ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಲಿದ್ದಾರೆ. ವಿದೇಶಾಂಗ ಸಚಿವಾಲಯ ಮಂಗಳವಾರ ಭೇಟಿ ಬಗ್ಗೆ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಅದರ ನಂತರ ಫ್ರೆಂಚ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಭಯ ನಾಯಕರು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಚರ್ಚೆ ನಡೆಸುವ …
Read More »ರೈಲ್ವೆ ಸೇವೆಗಳೆಲ್ಲವೂ ಈಗ ಒಂದೇ ಕಡೆ – `Railone App’ ಬಿಡುಗಡೆ
ನವದೆಹಲಿ: ಭಾರತೀಯ ರೈಲ್ವೆಯು ತನ್ನ ಅಧಿಕೃತ `ಆಲ್-ಇನ್-ಒನ್’ ಸೂಪರ್ ಆ್ಯಪ್ ಆದ `ರೈಲ್‌ಒನ್’ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಮೂಲಕ ಹಲವಾರು ಸೌಲಭ್ಯಗಳನ್ನು ಪ್ರಯಾಣಿಕರು ಒಂದೇ ಆ್ಯಪ್‌ನಡಿಯಲ್ಲಿ ಪಡೆದುಕೊಳ್ಳುತ್ತಾರೆ. ರೈಲ್ವೆ ಪ್ರಯಾಣವನ್ನು ಹೆಚ್ಚು ಸ್ಮಾರ್ಟ್, ವೇಗ ಮತ್ತು ತೊಂದರೆರಹಿತವಾಗಿಸುತ್ತದೆ. ರೈಲ್‌ಒನ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಟಿಕೆಟ್‌ಗಳು, ಕಾಯ್ದಿರಿಸದ ಟಿಕೆಟ್‌ಗಳು, ಪ್ಲಾಟ್ಫಾರ್ಮ್ …
Read More »ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡಿದ ರೋಷನ್ ಬೇಗ್
ನವದೆಹಲಿ: ನಾನು ರಾಜಕೀಯದಿಂದ ನಾಪತ್ತೆಯಾಗಿಲ್ಲ, ಎಲ್ಲರೂ ಸೇರಿ ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಿದ್ದರು ನಿಧಾನವಾಗಿ ಅವುಗಳಿಂದ ಆಚೆ ಬರುತ್ತಿದ್ದೇನೆ. ರಾಜಕೀಯ ನನ್ನ ರಕ್ತದಲ್ಲಿದೆ, ವಿದ್ಯಾರ್ಥಿ ಜೀವನದಿಂದ ರಾಜಕೀಯ ಮಾಡುತ್ತಿದ್ದೇನೆ. ಮುಂದೆ ನಾನು ಸಕ್ರೀಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಬಳಿಕ ಮಾತಮಾಡಿದ ಅವರು ಅವರು, ನಾನು ಚಿಕ್ಕಪ್ಪ ದೊಡ್ಡಪ್ಪ ಮೂಲಕ ರಾಜಕೀಯಕ್ಕೆ …
Read More »ಗಂಟಲಿನ ಸೋಂಕಿನಿಂದ ಎನ್‌ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಪುಣೆ, ಫೆಬ್ರವರಿ 9: ಎನ್‌ಸಿಪಿ ನಾಯಕ ಶರದ್ ಪವಾರ್ ಗಂಟಲು ಸಂಬಂಧಿತ ಸಮಸ್ಯೆಗಳು, ಕೆಮ್ಮು ಮತ್ತು ಜ್ವರದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಅವರ ನಿವಾಸದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಬಾರಾಮತಿಯಲ್ಲಿದ್ದಾಗಲೇ ಅವರು ಅಸ್ವಸ್ಥರಾಗಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರೂ ಅವರ ಅನಾರೋಗ್ಯ ಮುಂದುವರಿದ ಕಾರಣದಿಂದ ಚಿಕಿತ್ಸೆಗಾಗಿ ಅವರನ್ನು ಪುಣೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದರು. ಎನ್‌ಸಿಪಿ ನಾಯಕ ಶರದ್ …
Read More »ಬಿಗ್ ಡೀಲ್ ಸಕ್ಸಸ್ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್ ಸಹಿ
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್ ಕಂಡಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಹೌದು. ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನ 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು. …
Read More »ಕೇರಳದ ಮೆಡಿಕಲ್ ಕಾಲೇಜು ಬಳಿ ಸ್ಫೋಟಕ ತುಂಬಿದ 100 ಕ್ಕೂ ಹೆಚ್ಚು ಬಾಕ್ಸ್ ವಶಕ್ಕೆ – ಬೆಚ್ಚಿಬಿದ್ದ ಜನ
ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯಕೀಯ ಕಾಲೇಜು ಬಳಿಯ ವ್ಯಾನ್‌ನಿಂದ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು ಬಾಕ್ಸ್‌ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಫೋಟಕ ತಿಂಬಿದ ಪೆಟ್ಟಿಗೆಗಳನ್ನ ಪಿಕಪ್ ವಾಹನದಲ್ಲಿ ರಹಸ್ಯವಾಗಿ ಸಾಗಿಸಲಾಗುತ್ತಿತ್ತು. ಆದ್ರೆ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದು, ಇಡೀ ಕೇರಳದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಪಾಲಕ್ಕಾಡ್ ವೈದ್ಯಕೀಯ ಕಾಲೇಜು …
Read More »ಕರ್ನಾಟಕ ರಾಜ್ಯಪಾಲರ ಸಹಿ ದುರ್ಬಳಕೆ, ಸುಳ್ಳು ನೇಮಕಾತಿ ಆದೇಶ!
ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸಹಿ ನಕಲು ಮಾಡಿ ಖೊಟ್ಟಿ ಲೆಟರ್‌ಹೆಡ್ ಬಳಸುತ್ತಿದ್ದ ನಕಲಿ ಐಪಿಎಸ್, ಐಎಎಸ್ ಅಧಿಕಾರಿ ಎಚ್.ಎನ್. ಸುಜಯೇಂದ್ರ (45) ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ನೀಡಿದ ದೂರಿನನ್ವಯ ಸುಜಯೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ …
Read More »ನಾನು ಜೀವನದ ಕೊನೆಗಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ ಕರ್ನಾಟಕ ರಕ್ಷಿಸಿ: ಹೆಚ್‌ಡಿಡಿ
ನವದೆಹಲಿ: ರಾಜ್ಯ ಎದುರಿಸುತ್ತಿರುವ ನೀರಾವರಿ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಮಾತಾನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಯಮಾಡಿ ಪರಿಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು ಮಾತನಾಡಿದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ …
Read More »ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಹೆಚ್‌ಡಿಕೆ
ನವದೆಹಲಿ: ಉಕ್ಕು ಸಚಿವಾಲಯದ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂಸತ್ತಿನಲ್ಲಿ ಕೇಂದ್ರದ ಹಣಕಾಸು ಸಚಿವರ ಕಚೇರಿಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಪ್ರಮುಖ ಅಭಿವೃದ್ಧಿ ಆದ್ಯತೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದರು. ಉಕ್ಕು …
Read More »ಎಸ್ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ
ನವದೆಹಲಿ, ಫೆಬ್ರವರಿ 04: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದು ವಾದ ಮಂಡಿಸಲು ಕೋರ್ಟ್ಗೆ ತೆರಳಿರುವ ವಿಡಿಯೋ ವೈರಲ್ ಆಗಿದೆ. ಬಿಳಿ ಸೀರೆ ಜತೆ ಕಪ್ಪು ದುಪಟ್ಟಾ ಧರಿಸಿ ಅವರು ಕೋರ್ಟ್ಗೆ ತೆರಳಿದ್ದರು. ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ …
Read More »
Laxmi News 24×7