Breaking News

ರಾಜಕೀಯ

Covid 19 ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆಯಿಂದಿದ್ದರೆ ಸಾಕು: C.M.

ಬೆಂಗಳೂರು: ಕೋವಿಡ್ ಹೊಸ ಉಪತಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು. ಆದರೆ ಹಿಂದಿನ ಸರ್ಕಾರದಲ್ಲಾದ ತಪ್ಪುಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೋವಿಡ್ ಕುರಿತ ಉನ್ನತ ಮಟ್ಟದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು. ಈಗಿನ ಉಪತಳಿ JN.1 ಅಪಾಯಕಾರಿಯಲ್ಲ. ಈ ಉಪತಳಿ ರಾಜ್ಯದಲ್ಲಿ 92 …

Read More »

ಡಿ.ಕೆ. ಸುರೇಶ್ ಸೇರಿ ಮೂವರು ಸಂಸದರು ಅಮಾನತು:ಸಂಖ್ಯೆ 146ಕ್ಕೇರಿಕೆ

ಹೊಸದಿಲ್ಲಿ: ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್ ನ ಮೂವರು ಸಂಸದರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.ದೀಪಕ್ ಬೈಜ್, ನಕುಲ್ ನಾಥ್ ಅವರನ್ನೂ ಅಮಾನತು ಮಾಡಲಾಗಿದ್ದು, ಅಮಾನತುಗೊಂಡಿರುವ ಪ್ರತಿಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.   ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಮತ್ತು ಘೋಷಣೆಗಳನ್ನು ಕೂಗಿದ ಕಾರಣಕ್ಕೆ ವಿಪಕ್ಷಗಳ ಸಂಸದರನ್ನು …

Read More »

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮಾನತು

ಬೆಳಗಾವಿ: ದುರ್ನಡತೆ ಹಾಗೂ ಬೆಳಗಾವಿ ಜಿಲ್ಲಾ ಕಚೇರಿಯ ಅಧಿಕಾರಿಗಳು ಹಾಗೂ ನೌಕರರ ಮೇಲೆ ದೌರ್ಜನ್ಯ ಎಸಗಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ಎ.ಎಂ. ಅವರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಗೊಳಿಸಿ ಆದೇಶಿಸಲಾಗಿದೆ.   ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿಎಂ.ಎಸ್. ಈ ಆದೇಶ ಹೊರಡಿಸಿದ್ದು ಅಮಾನತಿಗೊಳಗಾದ ಅಧಿಕಾರಿಯು ಸಕ್ಷಮ …

Read More »

ವೃತ್ತಿ ರಂಗಭೂಮಿ ಉಳಿಸಿ ಬೆಳೆಸಬೇಕಿದೆ- ಕಾಮನ್‌

ತೆಲಸಂಗ: ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದ್ದು, ಅದೆಷ್ಟೋ ವೃತ್ತಿ ನಾಟಕ ಕಂಪನಿಗಳು ಬಾಗಿಲು ಮುಚ್ಚಿ ಕೇವಲ ಬೆರಳೆಣಿಕೆಯಷ್ಟೇ ಈಗ ಉಳಿದುಕೊಂಡಿವೆ. ವೃತ್ತಿರಂಗಭೂಮಿಗೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಿದೆ ಎಂದು ಹವ್ಯಾಸಿ ಕಲಾವಿದ ಡಾ| ಬಿ.ಎಸ್‌.ಕಾಮನ್‌ ಹೇಳಿದರು.   ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡ ನಾಟಕ ಪ್ರದರ್ಶನದಲ್ಲಿ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆಯಿಂದ ವೃತ್ತಿ ರಂಗಭೂಮಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿ, ರಂಗಭೂಮಿಗೆ ಪುರಾತನ ಇತಿಹಾಸವಿದೆ. …

Read More »

ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್​ ಅವಧಿ ವಿಸ್ತರಣೆ

ಬೆಂಗಳೂರು, ಡಿಸೆಂಬರ್​ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್​ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ಕೆ ಪಾಟೀಲ್(HK Patil), 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ …

Read More »

ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್​ ಪ್ರಕರಣ

ನವದೆಹಲಿ/ ಮಂಗಳೂರು: ದೇಶದಲ್ಲಿ ಚಳಿ ಹೆಚ್ಚಿದಂತೆ ಕೋವಿಡ್​​ ಪ್ರಕರಣಗಳ ಏರಿಕೆ ಕಂಡಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್​ ರೂಪಾಂತರ ತಳಿ ಜೆಎನ್​.1 ಪತ್ತೆಯಾದ ಕೇರಳದಲ್ಲಿ ಡಿಸೆಂಬರ್​ 20ರಂದು ಒಟ್ಟು 300 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿದ್ದು, 3 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಇದೀಗ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2669 ಆಗಿದೆ. ಕಳೆದ ಮೂರು ವರ್ಷಗಳ …

Read More »

ಜನವರಿ 26ರಂದು ಫ್ಯಾನ್ಸ್​ಗಾಗಿ ಏನೋ ಪ್ಲಾನ್​ ಮಾಡ್ತಾರಂತೆ ರಕ್ಷಿತ್​ ಶೆಟ್ಟಿ

ಜನವರಿ 26ರಂದು ‘ಬ್ಯಾಚುಲರ್ ಪಾರ್ಟಿ’ ಚಿತ್ರತಂಡದಿಂದ ಹೊಸ ಅಪ್​ಡೇಟ್​ ಹೊರಬೀಳಲಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಮಾಹಿತಿ ನೀಡಿದೆ. 7 ವರ್ಷಗಳ ಹಿಂದೆ ಕನ್ನಡದಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಪಡೆದು, ಇತರೆ ಭಾಷೆಗಳಿಗೂ ಡಬ್​ ಆಗಿ ಮೆಚ್ಚುಗೆ ಪಡೆದ ಸಿನಿಮಾ ‘ಕಿರಿಕ್​ ಪಾರ್ಟಿ’. ಈ ಭರ್ಜರಿ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದೆ. ರಿಷಬ್​ ಶೆಟ್ಟಿ ನಿರ್ದೇಶಿಸಿ, ರಕ್ಷಿತ್​ ಶೆಟ್ಟಿ ನಟಿಸಿ, ನಿರ್ಮಿಸಿರುವ ಆ …

Read More »

ಶಿವಮೊಗ್ಗ: ಟಿಸಿ ನೀಡಲು ಲಂಚ, ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಎಇಇ

ಶಿವಮೊಗ್ಗ: ವಿದ್ಯುತ್ ಗುತ್ತಿಗೆದಾರನಿಗೆ ಟಿಸಿ ನೀಡಲು 20 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗ ಮೆಸ್ಕಾಂನ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಮೇಶ್ ಬಂಧಿತ ಅಧಿಕಾರಿ. ವಿದ್ಯುತ್ ಗುತ್ತಿಗೆದಾರ ಪ್ರದೀಪ್ ಎಂಬವರು ಬೆಟ್ಟದಕೊರ್ಲಿ ನಿವಾಸಿಯಾಗಿದ್ದು, ವಿದ್ಯುತ್ ಗುತ್ತಿಗೆ ಕೆಲಸವನ್ನು ಕಳೆದ 6 ವರ್ಷಗಳಿಂದ ಮಾಡುತ್ತಿದ್ದಾರೆ. ಇವರು ಕ್ಲಾಸ್ -1 ಗುತ್ತಿಗೆದಾರರು. ಕಪ್ಪುಗುಡ್ಡೆ ಗ್ರಾಮ …

Read More »

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು/ನವದೆಹಲಿ: ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕುಳಿತು ಅಂತಿಮಗೊಳಿಸುತ್ತೇವೆ. ಆ ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಮಾಜಿ ಸಿಎಂ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸಂಸತ್‌ ಭವನದ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆಗೂಡಿ ಭೇಟಿ ಮಾಡಿ, ಮಾತುಕತೆ ನಡೆಸಿದ ಬಳಿಕ …

Read More »

ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ ಒಲಿಂಪಿಕ್​ ಪದಕ ವಿಜೇತೆ ಸಾಕ್ಷಿ ಮಲಿಕ್

ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಪ್ರಕರಣ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್​ ಸಿಂಗ್ ಬೆಂಬಲಿತ ಸಂಜಯ್ ಕುಮಾರ್ ಸಿಂಗ್ ಡಬ್ಲ್ಯುಎಫ್​ಐಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬೆನ್ನಲ್ಲೇ ಕುಸ್ತಿಪಟು ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದ್ದಾರೆ.   ನವದೆಹಲಿ: 2016ರರಿಯೋಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಕ್ಷಿ ಮಲಿಕ್ ಇಂದು ಕುಸ್ತಿಗೆ ನಿವೃತ್ತಿ ಘೋಷಿಸಿದರು. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್​ಐ) ಮಾಜಿ ಮುಖ್ಯಸ್ಥ …

Read More »