Breaking News

ರಾಷ್ಟ್ರೀಯ

ಆಸ್ಪತ್ರೆಯಲ್ಲಿ ಶವಗಳ ರಾಶಿ, ವಿಧಿಯಾಟ ಇದೇ ಅಲ್ಲವೇ..? ವಿಶ್ವದ ದೊಡ್ಡಣ್ಣನಿಗೆ ಕೊರೊನಾ ವಕ್ಕಿರಿಸಿ ತಲೆತಿರುಗಿಸಿದೆ

ನ್ಯೂಯಾರ್ಕ್,- ಸಾವು ಹೇಗೆ ಬರುತ್ತದೋ ಗೊತ್ತಾಗದೇ ಇಲ್ಲ. ಆದರೆ ಶವ ಸಂಸ್ಕಾರ ಮಾಡಲು ಆಗದಂತಹ ದಿನಗಳೂ ಬರುತ್ತದೆ ಎಂಬುದನ್ನು ಕೊರೊನಾ ತೋರಿಸುತ್ತಿದೆ. ಶ್ರೀಮಂತ-ಬಡವ ಎಂಬುದಿಲ್ಲ ಎಂಬುದಕ್ಕೆ ಉದಾಹರಣೆ ನ್ಯೂಯಾರ್ಕ್‍ನಲ್ಲಿ ವರದಿಯಾಗಿದೆ. ವಿಶ್ವದ ಶ್ರೀಮಂತ, ಶಕ್ತಿಯುತ ರಾಷ್ಟ್ರವಾಗಿರುವ ಅಮೆರಿಕ ಕೊರೊನಾ ಹೊಡೆತಕ್ಕೆ ತತ್ತರಿಸಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರುತ್ತಿದೆ. ಸೋಂಕಿತರು ಲಕ್ಷಗಟ್ಟಲೇ ಏರುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆನಗರ ನ್ಯೂಜರ್ಸಿ ರಾಜ್ಯದ ಸಣ್ಣನಗರ ಸೂಸೆಕ್ಸ್ ಎಂಬಲ್ಲಿ ಆಸ್ಪತ್ರೆಯೇ ಶವಾಗಾರವಾಗಿದೆ…! ಇದನ್ನು ಊಹಿಸಿದರೆ …

Read More »

ಎಸ್.ಎಸ್.ಎಲ್.ಸಿ ವೇಳಾಪಟ್ಟಿ ಪ್ರಕಟಿಸಿಲ್ಲ : ಸಚಿವ ಸುರೇಶ್‌ಕುಮಾರ್ ಸ್ಪಷ್ಟನೆ

ಬೆಂಗಳೂರು : ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ ಈ ಕುರಿತ ವರದಿಗಳು ಸುಳ್ಳು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ. ಈ ಕುರಿತು ಫೇಸ್‌ಬುಕ್ ಲೈವ್‌ನಲ್ಲಿ ಸ್ಪಷ್ಟಪಡಿಸಿದ ಸಚಿವರು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂಬ ವದಂತಿಗಳ ಸತ್ಯಕ್ಕೆ ದೂರವಾದದ್ದು. ಈ ಸಂಬಂಧ ಇದುವರೆಗೆ ಶಿಕ್ಷಣ ಇಲಾಖೆ ಇದುವರೆಗೆ ಯಾವುದೇ ಪ್ರಕಟಣೆಗಳನ್ನು ಹೊರಡಿಸಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಒಳಗಾಗುವುದು …

Read More »

ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನಕ್ಕಾಗಿ ನೀರಾವರಿ ಆಯೋಗ ಸ್ಥಾಪನೆ

ಬೆಂಗಳೂರು : ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕ್ಯಾ ರಾಜಾರಾವ್ ಅವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದ ನಂತರ‌ ಮಾತನಾಡಿದ ಸಚಿವರು, ಕುಡಿಯುವ ನೀರು, ಅಂತರ್ಜಲ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ನೀರಿನ ಬಳಕೆ ಕುರಿತಂತೆ ದೂರದೃಷ್ಟಿಯ ನೀಲನಕ್ಷೆ …

Read More »

ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ

ನವದೆಹಲಿ: ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರಿಂದ ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್‍ಡೀಲ್ ಕಂಪನಿಗಳು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳು ಆನ್‍ಲೈನ್ ವೇದಿಕೆಯಲ್ಲಿ ದೊರೆಯಲಿವೆ. ಆದರೆ ಕಂಪನಿಗಳ ಡೆಲಿವರಿ ವಾಹನಗಳು ಆಯಾ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಬುಧವಾರ ಕೇಂದ್ರ ಸರ್ಕಾರ …

Read More »

ಕೋವಿಡ್-19 ನಿಯಂತ್ರಣ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿಡಿಯೋ ಸಂವಾದ

ಕೋವಿಡ್-19 ನಿಯಂತ್ರಣ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿಡಿಯೋ ಸಂವಾದ ಬೆಳಗಾವಿ, ಏ.16:(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದ್ದರಿಂದ ಇದು ಇನ್ನಷ್ಟು ಹರಡದಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳ ಅಧಿಕಾರಿಗಳ ಜತೆ …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ

ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ ಮಾಡುವುದು ಬೆಳಕಿಗೆ ಬಂದಿದೆ. ಕಳೆದ 25ದಿನಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧಕಡೆ ದಾಳಿ ನಡೆಸಿ 40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ಮದ್ಯ ಮಾರಾಟಗಾರರು ತಮ್ಮ ಅಂಗಡಿ ಕಳ್ಳತನವಾಗಿದೆ ಎಂದು ಪ್ರತಿ ಬಿಂಬಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು, ನಿಮ್ಮ ಬಳಿ ಇರುವ ಮದ್ಯ ಮತ್ತು ಬೀಯರ್ …

Read More »

ನಮಾಜ್, ಪೂಜೆ ಮನೆಯಲ್ಲೇ ಮಾಡಿ: ಸಲ್ಮಾನ್ ಖಾನ್

ನವದೆಹಲಿ: ಲಾಕ್‍ಡೌನ್ ಕುರಿತು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಎಚ್ಚರಿಸುತ್ತಿದ್ದು, ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ. ಈ ಕುರಿತು ಅವರದ್ದೇ ಉದಾಹರಣೆಯನ್ನು ನೀಡುತ್ತಿದ್ದು, ತಂದೆಯನ್ನು ನೋಡಲಿಕ್ಕಾಗದೆ ಪರಿತಪಿಸುತ್ತಿರುವ ಪರಿಯನ್ನು ಸಹ ವಿವರಿಸಿದ್ದಾರೆ. ಕೊರೊನಾ ವಾರಿಯರ್ಸ್ ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಗೌರವ ಕೊಡೋಣ, ಹಿಂದೂಸ್ಥಾನವನ್ನು ಕೊರೊನಾದಿಂದ ರಕ್ಷಿಸೋಣ ಎಂದು ಮನವಿ ಮಾಡಿದ್ದಾರೆ. ಹೌದು ಲಾಕ್‍ಡೌನ್ ಸಂದರ್ಭದಲ್ಲಿಯೂ ಹಗಲು ರಾತ್ರಿ ಎನ್ನದೆ ನಮಗಾಗಿ ದುಡಿಯುತ್ತಿರುವ …

Read More »

ಕೊರೊನಾ ವೈರಸ್ ನ ನಿಗೂಢ ರಹಸ್ಯವನ್ನು ಭೇದಿಸಲು ಮುಂದಾದ ಅಮೆರಿಕ

ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವುಹಾನ್ ನಲ್ಲಿ ಎಲ್ಲಿ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಿಗೂಢ ರಹಸ್ಯವನ್ನು ಭೇದಿಸಲು ಅಮೆರಿಕ ಈಗ ಮುಂದಾಗಿದೆ. ಅಮೆರಿಕ ಸರ್ಕಾರ ಈ ವೈರಸ್ ಮೊದಲು ವುಹಾನ್ ನಲ್ಲಿರುವ ವೆಟ್ ಮಾರುಕಟ್ಟೆಯಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ವುಹಾನ್ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಆಗಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಈ …

Read More »

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು.

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು. ಗಬ್ಬು ನಾತಕ್ಕೆ ಗ್ರಾ.ಪಂ.ನಾಕರ ರೊಚ್ಚಿಗೆದ್ದ ಗ್ರಾಮಸ್ಥರು. ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ.  ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ. ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ಹೋಳೆ ಹರಿದ ಚರಂಡಿ ನೀರು. ಸೊಳ್ಳೆ, ನೊಣ,ತಿಗಣಿ ಕಾಟಕ್ಕೆ ಗ್ರಾಮಸ್ಥರಿಗಿಲ್ಲ ನಿದ್ದೆ. ಯಾದಗೀರಿ ಜಿಲ್ಲೆಯ ಎಮ್ ಹೊಸಳ್ಳಿ ಗ್ರಾಮದಲ್ಲಿ ದುರ್ನಾತ. ಭಯಾನಕ ಕರೋನ ರೋಗಕ್ಕೆ ಭಯಪಟ್ಟ ಗ್ರಾಮಸ್ಥರು. ಮನೆಗೆ ನುಗ್ಗಿದ ಚರಂಡಿ ನೀರು …

Read More »

ರಾಮನಗರದ ತೋಟದ ಮನೆಯಲ್ಲಿ ನಿಖಿಲ್-ರೇವತಿ ಸಿಂಪಲ್ ಮದುವೆ ……

ಬೆಂಗಳೂರು,ಏ.16-ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವದ ಅಂಗವಾಗಿ ಇಂದು ಅರಿಶಿಣ ಶಾಸ್ತ್ರ ಅವರವರ ನಿವಾಸದಲ್ಲಿ ನಡೆಯಲಿದೆ. ಮೊದಲು ರಾಮನಗರ ಚನ್ನಪಟ್ಟಣ ಮಧ್ಯೆ ಬೃಹತ್ ವೇದಿಕೆಯಲ್ಲಿ ವಿವಾಹ ನಡೆಸಲು ನಿರ್ಧಾರವಾಗಿತ್ತು. ತದನಂತರ ಕೊರೋನಾ ಹಾವಳಿಯಿಂದ ಸಮಸ್ಯೆ ಎದುರಾಗುತ್ತದೆ ಎಂದು ಅರಮನೆ ಮೈದಾನದ ಒಳಗೆ ನಿಗದಿ ಮಾಡಲಾಯಿತು. ಆದರೂ ಅದೂ ಬೇಡವೆಂದು ವಧುವಿನ ಸ್ವಗೃಹದಲ್ಲಿ ವಿವಾಹ ಎಂದು ನಿಶ್ಚಯವಾಗಿತ್ತು. ಇವೆಲ್ಲವೂ ಒಂದು ಕಡೆಯಾದರೆ ಕೊನೆಗೂ …

Read More »