Breaking News

ರಾಜಕೀಯ

ಶತಮಾನ ಕಳೆದರೂ ಮಾದರಿಯಾಗದ ಶಾಸಕರ ಮಾದರಿ ಶಾಲೆ

ತೆಲಸಂಗ: ಈಗಿನ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆಯ ನಡುವೆಯೂ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಗ್ರಾಮದ ನಮ್ಮೂರ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 151 ವರ್ಷ ತುಂಬಿದರೂ ಶತಮಾನೋತ್ಸವದ ಸಂಭ್ರಮ ಕಾಣದೇ ಅನಾಥವಾಗಿದೆ.   ಸರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶತಮಾನ ಕಂಡ ರಾಜ್ಯದ 143 ಸರಕಾರಿ ಶಾಲೆಗಳಿಗೆ 20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬೆಳಗಾವಿ ಜಿಲ್ಲೆಯ 5 ಶಾಲೆಗಳನ್ನು ಅನುದಾನಕ್ಕಾಗಿ ಆಯ್ಕೆ …

Read More »

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಓಗಳ ಜೊತೆಗೆ ಸಿಎಂ ಬೊಮ್ಮಾಯಿ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಯಾವ ರೀತಿ ಅನುಷ್ಠಾನಕ್ಕೆ ತರಲಾಗಿದೆ ಎಂಬ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಓಗಳ ಜೊತೆಗೆ ಸಿಎಂ ಬೊಮ್ಮಾಯಿ ಈ ವೇಳೆ ಚರ್ಚಿಸಿದರು. ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ವಿ.ಸೋಮಣ್ಣ, ಆರ್.ಅಶೋಕ್, ಬಿ.ಎ.ಬಸವರಾಜ, ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಎಲ್ಲ …

Read More »

ಭಾರತ್ ಜೋಡೋ ಪಾದಯಾತ್ರೆಯಲ್ಲಿ ವಿದ್ಯುತ್ ಅವಘಡ: ತಲಾ ಲಕ್ಷ ರೂ. ಪರಿಹಾರ ಘೋಷಿಸಿದ ರಾಹುಲ್

ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಪಾದಯಾತ್ರೆ’ಯಲ್ಲಿ ವಿದ್ಯುತ್ ಅವಘಡ ಸಂಭವಿಸಿ, ಐವರಿಗೆ ಗಾಯಗಳಾಗಿರುವ ಘಟನೆ ಭಾನುವಾರ ನಡೆದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಸಾರ್ವಜನಿಕ ಬಹಿರಂಗ ಸಭೆಯನ್ನು ಮುಗಿಸಿಕೊಂಡು ತಾಲೂಕಿನ ಸಂಗನಕಲ್ಲು ಗ್ರಾಮದ ಹೊರ ವಲಯದಲ್ಲಿ ತಂಗಿದ್ದ ರಾಹುಲ್ ಗಾಂಧಿಯವರು, ಭಾನುವಾರ ಬೆಳಗ್ಗೆ 6.30ಕ್ಕೆ ಎಂದಿನಂತೆ ಪಾದಯಾತ್ರೆಗೆ ಕೈಗೊಂಡ ಮೋಕಾದತ್ತ ತೆರಳಿದರು. ಈ ವೇಳೆ ಹೊಸಮೋಕ ದಾಟುತ್ತಿದ್ದಂತೆ ಇದ್ದ ದೊಡ್ಡ …

Read More »

ವಿಜಯಪುರ ಪಾಲಿಕೆ ಚುನಾವಣೆ : ವಾಮಾಚಾರ ಹಾವಳಿ; ಜನರ ಆಕ್ರೋಶ

ವಿಜಯಪುರ: ವಿಜಯಪುರ ಮಹಾನಗರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಈ ಹಂತದಲ್ಲಿ ಮಾಟ-ಮಂತ್ರದ ಕ್ಷುದ್ರ ಚಟುವಟಿಕೆಗಳು ತಲೆ ಎತ್ತಿದ್ದು, ಸಾರ್ವಜನಿಕರನ್ನು ಆತಂಕ ಪಡುವಂತೆ ಮಾಡಿವೆ. ವಾರ್ಡ್ ನಂ. 14 ರಲ್ಲಿ ಬರುವ ನಗರದ ಶಿಖಾರಖಾನೆ ಪ್ರದೇಶದ ಅನಂತಲಕ್ಷ್ಮೀ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿಸಿದಂತೆ ಕುಂಕು, ಅರಿಷಿಣ, ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗ ಳೊಂದಿಗೆ ಮಾಟ ಮಂತ್ರ ಮಾಡಿ ಎಸೆದಿದ್ದಾರೆ.   ಸದರಿ ವಾರ್ಡ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ …

Read More »

ಬ್ರಿಟಿಷರೊಂದಿಗೆ ಶಾಮೀಲಾಗಿದ್ದ ಆರ್ ಎಸ್‍ಎಸ್ ನವರು ದೇಶ ಭಕ್ತರಲ್ಲ: ರಾಮಲಿಂಗಾ ರೆಡ್ಡಿ

ವಿಜಯಪುರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಜೊತೆ ಶಾಮೀಲಾಗಿದ್ದ ಆರ್ ಎಸ್‍ಎಸ್ ನಾಯಕರು ಇದೀಗ ದೇಶ ಭಕ್ತರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕಿಳಿದಿದ್ದರೆ, ಆರ್ ಎಸ್‍ಎಸ್ ಬ್ರಿಟಿಷರ ಜೊತೆ ಶಾಮೀಲಾಗಿತ್ತು. ಸ್ವಾತಂತ್ರ್ಯ ಹೋರಾಟ ದಲ್ಲಿ ಆರ್ ಎಸ್‍ಎಸ್, ಬಿಜೆಪಿ ಭಾಗಿ ಆಗರಿಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದವರು ಕಾಂಗ್ರೆಸ್‍ಗೆ ಸೇರಿದವರು ಎಂದರು. ಸ್ವಾತಂತ್ರ್ಯ …

Read More »

ರಮೇಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗಿದೆ ಎಂಬ ಸಂಕೇತವನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ನೀಡಿದ್ದಾರೆ.

ರಾಜ್ಯದ ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗಿದೆ ಎಂಬ ಸಂಕೇತವನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ನೀಡಿದ್ದಾರೆ. ಭಾನುವಾರದಂದು ಬೆಳಗಾವಿಯ ಸರ್ಕೀಟ್ ಹೌಸ್‍ನಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಅತುಲನೀಯ ಶಕ್ತಿಯಾಗಿದ್ದಾರೆ. ಮುಂಬರುವ ಚುನಾವಣೆ ಹಿನ್ನೆಲೆ ಪಕ್ಷದ ಶಕ್ತಿಸಂವರ್ಧನೆಗೆ …

Read More »

ಪ್ರತಿ ಟನ್ ಕಬ್ಬಿಗೆ 3500ರೂ ನಿಗದಿ ಮಾಡಿಲ್ಲ ಅಂದ್ರೆ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ

ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡುವ ನಿರ್ಣಯವನ್ನು ಸರಕಾರ ಅ.19 ರಂದು ನಿರ್ಣಯ ತೆಗೆದುಕೊಳ್ಳದಿದ್ದರೇ 21 ರಂದು ಸುವರ್ಣ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ಹೇಳಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಸಕ್ಕರೆ ಆಯುಕ್ತ, ಸಕ್ಕರೆ ಸಚಿವರ ಸಭೆಯಲ್ಲಿ ಸಾಕಷ್ಟು …

Read More »

ಧಾರವಾಡ : ಮೆಕ್ಕಾಗೆ ತೆರಳಿದ್ದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು

ಧಾರವಾಡ : ಮೆಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿಯೋರ್ವರು ಹೃದಯಾಘಾತದಿಂದ ಸೌದಿಯ ಮೆಕ್ಕಾದಲ್ಲಿ ನಿಧನ ಹೊಂದಿರುವ ಘಟನೆ ನಡೆದಿದೆ. ಮೃತರನ್ನು ಜಿಲ್ಲೆಯ ವರವ ನಾಗಲಾವಿಯ ಸೈಯದ್​ ದಾದಾಪೀರ ಪೀರಜಾದೆ (70) ಎಂದು ಗುರುತಿಸಲಾಗಿದೆ. ಕಳೆದ ಅ.9 ರಂದು ಧಾರವಾಡದಿಂದ ಉಮ್ರಾಗಾಗಿ ಪೀರಜಾದೆ ಸೌದಿಗೆ ತೆರಳಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ಗುರುಗಳು ಆಗಿದ್ದ ದಾದಾಪೀರ ಪೀರಜಾದೆ ಇವರ ಜೊತೆಯಲ್ಲಿ ಕುಟುಂಬದ ಕೆಲ‌ ಸದಸ್ಯರು ಕೂಡಾ ಹೋಗಿದ್ದರು ಎನ್ನಲಾಗಿದೆ. ಪೀರಜಾದೆ ಅವರ …

Read More »

ಅಕ್ರಮ ಭೂ ಡಿನೋಟಿಫಿಕೇಶನ್‌ ಪ್ರಕರಣ: ಬಿಎಸ್‌ವೈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ

ಬೆಂಗಳೂರು: ಅಕ್ರಮ ಭೂ ನೋಟಿಫಿಕೇಶನ್‌ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ| ಯು.ಯು. ಲಲಿತ್‌ ಹಿಂದೆ ಸರಿದಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬಂದೊಡನೆ ಹಿಂದೆ ಸರಿದ ಸಿಜೆಐ, “ದೀಪಾವಳಿ ಹಬ್ಬದ ಬಳಿಕ ಬೇರೊಂದು ನ್ಯಾಯಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ. 2021ರ ಜ.27ರಂದು ಇದೇ ಪ್ರಕರಣ ಸಂಬಂಧ ಬಿಎಸ್‌ವೈ ಹಾಗೂ ಸಚಿವ ಮುರುಗೇಶ್‌ ನಿರಾಣಿ ಅವರಿಗೆ …

Read More »

ಸಂಪುಟ ವಿಸ್ತರಣೆ; ಸದ್ಯದಲ್ಲಿಯೇ ದೆಹಲಿಗೆ ಭೇಟಿ: ಸಿಎಂ ಬೊಮ್ಮಾಯಿ

ಬೆಳಗಾವಿ: ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ನವದೆಹಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದರು.     ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಳಗಾವಿಗೆ ಶುಭ ಸುದ್ದಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು …

Read More »