Breaking News

ರಾಷ್ಟ್ರೀಯ

ಬಡವರಿಗಾಗಿ ಮತ್ತೆರಡು ಗ್ಯಾರಂಟಿ ಜಾರಿ

ಬೆಂಗಳೂರು,ಸೆಪ್ಟೆಂಬರ್‌ 03: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಭರ್ಜರಿಯಾಗಿ ಕಾಂಗ್ರೆಸ್‌ ಗೆಲುವು ಸಾಧಿಸಲು ಪಂಚ ಗ್ಯಾರಂಟಿ ಯೋಜನೆಗಳೆ ಪ್ರಮುಖ ಕಾರಣವಾಗಿದ್ದು, ಇದೀದ ಕಾಂಗ್ರೆಸ್‌ ರಾಜ್ಯದ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ.   ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಂತ ಹಂತವಾಗಿ ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಯನ್ನ …

Read More »

ಕಲಬುರಗಿ | ಮೂರು ಸೇತುವೆ ಮುಳುಗಡೆ: ಹಲವೆಡೆ ಸಂಪರ್ಕ ಕಡಿತ

ಕಾಳಗಿ: ಕಳೆದ ಮೂರುದಿನಗಳಿಂದ ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆ ಮತ್ತು ಹೇರೂರ ಬೆಣ್ಣೆತೊರಾ ಜಲಾಶಯದ ನೀರಿನ ಪ್ರವಾಹಕ್ಕೆ ಮೂರು ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಮಲಘಾಣ-ಕಾಳಗಿ, ಕಲಗುರ್ತಿ-ಡೊಣ್ಣೂರ ಮತ್ತು ತೆಂಗಳಿ-ತೆಂಗಳಿ ಕ್ರಾಸ್ ನಡುವಿನ ರಸ್ತೆ ಸಂಪರ್ಕದ ಹಳ್ಳದ ಸೇತುವೆಗಳು ನೀರಿನ ಪ್ರವಾಹಕ್ಕೆ ಭಾನುವಾರದಿಂದಲೇ ಮುಳುಗಿ ಹೋಗಿವೆ. ಪರಿಣಾಮ ಮಲಘಾಣ, ಕಲಗುರ್ತಿ, ಚಿತ್ತಾಪುರ ರಸ್ತೆ ಮಾರ್ಗದ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಕಣಸೂರ, ಹೆಬ್ಬಾಳ, ಶೆಳ್ಳಗಿ, ಹೇರೂರ, ಮಲಘಾಣ, ಡೊಣ್ಣೂರ, …

Read More »

BMTC ನಿರ್ವಾಹಕ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ನಕಲು: ಸಿಕ್ಕಿಬಿದ್ದ ಅಭ್ಯರ್ಥಿ

ಧಾರವಾಡ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ವಾಹಕ (ಬಿಎಂಟಿಸಿ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಪರೀಕ್ಷೆಯಲ್ಲಿ ನಗರದ ಬಾಶಲ್‌ ಮಿಷನ್‌ ವಿದ್ಯಾಲಯ ಕೇಂದ್ರದಲ್ಲಿ ಅಭ್ಯರ್ಥಿ ಸದಾಶಿವ ಸುಣದೊಳ್ಳಿ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಬೆಳಿಗ್ಗೆ 10.30 ರಿಂದ 1230ರವರೆಗೆ ನಡೆದ ಮೊದಲ ಅವಧಿಯ ಪತ್ರಿಕೆಯಲ್ಲಿ ಅಕ್ರಮ ಮಾಡಿ ಸಿಕ್ಕಿಬಿದ್ದಿದ್ದಾರೆ. ಸದಾಶಿವ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದವರು. ‘ಅಭ್ಯರ್ಥಿಯು ವಾಂತಿ ಮಾಡಲು ಶೌಚಾಲಯಕ್ಕೆ ಹೋಗುವುದಾಗಿ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಹೋಗಿ …

Read More »

ದೇಶದ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಶೇ 6ರಷ್ಟು ಏರಿಕೆ

ನವದೆಹಲಿ: 2024-25ರ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ದೇಶದ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಶೇ 6ರಷ್ಟು ಏರಿಕೆಯಾಗಿದ್ದು, 38.40 ಕೋಟಿ ಟನ್‌ಗೆ ತಲುಪಿದೆ. 2023-24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ 36 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಆಗಿತ್ತು ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.   ಸಿಐಎಲ್‌ ಉತ್ಪಾದನೆ ಇಳಿಕೆ: ಸರ್ಕಾರಿ ಸ್ವಾಮ್ಯದ ಭಾರತೀಯ ಕಲ್ಲಿದ್ದಲು ನಿಗಮ (ಸಿಐಎಲ್‌) ಆಗಸ್ಟ್‌ ತಿಂಗಳಲ್ಲಿ 4.61 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಮಾಡಿದೆ. …

Read More »

ಶೀಘ್ರವೇ ‘ಗೃಹಲಕ್ಷ್ಮಿ ಯೋಜನೆ’ಯ ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗೆ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಚಿತ್ರದುರ್ಗ : ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 …

Read More »

ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ಮತ್ತೆ 7 ದಿನ ರಿಲೀಫ್​! ಸೆಪ್ಟೆಂಬರ್​ 9ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ (Muda Scam) ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ರಾಜ್ಯಪಾಲರ (Governor) ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ (High Court) ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಸೋಮವಾರ ನ್ಯಾಯಮೂರ್ತಿ ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ನಡೆದಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದ ಆಲಿಸಿದ ನ್ಯಾಯಾದೀಶರು ವಿಚಾರಣೆಯನ್ನ ಮುಂದಿನ ಸೋಮವಾರ ಅಂದರೆ …

Read More »

ಟಾಟಾ ಕರ್ವ್‌ ಪೆಟ್ರೋಲ್‌, ಡೀಸೆಲ್‌ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ

ಮುಂಬೈ: ಭಾರತದ ಜನಪ್ರಿಯ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್‌ (Tata Motors) ಸೋಮವಾರ (ಸೆ.02) ಹೊಸ ಇಂಧನ ಚಾಲಿತ ಟಾಟಾ ಕರ್ವ್‌ (Tata Curvv) ಎಸ್‌ ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪೆಟ್ರೋಲ್‌ ಚಾಲಿತ ಟಾಟಾ ಕರ್ವ್‌ ವಾಹನದ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ ಮತ್ತು ಡೀಸೆಲ್‌ ಚಾಲಿತ ಟಾಟಾ ಕರ್ವ್‌ ಎಸ್‌ ಯುವಿಗೆ 11.49 ಲಕ್ಷ ರೂಪಾಯಿ. ಇದು ಆರಂಭಿಕ ಬೆಲೆಯಾಗಿದ್ದು, 2024ರ ನವೆಂಬರ್‌ ನಿಂದ ಬೆಲೆ ಏರಿಕೆಯಾಗಲಿದೆ …

Read More »

ಬಿಜೆಪಿ ಆಡಳಿತದ ಅವಧಿಯ ಹಗರಣಗಳಿಗೆ ತಾರ್ಕಿಕ ಅಂತ್ಯ ನೀಡುತ್ತೇವೆ : ಎಂ.ಬಿ.ಪಾಟೀಲ್‌

ಬೆಂಗಳೂರು,ಸೆ.2- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಸಾವಿನ ನಡುವೆಯೂ ಹಣ ಲೂಟಿ ಹೊಡೆದಿದ್ದಾರೆ. ಪಿಎಸ್‌‍ಐ, ಬಿಟ್‌ ಕಾಯಿನ್‌ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆಗೊಳಪಡಿಸಲಾಗಿದೆ. ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕೋವಿಡ್‌ ಸಂದರ್ಭದಲ್ಲಿನ ಹಗರಣಗಳಿಗೆ ಆಗಿನ ಸಚಿವರೇ …

Read More »

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್’ ವೇನಲ್ಲಿ ರಾಂಗ್ ರೂಟ್ ನಲ್ಲಿ `ಶಾಲಾ ಬಸ್’ ಚಲಾಯಿಸಿದ ಚಾಲಕ : `FIR’ ದಾಖಲು

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್’ ವೇನಲ್ಲಿ ರಾಂಗ್ ರೂಟ್ ನಲ್ಲಿ `ಶಾಲಾ ಬಸ್’ ಚಲಾಯಿಸಿದ ಚಾಲಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದೊಡ್ಡಿದ್ದ ಶಾಲೆಯೊಂದರ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಚಾಲಕ ಬೆಂಗಳೂರು-ಮೈಸೂರು ಇ ರೈಲಿನ ರಾಂಗ್ ಸೈಡ್ ನಲ್ಲಿ ಬಸ್ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕರೊಬ್ಬರು ವೀಡಿಯೊವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು ಮತ್ತು ಅಂತಿಮವಾಗಿ ಚಾಲಕನ …

Read More »

ಮಹಿಳೆಯ ಹತ್ಯೆ ಪ್ರಕರಣ. 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ವಿಜಯನಗರ ( ಕಾನಾಹೊಸಹಳ್ಳಿ) : ನಿರ್ಜನ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪ್ರಕರಣವನ್ನು 48 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಕಾನಾಹೊಸಹಳ್ಳಿ ಸಮೀಪದ ತಿಪ್ಪೆಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ ಚಿತ್ರದುರ್ಗ ವಿಜಯನಗರ ಗಡಿ ತಿಪ್ಪೆಹಳ್ಳಿಯ ಸಮೀಪ ಅಬ್ಬೇನಹಳ್ಳಿ ಯ ನೇತ್ರಾವತಿ ಎನ್ನುವ ಮಹಿಳೆಯನ್ನು ಅತ್ಯಾಚಾವೆಸಗಿ ಹತ್ಯೆ ಮಾಡಲಾಗಿತ್ತು ಈ ಘಟನೆಯಿಂದ ಗಡಿಗ್ರಾಮಗಧ ಜನರು ಬೆಚ್ಚಿಬಿದ್ದಿದ್ದರು ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ …

Read More »