Breaking News

ರಾಜಕೀಯ

ಕಾಂಗ್ರೆಸ್‍ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ: ಭಾರತ್ ಜೋಡೋ ಯಾತ್ರೆ ಬಗ್ಗೆ ಲೇವಡಿ ಮಾಡಿದ C.M.

ಕಾಂಗ್ರೆಸ್‍ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ ಬಗ್ಗೆ ಲೇವಡಿ ಮಾಡಿದ್ದಾರೆ. ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಹುಲ್ ಗಾಂಧಿ ಅವರಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಗೂ, …

Read More »

ಸಿದ್ದರಾಮಯ್ಯ ಸುಳ್ಳಿನ ನಾಯಕ,ಅವರು ಸಮಾಜವಾದಿಯನ್ನು ಯಾವಾಗಲೋ ಮಡಚಿ ಮನೆಯಲ್ಲಿ ಇಟ್ಟಿದ್ದಾರೆ.:C.M. ಬೊಮ್ಮಾಯಿ

ಕಾಂಗ್ರೆಸ್ ನಾಯಕ ಸಿದರಾಮಣ್ಣ ಅವರು ಸಮಾಜವಾದಿಯನ್ನು ಯಾವಾಗಲೋ ಮಡಚಿ ಮನೆಯಲ್ಲಿ ಇಟ್ಟಿದ್ದಾರೆ. ಈಗ ಅವರು ಒಬ್ಬ ಸಣ್ಣ ಹುಡುಗನ ಕೈ ಕೆಳಗೆ ಕೆಲಸ ಮಾಡುತ್ತಿದ್ದಾರೆ. ಅವನು ಓಡಿ ಅಂದ್ರೆ ಓಡುತ್ತಾರೆ. ಕೂರು ಅಂದ್ರೆ ಕೂರುತ್ತಾರೆ. ಅವರು ಸ್ವಾಭಿಮಾನ ಕಳೆದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು. ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ಅವರು ಸುಳ್ಳಿನ ಅಗ್ರಗಣ್ಯ ನಾಯಕ. ಅಹಿಂದ …

Read More »

ಬೆಳಗಾವಿ ಜಿಲ್ಲಾ ಶಿವಸೇನೆ ವತಿಯಿಂದ ಜ್ಯೋತಿ ಚಿಹ್ನೆಗೆ ಸ್ವಾಗತ,

ಮಹಾರಾಷ್ಟ್ರದಲ್ಲಿ ಒಡೆದು ಎರಡು ಹೋಳಾಗಿರುವ ಶಿವಸೇನೆ ಪಕ್ಷದಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಗುಂಪಿಗೆ ಜ್ಯೋತಿಯ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿರುವ ಹಿನ್ನೆಲೆ ಬೆಳಗಾವಿಯಲ್ಲಿ ಶಿವಸೇನೆ ಜಿಲ್ಲಾ ಘಟಕದ ವತಿಯಿಂದ ವಿಜಯೋತ್ಸವ ಅಚರಿಸಲಾಯಿತು. ರಾಮಲಿಂಗಖಿಂಡ ಗಲ್ಲಿಯಲ್ಲಿರುವ ಶಿವಸೇನೆ ಕಚೇರಿ ಮುಂದೆ ಛತ್ರಪತಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಪೂಜೆ, ಮಾಲಾರ್ಪಣೆ ಮಾಡಿದರು. ಬಳಿಕ ಉದ್ಧವ್ ಠಾಕ್ರೆ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಶಿವಸೇನೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಇದೇ …

Read More »

2012-13ನೇ ಸಾಲಿನ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲೂ ಗೋಲ್​ ಮಾಲ್​: ಅಭ್ಯರ್ಥಿಯ ಆರೋಪ

ಬೆಳಗಾವಿ: 2012-13ನೇ ಸಾಲಿನಲ್ಲಿ ನಡೆದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ನೇಮಕಾತಿ ವಂಚಿತ ಅಭ್ಯರ್ಥಿ ಮಹಾಂತೇಶ ರುದ್ರಪ್ಪ ಬೆಣ್ಣಿ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2012 ಜುಲೈ 15ರಂದು ಜನರಲ್, 17ರಂದು ಕನ್ನಡ ಭಾಷಾ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಪ್ರತಿಶತ 71. 26 ಅಂಕ 89 ರ‍್ಯಾಂಕ್ ಪಡೆದಿದ್ದೇನೆ. 89 ರ್ಯಾಂಕ್ ಪಡೆದು ಆಯ್ಕೆ ಆದರೂ ನಾನು ನೇಮಕಗೊಂಡಿಲ್ಲ. ಆದರೆ, 70.93 ಅಂಕಗಳೊಂದಿಗೆ 97 …

Read More »

ಭವಿಷ್ಯದ ಬಿಜೆಪಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇ!?

ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಬಿಜೆಪಿ ಅಂದ್ರೆ ಪ್ರಧಾನಮಂತ್ರಿ ನರಂದ್ರ ಮೋದಿ.. ಪ್ರಧಾನಿ ನರೇಂದ್ರ ಮೋದಿ ಎಂದರೆ ಬಿಜೆಪಿ ಎನ್ನುವಂತಹ ರಾಜಕೀಯ ಚಿತ್ರಣ ಸೃಷ್ಟಿ ಆಗಿದೆ. ಮೋದಿಯಿಲ್ಲದೇ ಬಿಜೆಪಿಗೆ ಭವಿಷ್ಯವೇ ಇಲ್ಲ ಎನ್ನುವಂತೆ ಬಿಂಬಿಸಲಾಗುತ್ತಿದೆ. ಬಿಜೆಪಿಯ ಈ ಆಟಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಬ್ರೇಕ್ ಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.   ಪ್ರಧಾನಮಂತ್ರಿ ನರೇಂದ್ರ ಮೋದಿಯ ಏಕಚಕ್ರಾಧಿಪತ್ಯಕ್ಕೆ ಪ್ರಜೆಗಳಷ್ಟೇ ಅಲ್ಲದೇ ಸ್ವತಃ ಬಿಜೆಪಿ ನಾಯಕರೇ ರೋಸಿ ಹೋಗಿದ್ದಾರೆ. ಕೇಂದ್ರದ ಲೋಕಸಭೆಯಲ್ಲಿ …

Read More »

2023ರ ವಿಧಾನಸಭಾ ಚುನಾವಣೆಗೆರಾಹುಲ್ ಗಾಂಧಿ ಬಚ್ಚಾ ಎಂದ B.S.Y.

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಾಂಚಜನ್ಯ ಮೊಳಗಿಸಿದೆ. ರಾಯಚೂರು ಜಿಲ್ಲೆಯಿಂದಲೇ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮತಬೇಟೆ ಆರಂಭಿಸಿದೆ. ರಾಯಚೂರಿನ ಗಿಲ್ಲೆಸಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಿಮ್ಮ ಹಗರಣಗಳನ್ನೆಲ್ಲ ಬಯಲು ಮಾಡುತ್ತೇವೆ. ನಿಮ್ಮ ಯೋಗ್ಯತೆಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ …

Read More »

ಮೂರು ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಅಥಣಿ (ಬೆಳಗಾವಿ): ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಬಿಳ್ಳೂರ ಗ್ರಾಮದ ಹೊರವಲಯದಲ್ಲಿ ತಾಯಿ ಮತ್ತು ಮೂರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ. ಮೃತ ಮಹಿಳೆ ಬೆಳಗಾವಿ ಮೂಲದವರಾಗಿದ್ದು, ಮಹಾರಾಷ್ಟ್ರ ವ್ಯಕ್ತಿಯನ್ನು ಮದುವೆಯಾಗಿದ್ದರು. ಮೂರು ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ: ಮೃತಪಟ್ಟವರನ್ನು ತಾಯಿ ಸುನೀತಾ ತುಕಾರಾಮ ಮಾಳಿ (27), ಮಕ್ಕಳಾದ ಅಮೃತಾ ತುಕಾರಾಮ ಮಾಳಿ (13), ಅಂಕಿತ ತುಕಾರಾಮ ಮಾಳಿ (10) ಮತ್ತು …

Read More »

ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ, ಒಂದು ಅಧಿವೇಶನ ಕೇವಲ 10 ದಿನಕ್ಕೆ ಮಾತ್ರ ಸಿಮೀತ

ಬೆಳಗಾವಿಯ ಸುವರ್ಣಸೌಧ ನಿರ್ಮಾಣಗೊಂಡು 10 ವರ್ಷ ಆಗಿದೆ. ಆದರೂ ಕೇವಲ ಕಟ್ಟಡವಾಗಿಯೇ ಈ ಶಕ್ತಿ ಸೌಧ ಉಳಿದುಕೊಂಡಿದೆ. ವರ್ಷದಲ್ಲಿ ಅಪರೂಪಕ್ಕೆ ಎನ್ನುವಂತೆ ಒಂದು ಬಾರಿ ಅಧಿವೇಶನ ನಡೆಯೋದು ಬಿಟ್ಟರೆ ಮತ್ಯಾವುದಕ್ಕೂ ಇದು ಉಪಯೋಗಕ್ಕೆ ಬರುತ್ತಿಲ್ಲ. ಹೌದು ಉತ್ತರ ಕರ್ನಾಟಕ ಜನರ ಶಕ್ತಿ ಕೇಂದ್ರವಾಗಿದ್ದ ಸುವರ್ಣಸೌಧಕ್ಕೆ ಈವರೆಗಿನ ಯಾವ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಈ ಸುವರ್ಣಸೌಧ ಕಟ್ಟಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷದಲ್ಲಿ ಅಧಿವೇಶನ ನಡೆದಿದ್ದು ಕೇವಲ …

Read More »

ಎಟಿಎಂ ಎಕ್ಸಚೆಂಜ್ ಮಾಡಿ ಹಣ ಕದ್ದಿದ್ದ ಆರೋಪಿ ಅಂದರ್

ಎಟಿಎಂಗೆ ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಪಾಸವರ್ಡ ತಿಳಿದುಕೊಂಡು 37,500 ರೂಪಾಯಿ ಹಣ ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಎಂಬ ಮಹಿಳೆ ಅ.3ರಂದು ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋದಾಗ, ಯಾವುದೋ ಒಬ್ಬ ವ್ಯಕ್ತಿ ಸಹಾಯ …

Read More »

ಮಳೆರಾಯನ ಅಬ್ಬರ: ಬೆಳೆ ಹಾನಿ ಭೀತಿಯಲ್ಲಿ ರೈತರು

ಕಳೆದ ಎರಡ್ಮೂರು ದಿನಗಳಿಂದ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಷ್ಟ ಪಟ್ಟು ಬೆಳೆದ ವಿವಿಧ ಬೆಳೆಗಳ ಹಾನಿಯಾಗುವ ಭೀತಿಯನ್ನು ರೈತರು ಅನುಭವಿಸುತ್ತಿದ್ದಾರೆ. ಹೌದು ಹಲಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿ ಸಾಧ್ಯತೆಯಿದೆ. ಆಲೂಗಡ್ಡೆ, ಸೋಯಾಬೀನ್, ಬಾಸ್ಮತಿ ಭತ್ತ ಸೇರಿ ಇನ್ನಿತರ ಬೆಳೆಗಳು ಕಟಾವಿಗೆ ಬಂದಿವೆ. ಆದರೆ ಇದೀಗ ಬಿಟ್ಟು ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆ ಕೈಯಿಗೆ ಬಂದ ತುತ್ತು ಬಾಯಿಗೆ ಬಾರದ …

Read More »