ಬೆಳಗಾವಿ: ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಸೋಮವಾರ ಆದೇಶಿಸಿದ್ದಾರೆ. ವಾರ್ಡ್ ನಂ.23ರ ಜಯಂತ ಜಾಧವ ಹಾಗೂ ವಾರ್ಡ್ ನಂ.41ರ ಸದಸ್ಯ ಮಂಗೇಶ ಪವಾರ ಅವರ ಪಾಲಿಕೆ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ್ ಆದೇಶಿಸಿದ್ದಾರೆ ತಿನಿಸು ಕಟ್ಟೆಗಳ ಹರಾಜಿನಲ್ಲಿ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಜಾಧವ …
Read More »ಯುದ್ಧದಲ್ಲಿ ಸೈನಿಕ ಶಸ್ತ್ರವನ್ನು ಕೆಳಗಿಟ್ಟ ಎಂದ ಮಾತ್ರಕ್ಕೆ, ಯುದ್ಧ ನಿಲ್ಲಿಸಿದ ಎಂದರ್ಥವಲ್ಲ. ಆ ಶಸ್ತ್ರ ಬದಲು ಬೇರೆ ಶಸ್ತ್ರದ ಆಯ್ಕೆ
ಮೈಸೂರು: “ಮುಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಬದಲಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನಾನೇ ವಾದ ಮಾಡಿ, ಅದಷ್ಟು ಬೇಗ ಮುಡಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷ್ಯಾಧಾರಗಳು ನನ್ನಲಿವೆ. ನಾನು ಎಂದಿಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ” ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮುಡಾ 50:50 …
Read More »ಕೈ ಮುಗಿದು ಕೇಳುವೆ, ಪ್ರಧಾನಿ ಬದಲಿಸಿ: ಸಂತೋಷ್ ಲಾಡ್
ಹಾಸನ: ಸಾಹೇಬ್ರು ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ, 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ, ಆದರೆ ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ, ಹಾಗಾಗಿ ಬಿಜೆಪಿಯವರಿಗೆ ಕೈ ಮುಗಿದು ಕೇಳುವೆ, ದೇಶದ ಮಹಾರಾಜ ಎನಿಸಿಕೊಳ್ಳುವ ಪ್ರಧಾನಿ ಮೋದಿ ಅವರನ್ನು ಬದಲು ಮಾಡಿ, ಇದೇ ದೇಶಕ್ಕೆ ಸಿಗುವ ಪರಿಹಾರ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೋದಿ ಬಗ್ಗೆ ಲೇವಡಿ ಮಾಡಿದರು. ಹಾಸನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …
Read More »ಮುಡಾ ಹಗರಣ ಕೇಸ್: ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್!
ಬೆಂಗಳೂರು, (ಫೆಬ್ರವರಿ 10): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ಗೆ ಇಡಿ ಸಮನ್ಸ್ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇಡಿ ನೀಡಿರುವ ಸಮನ್ಸ್ ರದ್ದುಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಹೀಗಾಗಿ ಫೆ.20ರ ರವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇದರಿಂದ ಸಿಎಂ …
Read More »ರಾಹುಲ್ ಜಾರಕಿಹೊಳಿ ರಾಜ್ಯ ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ!
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ರಾಜಕೀಯ ಮಹತ್ವಾಕಾಂಕ್ಷೆಗಳು ಮತ್ತೇನಾದರೂ ಉಳಿದೆವೆಯಾ? ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ, ಮಗಳು ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸಂಸದೆ ಮತ್ತು ಈಗ ಮಗ ರಾಹುಲ್ ಜಾರಕಿಹೊಳಿ ರಾಜ್ಯ ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ! ಸತೀಶ್ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸೊಂದಿದೆ. ಅದಾಗಿಬಿಟ್ಟರೆ ಅವರ ಸಂಪುಟದಲ್ಲಿ ರಾಹುಲ್ ಜಾರಕಿಹೊಳಿ ಸಚಿವನಾಗಬಹುದೇನೋ? ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ರಾಹುಲ್ …
Read More »ಕಲಬುರಗಿ ಯಲ್ಲಿ ಮತ್ತೊಂದು ಅಕ್ರಮ: ನಕಲಿ ಅಂಕಪಟ್ಟಿ ಮಾಫಿಯಾ
ಕಲಬುರಗಿ, ಫೆಬ್ರವರಿ 10: ಸದಾ ಪರೀಕ್ಷಾ ಅಕ್ರಮಗಳಿಂದ ಸುದ್ದಿಯಲ್ಲಿರುವ ಕಲಬುರಗಿಯಲ್ಲಿ ಇದೀಗ ಮತ್ತೊಂದು ಅಕ್ರಮದ ಆರೋಪ ಕೇಳಿ ಬಂದಿದೆ. ಎಸ್ಎಸ್ಎಲ್‌ಸಿ ಅಂಕಪಟ್ಟಿಯನ್ನು ಪೋರ್ಜರಿ (fake marks cards) ಮಾಡಿ ಸರ್ಕಾರಿ ಹುದ್ದೆ ಪಡೆದಿದ್ದು ಬಟಾಬಯಲಾಗಿದೆ. ಆ ಮೂಲಕ ನಕಲಿ ಅಂಕಪಟ್ಟಿ ಮಾಫಿಯಾ ಹುಟ್ಟಿಕೊಂಡಿದೆಯಾ ಎನ್ನೋ ಆತಂಕ ಶುರುವಾಗಿದೆ. ಕಲಬುರಗಿ ಅಂದರೆ ಸಾಕು ಪರೀಕ್ಷಾ ಅಕ್ರಮಗಳ ತವರು ಎನ್ನೋ ಕುಖ್ಯಾತಿ ಪಡೆದಿತ್ತು. ಇದೀಗ ಅದೇ ಸಾಲಿಗೆ ಮಗದೊಂದು ಅಕ್ರಮ ಸೆರ್ಪಡೆಯಾಗಿರುವ ಆರೋಪ ಕೇಳಿ ಬಂದಿದೆ. ಅದೆನೆಪ್ಪಾ …
Read More »ಪೊಲೀಸ್ ಠಾಣೆಯಲ್ಲೇ ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಚಾಮರಾಜನಗರ: ಪೊಲೀಸ್ ಠಾಣೆಯ ಗೇಟ್ನ ಬೀಗ ಮುರಿದು ಒಳ ನುಗ್ಗಿ ಜಪ್ತಿ ಮಾಡಿ ಇಡಲಾಗಿದ್ದ ಬೈಕ್ ಕದ್ದಿರುವ ಘಟನೆ ಚಾಮರಾಜನಗರದ ಸಿಇಎನ್ ಠಾಣೆಯಲ್ಲಿ ನಡೆದಿದೆ. ಬೈಕ್ ಕದ್ದೊಯ್ದಿದ್ದ ಚಾಮರಾಜನಗರದ ಅರ್ಫಾಜ್ ಹಾಗೂ ಇಮ್ರಾನ್ ಎಂಬ ಆರೋಪಿಗಳನ್ನು ಪಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತಡರಾತ್ರಿ ಅರ್ಫಾಜ್ ಮತ್ತು ಇಮ್ರಾನ್ ಕಾಂಪೌಂಡ್ ಹಾರಿ ಠಾಣಾ ಆವರಣಕ್ಕೆ ಬಂದು ಗೇಟಿನ ಬೀಗ ಮುರಿದಿದ್ದಾರೆ. ಬಳಿಕ, ಎನ್ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಿದ್ದ ಹೊಂಡಾ ಶೈನ್ ಬೈಕ್ನ್ನು …
Read More »ಸಾರ್ವಜನಿಕ ಆಸ್ತಿಗಳ ರಕ್ಷಣೆ : ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕದಿಂದ ಆಗುವ ಅನುಕೂಲವೇನು?
ಬೆಂಗಳೂರು : ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ ಹಾಗೂ ಸಣ್ಣ ಉದ್ದಿಮೆಗಳಿಗೆ ಸರಳ ಆಡಳಿತ ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ವಿಧೇಯಕಕ್ಕೆ ಅಗತ್ಯ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ತಂದಿದೆ. ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಈ ವಿಧೇಯಕವನ್ನು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಮಂಡಿಸಿದ್ದರು. ಈ ಕಾನೂನುಗಳನ್ನು ಸರಳೀಕರಣಗೊಳಿಸಿ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು …
Read More »ಆಸ್ಪತ್ರೆಯಿಂದ ಊರಿಗೆ ಶವ ತರುತ್ತಿರುವಾಗ ಮತ್ತೆ ಪ್ರಾಣ ಬಂದಿರುವ ಆಶ್ಚರ್ಯಕರ ಘಟನೆ ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
ಹಾವೇರಿ : ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ಬಳಿಕ ಆಸ್ಪತ್ರೆಯಿಂದ ಊರಿಗೆ ಶವ ತರುತ್ತಿರುವಾಗ ಮತ್ತೆ ಪ್ರಾಣ ಬಂದಿರುವ ಆಶ್ಚರ್ಯಕರ ಘಟನೆ ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. 45 ವರ್ಷದ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿ ಬಳಿಕ ಬದುಕುಳಿದಿರುವ ವ್ಯಕ್ತಿ. ”ನಿನ್ನ ಡಾಬಾ ಬಂತು, ನಿನ್ನ ಅಂಗಡಿನೂ ಬಂತು ನೋಡು ಅಂತ ಸಣ್ಣ ಮಗ ಹೇಳಿದಾಗ ಹಾ.. ಅಂತ ಅಂದಾನ. ಆಗ ತಕ್ಷಣನೇ ಉಸಿರಾಡ್ತಿದಾನೆ, ಕಣ್ಣು ಬಿಟ್ಟಾನ ಅನ್ನೋದು ಗೊತ್ತಾಗಿದೆ. ತಕ್ಷಣ ಅಲ್ಲೇ ಆಂಬ್ಯುಲೆನ್ಸ್ …
Read More »ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಡಿ ಕೆ ಶಿವಕುಮಾರ್
ಬೆಂಗಳೂರು/ಪ್ರಯಾಗ್ರಾಜ್ : ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉತ್ತರಪ್ರದೇಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಭಾನುವಾರ ಕುಟುಂಬ ಸಮೇತ ಪುಣ್ಯ ಸ್ನಾನ ಮಾಡಿದರು. ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಾವು ಅಜ್ಯಯ್ಯ ಎಂದೇ ಕರೆಯಲ್ಪಡುವ ನೆಚ್ಚಿನ ಗುರುಗಳಾದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಪತ್ನಿ ಉಷಾ ಅವರೊಂದಿಗೆ ಪುಣ್ಯ ಸ್ನಾನ ಮಾಡಿದರು. ನಂತರ ಗಂಗಾ, ಯಮುನಾ …
Read More »
Laxmi News 24×7