ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ …
Read More »ರಾಜ್ಯದಲ್ಲಿ 7 ಮಂದಿಗೆ ಕೊರೊನಾ, ಐವರಿಗೆ ಜಮಾತ್ ನಂಟು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ. ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ. ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ …
Read More »ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಕೊರೋನಾ ಶಂಕೆ ಹಿನ್ನಲೆಯಲ್ಲಿ ವಿದೇಶದಿಂದ ಬಾಂದವರನ್ನು 16 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ್ ಸೇರಿ 6 ದೇಶಗಳಿಂದ 47 ಮಂದಿ ಭಾರತೀಯರು ಆಗಮಿಸಿದ್ದರು. ಕೊರೋನಾ ಶಂಕೆ ಹಿನ್ನೆಲೆ, ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ …
Read More »ಜಮಾತ್‍ಗೆ ಹೋದವರಿಂದಲೇ ದೇಶಾದ್ಯಂತ ಕೊರೊನಾ ಹಬ್ಬಿಸುವ ದುಷ್ಕೃತ್ಯ: ಕರಂದ್ಲಾಜೆ
ಚಿಕ್ಕಮಗಳೂರು: ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೊನಾ ವೈರಸ್ ಹಬ್ಬಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರಿನ ನಗರಸಭೆಯಲ್ಲಿ ಮಾತನಾಡಿದ ಅವರು, ಜಮಾತ್ ಸಭೆಗೆ ಹೋದ ಹಲವರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೊರೊನಾ ಜಿಹಾದಿಯ ವಾಸನೆ ಕೂಡ ಬಡಿಯುತ್ತಿದೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಯಾರು ದೆಹಲಿಗೆ ಹೋಗಿದ್ದರೋ ಅವರನ್ನ ಪತ್ತೆ ಹಚ್ಚುವ …
Read More »ಗ್ರಾಹಕನ ಸೋಗಿನಲ್ಲಿ ಹೋಗಿ ಬಂಧಿಸಿದ ಪೊಲೀಸರು – 100 ರೂ. ಮೌಲ್ಯದ ಮದ್ಯ 400 ರೂ. ಗೆ ಮಾರಾಟ
ಚೆನ್ನೈ: ಲಾಕ್‍ಡೌನ್ ಮಧ್ಯೆಯೂ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚೆನ್ನೈನ ಹಮ್ಸಾ ಪಾರ್ಕ್ ನಿವಾಸಿ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಈತ ಲಾಕ್‍ಡೌನ್ ಆಗಿರುವುದನ್ನೇ ಬಂಡವಾಳ ಮಾಡಿಕೊಂಡು ಮದ್ಯವನ್ನು ಸಂಗ್ರಹಿಸಿ ಅದನ್ನು ವಾಟ್ಸಪ್ ಮೂಲಕ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಕೊರೊನಾ ಭಯದಿಂದ ಇಡೀ …
Read More »ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ……..
ನವದೆಹಲಿ: ಏಮ್ಸ್ ವೈದ್ಯನ ಪತ್ನಿ ತುಂಬು ಗರ್ಭಿಣಿಯಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ವೈದ್ಯನ ಪತ್ನಿ ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಸೋಂಕು ಬಂದಿರುವುದು ಧೃಡಪಟ್ಟಿತ್ತು. ನಂತರ ಅವರ ಮನೆಯವರನ್ನು ತಪಾಸಣೆ ಮಾಡಲಾಗಿತ್ತು. ಆಗ 39 ವಾರಗಳ ತುಂಬು ಗರ್ಭಿಣಿ ವೈದ್ಯನ ಪತ್ನಿಯಲ್ಲೂ ಕೊರೊನಾ ಪಾಸಿಟಿವ್ …
Read More »ಬೇಸಗೆಯ ತೀವ್ರತೆಯ ಜೊತೆಗೇ ರಾಜ್ಯದ 9 ಜಿಲ್ಲೆಗಳಲ್ಲಿ ಈಗಾಗಲೇ ಬರದ ಕರಿ ನೆರಳು ಆವರಿಸಿದೆ
ಬೆಂಗಳೂರು : ಕೊರೋನಾ ವೈರಾಣುವಿನ ಅಬ್ಬರದ ನಡುವೆಯೇ ಜನರ ಜೀವ ಹೈರಾಣಾಗಿಸುವ ಬರಗಾಲ ಸದ್ದಿಲ್ಲದೇ ರಾಜ್ಯಕ್ಕೆ ಕಾಲಿಟ್ಟಿದೆ. ಏಪ್ರಿಲ್ ತಿಂಗಳು ಆರಂಭದಲ್ಲಿ ರಾಜ್ಯದಲ್ಲಿ ಹಲವಾರು ಪ್ರದೇಶಗಳಲ್ಲಿ ಬರಗಾಲದ ಛಾಯೆ ಆವರಿಸಲು ಆರಂಭಿಸಿದೆ. ಬೇಸಗೆಯ ತೀವ್ರತೆಯ ಜೊತೆಗೇ ರಾಜ್ಯದ 9 ಜಿಲ್ಲೆಗಳಲ್ಲಿ ಈಗಾಗಲೇ ಬರದ ಕರಿ ನೆರಳು ಆವರಿಸಿದೆ. ಅದಾಗಲೇ ನೀರಿಗಾಗಿ ತತ್ವಾರ ಆರಂಭವಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಆರಮಭವಾಗಿದ್ದು ಮುಂದಿನ ದಿನಗಳಲ್ಲಿ ಇದು ತಾರಕಕ್ಕೇರುವ ಲಕ್ಷಣಗಳು …
Read More »ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ
ನವದೆಹಲಿ: ನೆರೆ ಪರಿಹಾರ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಧೋರಣೆ ಮುಂದುವರಿಸಿದೆ. ಕೊರೊನಾ ವೈರಸ್‍ನಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬಂದಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಇಂದು 17,287.08 ಕೋಟಿ ಹಣವನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಎಸ್‍ಡಿಆರ್‍ಎಫ್ ಅನುದಾನದ ಅಡಿ 2020-21 ರ ಮೊದಲ ಕಂತಾಗಿ …
Read More »ಏ. 30ರವರೆಗೆ ಏರ್‌ಇಂಡಿಯಾ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್
ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟವನ್ನು ನಿಷೇಧ ಮಾಡಲಾಗಿತ್ತು. ಇದೀಗ ಏರ್‌ಇಂಡಿಯಾ ತನ್ನ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಯಾದ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ವಿಸ್ತರಿಸಿದೆ. ಏಪ್ರಿಲ್ 14ರವರೆಗೂ ಲಾಕ್‍ಡೌನ್ ಇರುವುದರಿಂದ ಏಪ್ರಿಲ್ 30ರವರೆಗೂ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಅನ್ನು ನಿಲ್ಲಿಸಲು ಏರ್ ಇಂಡಿಯಾ ತೀರ್ಮಾನಿಸಿದೆ. ಏಪ್ರಿಲ್ 14ರ ನಂತರ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗುವುದು …
Read More »ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ದೃಢ ವಿಚಾರ ಪೇಷಂಟ್ ನಂಬರ್ 128 – 20 ವರ್ಷದ ಯುವಕನ ಟ್ರಾವೆಲ್ ಹಿಸ್ಟರಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆ ವಿಚಾರವಾಗಿ ಸೋಂಕು ಪೀಡಿತ ವ್ಯಕ್ತಿ ಸಂಖ್ಯೆ 126ರ ಟ್ರಾವೆಲ್ ಹಿಸ್ಟ್ರಿ ಹೀಗಿದೆ ಮಾರ್ಚ್ 4 ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಆಗಮನ. ನಂತರ ಎಂದಿನಂತೆ ಕಸಾಯಿ ಖಾನೆ ಕೆಲಸದಲ್ಲಿ ಭಾಗಿ. ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದರ ಹಿನ್ನಲೆಯಲ್ಲಿ ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರಿಗೂ ಜಿಲ್ಲಾಡಳಿತ ತೀವ್ರ ಹುಡುಕಾಟ …
Read More »