Breaking News

ರಾಜಕೀಯ

ಕುಂದಗಲ್ ಬಳಿ ಬಿರುಕು ಬಿಟ್ಟ ಭೂಮಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಶಿವಮೊಗ್ಗ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ಮಧ್ಯೆ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ‌ ಪಂಚಾಯತಿ ವ್ಯಾಪ್ತಿಯ ಕುಂದಗಲ್ ಗ್ರಾಮದ ಬಳಿ ಭೂಮಿ ಬಿರುಕು ಬಿಡಲು ಪ್ರಾರಂಭಿಸಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಭೂಮಿಯು ಸುಮಾರು ಮೂರು ಅಡಿಯಷ್ಟು ಅಗಲ ಬಾಯ್ಬಿಟ್ಟಿದೆ. ಅಲ್ಲದೆ ಎರಡು ಅಡಿಯಷ್ಟು ಭೂಮಿ ಕುಸಿತವಾಗಿದೆ. ಕುಂದಗಲ್ಲು ಗ್ರಾಮದಲ್ಲಿ ಭೂಮಿ ಕುಸಿತವಾಗಿರುವ ಸುದ್ದಿ ತಿಳಿದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ಪರಿಶೀಲಿಸಿದರು. ಸ್ಥಳದಲ್ಲಿ ಭಾರೀ …

Read More »

ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿದ ತಾಯಿ! –

ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೇಸತ್ತ ಕುರಿಗಾಹಿ ಕುಟುಂಬದ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ. ಸಿದ್ದವ್ವ (29) ತನ್ನ ಏಳು, ಐದು ಮತ್ತು ಮೂರು ವರ್ಷದ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಇವರೆಲ್ಲರ ಮೃತದೇಹ ಬುಧವಾರ ಪತ್ತೆಯಾಗಿವೆ. ಮತ್ತೊಂದು ಕುರಿ ಗುಂಪಿನಲ್ಲಿದ್ದ ಲಕ್ಷ್ಮೀಯ ಮಗ ಅಭಿಷೇಕ್ (9) ಬದುಕುಳಿದಿದ್ದಾನೆ. ಮಹಾರಾಷ್ಟ್ರದ …

Read More »

ಅಂತಾರಾಷ್ಟ್ರೀಯ ಶಾಲೆಗೆ ಬಾಂಬ್ ಬೆದರಿಕೆ ಕರೆ

ಮೈಸೂರು: ನಗರದ ಬನ್ನೂರು ರಸ್ತೆಯಲ್ಲಿನ ಜ್ಞಾನಸರೋವರ ಅಂತಾರಾಷ್ಟ್ರೀಯ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸತತ ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಸ್ಥಳೀಯ ಪೊಲೀಸರು, ಬೆದರಿಕೆ ಸಂದೇಶ ಹುಸಿ ಎಂದು ಖಚಿತ ಪಡಿಸಿದ್ದಾರೆ. ಆದರೆ, ಬಾಂಬ್ ಬೆದರಿಕೆ ಸಂದೇಶದಿಂದ ಶಾಲಾ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬುಧವಾರ ಮಧ್ಯಾಹ್ನ ಶಾಲೆಯ ಇ-ಮೇಲ್​ ಐಡಿಗೆ ಕಿಡಿಗೇಡಿಯೊಬ್ಬ ಅಹಮದಬಾದ್‌ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯ ಸಿಗದೇ ಇದ್ದರೆ …

Read More »

ಕಾರ್ಮಿಕರ ಕೆಲಸದ ಅವಧಿ 9 ರಿಂದ 10 ಗಂಟೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು : ಕಾರ್ಮಿಕರ ಕೆಲಸದ ಸಮಯ ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ. ಈಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು …

Read More »

ಲೋಕಾಯುಕ್ತ ಹೆಸರಲ್ಲಿ ಹಣ ವಸೂಲಿ: ಹೆಡ್​ ಕಾನ್​ಸ್ಟೇಬಲ್​ ನಿಂಗಪ್ಪ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್​ ತಡೆ

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಲೋಕಾಯುಕ್ತದ ಮಾಜಿ ಹೆಡ್‌ ಕಾನ್‌ಸ್ಟೆಬಲ್‌ ನಿಂಗಪ್ಪ ಸಾವಂತ್‌ ವಿರುದ್ಧದ ಪೊಲೀಸ್‌ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಪ್ರಕರಣ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದು ಕೋರಿ ಹೊಳಲ್ಕೆರೆ ತಾಲೂಕು ತಾಳಿಕಟ್ಟೆಯ ನಿಂಗಪ್ಪ ಸಾವಂತ್‌ (45) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಆರ್‌. ಕೃಷ್ಣಕುಮಾರ್ ಅವರ ಈ ಆದೇಶ …

Read More »

ಕೆಪಿಟಿಸಿಎಲ್​ನಲ್ಲಿ ಖಾಲಿಯಿರುವ 35 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿಗೆ ಕ್ರಮ: ಸಿಎಂ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿಯಿರುವ 35 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಸಿಎಂ, ನಿಗಮದಲ್ಲಿ ತೆರವಾಗಿರುವ 35 ಸಾವಿರ ಹುದ್ದೆಗಳನ್ನು ಹಂತ- ಹಂತವಾಗಿ ತುಂಬಲಾಗುವುದು.‌ ಜೊತೆಗೆ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಖಾಯಂಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ನಮ್ಮದು ನುಡಿದಂತೆ …

Read More »

ಪ್ರವೀಣ್ ಭಾಯಿ ತೊಗಾಡಿಯಾ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ…

ಪ್ರವೀಣ್ ಭಾಯಿ ತೊಗಾಡಿಯಾ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ… ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮಂಗಳವಾರ ಹುಬ್ಬಳ್ಳಿ-ವಿಜಯಪುರ ರಸ್ತೆಯ ಜಿರಗ್ಯಾಳ ಬೈಪಾಸ್ ಬಳಿ ಬೆಂಗಾವಲಿನ ವಾಹನ ಡಿಕ್ಕಿಹೊಡೆದಿದೆ. ಬಾಗಲಕೋಟೆಜಿಲ್ಲೆಯ ಮುಧೋಳದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಜಮಖಂಡಿಯಲ್ಲಿದ್ದ ಕಾರ್ಯಕ್ರಮಕ್ಕೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪ್ರವೀಣ ತೊಗಾಡಿಯಾ ಸೇರಿ ಯಾರಿಗೂ ಗಾಯಗಳಾಗಿಲ್ಲ. ತೊಗಾಡಿಯಾ ಅವರು ಸಂಚರಿಸುತ್ತಿದ್ದ ವಾಹನದ ವೇಗವನ್ನು ತಗ್ಗಿಸಿದಾಗ ಹಿಂದಿದ್ದ ಬೆಂಗಾವಲು …

Read More »

ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆ!! ಜನರಲ್ಲಿ ಮೂಡಿದ ಆತಂಕ…

ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆ!! ಜನರಲ್ಲಿ ಮೂಡಿದ ಆತಂಕ… ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಗೋರಬಾಳದಲ್ಲಿ ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಗೋರಬಾಳದಲ್ಲಿ ಕ್ಯಾರಿಬೊ ನೀರಿನ ಪೌಚ್’ನಲ್ಲಿ ನಟ್ ಬೋಲ್ಟ್ ಪತ್ತೆಯಾಗಿದೆ. ಗೋರಬಾಳ್ ಗ್ರಾಮದಲ್ಲಿರುವ ದೀಪಾ ಆಕ್ವಾ ಮಿನರಲ್ಸ್ ಕಂಪನಿಯಿಂದ ತಯಾರಿಸುವ ಕ್ಯಾರಿಬೊ ಪೌಚ್ ಇದಾಗಿದ್ದು, ಅಶೋಕ್ ಪೂಜಾರಿ ಎಂಬ ಗ್ರಾಹಕರೊಬ್ಬರು ಖರೀದಿಸಿದ ಪೌಚ್’ನಲ್ಲಿ ನಟ್ಟು ಬೋಲ್ಟ್ ಕಂಡುಬಂದಿದೆ. …

Read More »

ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ…

ಬೆಳಗಾವಿ: ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ… ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾದ ಅಪರಿಚಿತ ಯುವಕರ ಗುಂಪು ಬಸ್’ನ ಕಿಟಕಿ ಸೀಟಗಾಗಿ ಕಿತ್ತಾಡಿಕೊಂಡು ಅಪರಿಚಿತ ಯುವಕರು ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್’ನ ಕಿಟಕಿ ಸೀಟಗಾಗಿ ಕಾಲೇಜು ವಿದ್ಯಾರ್ಥಿಯೊಂದಿಗೆ ಅಪರಿಚಿತ ಯುವಕರು ಜಗಳಕ್ಕಿಳಿದು, ಜಗಳ ವಿಕೋಪಕ್ಕೆ ಹೋಗಿ ವಿದ್ಯಾರ್ಥಿಯ ಎದೆಗೆ ಹರಿತವಾದ ಆಯುಧದಿಂದ …

Read More »

ಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್…

ಜೂನ್ 22 ರಂದು ಸೂರ್ಯ ನಮಸ್ಕಾರ ಮ್ಯಾರಾಥಾನ್… ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘದಿಂದ ಬೆಳಗಾವಿಯಲ್ಲಿ ಹೊಸ ಉಪಕ್ರಮ; ಅಧ್ಯಕ್ಷ ಡಾ. ಪ್ರಶಾಂತ ಕಟಕೋಳ ವಿಶ್ವ ಯೋಗ ದಿನದ ಅಂಗವಾಗಿ ಬೆಳಗಾವಿಯ ಇತಿಹಾಸದಲ್ಲೇ ಮೊದಲ ಬಾರಿ ಬೃಹತ್ ಸನಾತನ ಸಂಸ್ಕೃತಿ ಏವಂ ಯೋಗ ಸೇವಾ ಸಂಘದ ವತಿಯಿಂದ ಜೂನ್ 22 ರಂದು ಸೂರ್ಯನಮಸ್ಕಾರ ಮ್ಯಾರಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಪ್ರಶಾಂತ ಕಟಕೋಳ ಅವರು ತಿಳಿಸಿದರು. …

Read More »