Breaking News

ರಾಜಕೀಯ

ನಿಷೇಧಿತ ಗಾಂಜಾ, ಎಂಡಿಎಂಎ ಪೌಡರ್​ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಸೆನ್ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಉಡುಪಿ : ಮಾದಕ ವಸ್ತು, ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಸೆನ್‌ ಅಪರಾಧ ದಳದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ-ಕಾರ್ಕಳ ಹೆದ್ದಾರಿಯ ನೀರೆ ಎಂಬಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಎಂಡಿಎಂಎ ಪೌಡರ್‌ ಅನ್ನು ಮಾರಾಟ ಮಾಡಲು ಯತ್ನಿಸುತಿದ್ದರು. ಈ …

Read More »

ವಂಚನೆ ಪ್ರಕರಣ : ಆರೋಪಿ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ ಕೆ ಸುರೇಶ್ ದೂರು

ಬೆಂಗಳೂರು : ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ವಂಚನೆ ಮಾಡಿದ ಆರೋಪದ ಹಿನ್ನೆಲೆ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ. ಕೆ ಸುರೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ. ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ. ಕೆ ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. …

Read More »

ದಾಬಸ್ ಪೇಟೆ ಬಳಿ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ

ನೆಲಮಂಗಲ: ಇಲ್ಲಿಯ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಂಬೆಳಗ್ಗೆ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ವೀರಣ್ಣ(55) ಮೃತ ದುರ್ದೈವಿ. ದಾಬಸ್ ಪೇಟೆಯ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ಇಂದು ಬೆಳಗ್ಗೆ ಈ ಸರಣಿ ಅಪಘಾತ ಸಂಭವಿದೆ. ಕೈಗಾರಿಕಾ ಪ್ರದೇಶದ ಹೆಬ್ಬಾಗಿಲು ಮುಂಭಾಗದಲ್ಲಿ ಪ್ಯಾಸೆಂಜರ್ ಆಟೋ, ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತವಾಗಿದ್ದು, ಘಟನೆಯಲ್ಲಿ ವೀರಣ್ಣ ಸ್ಥಳದಲ್ಲೇ ಮೃತಪಟ್ಟರೆ, ಎಂಬಿಬಿಎಸ್ ಓದುತ್ತಿದ್ದ …

Read More »

ತಮ್ಮ ಆರೋಗ್ಯದ ಬಗ್ಗೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ದಾವಣಗೆರೆ: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ದಾವಣಗೆರೆ ದಕ್ಷಿಣ ಮತ ಕ್ಷೇತ್ರದ ಹಿರಿಯ ಕಾಂಗ್ರೆಸ್​ ಶಾಸಕ, ಡಾ.ಶಾಮನೂರು ಶಿವಶಂಕರಪ್ಪ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಆರೋಗ್ಯ ತಪಾಸಣೆಗೆ ಎಂದು ಬೆಂಗಳೂರಿಗೆ ತೆರಳಿದ್ದ ಶಾಮನೂರು ಶಿವಶಂಕರಪ್ಪ ಅವರು ಮತದಾರರು, ಅಭಿಮಾನಿಗಳಿಗೆ ವಿಡಿಯೋ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಡಿನ ಜನತೆಗೆ 2025ನೇ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ವಿಡಿಯೊದಲ್ಲಿ ಮಾತನಾಡಿರುವ ಅವರು, ಮತದಾರರ ಆಶೀರ್ವಾದದಿಂದ ನಾನು …

Read More »

ಕಾರವಾರದಲ್ಲೊಂದು ರಂಗೋಲಿ ಜಾತ್ರೆ

ಕಾರವಾರ(ಉತ್ತರ ಕನ್ನಡ): ಜಾತ್ರೆ ಅಂದಾಕ್ಷಣ ನಮಗೆ ನೆನಪಾಗೋದು ಅಲ್ಲಿನ ತಿಂಡಿ ತಿನಿಸುಗಳು, ಹೂವು, ಹಣ್ಣು ಕಾಯಿ, ಮಕ್ಕಳ ಆಟದ ಸಾಮಾನುಗಳು. ಆದರೆ, ಕಾರವಾರ ನಗರದಲ್ಲಿ ನಡೆದ ಜಾತ್ರೆಯೊಂದು ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿತ್ತು. ಜಾತ್ರೆಗೆ ಆಗಮಿಸಿದ ಸಾವಿರಾರು ಜನರು ದೇವರ ದರ್ಶನ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಜಾತ್ರೆ ನಡೆಯುವ ಸ್ಥಳದಲ್ಲಿನ ಮನೆಗಳ ಮುಂದೆ ಹಾಕಿರುವ ರಂಗೋಲಿ ನೋಡುವುದರಲ್ಲಿಯೇ ಮೈಮರೆತಿದ್ದರು. ಈ ಸ್ಪೆಷಲ್​ ರಂಗೋಲಿ ಜಾತ್ರೆ ಕುರಿತಾದ ವರದಿ ಇಲ್ಲಿದೆ. ರಂಗೋಲಿ ಜಾತ್ರೆ ಖ್ಯಾತಿಯ ಕಾರವಾರ …

Read More »

ಜ.15ರಂದು ಸಿಎಂ ಜೊತೆ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ: ಮುಷ್ಕರ ಕೈಬಿಟ್ಟ ಸಾರಿಗೆ ನೌಕರರ ಒಕ್ಕೂಟ

ಬೆಂಗಳೂರು: ಜನವರಿ 15ರಂದು ಸಿಎಂ ಸಿದ್ದರಾಮಯ್ಯ ರಸ್ತೆ ಸಾರಿಗೆ ನೌಕರರ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದು, ಡಿ.31ರಿಂದ ಮಾಡಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯಲು ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದ ಬೆನ್ನಲ್ಲೇ ಕ್ರಿಯಾ ಸಮಿತಿ ಮುಷ್ಕರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. ಸಭೆಯಲ್ಲಿ ಮಕರ ಸಂಕ್ರಾಂತಿಯಂದು ಸಭೆ ನಡೆಸಿ …

Read More »

ರಾಜ್ಯದಲ್ಲಿ ಅರಾಜಕಥೆ ಸೃಷ್ಟಿಯಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.

ದಾವಣಗೆರೆ: ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮೊನ್ನೆ ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಎಸ್​ಡಿಎ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಸಾಯುವ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಹೆಸರು ಬರೆದಿಟ್ಟಿದ್ದ. ಆದರೂ ಅವರ ಪಿಎ ಬಂಧನ ಆಗದೆ ಬೇಲ್ ಪಡೆದು ಆಚೆ ಓಡಾಡುತ್ತಿದ್ದಾರೆ. ಈಗ ಕಲಬುರಗಿಯಲ್ಲಿ …

Read More »

ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಪಾಲಕರ ವರ್ಕ ಶಾಪ್

ಮಕ್ಕಳ ಪಾಲಕರ ಬಾಂಧವ್ಯ ಗಟ್ಟಿಯಾಗಿರಲಿ ಚೇತನ ಸಂಪ್ರದಾಯ್ ಖ್ಯಾತ ಸಂಪನ್ಮೂಲ ವ್ಯಕ್ತಿ ಚೇತನ ಸಂಪ್ರದಾಯ್ ಮಾತನಾಡಿದರು ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಪಾಲಕರ ವರ್ಕ ಶಾಪ್ ಸಭೆಯಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿ ಚೇತನ ಸಂಪ್ರದಾಯ್ ಅಭಿಪ್ರಾಯ ಪಟ್ಟರು “ಮಕ್ಕಳು ಮತ್ತು ಪಾಲಕರ ಬಾಂಧವ್ಯ ಯಾವಾಗಲೂ ಗಟ್ಟಿಯಾಗಿರಲಿ ಎಂದು ಚೇತನ ಸಂಪ್ರದಾಯ ಹೇಳಿದರು ತಂದೆ ತಾಯಿಗಳು ಮತ್ತು ಪಾಲಕರು ಮಕ್ಕಳಿಂದ ದೂರ ಸರಿಯದೇ ಚಿಕ್ಕವರಿದ್ದಾಗಿನ ಬಾಂಧವ್ಯವನ್ನೇ ಮಕ್ಕಳು ಟೀನೇಜ್ ಗೆ ಬಂದಾಗಲೂ ಮುಂದು …

Read More »

ರಾಜಕಾರಣಿಗಳು ಕ್ರಿಕೆಟ್‌ನಿಂದ ದೂರವಿರಬೇಕು: ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜಕಾರಣ ಹಾಗೂ ಕ್ರಿಕೆಟ್ ಎರಡೂ ಸಹ ಬೇರೆ ಬೇರೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಇಂದು ಆಯೋಜಿಸಲಾಗಿದ್ದ 1983 ವಿಶ್ವಕಪ್ ವಿಜೇತ‌ ಭಾರತ ತಂಡದ‌ ಸದಸ್ಯ, ಕನ್ನಡಿಗ ಸೈಯದ್‌ ಕಿರ್ಮಾನಿ ಅವರ ಆತ್ಮಕಥೆ “ಸ್ಟಂಪ್ಡ್ : ಲೈಫ್ ಬಿಹೈಂಡ್​​ ಆ್ಯಂಡ್ ಬಿಯಾಂಡ್​ ದಿ ಟ್ವೆಂಟಿ ಟು ಯಾರ್ಡ್ಸ್” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ರಾಜಕೀಯ ಹಾಗೂ ಕ್ರಿಕೆಟ್ ಎರಡೂ …

Read More »

ಕರ್ನಾಟಕ ಲೋಕಸೇವಾ ಆಯೋಗದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ನಡೆದಿದೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಸುಸೂತ್ರವಾಗಿ ಜರುಗಿದೆ. ಇಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೊಲೀಸರು ಸೇರಿದಂತೆ ಗುಪ್ತಚರ ಸಿಬ್ಬಂದಿಗಳನ್ನು ನೇಮಕ ಮಾಡಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ರಾಜ್ಯದ 204 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ – ಕಾಲೇಜುಗಳಲ್ಲಿ ಪರೀಕ್ಷೆ ನಡೆದಿದ್ದು, ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಪರೀಕ್ಷೆ ಒಂದು ಹಾಗೂ ಮಧ್ಯಾಹ್ನ 2 …

Read More »