Breaking News

ರಾಷ್ಟ್ರೀಯ

ನಗರದಲ್ಲಿ ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಕಸಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ-2020ರಡಿ ಮಾಸಿಕ 200

ಬೆಂಗಳೂರು: ನಗರದಲ್ಲಿ ಪ್ರತಿ ಮನೆಗಳಿಂದ ಉತ್ಪತ್ತಿಯಾಗುವ ಕಸಕ್ಕೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪನಿಯಮ-2020ರಡಿ ಮಾಸಿಕ 200 ರೂ. ನಿಗದಿ ಮಾಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯಮ ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ. ಉದ್ದೇಶಿತ ಶುಲ್ಕ ವಿಧಿಸುವ ಸಂಬಂಧ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಾರ್ವಜ ನಿಕರು ಆಸ್ತಿ ತೆರಿಗೆ ಜತೆಗೆ ಶೇ.2 ತ್ಯಾಜ್ಯ ಉಪಕರ ನೀಡುತ್ತಿದ್ದಾರೆ. ಈಗ ಹೊಸ ಉಪನಿಯಮದಿಂದ …

Read More »

ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು.

ಇವತ್ತು ಕರ್ನಾಟಕ ಪ್ರಜಾ ರಕ್ಷಣೆ ಸೇನೆ (ರಿ) ನಮ್ಮ ಗೋಕಾಕ ತಾಲೂಕ ಘಟಕ ಉದ್ಘಾಟನೆಗೊಂಡು ಎರಡನೆ ವರ್ಷಕ್ಕೆ ಪಾದಾರ್ಪನೆಮಾಡಿತು. ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಜೆ ಯತಿಶಗೌಡ್ರ ಅವರ ಮಾರ್ಗದರ್ಶನ ಮತ್ತು ಕಾರ್ಮಿಕ ಘಟಕದ ರಾಜ್ಯಾದ್ಯಕ್ಷರಾದ ಎಂ ವೀ ಮಂಜುನಾಥ, ಯುವ ಘಟಕದ ರಾಜ್ಯಾದ್ಯಕ್ಷರಾದ ಜ್ಯೋತಿಕುಮಾರ ಆಚಾರಿ ಅವರ ಮಾರ್ಗದರ್ಶನ ಮೂಲಕ ಸುಮಾರು ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು, ಹೋರಾಟಗಳು ಮಾಡ್ತಾಬಂದಿದ್ದು, ಇವತ್ತು ದ್ವಿತೀಯ ವರ್ಷಾಚರಣೆಯನ್ನು ಗೋಕಾಕದ ಶಿವಾ ಪೌಂಡೆಶನ ಅನಾಥ ಮಕ್ಕಳಿಗೆ,ಬೇಟೆಗೆರಿಯ …

Read More »

ಗೂಗಲ್‍ ಮ್ಯಾಪ್‍ನಲ್ಲಿ ಬಿಗ್‍ಬಿ ಧ್ವನಿ …………..

ಮುಂಬೈ, ಜೂ.11- ಬಾಲಿವುಡ್‍ನ ಬಿಗ್ ಬಿ ವಾಯ್ಸ್ ಅವರ ಹೆಸರಿನಷ್ಟೇ ಜನಪ್ರಿಯವಾಗಿದ್ದು ಈಗ ಅವರ ಧ್ವನಿಯನ್ನು ಗೂಗಲ್ ಮ್ಯಾಪ್‍ನಲ್ಲಿ ಅಳವಡಿಸಿಕೊಳ್ಳಲು ಒಪ್ಪಂದಕ್ಕೆ ಮುಂದಾಗಿದೆ. ದೀವಾರ್, ಶೋಲೆ, ಅಮರ್ ಅಕ್ಬರ್ ಅಂಟೋನಿ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಬಿಗ್‍ಟೌನ್ ನಂಬರ್1 ನಟನಾಗಿ ಗುರುತಿಸಿಕೊಂಡಿರುವ ಅಮಿತಾಭ್‍ಬಚ್ಚನ್ ಅವರ ಧ್ವನಿಯು ಅವರ ಜನಪ್ರಿಯತೆಗೆ ಸಾಥ್ ನೀಡಿದ್ದಾರೆ. ನಟನೆ ಮಾತ್ರವಲ್ಲದೆ ಹಲವು ಸರ್ಕಾರಿ ಹಾಗೂ ಖಾಸಗಿ ಜಾಹೀರಾತಿನಲ್ಲೂ ಗುರುತಿಸಿಕೊಂಡಿರುವ ಅಮಿತಾಭ್‍ಬಚ್ಚನ್‍ರ ಧ್ವನಿಯಿಂದಲೇ ತಮ್ಮ ಕಂಪೆನಿಯ …

Read More »

14ನೇ ಮಹಡಿಯಿಂದ ಬಿದ್ದು ಸುಶಾಂತ್ ಸಿಂಗ್ ರಜಪೂತ ಮಾಜಿ ಮ್ಯಾನೇಜರ್ ಸಾವು

ಮುಂಬೈ: 14ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಿಶಾ ಸಲಿಯನ್ ಸಾವನ್ನಪ್ಪಿದ ಯುವತಿ. ಬಾಲಿವುಡ್ ಸೆಲೆಬ್ರಿಟಿಗಳಾದ ಸುಶಾಂತ್ ಸಿಂಗ್ ರಜಪೂತ್, ಭಾರತಿ, ವರುಣ್ ಶರ್ಮಾ ಸೇರಿದಂತೆ ಹಲವರ ಮ್ಯಾನೇಜರ್ ಆಗಿ ದಿಶಾ ಕೆಲಸ ಮಾಡಿಕೊಂಡಿದ್ದರು. ಸೋಮವಾರ ರಾತ್ರಿ ಕಟ್ಟಡ ಮೇಲಿಂದ ಬಿದ್ದಿರೋ ದಿಶಾರನ್ನು ಕೂಡಲೇ ಸ್ಥಳೀಯರು ಬೋರಿವಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ದಿಶಾ ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ. ದಿಶಾ ತನ್ನ ಗೆಳೆಯನ ಜೊತೆ ಫ್ಲ್ಯಾಟ್ …

Read More »

ಜ್ಯೋತಿರಾದಿತ್ಯ ಸಿಂಧಿಯಾ, ತಾಯಿ ಮಾಧವಿ ರಾಜೇಗೆ ಕೊರೊನಾ ಸೋಂಕು…….

ಭೋಪಾಲ್: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿ ಮಾಧವಿ ರಾಜೇ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಸಿಂಧಿಯಾರ ಪತ್ನಿ, ಮಗ ಮತ್ತು ಮಗಳ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಸಿಂಧಿಯಾ ತಮ್ಮ ತಾಯಿಯ ಜೊತೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಐದು ದಿನಗಳ ಹಿಂದೆ ಗ್ವಾಲಿಯರ್ ನಲ್ಲಿ ಸಿಂಧಿಯಾ, ತಾಯಿ ಮಾಧವಿ ರಾಜೇ, ಪತ್ನಿ ಪ್ರಿಯದರ್ಶಿನಿ, ಮಗಳು ಅನನ್ಯಾ …

Read More »

10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗಳಿಗೆ ತೇರ್ಗಡೆ

ಹೈದರಾಬಾದ್​: ದೇಶಾದ್ಯಂತ ಕೊರೊನಾ ವೈರಸ್​ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ. ರಾಜ್ಯದಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ನಿರ್ಧರಿಸಿದ್ದಾಗಿ ಇಲ್ಲಿನ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಸಿನಿಮಾ, …

Read More »

ಬಹುಭಾಷಾ ನಟ ಮುರಳಿ ಶರ್ಮಾಗೆ ಮಾತೃ ವಿಯೋಗ………….

ಮುಂಬೈ: ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ಮುರಳಿ ಶರ್ಮಾ ಅವರ ತಾಯಿ ಸೋಮವಾರ ನಿಧನರಾಗಿದ್ದಾರೆ. ಪದ್ಮಾ ಶರ್ಮಾ (76) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮುರಳಿ ಶರ್ಮಾ ತಾಯಿ ಮುಂಬೈನಲ್ಲಿ ನೆಲೆಸಿದ್ದು, ಅವರ ಸ್ವ-ಗೃಹದಲ್ಲೇ ಕೊನೆಯುಸಿರೆಳೆದರು. ಕಳೆದ ವರ್ಷ ಮುರಳಿ ಅವರ ತಂದೆ ವೃಜ್‍ಭೂಷಣ್ ಶರ್ಮಾ ನಿಧನರಾಗಿದ್ದರು. ಈಗ ತಾಯಿಯೂ ಕೂಡ ವಿಧಿವಶರಾಗಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ …

Read More »

ವಲಸೆ ಕಾಮಿರ್ಕರಿಗೆ ನೆರವಾದ ಸೋನ್ ಸೂದ ಬಿಜೆಪಿಯ ಕೈಗೊಂಬೆ – ಶಿವಸೇನೆ

ಮುಂಬೈ: ಮಹಾರಾಷ್ಟ್ರದಲ್ಲಿ ವಲಸೆ ಕಾಮಿರ್ಕರಿಗೆ ನೆರವಾದ ಸೋನ್ ಸೂದ್ ಅವರನ್ನು ಶಿವಸೇನೆ ವ್ಯಂಗ್ಯವಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ಹೊಸ ಮಹಾತ್ಮನ ಜನ್ಮವಾಗಿದೆ ಎಂದು ಬರೆದುಕೊಂಡಿದ್ದಾರೆ. ಸೋನ್ ಸೂದ್ ಲಕ್ಷಾಂತರ ವಲಸಿಗರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗುತ್ತಿದೆ. ಮಹಾರಾಷ್ಟ್ರ ರಾಜ್ಯಪಾಲರು ಸೋನ್ ಸೂದ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ …

Read More »

ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ:

ಚಂಡೀಗಢ: ಬಿಜೆಪಿ ಮುಖಂಡೆ, ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಗಟ್ ಶುಕ್ರವಾರ ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್‍ರನ್ನು ಫೋಗಟ್ ಥಳಿಸಿದ್ದಾರೆ. ಕೆಲವು ರೈತರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಸಮಸ್ಯೆಗಳಿವೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಗಟ್ ಮಂಡಿಯ …

Read More »

ಮಾಸ್ಕ್ ವಿಚಾರಕ್ಕೆ ವಾಗ್ವಾದ ನಡೆದು ಪೊಲೀಸರ ಮೇಲೆ ಹಲ್ಲೆ…….

ಜೈಪುರ್: ಮಾಸ್ಕ್ ವಿಚಾರಕ್ಕೆ ವಾಗ್ವಾದ ನಡೆದು ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ. ಜೋಧ್‍ಪುರದ ಬಾಲ್‍ದೇವ್ ನಗರ ನಿವಾಸಿ ಮುಖೇಶ್ ಕುಮಾರ್ ಪ್ರಜಾಪತ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ. ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಖೇಶ್ ಕುಮಾರ್ ಮಾಸ್ಕ್ ಧರಿಸದೆ ಸಾರ್ವಜನಿಕ ಪ್ರದೇಶದಲ್ಲಿ ಕುಳಿತ್ತಿದ್ದ. ಆತನನ್ನು ಗಮನಿಸಿದ ಪೊಲೀಸರು ಮಾಸ್ಕ್ ಧರಿಸು ಹಾಗೂ ದಂಡ ಪಾವತಿಸು …

Read More »