸರಸ್ವತಿ ಕಿರವೆ(27), ದೀಪಿಕಾ(7), ರೀತಿಕಾ(4) ಮೃತರು.ತಾಯಿ ಸರಸ್ವತಿ ಎರಡು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 2016ರಲ್ಲಿ ಸಾಂಗ್ಲಿಯ ನಿತಿನ್ ಕಿರವೆ ಜೊತೆ ಮದುವೆ ಆಗಿತ್ತು. ಆದ್ರೆ, ಗಂಡನ ಕಿರುಕುಳ ತಾಳಲಾರದೆ ಸರಸ್ವತಿ ತವರು ಮನೆ ಸೇರಿದ್ದಳು. …

Read More »

ಮಹೇಶ್ ಬಾಬು ಮನೆಯಲ್ಲಿ ‘ಗುಂಟೂರು ಖಾರಂ’ ಯಶಸ್ಸಿನ ಪಾರ್ಟಿ

Mahesh Babu Party: ‘ಗುಂಟೂರು ಖಾರಂ’ ಸಿನಿಮಾ ಯಶಸ್ವಿಯಾದ ಬೆನ್ನಲ್ಲೆ ಮಹೇಶ್ ಬಾಬು ಚಿತ್ರತಂಡಕ್ಕೆ ಪಾರ್ಟಿ ನೀಡಿದ್ದಾರೆ. ಇಲ್ಲಿದೆ ಪಾರ್ಟಿಯ ಚಿತ್ರಗಳು.ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಿನಿಮಾ ಯಶಸ್ವಿಯಾಗಿದೆ.   ವಿಮರ್ಶಕರಿಂದ ಅಷ್ಟೇನೂ ಉತ್ತಮ ವಿಮರ್ಶೆಯನ್ನು ಸಿನಿಮಾ ಪಡೆದುಕೊಂಡಿಲ್ಲವಾದರೂ, ಸಿನಿಮಾ ಉತ್ತಮ ಗಳಿಕೆಯನ್ನೇ ಮಾಡಿದೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿ ಮಹೇಶ್ ಬಾಬು ಚಿತ್ರತಂಡದ ಪ್ರಮುಖರಿಗೆ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜನೆ …

Read More »