ಬೆಂಗಳೂರು, ಫೆಬ್ರವರಿ 03: ನರಬಲಿ (Human sacrifice), ಹೆಣ್ಣು ಮಕ್ಕಳ ಬಲಿ ಈಗಲೂ ಇದೆ. ಕಾಮಾಕ್ಯದಿಂದ ಕೇರಳದವರೆಗೂ (Kerala) ನರಬಲಿ ನಡೆಯುತ್ತದೆ. ಬಡ ಮಕ್ಕಳನ್ನು, ಒಂಟಿ ಹೆಣ್ಣು ಮಕ್ಕಳನ್ನು ಮತ್ತು ಬಿಕ್ಷುಕರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತೆ. ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ. ನೇರವಾಗಿ ಅವರು ಇದರಲ್ಲಿ ಭಾಗಿಯಾಗಲ್ಲ. ಆದರೆ ಈ ಕೆಲಸ ಮಾಡಿಸುತ್ತಾರೆ ಎಂದು ನಿರ್ದೇಶಕಅಗ್ನಿ ಶ್ರೀಧರ್(Agni Sreedhar) ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಂಡುಪಾಳ್ಯ …
Read More »ಬಾಗಲಕೋಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ
ಕುಸ್ತಿ ಗ್ರಾಮೀಣ ಭಾಗದ ಮಣ್ಣಿನ ಕ್ರೀಡೆ. ಮಣ್ಣಿನ ಅಖಾಡದಲ್ಲಿ ತೊಡೆ ತಟ್ಟಿ ನಿಂತ ಮಲ್ಲರನ್ನು ನೋಡೋದೆ ಒಂದು ಖುಷಿ. ಪಟ್ಟು ಹಾಕಿ ಎದುರಾಳಿಯನ್ನು ಎತ್ತಿ ಬಿಸಾಕುವ ಜಟ್ಟಿಗಳ ಕಾದಾಟ, ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ಇಂದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ಪೈಲ್ವಾನರು ಭರ್ಜರಿ ಸೆಣಸಾಟ ನಡೆಸಿ ದೂಳೆಬ್ಬಿಸಿದರು. ಅದರ ಝಲಕ್ ಇಲ್ಲಿದೆ.ಹಲಗೆ ಬಾರಿಸುತ್ತಾ ಜಟ್ಟಿಗಳಿಗೆ ಹುರುಪು ನೀಡುತ್ತಿರುವ ಹಲಗೆ ಮೇಳ ಕಲಾವಿದರು.ಮಣ್ಣಿನ ಅಖಾಡದಲ್ಲಿ ಎದುರಾಳಿಯನ್ನು ಎತ್ತಿ ನೆಲಕ್ಕೆ ಬಡಿಯುವ …
Read More »ಸವದಿ ಜೊತೆ ನಿರಂತರ ಸಂಪರ್ಕ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಅಲರ್ಟ್ ಆದ ‘ಕೈ’ ಹೈಕಮಾಂಡ್
ಬೆಳಗಾವಿ, ಫೆ.03: ಮಾಜಿ ಸಿಎಂ, ಕಾಂಗ್ರೆಸ್ನ ಎಂಎಲ್ಸಿ ಆಗಿದ್ದ ಜಗದೀಶ್ ಶೆಟ್ಟರ್ (Jagadish Shettar) ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ (Congress) ಸೇರಿದ್ದರು. ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಎಂಎಲ್ಸಿ ಸ್ಥಾನ ನೀಡಿ ಗೌರವಿಸಿತ್ತು. ಇಷ್ಟೆಲ್ಲ ಇದ್ದರೂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (BJP) ಸೇರಿದ್ದಾರೆ. ಇದು ಕಾಂಗ್ರೆಸ್ಗೆ ಭಾರೀ ಆಘಾತ ತಂದಿದೆ. ಮತ್ತೊಂದೆಡೆ ಲಕ್ಷ್ಮಣ ಸವದಿ (Laxman Savadi) ಕೂಡ …
Read More »ಮೋದಿ ಕಂಡರೆ ಬಿಜೆಪಿಗರು ಇಲಿಗಳಂತಾಗುತ್ತಾರೆ: ತಂಗಡಗಿ
ಕೊಪ್ಪಳ: ಪ್ರಧಾನಿ (PM) ನರೇಂದ್ರ ಮೋದಿಯವರನ್ನು (narendra modi) ನೋಡಿದರೆ ರಾಜ್ಯ ಬಿಜೆಪಿ (BJP) ನಾಯಕರೆಲ್ಲ ಇಲಿಗಳಂತಾಗುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ (shivaraj tangadagi) ಹೇಳಿದರು. ಕೊಪ್ಪಳದ (Koppal) ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಧ್ವಜ ಹಿಡಿದು ಓಡಾಡುವುದನ್ನು ಬಿಟ್ಟು ಬಿಜೆಪಿಯವರು ದೆಹಲಿಗೆ (delhi) ಹೋಗಿ ರಾಜ್ಯದ ತೆರಿಗೆ ಪಾಲು ಕೇಳಲಿ. ನಾವು ಯಾರ ಆಸ್ತಿಯನ್ನು ಕೇಳುತ್ತಿಲ್ಲ. ಬಿಜೆಪಿಯವರು ಡಿ.ಕೆ. ಸುರೇಶ್ (d.k. suresh) ಬಗ್ಗೆ ಮಾತಾಡುವ …
Read More »ಸಿದ್ಧಗಂಗಾ ಮಠದ ಶಿವಕುಮಾರಶ್ರೀಗೆ ಮರಣೋತ್ತರ ಭಾರತ ರತ್ನ ಸಿಗಲಿ: ಸುರ್ಜೇವಾಲ ಒತ್ತಾಯ
ಬೆಂಗಳೂರು, ಫೆಬ್ರವರಿ 3: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Randeep Surjewala)ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಅನ್ನ, ಅಕ್ಷರ, ಜ್ಞಾನದಂತಹ ತ್ರಿವಿಧ ದಾಸೋಹ ನೀಡಿದ ಮಹಾಪುರುಷ ಸಿದ್ಧಗಂಗಾ ಮಠದ ಶಿವಕುಮಾರಶ್ರೀಗೆ ಮರಣೋತ್ತರ ಭಾರತರತ್ನ ಸಿಗಲಿ. ಲಕ್ಷಾಂತರ ಮಕ್ಕಳಿಗೆ ಉಚಿತ ಅನ್ನ, ಶಿಕ್ಷಣ ನೀಡಿದ ಮಹನೀಯರು. ಈ ಗೌರವಕ್ಕೆ ಅವರಂತಹ …
Read More »ಮುಂದಿನ ವಾರದಿಂದ 29 ರೂ.ಗೆ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ
ನವದೆಹಲಿ,ಫೆ.3- ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದಲೇ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವೇ ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೇ ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ಕೇಂದ್ರ ಆಹಾರ ಇಲಾಖೆಯ …
Read More »ದೆಹಲಿ ಸಿಸಿಬಿ ಪೊಲೀಸರಿಂದ ಕೇಜ್ರಿಗೆ ನೋಟಿಸ್
ನವದೆಹಲಿ, ಫೆ.3- ನಮ್ಮ ಸರ್ಕಾರವನ್ನು ಅಸ್ಥಿರಗೊಳಿ ಸಲು ಸಂಚು ರೂಪಿಸಿರುವ ಬಿಜೆಪಿ ಆಮ್ ಆದ್ಮಿ ಪಕ್ಷದ ಏಳು ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಇವರಿಗೆ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ, ಬಿಜೆಪಿ ತನ್ನ ಏಳು ಶಾಸಕರಿಗೆ ಪಕ್ಷ ತೊರೆಯಲು …
Read More »ಪೂನಂ ಪಾಂಡೆ ಸತ್ತಿಲ್ಲ, ಸಾವಿನ ಸುದ್ದಿಗೆ ಹೊಸ ಟ್ವಿಸ್ಟ್..!
ಮುಂಬೈ,ಫೆ.3- ಸ್ವಯಂ ಸಾವಿನ ಸುದ್ದಿ ಹರಿಯಬಿಟ್ಟು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಇಂದು ದಿಢೀರ್ ಪ್ರತ್ಯಕ್ಷವಾಗಿ ನಾನು ಬದುಕಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಇದ್ದಕ್ಕಿದ್ದಂತೆ ಸುದ್ದಿಯೊಂದು ಹರಿದಾಡಿದ್ದು, ಉತ್ತರಪ್ರದೇಶದಲ್ಲಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂತು. ಹಲವು ಗೊಂದಲಗಳ ನಡುವೆಯೇ ಪೂನಂ ಪಾಂಡೆ ಅವರ …
Read More »ರಾಜಕೀಯಕ್ಕೆ ಬರ್ತಾರಾ ಡಾ.ಮಂಜುನಾಥ್..?
ಬೆಂಗಳೂರು,ಫೆ.3- ರಾಜಕೀಯ ಪ್ರವೇಶ ಮಾಡುವ ಆಲೋಚನೆ ಮಾಡಿಲ್ಲ ಎಂದು ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ಮುಂದುವರೆಯುವುದಾಗಿ ಹೇಳಿದರು. ರಾಜಕೀಯ ಪ್ರವೇಶ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹವನ್ನು ಅವರು ಅಲ್ಲೆಗೆಳೆದರು. ಕೆಂಪೇಗೌಡ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವ ಉದ್ದೇಶವನ್ನು ಒಕ್ಕಲಿಗರ ಸಂಘ ಹೊಂದಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಒಕ್ಕಲಿಗರ ಸಂಘದ ಕೋರಿಕೆ …
Read More »ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್ : ರಾಜಸ್ಥಾನ್ ಮಹಿಳಾ ತಂಡಕ್ಕೆ ಚಿನ್ನ
ಬೆಂಗಳೂರು, ಫೆ.3- ಕೋರಮಂಗಲದ ಕೆಎಸ್‍ಆರ್‍ಪಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್‍ನಲ್ಲಿ ರಿಕರ್ವ್ ತಂಡದ ಪುರುಷ ವಿಭಾಗದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ರೀಡಾಪಟುಗಳಾದ ತುಷಾರ್ ಪ್ರಭಾಕರ್ ಶೆಲ್ಕೆ, ನೀರಜ್ ಚೌಹಾಣ್, ಮುಖೇಶ್ ಬೋರೊ, ಜಿತೇಂದರ್ ಸಿಂಗ್ 6 ಪಾಯಿಂಟ್ ಗಳಿಸಿದ್ದಾರೆ. ಸಿಆರ್‍ಪಿಎಫ್ ತಂಡದ ಬಸಂತ್ ಕುಮಾರ್, ಕಮಲ್ ಸಾಗರ್, ಹೈದಬ್ ತಿರಿಯಾ, ವಿನಾಯಕ್ ವರ್ಮ ಅವರು 2 ಪಾಯಿಂಟ್‍ಗಳನ್ನು ಗಳಿಸಿರುತ್ತಾರೆ. ಈ ಹಂತದಲ್ಲಿ …
Read More »