Breaking News

ರಾಜಕೀಯ

ಅತ್ಯಾಚಾರ ಆರೋಪ : ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಪೊಲೀಸ್ ವಶಕ್ಕೆ

ಬೆಂಗಳೂರು : ಸಹನಟಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಈ ಸಂಬಂಧ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 33 ವರ್ಷದ ಸಹ ನಟಿ ನೀಡಿದ ದೂರಿನ ಮೇರೆಗೆ ಹಾಸನದ ಶಾಂತಿಗ್ರಾಮದಲ್ಲಿ ಆರೋಪಿ ಮನು ಅವರನ್ನು ವಶಕ್ಕೆ ಪಡೆದು ಕರೆತರಲಾಗುತ್ತಿದೆ. ವಿಚಾರಣೆ ಮುಕ್ತಾಯದ ಬಳಿಕ ಕಾನೂನು ಪ್ರಕ್ರಿಯೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹಾಸ್ಯ ನಟನಾಗಿ ಖ್ಯಾತಿ …

Read More »

ಬೆಳಗಾವಿ ಜಿಲ್ಲೆಯ ಒಟ್ಟು 15 ಕಡೆಗಳಲ್ಲಿ ಸ್ಕೈ ವಾಕ್​ ನಿರ್ಮಾಣ ಮಾಡಲು ಮುಂದಾದ ಪಾಲಿಕೆ

ಬೆಳಗಾವಿ: ದಿನದಿಂದ ದಿನಕ್ಕೆ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ವೇಗವಾಗಿ ಬೆಳೆಯುತ್ತಿದೆ. ಅದೇ ರೀತಿ ಮಹಾನಗರದಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚುತ್ತಿದೆ. ಹಾಗಾಗಿ, ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ರಸ್ತೆ ದಾಟಲು ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಮಹಾನಗರ ಪಾಲಿಕೆಯು ಖಾಸಗಿ ಸಹಭಾಗಿತ್ವದಲ್ಲಿ ಸ್ಕೈ ವಾಕ್ ನಿರ್ಮಾಣಕ್ಕೆ ಮುಂದಾಗಿದೆ. ಹೌದು, ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹಾಗಾಗಿ, ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸಬೇಕಾದ ಪರಿಸ್ಥಿತಿ …

Read More »

ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತ ಚರ್ಚೆ ಅಪೂರ್ಣವಾಗಿದೆ: ಹೆಚ್.ಕೆ.ಪಾಟೀಲ್

ಬೆಂಗಳೂರು: “ಜಾತಿಗಣತಿ ಬಗ್ಗೆ ಚರ್ಚೆ ಅಪೂರ್ಣವಾಗಿದೆ. ಬಹುತೇಕ ಸಚಿವರು ಲಿಖಿತ ಅಭಿಪ್ರಾಯ ನೀಡಿದ್ದಾರೆ. ಕೆಲವರು ಕೊಡಬೇಕಿದೆ. ಈ ಬಗ್ಗೆ ಚರ್ಚೆಯಾದ ಮೇಲೆ ತೀರ್ಮಾನ ಮಾಡುತ್ತೇವೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024ರಲ್ಲಿ ಮಾಡಿರುವ ಶಿಫಾರಸುಗಳ …

Read More »

ಮಳೆ ಬಂದ್ರೆ ಕೆರೆಯಂತಾಗುವ ಹೆಚ್‌ಬಿಆರ್ ಲೇಔಟ್‌

ಬೆಂಗಳೂರು: ಪ್ರತಿ ಬಾರಿಯೂ ಮಳೆ ಅಬ್ಬರಿಸಿದಾಗ ನಗರದ ಹೆಚ್‌ಬಿಆರ್ ಲೇಔಟ್‌ನ ಹಲವಾರು ಪ್ರದೇಶಗಳು ಪ್ರವಾಹ ವಲಯಗಳಂತೆ ಮಾರ್ಪಡುತ್ತವೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಸಂದರ್ಭದಲ್ಲೂ ಇದು ಭಿನ್ನವಾಗಿರಲಿಲ್ಲ. ಧಾರಾಕಾರ ವರ್ಷಧಾರೆಗೆ ಚರಂಡಿಗಳು ತುಂಬಿ ಹರಿದಿದ್ದು, ಬೀದಿಗಳು ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿದ್ದರಿಂದ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಪುನರಾವರ್ತಿತ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದರು. ಇಲ್ಲಿನ ಮೂರನೇ ಬ್ಲಾಕ್ ಮಾಟೇಕರ್ ಬೀದಿ, ಫಾರೆಸ್ಟ್ ಪಾರ್ಕ್ ಬಳಿಯ 4ನೇ …

Read More »

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ:ಬಾಲಚಂದ್ರ ಜಾರಕಿಹೊಳಿ

ಅರಭಾವಿ – ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದ್ದು, ಅರಭಾವಿ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಅನುದಾನ ತರಲು ಪ್ರಯತ್ನ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು. ಪಟ್ಟಣದ ಆಂಜನೇಯ ದೇವಸ್ಥಾನದ ಹತ್ತಿರ ಈಚೆಗೆ ಪ.ಜಾ / ಪ.ಪಂ. ಮತ್ತು ಇತರೆ ಬಡ ಜನಾಂಗದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನ್ನ ಪಂಚ ಭಾಗ್ಯಗಳಿಗೆ ಅನುದಾನ ನೀಡುತ್ತಿರುವುದರಿಂದ ನಮ್ಮ ಕ್ಷೇತ್ರದ …

Read More »

ಮಳೆಯಲ್ಲಿಯೇ ಗ್ರಾಮ ದೇವತೆಗಳ ಹೊನ್ನಾಟ!

ಮಳೆಯಲ್ಲಿಯೇ ಗ್ರಾಮ ದೇವತೆಗಳ ಹೊನ್ನಾಟ! ಸುರಿಯುವ ಮಳೆಯಲ್ಲಿಯೇ ದೇವಿಯರ ಹೊನ್ನಾಟ ನಡೆಯುವ ವಿಶೇಷತೆಹೊಂದಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದೇವಿಯರ ಜಾತ್ರೆ ಈ ಸಲವೂ ಸುರಿಯುವ ಮಳೆಯ ಮಧ್ಯೆಯೇ ಅದ್ದೂರಿಯಾಗಿ ನಡೆಯಿತು. ಪ್ರತಿ ಐದು ವರ್ಷಕ್ಕೊಮ್ಮೆ ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ಎರಡು ದಿನದ ಹೊನ್ನಾಟ ಯಶಸ್ವಿಯಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಗ್ರಾಮದೇವಿಯರ ಜಾತ್ರೆಗಳಲ್ಲಿ ಭಂಡಾರದ ಮಧ್ಯೆ ಹೊನ್ನಾಟ ನಡೆಯೋ ಸಂಪ್ರದಾಯವಿದೆ. ಆದರೆ ಅವರೊಳ್ಳಿ-ಬಿಳಕಿ ದೇವಿಯರ …

Read More »

ಧಾರವಾಡದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ..

ಧಾರವಾಡದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ….ಧಾರವಾಡದಲ್ಲಿ ಕಾರ್ಯಕ್ರಮಕ್ಕೆ ರಾಜ್ಯಪಾಲ ಗೆಹ್ಲೋಟ್ ಚಾಲನೆ. ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಉದ್ಘಾಟಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಗುರುವಾರ ಧಾರವಾಡದ ರೈಲು ನಿಲ್ದಾಣದಲ್ಲಿ ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ದೇಶದ ವಿವಿಧ ಕಡೆಗಳಲ್ಲಿ ನವೀಕರಣಗೊಂಡ ಒಟ್ಟು 103 ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ …

Read More »

ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೊಡಿ’; ಕೋರ್ಟ್​ನಲ್ಲಿ ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ

ಇತ್ತೀಚೆಗೆ ಜಯಮ್ ರವಿ (Jayam Ravi) ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು. ನನಗೆ ಈ ವಿಚಾರ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಎಡೆ ಮಾಡಿಕೊಟ್ಟರು. ಈಗ ಫ್ಯಾಮಿಲಿ ಕೋರ್ಟ್​ನಲ್ಲಿ ಇಬ್ಬರ ವಿಚ್ಛೇದನಕ್ಕೆ ಶೀಘ್ರವೇ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲ, ಆರತಿ (Arati …

Read More »

ಚಾಕು ಇರಿದು ಪತ್ನಿಯನ್ನು ಕೊಂದ ಪತಿ

ಚಾಮರಾಜನಗರ: ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನ ಗುಳ್ಯದ ಬಯಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಹಾದೇವಿ(28) ಕೊಲೆಯಾದವರು. ಭದ್ರ ಕೊಲೆ ಮಾಡಿದ ಪತಿ. ಹನೂರು ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹಾವು ಕಚ್ಚಿ ವ್ಯಕ್ತಿ ಸಾವು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ‌ ಗ್ರಾಮದ‌ಲ್ಲಿ ನಡೆದಿದೆ. ಹಸಗೂಲಿ‌ ಗ್ರಾಮದ …

Read More »

ರೈಲ್ವೆ ಅಪಘಾತದಲ್ಲಿ ಮೃತರಾದವರ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ ಎಂಬ ಕಾರಣದ ನೀಡಿ ಪರಿಹಾರ ನಿರಾಕರಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರು: ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣ ನೀಡಿ ಆತನ ಅವಲಂಬಿತರಿಗೆ ಪರಿಹಾರ ನೀಡುವಂತಿಲ್ಲ ಎಂಬ ವಾದವನ್ನು ನಿರಾಕರಿಸಿರುವ ಹೈಕೋರ್ಟ್, ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರು.ಗಳ ಪರಿಹಾರ ನೀಡುವಂತೆ ಇಂದು ಆದೇಶಿಸಿದೆ. ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಜೇಬಿನಲ್ಲಿ ಟಿಕೆಟ್​ ಸಿಕ್ಕಿಲ್ಲ ಎಂಬ ಕಾರಣ …

Read More »