ನವದೆಹಲಿ(ಜು.10): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಇಂದು 69ನೇ ಹುಟ್ಟುಹಬ್ಬ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಗಣ್ಯರು ರಾಜನಾಥ್ ಸಿಂಗ್‌ಗೆ ಶುಭ ಕೋರಿದ್ದಾರೆ. ಆದರೆ ಈ ಎಲ್ಲಾ ಶುಭಾಶಯಗಳ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ. ಹೌದು ಮಾಜಿ ಪ್ರಧಾನಿ ದೇವೇಗೌಡರು ರಕ್ಷಣಾ ಸಚಿವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದಶುಭಾಶಯ ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ …
Read More »ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ
ಕೋಲಾರ: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂತಹ ಪ್ರಕರಣ ನಾನು ನನ್ನ ಸರ್ವಿಸ್ ನಲ್ಲಿ ನೋಡಿಲ್ಲ, ಕೆಜಿಎಫ್ ಹಾಗೂ ಕೋಲಾರ ಎಸ್ಪಿ ಸೇರಿ ಚಾರ್ಚ್ ಶೀಟ್ ರೆಡಿ ಮಾಡಿದ್ದಾರೆ, ಇವತ್ತು ಅಲ್ಲಿ ನಡೆದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೇನೆ, ಜಿಲ್ಲಾಧಿಕಾರಿ ಹಾಗೂ ಸರ್ವೇ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ, ಘಟನೆ …
Read More »ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮಗಳ ಜೊತೆ ಮಾತನಾಡಿ, ಬಾಗಲಕೋಟೆಯಲ್ಲಿ 27, ಜಮಖಂಡಿ 2, ಮುಧೋಳ 5, ಬೇರೆ ಜಿಲ್ಲೆಯಾದ ಹುಬ್ಬಳ್ಳಿಯ 2 ಪ್ರಕರಣಗಳು ದೃಡಪಟ್ಟಿವೆ ಎಂದರು. ಬಳ್ಳಾರಿಯ ಪಿ-10769 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಹುಬ್ಬಳ್ಳಿಯ 31 ವರ್ಷದ ಪುರುಷ ಪಿ-28945 (ಬಿಜಿಕೆ-314), 42 ವರ್ಷದ ಪುರುಷ ಪಿ-28946 …
Read More »ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಉದ್ಯೋಗಿಗಳ ಬಳಕೆ ಮಾಡಿಕೊಳ್ಳಲು ಸರ್ಕಾರ ಮಹತ್ವ ನಿರ್ಧಾರ
ಬೆಂಗಳೂರು: ಅನ್‍ಲಾಕ್-2 ಅವಧಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಉದ್ಯೋಗಿಗಳ ಬಳಕೆ ಮಾಡಿಕೊಳ್ಳಲು ಸರ್ಕಾರ ಮಹತ್ವ ನಿರ್ಧಾರವನ್ನು ಮಾಡಿದೆ. ಕೋವಿಡ್ ನಿಯಂತ್ರಣ ಮಾಡಲು ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿರುವ ಕಾರಣ ಸರ್ಕಾರಿ ಉದ್ಯೋಗಿಗಳ ಬಳಕೆಗೆ ಸರ್ಕಾರ ಮುಂದಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಇಲಾಖೆಯ, ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ 50 ವರ್ಷ ಒಳಗಿನ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡಲು ಸೂಚನೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಮುಖ್ಯ …
Read More »ಯುವಕನೊಬ್ಬ ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ್ದಾನೆ
ಘೋಡೋಂಗ್ರಿ (ಕೇರಳ): ಈಗಿನ ಕಾಲದಲ್ಲಿ ಅನೇಕ ಹುಡುಗರು ತಮಗೆ ಹುಡುಗಿಯೇ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ, ಇನ್ನು ಕೆಲವು ಹುಡುಗರಿಗೆ ತಾವು ಪ್ರೀತಿಸಿದ ಹುಡುಗಿಯ ಜತೆ ಮದುವೆಯಾಗಲು ಸಾಧ್ಯವಾಗುವುದಿಲ್ಲ, ಅನಿವಾರ್ಯವಾಗಿ ಕಟ್ಟುಪಾಡಿಗೆ ಒಳಗಾಗಿ ಅಪ್ಪ-ಅಪ್ಪ ತೋರಿಸಿದ ಹುಡುಗಿಯನ್ನು ಮದುವೆಯಾಗಬೇಕಾಗುತ್ತದೆ. ಇವೆಲ್ಲಾ ಸಮಸ್ಯೆಗಳ ನಡುವೆಯೇ, ಕೇರಳ ಜಿಲ್ಲೆಯ ಘೋಡೋಂಗ್ರಿ ತಹಸಿಲ್‌ನ ಕೆರಿಯಾ ಗ್ರಾಮದ ಯುವಕನೊಬ್ಬ ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ್ದಾನೆ. ಒಂದೇ ಬಾರಿಗೆ ಇಬ್ಬರು ಯುವತಿಯನ್ನು ಮದುವೆಯಾಗುವ ಮೂಲಕ ಇದೀಗ ಭಾರಿ ಸುದ್ದಿ …
Read More »ಕೊರಾನಾ ಪೊಸಿಟಿವ ನಿರ್ಲಕ್ಷ ತೊರುತ್ತಿರುವ ಅಧಿಕಾರಿಗಳು….?
ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಮೃತ ಮಹಿಳೆಗೆ ಕೊರಾನಾ ದೃಡ್ಡಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯ ಸುತ್ತಮುತ್ತ 100 ಮಿಟರ ಸಂಪೂರ್ಣ ಜಾಗೆಯನ್ನು ಕೊಣ್ಣೂರ ಪುರಸಭೆ ,ಆರೋಗ್ಯ ಇಲಾಖೆ ಹಾಗೂ ಪೋಲಿಸ ಇಲಾಖೆಯವರು ಸೇರಿ ಸಿಲಡೌನ್ ಮಾಡಿದ್ದಾರೆ, ಆದರೆ ಮೃತ ಮಹಿಳೆಯ ಮೃ ಹೊಂದುವ ಮೊದಲು ಅವರ ಜೊತೆ ಇದ್ದರೆನ್ನಲಾದ ಕೆಲವು ವ್ಯಕ್ತಿಗಳನ್ನು ಅಧಿಕಾರಿಗಳು ತಪಾಸಣೆ ಮಾಡದೆ ಹೊಮ್ ಕ್ವಾರಂಟೈನ್ ಮಾಡಲು ಹಿಂದೇಟು ಹಾಕುತಿದ್ದಾರೆ.ಇದರಿಂದ ಕೇರಿಯಲ್ಲಿರುವ ಜನರು ಭಯಬೀತರಾಗಿ ತಮ್ಮ …
Read More »ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ
ಲಕ್ನೋ: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು …
Read More »ಸತತ ಮಳೆ: ನೂರು ಅಡಿ ತಲುಪಿದ KRS ನೀರಿನ ಮಟ್ಟ..!
ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟನೂರು ಅಡಿ ತಲುಪಿದೆ. ಕಳೆದೊಂದು ತಿಂಗಳಲ್ಲಿ ಜಲಾಶಯಕ್ಕೆ 8 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟು ನೂರರ ಗಡಿ ತಲುಪಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಬಿರುಸುಗೊಂಡಿದೆ. ಮುಂಗಾರು ಹಂಗಾಮಿಗೆ ನೀರು ಸಿಗುವ ಆಶಾಭಾವನೆಯೂ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ. ಜೂ.7ರಂದು ಅಣೆಕಟ್ಟೆಯ ನೀರಿನ ಮಟ್ಟ92.20 ಅಡಿ ದಾಖಲಾಗಿತ್ತು. ಅಂದು ಜಲಾಶಯಕ್ಕೆ 837 ಕ್ಯುಸೆಕ್ ನೀರು ಹರಿದುಬರುತ್ತಿದ್ದು, 415 ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು. …
Read More »ನಾಯಿ ಮಾಂಸ ಮಾರಾಟ ನಿಷೇಧಕ್ಕೆ ಭಕ್ಷಕರಿಂದ ಆಕ್ರೋಶ..!
ನವದೆಹಲಿ,ಜು.7- ನಾಗಾಲ್ಯಾಂಡ್‍ನಲ್ಲಿ ನಾಯಿ ಮತ್ತು ಅದರ ಮಾಂಸ ಮಾರಾಟವನ್ನು ನಿಷೇಧಿಸಿರುವುದರ ಬಗ್ಗೆ ಕುಪಿತಗೊಂಡಿರುವ ಸ್ಥಳೀಯರು, ಏಕಾಏಕಿ ನಾಯಿ ಮಾಂಸದೂಟವನ್ನು ನಿಷೇಧಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಅಲ್ಲದೆ ದೇಶದ ಹಲವೆಡೆ ನಾಯಿ ಮಾಂಸವನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ. ಇಡೀ ಈಶಾನ್ಯ ಪ್ರದೇಶಗಳಲ್ಲಿ ನಾಯಿಗಳ ಕಳ್ಳಸಾಗಣೆಯ ದಂಧೆಯೇ ನಡೆಯುತ್ತಿದೆ. ನಾಗಾಲ್ಯಾಂಡ್ ಮತ್ತು …
Read More »14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆ
ಚೆನ್ನೈ: 14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ತಿರುಚ್ಚಿಯ ಸೋಮರಸಂಪೆಟ್ಟಾಯ್ ಗ್ರಾಮದಲ್ಲಿ ಕಸದ ರಾಶಿಯ ಪಕ್ಕದಲ್ಲಿ ಬಾಲಕಿಯ ಸುಟ್ಟ ಶವ ಪತ್ತೆಯಾಗಿದೆ. ಸ್ಥಳೀಯರು ಕಸ ವಿಲೇವಾರಿ ಪ್ರದೇಶದ ಬಳಿ ಬಾಲಕಿಯ ಶವವನ್ನು ನೋಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕಿ ಸೋಮವಾರ …
Read More »